ಬೆಂಬಲಿಗರು

ಶನಿವಾರ, ಮಾರ್ಚ್ 23, 2013

ಎಚ್.ನರಸಿಂಹಯ್ಯನವರು.


ಅಪ್ಪಟ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ,ಅಧ್ಯಾಪಕ ,ವಿಜ್ಞಾನಿ, ಆಢಳಿತ ಗಾರ,ಶಾಸಕ,ಬರಹಗಾರ ,ನುಡಿದಂತೆ

ನಡೆದ ವ್ಯಕ್ತಿ  ,ನಿಜಾರ್ಥದಲ್ಲಿ  ಸಂತನ ಬದುಕು ನಡೆಸಿದ ವ್ಯಕ್ತಿ  ಎಚ್.ನಹಸಿ೦ಹಯ್ಯ.ಬೆಂಗಳೂರು ನ್ಯಾಷನಲ್ ಕಾಲೇಜನ

ವಿದ್ಯಾರ್ಥಿ,ಅಧ್ಯಾಪಕ ,ಪ್ರಿನ್ಸಿಪಾಲ್ ಮತ್ತು ಅಧ್ಯಕ್ಷ ರಾಗಿ ಇದ್ದವರು. ಬೆಂಗಳೂರು ವಿಶ್ವವಿದ್ಯಾಲಯ ದ ಉಪಕುಲಪತಿಯಾಗಿ

ಜ್ನಾನಭಾರತಿಯನ್ನು ಅಭಿವೃದ್ದಿ ಪಡಿಸಿದವರು.ಅಮೆರಿಕಾದ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದೆದದ್ದಲ್ಲದೆ ಅಲ್ಲಿಯ

ಕಾಲೇಜುಗಳಲ್ಲಿ ಸಂದರ್ಶಕ ಪ್ರಾದ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು.ಇವರಿಗೆ ಪದ್ಮಶ್ರೀ ಕೊಡುವಂತೆ ರಾಜ್ಯ ಸರಕಾರ

ಕೇಂದ್ರಕ್ಕೆ ಶಿಫಾರಸು ಮಾದಿತ್ತಂತೆ. ಆಗಿನ ಪ್ರಧಾನಿ ಇಂದಿರಾ ಗಾಂಧೀ ಇವರ ಬಯೋ ಡಾಟಾ ಓದಿ ಅದನ್ನು  ಪದ್ಮವಿಭೂಷಣ

ವಾಗಿ ಬದಲಾಯಿಸಿ ಕೊಟ್ಟರಂತೆ.ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಜೈಲು ವಾಸಿಯಾಗಿದ್ದ ಇವರಿಗೆ ಸರಕಾರ ಕೊಟ್ಟ

ಪೆನ್ಶನ್ ನಯವಾಗಿ ತಿರಸ್ಕಿದ್ದ ಮಹಾತ್ಮ.ಮಂತ್ರಿಯ ಸ್ಥಾನ ಮಾನವಿದ್ದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗಲೂ

ರೈಲಿನಲ್ಲಿ ದ್ವಿತೀಯ ದರ್ಜೆಯಲ್ಲೇ  ಪಯಾಣಿಸುತ್ತಿದ್ದುದಲ್ಲದೆ ಅದರ  ಭತ್ತೆ ಮಾತ್ರ ತೆಗೆದುಕೊಳ್ಳುತ್ತ್ತಿದ್ದರು. ಕಚೇರಿಗೆ ಬರುತ್ತಿದ್ದ

ವೃತ್ತ ಪತ್ರಿಕೆಗಳನ್ನು ರದ್ದಿಗೆ ಮಾರಿ ಟ್ರೆಷರಿಗೆ  ಹಣ ಕಟ್ಟು ತ್ತಿದ್ದ  ಮಹಾನುಭಾವ.ಎಂ ಎಲ್ ಸಿ ಯಾಗಿದ್ದಗಲೂ ಸರಳ ಬದುಕನ್ನು

ಬದಲಾಯಿಸದವರು. ಇವರ ಆತ್ಮ ಚರಿತ್ರೆ ಹೋರಾಟದ ಹಾದಿ ಮತ್ತು ಲಲಿತ ಪ್ರಬಂಧ ಗಳ ಸಂಕಲನ ತೆರೆದ ಮನ  ಎಲ್ಲರು

ಓದಬೇಕಾದ  ಜನಪ್ರಿಯ ಕೃತಿಗಳು.

  ಇವರನ್ನು  ಕಾಲೆಜ್ ಹಾಸ್ಟಲ್ ನ  ಇವರ  ಕೊಟಡಿ ಯಲ್ಲಿ ಕಾಣುವ ಭಾಗ್ಯ ನನಗೆ ಬಂದಿತ್ತು.ಮಲಗಲು ಚಾಪೆ.ಬರೆಯಲು

ಒಂದು ಸಣ್ಣ ಮೇಜು .

ಕರ್ನಾಟಕ ದಲ್ಲಿ ವಿಜ್ಞಾನದ ಪ್ರಸರಣಕ್ಕೆ ದುಡಿದವರು.ಯಾವುದನ್ನೂ ಪ್ರಶ್ನಿಸದೆ ಒಪ್ಪಬಾರದು ಎನ್ನುತ್ತಿದ್ದರು.ತಮ್ಮ

 ಸರ್ವಸ್ವವನ್ನು ನ್ಯಾಷನಲ್ ವಿದ್ಯಾ ಸಂಸ್ಥೆಗಳಿಗಾಗಿ ಧಾರೆಯೆರೆದರು.

ಅವರ ಕೊಠಡಿಯ ಚಿತ್ರಣ ನೋಡಲು ಕ್ಲಿಕ್ಕಿಸಿ (ಅಪ್ಲೋಡರಿಗೆ ವಂದಿಸುತ)

www.youtube.com/watch?v=DT1HlffzYn8





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