ಬೆಂಬಲಿಗರು

ಶನಿವಾರ, ಮಾರ್ಚ್ 30, 2013

ನನಗೇಕೆ ಬ್ಲಾಗ್?

ನಾನು ಸಣ್ಣ ವನಿದ್ದಾಗ ಅಜ್ಜ ಅಜ್ಜಿಯ ಹಿಂದೆ ಹೋಗಿ ಅವರು ಹೇಳುತ್ತಿದ್ದ ಜೀವನಾನುಭವಗಳನ್ನು ಕೇಳುತ್ತಿದ್ದೆ.ಅದರಲ್ಲಿ ಒಂದು

ಸಂತೋಷವಿತ್ತು.ಮಕ್ಕಳಿಗೆ ನೆನಪುಗಳ ಚಿತ್ರಣ ನೀಡುವಾಗ ಅವರಿಗೂ ಅವು ಸ್ಪಸ್ಟ ವಾಗುತ್ತಾ ತಮ್ಮ ಬಾಲ್ಯ ಯೌವನ ಕ್ಕೆ

ಜಾರುವ ಅವಕಾಶ.ಅಧ್ಯಾಪಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ವಿಷಯಗಳ ಬೇರೆ ಬೇರೆ ಮಜಲುಗಳು ಗೋಚರವಾಗುವಂತೆ.

ನನ್ನ ಯೌವನ ಕಾಲದಲ್ಲಿ ಪಕ್ಕದ ಮನೆಯ ಮಕ್ಕಳು .ಅಣ್ಣನ ಮಕ್ಕಳು ನನ್ನ ಪುರಾಣ ಕೇಳಲು ಸಿಗುತಿದ್ದರು.ನನಗೆ ಹೇಳುವ ಕಾತರ

ಅವರಿಗೆ ಕೇಳುವ ಆಸಕ್ತಿ.ಆದರೆ ಇಂದು ಕೇಳುವ ಕಿವಿಗಳೆಲ್ಲಿ?

ಮಕ್ಕಳೋ ಹೋಂ ವರ್ಕ್ ,ಟ್ಯುಶನ್.ಎಂಟ್ರನ್ಸ್,ಟಿ.ವಿ.,ಕಂಪ್ಯೂಟರ್ ಗಳಲ್ಲಿ  ಬ್ಯುಸಿ. ಗಂಡ ಹೆಂಡಿರು ಕೆಲಸಕ್ಕೆ ಹೋಗುವ  ಯುವಕ

ಯುವತಿಯರಿಗೆ ಹೋಟೆಲ್ ಸಿನೆಮ ಶಾಪಿಂಗ್ ಸಾಕು.ಕೆಲವರು ದಯಾ ತೋರಿ ಸ್ವಲ್ಪ ಸಮಯ ನಮಗೆ ಕೊಟ್ಟರೂ ಅವರ  ಅಭಿರುಚಿ

ಬೇರೆ,ನಮ್ಮ ರುಚಿ ಬೇರೆ. ಇದಕ್ಕೆ ಭಾಗಶ ಉತ್ತರ ಬ್ಲಾಗ್ಗ್ಗಿಂಗ್ .ನನಗೆ ತೋಚಿದ್ದನ್ನು ಸಮಯ ಸಿಕ್ಕಾಗ ಬರೆಯುವುದು.ಇಷ್ಟ ಇರುವವರು

ಅವರರವ  ಭಾವಕ್ಕೆ  ಅವರವರ ಭಕುತಿಗೆ ಅನುಗುಣವಾಗಿ ಹೆಕ್ಕಿ ಓದಬಹುದು .

ನನ್ನ ಈ ಬ್ಲಾಗ್ ಶಿಶು ವಿಗೆ ಒಂದು ತಿಂಗಳು ತುಂಬುತ್ತಿದೆ.ಸಾವಿರ ಮಂದಿ ಭೇಟಿಕೊತ್ತಿದ್ದಾರೆ.ಸಂತೋಷ.ಅರಣ್ಯಿಕರಣಕ್ಕೆ ಅಳಿಲ ಸೇವೆ ಗೆ

ಅತ್ಯಧಿಕ ಸಂದರ್ಶಕರು, ಪರಿಸರ ಕಾಳಜಿ ಇದೆ.
ಸಂದರ್ಶಿಸುತ್ತಿರಿ. ಧನ್ಯವಾದ,

1 ಕಾಮೆಂಟ್‌:

  1. ನಮಸ್ತೆ, ನಿಮ್ಮ ಬ್ಲಾಗಿನ ಹಲವು ಬರಹಗಳನ್ನು ಓದಿದೆ. ಚೆನ್ನಾಗಿವೆ. ನಿಮ್ಮ ಜೀವನಾನುಭವಗಳನ್ನು, ಅನಿಸಿಕೆಗಳನ್ನು ಬ್ಲಾಗಿನಲ್ಲಿ ದಾಖಲಿಸುವುದು, ಅನಾರೋಗ್ಯ,ಖಾಯಿಲೆಗಳ ಬಗ್ಗೆ ತಿಳಿಸುತ್ತಿರುವುದು ಓದುಗರಿಗೆ ಪ್ರಯೋಜನಕಾರಿ.

    ಪ್ರತ್ಯುತ್ತರಅಳಿಸಿ