ನಾಡಿಗೇರ ಕೃಷ್ಣ ರಾಯರು
ಕನ್ನಡದ ಹೆಸರಾಂತ ಹಾಸ್ಯ ಲೇಖಕರು. ನಾನು ಹುಬ್ಬಳ್ಳಿ ಯಲ್ಲಿ ಮೆಡಿಕಲ್
ಓದುತ್ತಿದ್ದ
ಸಮಯ ೧೯೭೭ ರ ರಾಜ್ಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಬಂದಿದ್ದರು.ಪಾಟೀಲ್
ಪುಟ್ಟಪ್ಪ
ನವರೂ ಬಂದಿದ್ದರು.ಅವರ ವಾಸ್ತವ್ಯ ಊಟ ಉಪಚಾರ ನೋಡಿಕೊಳ್ಳುವ ಹೊಣೆ ನನಗೆ ಇತ್ತು.
ನಾಡಿಗೆರರು
ಕೃಶಕಾಯರು. ಎಲ್ಲರು ನನ್ನನ್ನು ಕೃಷಣ ರಾಯ ಎಂದು ಕರೆಯುತ್ತಾರೆ .ಇನ್ನು ಕೆಲವರು ಸಾಹಿತಿ
ಎನ್ನುವುದಕ್ಕೆ
ಬದಲಾಗಿ ಸಾಯ್ತಿ ಸಾಯ್ತಿ ಎನ್ನುತ್ತಾರೆ ಎಂದು ಚಟಾಕಿ ಹಾರಿಸುತ್ತಿದ್ದರು
ಒಮ್ಮೆ ಅವರ ಹೆಂಡತಿ ಅಡುಗೆ ಮನೆಯಲ್ಲಿ ಇದ್ದಾಗ
ಚಾವಡಿಯಲ್ಲಿ ಡಬ್ ಎಂಬ ಸದ್ದು ಕೇಳಿ ಏನ್ರಿ ಅದು
ಸದ್ದು
ಎಂದು
ಕೇಳಿದರು. ಎನಿಲ್ವೆ ಅದು ನನ್ನ ಶಾಲು ಬಿದ್ದ ಶಬ್ದ ಎಂದರು ನಾಡಿಗೆರರು. ಶಾಲು ಬಿದ್ದರೆ ಅಷ್ಟು
ಶಬ್ದ ಹೇಗ್ರಿ
ಎಂದದ್ದಕ್ಕೆ
ಶಾಲಿನ ಒಳಗೆ ನಾನೂ ಇದ್ದೆ ಕಣೆ ಎಂದರಂತೆ.
ಇನ್ನೊಮ್ಮೆ
ಆಕೆ ಅಡುಗೆ ಮನೆ ಯಲ್ಲಿ ನಾಡಿಗೆರರೊಡನೆ ಹರಟುತ್ತ ಅಡಿಗೆ ಮಾಡುತ್ತಿದ್ದಾಗ ಪಕ್ಕದ ಮನೆ ಸಾವಿತ್ರಮ್ಮ
ಧಿಡೀರ್
ಅಡಿಗೆ ಮನೆಗೆ ನುಗ್ಗಿದವರು ಇವರನ್ನು ಕಂಡು ಗಂಡಸರಿದ್ದಾರೆನ್ರಿ ಗೊತ್ತಿಲ್ಲದೇ ಬಂದೆ ಆ ಮೇಲೆ
ಬರ್ತೀನಿ
ಎಂದು
ಹೊರಡಲು ಅನುವಾದಾಗ ರೀ ನಿಲ್ರಿ ಅದು ಗಂಡಸರಲ್ರಿ ನಮ್ಮ ಯಜಮಾನ್ರು ಎಂದರಂತೆ ಆ ತಾಯಿ.
