ಬೆಂಬಲಿಗರು

ಗುರುವಾರ, ಜೂನ್ 18, 2015

ನಾಸಿಕೋದರ ನಾಳ

ಆಸ್ಪತ್ರೆಗಳಲ್ಲಿ  ರೋಗಿಗಳಿಗೆ  ಮೂಗಿನ ಮೂಲಕ ನಳಿಕೆ ಹಾಕಿ ಆಹಾರ 

ಕೊಡುವುದನ್ನು ನೋಡಿರುವಿರಿ.ಇದನ್ನು ನಾಸಿಕೋದರ ನಾಳ ಎಂದು ಕರೆಯುವರು.


ನಮ್ಮ ನುಂಗುವ ಪ್ರಕ್ರಿಯೆ ಸಂಕೀರ್ಣವಾದದ್ದು. ಯಾವುದೇ ವಸ್ತುವನ್ನು ನುಂಗಲು 

ಅಥವಾ ಕುಡಿಯಲು ಮೊದಲು ಮೆದುಳಿನಿಂದ ಆಜ್ಞೆ ಬರಬೇಕು .ಅದರಾನುಸಾರ

ಬಾಯಿ ತೆರೆಯುವುದು .ಕಿರು ನಾಲಿಗೆ ಶ್ವಾಸನಾಳವನ್ನು ಮುಚ್ಚಿ ನಾವು ತಿನ್ನುವ 

ಅಥವಾ ಕುಡಿಯುವ ವಸ್ತು ಶ್ವಾಸಕೋಶಕ್ಕೆ ಹೋಗದಂತೆ ತಡೆಯುವುದು .ಆಹಾರ 

ಗಂಟಲಿಂದ ಅನ್ನನಾಳದಲ್ಲಿ ಕೆಳಗೆ ಇಳಿದು ಜಠರಕ್ಕೆ ಸೇರುವಲ್ಲಿ ಒಂದು ಗೇಟ್ ಇದೆ .

ಅದು ಏಕ ಮುಖ ಸಂಚಾರ ವನ್ನು ಖಚಿತ ಪಡಿಸುವುದು .ಎಂದರೆ  ಉದರದಿಂದ 

ಆಹಾರ ,ಮತ್ತು ಆಮ್ಲ ಅನ್ನನಾಳ ವನ್ನು ಸೇರಿ ಕಿರಿ ಕಿರಿ ಮಾಡದಂತೆ  

ನೋಡುವುದು ಇದರ ಕಾರ್ಯ .ಮೇಲಿನಿಂದ ಬಂದ ವಸ್ತು  ಉದರಕ್ಕೆ ಬಿಡುವುದು 

ಏಕ ಮುಖ ಸಂಚಾರ .

ಈಗ ಈ ಕ್ರಿಯೆಗೆ ಯಾವ ಯಾವ ರೀತಿಯಲ್ಲಿ  ತಡೆಯುಂಟು ಆಗುವುದು ಎಂದು 

ನೋಡುವಾ .

ಮೆದುಳಿನಲ್ಲಿ ರಕ್ತ   ಸ್ರಾವ , ಹೆಪ್ಪುಗಟ್ಟುವಿಕೆ .ಸೋಂಕು  ಅಥವಾ  ಗಡ್ಡೆ 

ಇತ್ಯಾದಿಗಳು ಅಥವಾ ಮೆದುಳಿನ ಕ್ಷಮತೆ ಮಂದ ಗೊಳಿಸುವ  ಔಷಧಿ 

ಮದ್ಯ ಪಾನ ಇತ್ಯಾದಿ  ಗಳು  ನುಂಗುವುದಕ್ಕೆ ಬೇಕಾದ ಸಿದ್ದತೆ ಇಲ್ಲದಂತೆ 

ಮಾಡುತ್ತವೆ . ಅಂತಹ ಸಂದರ್ಭದಲ್ಲಿ  ನಾವು ಬಾಯಿಗೆ   ನೀರು ಅಥವಾ 

ಆಹಾರ  ಕೊಟ್ಟರೆ ಅದು ಭಾಗಶಃ ಶ್ವಾಶಕೋಶ ಸೇರಿ ಕೆಮ್ಮು ಮತ್ತು ಸೋಂಕು 

ಉಂಟು ಮಾಡುವುದು .ಅಲ್ಲದೆ ಬಾಯಿಯಲ್ಲಿನ ಜೊಲ್ಲು ನುಂಗಲೂ ಅಸಾಧ್ಯವಾಗಿ 

ಗಂಟಲಲ್ಲಿ  ಗುರು ಗುರು ಎಂದು ಶಬ್ದ ವಾಗುವುದು .ಕೆಮ್ಮು ಬರುವುದು .

ಇದಕ್ಕೆ ಕಫದೋಷ ಎಂದು ಬಲಾತ್ಕಾರವಾಗಿ ಕೆಮ್ಮಿನ ಸಿರಪ್ ಕುಡಿಸಲು 

ಹೋಗುವರು .ಪರಿಸ್ಥಿತಿ ಉಲ್ಬಣವಾಗುವುದು . ಆದುದರಿಂದ ಇಂತಹ 

ರೋಗಿಗಳಿಗೆ ,ಪ್ರಜ್ಞೆ ಇಲ್ಲದವರಿಗೆ ಬಾಯಲ್ಲಿ ಏನೂ ಕೊಡ ಬಾರದು .

