ಬೆಂಬಲಿಗರು

ಶನಿವಾರ, ಮಾರ್ಚ್ 23, 2013

ಎಚ್ ನರಸಿಂಹಯ್ಯನವರ ಹಾಸ್ಯ ಪ್ರಜ್ಞೆ

ನರಸಿಂಹಯ್ಯನವರು ನ್ಯಾಷನಲ್ ಕಾಲೇಜ್ ಹಾಸ್ಟೆಲ್ ನಲ್ಲಿ  ಬೆಳಗಿನ ಪ್ರಾರ್ಥನೆಗೆ ಐದು ಗಂಟೆಯ ಪ್ರಾರ್ಥನೆಗೆ

ವಿದ್ಯಾರ್ಥಿಗಳು ಗೈರು ಹಾಜರಾಗುವುದನು ತಪ್ಪಿಸಲು ದಂಡ ಪದ್ಧತಿ ಜಾರಿಗೆ ತ೦ದರು.ಅದರಂತೆ ಬಾರದವರಿಗೆ

ಎಂಟಾಣೆ ದಂಡ ವೆಂದು ಎಚ್ಚರಿಸಿದರು.ಒಬ್ಬ ವಿದ್ಯಾರ್ಥಿ ಐದು ರೂಪಾಯಿ ತಂದಿತ್ತು ಸಾರ್ ನನ್ನ ಹತ್ತು ದಿನದ

ಫೈನ್ ಮುಂಗಡವಾಗಿ ತೆಗೆದುಕೊಳ್ಳಿ ಎಂದನಂತೆ.

ಅವರು ಬೆಳಗ್ಗೆ ಲಾಲ್ ಭಾಗ್ ನಲ್ಲಿ ವಾಕಿಂಗ್ ಹೋಗುತ್ತಿದ್ದರು.ಅಲ್ಲಿಗೆ ಬರ್ತ್ತಿದವ್ರು ಬಹಳ ಮಂದಿ ತಮ್ಮ ನಾಯಿಯನ್ನು

ಕರೆದುಕೊಂಡು ಬರುತ್ತಿದ್ದರು.ಎಲ್ಲವೂ ಕಂ ಗೋ ಎನ್ನುವ ಇಂಗ್ಲಿಷ್ ಮೀಡಿಯಂ ನಾಯಿಗಳು. ಕನ್ನಡ ಮೀಡಿಯಂ ನಾಯಿ

ಒಂದೂ ಸಿಗಲಿಲ್ಲವಂತೆ.ತೆಲುಗು ಮೀಡಿಯಂ ನಾಯಿ ಮಾತ್ರ ಒಂದಿತ್ತಂತೆ. ಅಯ್ಯೋ ಕನ್ನಡವೇ ಎಂದು ಎಚ್ ಏನ್

ಹಲುಬುತ್ತಾರೆ.

ಅಮೆರಿಕಾದಲ್ಲಿ  ಇದ್ದಾಗ  ಕನ್ನಡಿಗರ ಮನೆಗೆ ಪೂಜೆಗೆ ಹೋದವರು ಅಲ್ಲಿ ಅಪ್ರದಕ್ಷಿಣ ವಾಗಿ  ಆರತಿ ಎತ್ತುವುದು ಕಂಡು

ಅಲ್ಲಿ ಲೆಫ್ಟ್ ಹ್ಯಾಂಡ್  ಡ್ರೈವ್ ಅಲ್ಲವೇ ಎಂದು ಸಮಾಧಾನ ಪಟ್ಟು ಕೊಳ್ಳುತ್ತಾರೆ.