ಮನೆಯಲ್ಲಿ
ಬಡ ತನ ದಿಂದಾಗಿ ಹೆಂಡತಿಗೆ ಚಿನ್ನ ಮಾಡಿಸದ ಕೊರತೆ ನೀಗಲು ಅವರು ಆಕೆಯನ್ನೇ ಚಿನ್ನಾ ಎಂದು
ಕೂಗುತ್ತಿದ್ದ್ರನ್ತೆ.
ಅ ನ
ಕೃಷ್ಣ ರಾಯರೂ ನಾಡಿಗೆರರೂ ಆತ್ಮ್ಮೀಯರು .ಕನ್ನಡ ಚಳುವಳಿಯಲ್ಲಿ ಜತೆಯಾಗಿ
ಮುನ್ಚೂನಿಯಲ್ಲಿಯಲ್ಲಿದ್ದರು.
ಅ.ನ .ಕೃ ತೀರಿ
ಹೋದ ಕೆಲವು ದಿನಗಳ ನಂತರ ಒಂದು ಊರಿಗೆ
ಭಾಷಣ ಕ್ಕೆ ಹೋಗಿದ್ದಾಗ ಒಬ್ಬರು
ಮಹಾಶಯರು
ಮೊನ್ನೆ ತೀರಿ ಹೋದ ಕೃಷ್ಣ ರಾಯರು ನೀವೋ ಇನ್ನೊಬ್ಬರೋ ಎಂದು ಕೇಳಿದರಂತೆ,
ಇನ್ನೊಮ್ಮೆ ಅವರು ಕೆಲಸ ಮಾಡುತ್ತಿದ್ದ ಪತ್ರಿಕೆ ಯಲ್ಲಿ ವಾರದ
ಅಡಿಗೆ ಬರೆಯುತ್ತಿದ್ದ ಅಮ್ಮ ರಜೆ ಹಾಕಿದ್ದರಿಂದ
ಸಂಪಾದಕರು
ಆ ಕೆಲಸವನ್ನು ಇವರಿಗೆ ಒಪ್ಪಿಸಿದರು.ಇವರ ಸ್ಪೆಷಲ್ ನೆಲ್ಲಿಕಾಯಿ ಹಲುವ. ತಯಾರಿಸುವ
ವಿಧಾನ..ಗುಂಡನೆಯ
ಬಲಿತ ಇಪ್ಪತ್ತು ನೆಲ್ಲಿಕಾಯಿಗಳನ್ನು ಸಣ್ಣದಾಗಿ ಕತ್ತರಿಸಿ ಇಟ್ಟುಕೊಳ್ಳಿ .ಆ ಮೇಲೆ ಸಕ್ಕರೆ
ಪಾಕ ಮಾಡಿ
ಗೋದಿ ರುಬ್ಬಿದ ಹಿಟ್ಟಿಗೆ ೧ ಲೀಟರ್ ನೀರು ಹಾಕಿ ಕದಡಿ ಸಕ್ಕರೆ ಪಾಕಕ್ಕೆ ಹಾಕಿ ಮಗುಚುತ್ತಾ
ಇರಬೇಕು.
ಗಟ್ಟಿಯಾಗಿ
ಕಣ್ಣು ಆಗುವಾಗ ತಳ ಬಿಟ್ಟು ತುಪ್ಪ ಬಿಡುತ್ತದೆ.ಗೋಡಂಬಿ ಏಲಕ್ಕಿ ಪುಡಿ ಹಾಕಿ ನಾರು ಆದ ಮೇಲೆ
ತುಂಡು
ಮಾಡಿರಿ .ನೆಲ್ಲಿಕಾಯಿ ತುಂಡುಗಳನ್ನು
ಕಿಟಿಕಿಯಿಂದ ಹೊರಗೆಸೆಯ ಬೇಕು.
ಹೇಗಿದೆ ನಾಡಿಗೆರರ
ನೆಲ್ಲ್ಲಿಕಾಯಿ ಹಲುವಾ?
very nice
ಪ್ರತ್ಯುತ್ತರಅಳಿಸಿ