ನೆನಸಗುವ ಸುವರ್ಣ ಘಳಿಗೆ.ಕೊಂಕಣ ರೈಲ್ವೆ ಕಾಮಗಾರಿ ಆರಂಬಿಸುವ ಸಮಾರಂಭ ಉಡುಪಿಯಿಂದ.
ನಾನು ಆಗ ಮಂಗಳೂರು ರೈಲ್ವೆ ವೈದ್ಯಾದಿಕಾರಿ.ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಭಾಗವಹಿಸುವ
ಯೋಗ.ರೈಲ್ವೆಯಲ್ಲಿ ಕನ್ನಡೆತರರೆ ಹೆಚ್ಚು.ಅದರಿಂದ ಆಹ್ವಾನಿತ ಅತಿಥಿಗಳ ಪರಿಚಯ ಅವರಿಗಿರಲಿಲ್ಲ
ಡಾ ವಿ ಎಸ ಆಚಾರ್ಯ ,ಶ್ರೀ ಬಿ ಎಂ ಇದಿನಬ್ಬ (ಆಗ M L A ಆಗಿದ್ದರು.),ಇತರರನ್ನು ಗುರುತಿಸಿ ಕುಳ್ಳಿರಿಸುವ
ಕೆಲಸ ನನಗಾಯಿತು.ಉಡುಪಿ ಇಂದ್ರಾಳಿ ಯಲ್ಲಿ ಕಾರ್ಯಕ್ರಮ.
ಕರಾವಳಿಯ ಹೆಮ್ಮೆಯ ಪುತ್ರ ಜೋರ್ಜ್ ಫೆರ್ನಾಂಡಿಸ್ ಉದ್ಘಾಟಕರು. ಆಗ ಅರ್ಥ ಮಂತ್ರಿಯಾಗಿದ್ದ
ಮಧು ದಂಡಾವತೆ ಯವರದ್ದು ಪೂರ್ಣ ಬೆಂಬಲ. ನನ್ನ ಪಕ್ಕ ಇದಿನಬ್ಬ ಇದ್ದರು. ಕಾರ್ಯಕ್ರಮ ಪಲಕಗಳು
ಇಂಗ್ಲಿಶ್ ನಲ್ಲಿ ಇದ್ದುದು ಕಟ್ಟಾ ಕನ್ನಡ ಪ್ರೇಮಿಯಾದ ಅವರಿಗೆ ಅಸಾಮದಾನ .ಅದನ್ನು ನನ್ನಲ್ಲಿ ಹೇಳಿದರು.
ಫೆರ್ನಾಂಡಿಸ್ ಅಚ್ಚ ಕನ್ನಡದಲ್ಲಿ ಮಾತನಾಡಿದರು.ಅವರು ಹೇಳಿದ ಒಂದು ವಾಕ್ಯ ನನಗೆ ನೆನಪಿದೆ.
'ಈ ಮಹಾತ್ವಾಕಾಂಕ್ಷೆಯ ಕೆಲಸ ನಾನು ಇರಲಿ ಇಲ್ಲದಿರಲಿ ವೇಳಾಪಟ್ಟಿಯಂತೆ ನಡೆಯುತ್ತದೆ. ದೇಶಪ್ರೇಮಿಯು
ಸಮರ್ಥರು ಆದ ಈ ಶ್ರೀಧರನ್ ಅವರು ಇದರ ನೇತೃತ್ವ ವಹಿಸುತ್ತಾರೆ.ಆದುದರಿಂದ ಯಾವ ಸಂದೇಹವು
ಬೇಡ.'
ಜಾರ್ಜ್ ಫೆರ್ನಾಂಡಿಸ್
ಕೇಂದ್ರದ ಮಂತ್ರಿಯೋರ್ವರು ಅಧಿಕಾರಿಯನ್ನು ಹೀಗೆ ಬಹಿರಂಗವಾಗಿ ಹೊಗಳುವುದು ಕಡಿಮೆ.