ಒಮ್ಮೆ ವಿಧಾನ ಸೌಧದ ಬಳಿ ರಿಕ್ಷಕ್ಕೆ ಕಾಯುತ್ತಿದ್ದಾಗ ಅವರ  ವಿದ್ಯಾರ್ಥಿ ಕಾರಿನಲ್ಲಿ ಡ್ರಾಪ್ ಕೊಡುತ್ತೇನೆಂದು

ಕರೆದೊಯ್ಯುತ್ತಿರುವಾಗ  "ಸರ್,ನಾನೀಗ  ಕಾರ್ಪೊರೇಟರ್ ಆಗಿದ್ದೀನಿ ನಿಮಗೇನಾದರೂ ಆಗ ಬೇಕಿದ್ದರೆ  ಹೇಳಿ 'ಎಂದಾಗ

ನೋಡಪ್ಪ ನಾನು ಯಾವಾಗಲು ರಿಕ್ಷಾದಲ್ಲಿ ಹೋಗುವವನು. ಈ ರೋಡ್ ಹೊಂಡಗಳಿಂದ ನನ್ನ ಬೆನ್ನು ನೋವು

ಬರುತ್ತದೆ.ಅವನ್ನು ಮುಚ್ಚಿದರೆ ಉಪಕಾರ.ಇನ್ನೊಂದು ದುಸ್ತಿಥಿಯಲ್ಲಿರುವ ಕಾರ್ಪೋರೇಶನ್ ಶವ ವಾಹನ .

ಅದನ್ನು ಕಂಡರೆ ಸಾಯುವಾ ಎಂದು ತೋರುವುದೇ ಇಲ್ಲ .ಎಂದರಂತೆ ಎಚ್ ಏನ್.

ಎಂದೂ ಕಾಯಿಲೆ ಬೀಳದಿದ್ದ  ನರಸಿಂಹಯ್ಯನವರಿಗೆ  ಪಿತ್ತ  ಕೋಶದ ಸೋಂಕು ಆಗಿ ಶಸ್ತ್ರ ಚಿಕಿತ್ಸೆ ಗೆ ಒಳ ಪಟ್ಟರು. ಈ ಕಾಯಿಲೆ

ಫೀಮೇಲ್ ,ಫಾರ್ಟಿ,ಫ್ಯಾಟಿ  ಮತ್ತ್ತು ಫೇರ್ ಇದ್ದವರಿಗೆ ಬರುವುದು ,ಮೊದಲ ಮೂರೂ ನಾನಲ್ಲ ಆದದ್ದರಿಂದ

ನಾನು ಫೇರ್ ಇರಬೇಕು ಎನುತ್ತಾರೆ .

ಇನ್ನೊಮ್ಮೆ ಕಾಲೇಜ್ ಅಡ್ಮಿಶನ್ ಸಮಯದಲ್ಲಿ ತಮ್ಮ ವಶೀಲಿ ನಡೆಯದ್ದಾಗ  ಸೀಟ್ ಆಕಾಂಕ್ಷಿ  ಮಹಾನುಭಾವರೊಬ್ಬರು

ನಾನು ಯಾರು ಗೊತ್ತೇನ್ರಿ ,ಹಸಿದ ಹೆಬ್ಬುಲಿ ವಾರ ಪತ್ರಿಕೆಯ ಸಂಪಾದಕ.ಎಂದಾಗ ಹೆದರದ  ಎಚ್ ಏನ್ ನೀವು

ಹುಲಿಯಾದರೆ ನಾನು ನರಸಿಂಹ ಎಂದಾಗ ಆ ವ್ಯಕ್ತಿಗೂ ನಗು ತಡೆಯಲಾಗಲಿಲ್ಲ .

ಅವರು ಬ್ರಹ್ಮಚಾರಿ .ಆದ್ದರಿಂದ ತಾವು ಸಾಯುದಕ್ಕೆ ಮೊದಲೇ  ತಮ್ಮ ಶವ ಸಂಸ್ಕಾರ  ನೋಡಿ ಕೊಳ್ಳಲು ಒಂದು

ಸಮಿತಿ ರಚಿಸಿದ್ದರು. ದುರಾದ್ರುಷ್ಟವಶಾತ್  ಆ ಸದಸ್ಯರಿಬ್ಬರು  ಇವರಿಗಿಂತಲೂ ಮೊದಲೇ ದೈವಾಧೀನರಾದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