ನಮ್ಮ ರಾಜ್ಯದ ಅತ್ಯುತ್ತಮ ಸಮರ್ಥ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಕಾರ್ಯಕ್ರಮ ದ
ಅಧ್ಯಕ್ಷತೆ ವಹಿಸಿದ್ದರು.ಅವರ ಟಿಪಿಕಲ್ ಗುಲ್ಬರ್ಗ ಕನ್ನಡದಲ್ಲಿ ಮಾತು. ತಮ್ಮ ಪಕ್ಷ ಬೇರೆ
ಯಾದರು ರಾಜ್ಯದ ಅಭಿವೃದ್ದಿ ಕಾರ್ಯದಲ್ಲಿ ಸಂಪೂರ್ಣ ಸಹಕಾರ ಇದೆ .ಸ್ತಳೀಯ ಮಂತ್ರಿ
ಮನೋರಮಾ ಮಧ್ವರಾಜ್ ರೈಲ್ವೆ ಯೋಜನೆಗೆ ಜಮೀನು ಕಳೆದು ಕೊಳ್ಳುವವರನ್ನು
ಯಾರು ಕೇಳುವುದಿಲ್ಲ ಎಂದದ್ದ್ದಕ್ಕೆ ಅವರನ್ನೇ ಅದರ ಉಸ್ತುವಾರಿಗೆ ನೇಮಿಸುತ್ತೇನೆ ಎಂದರು ಪಾಟೀಲ್.
ವೀರೇಂದ್ರ ಪಾಟೀಲ್
ಕಾರ್ಯಕ್ರಮದಲ್ಲಿ ಎಲ್ಲರ ಕಣ್ಮಣಿ ಈ ಶ್ರೀಧರನ್ ಉಪಸ್ತಿತರಿದ್ದರು.ಅವರು
ನಮ್ಮ ದೇಶದ ಹೆಮ್ಮೆಯ ಆಸ್ತಿ. ತಾಂತ್ರಿಕ ಕೌತುಕ ಪಾ೦ಬನ್ ಸೇತುವೆ,
ಹಾಸನ ಮಂಗಳೂರು ರೈಲ್ವೆ ಗಳ ರೂವಾರಿ.ಯಶಸ್ವಿಯಾಗಿ ಕೊಂಕಣ ರೈಲ್ವೆ ಕೆಲಸ
ಮುಗಿಸಿದ ಅವರನ್ನು ದೆಹಲಿ ಮೆಟ್ರೋ ಕರೆಯಿತು.
ಈ. ಶ್ರೀಧರನ್
ಮುಂದೆ ಕೊಂಕಣ್ ರೈಲ್ವೆಗೆ ಆಫೀಸ್ ಸ್ತಳ ಹುಡುಕುವುದಕ್ಕೆ ನಾನೂ ಹೋಗಿದ್ದೆ.
ಈ ಕಾರ್ಯದಲ್ಲಿ ಸಿಂಡಿಕೇಟ್ ಬ್ಯಾಂಕಿನ ಶ್ರೀ ಆನಂದ ಗಾಣಿಗರು , ಪ್ರಚಾರಧಿಕಾರಿಯಾಗಿದ್ದ
ಮ್ಯಾಜಿಕ್ ಶಂಕರ್ ಸಹಾಯ ಮಾಡಿದರು.
ಮಧು ದಂಡಾವತೆ.
ಲಾರಿಗಳ ರೋ ರೋ ಸೇವೆ
ಕೊಂಕಣ ರೈಲ್ವೆ ವಿಹಂಗಮ ನೋಟ
ಮೇಲಿನ ಚಿತ್ರಗಳ ಮೂಲ ಗಳಿಗೆ ಅಭಾರಿ.
Always a milestone in Railways history....
ಪ್ರತ್ಯುತ್ತರಅಳಿಸಿ