       ಇದಕ್ಕೆ ಪರಿಹಾರ ಆಹಾರವನ್ನು ರಕ್ತ ನಾಳ ಗಳ ಮೂಲಕ ಡ್ರಿಪ್ ರೂಪದಲ್ಲಿ 

ಕೊಡುವುದು .ಇಲ್ಲವೇ  ನಾಸಿಕೋದರ ನಾಳದಲ್ಲಿ ಆಹಾರ ಕೊಡುವುದು .

ಇವುಗಳಲ್ಲಿ  ಎರಡನೆಯದು ಉತ್ತಮ .ಏಕೆಂದರೆ  ಪೌಷ್ಟಿಕ  ಆಹಾರ ವನ್ನು ದ್ರವ 

ರೂಪದಲ್ಲಿ  ಕೊಡ ಬಹುದು .ರಕ್ತ ನಾಳಗಳ ಮೂಲಕ ನೀರು ,ಲವಣ ಮತ್ತು 

ಗ್ಲುಕೋಸ್ ಮಾತ್ರ ಕೊಡ ಬಹುದು .


ಈ  ನಳಿಕೆಯನ್ನು ಕೆಲವು ಸಂದರ್ಭ ಗಳಲ್ಲಿ  ಹೊಟ್ಟೆ  ತೊಳೆಯಲೂ 

ಉಪಯೋಗಿಸುವರು .ಉದಾ :  ವಿಷ ಕುಡಿದು ಬಂದಾಗ .

(ಮೇಲಿನ ಚಿತ್ರಗಳ ಮೂಲಗಳಿಗೆ ಆಭಾರಿಯಾಗಿದ್ದೇನೆ)

ಭಾನುವಾರ, ಜೂನ್ 7, 2015

ಹರ್ನಿಯ ಹೈಡ್ರೋಸೀಲ್ ಇತ್ಯಾದಿ

ಅರೋಗ್ಯ ಕ್ಷೇತ್ರದಲ್ಲಿ  ಸಾಮಾನ್ಯವಾಗಿ ಕೇಳಿ ಬರುವ ಶಬ್ದಗಳು .ಹಲವರಿಗೆ ಇದರ 

ಬಗ್ಗೆ  ಸ್ಥೂಲವಾದ ಕಲ್ಪನೆ ಇದೆ.

ಸರಳ ಭಾಷೆಯಲ್ಲಿ ಹೇಳುವುದಾದರೆ   ದೇಹದ ಒಂದು ಅಂಗವು ತನ್ನ ನಿಯಮಿತ 

 ಗಡಿ ದಾಟಿ ನುಸುಳುವಿಕೆ (ಕ್ರಾಸ್ ಬಾರ್ಡರ್  ಇ೦ಟ್ರುಶನ್) ಹೆರ್ನಿಯಾ .

ಉದಾಹರಣೆಗೆ ಉದರದೊಳಗೆ  ಸೀಮಿತ ವಾಗಿರ ಬೇಕಾದ ಕರುಳು ಬಳ್ಳಿಗಳು 

 ಹೊಟ್ಟೆಯ ದುರ್ಬಲ ಮಾಂಸ ಖಂಡ ಗಳ ಮೂಲಕ ಹೊರಕ್ಕೆ ತಲೆ ಹಾಕುವುದು .


 ಮೇಲಿನ  ಚಿತ್ರದಲ್ಲಿ  ಕಾಣುವುದು  ಇಂಗ್ವಿನಲ್  ಹರ್ನಿಯ .ತೊಡೆ ಬುಡದ ಈ  

ಪ್ರದೇಶಕ್ಕೆ ಇಂಗ್ವೈನಲ್ ಪ್ರದೇಶ ಎನ್ನುವರು . ಗರ್ಭಸ್ಥ ಶಿಶುವಿನಲ್ಲಿ  ಉದರವಾಸಿ 

ಯಾಗಿದ್ದ   ವೃಷಣಗಳು  ನಡೆದು ಬಂದ ಹಾದಿ ಇಲ್ಲಿದೆ .ಈ ಪ್ರದೇಶದ  ಮಾಂಸ 

ಖಂಡ ಗಳ ಬಲ ಕಮ್ಮಿಯಾದರೆ  ಹೊಟ್ಟೆಯಿಂದ ಕರುಳು ಮತ್ತು  ಅದರ ಪೊರೆ 

ಈ  ಜಾಗದ ಮೂಲಕ ಹೊರಗೆ ಇಣುಕುವುದು .ಕೆಮ್ಮು ಬಂದಾಗ ,ಮೂತ್ರ ಮಲ 

ವಿಸರ್ಜನೆಗೆ  ತಿಣುಕಿದಾಗ ಹೊಟ್ಟೆಯ ಒಳಗಿನ ಒತ್ತಡದಿಂದ  ಹೊರ ಬಂದು ಮತ್ತೆ 

ಒಳ ಹೋಗುವುವು. ಆದರೆ ಕ್ರಮೇಣ  ಹೊರ ಬಂದ ಕರುಳು ಒಳ ಹೋಗದೆ  ಅದರ 

ರಕ್ತ ನಾಳಗಳು  ಕಡಿದಾದ ಕಣಿವೆಯಲ್ಲಿ ಒತ್ತಲ್ಪಟ್ಟು  ಈ ಭಾಗದ ಕರುಳು 

ಸಾವನ್ನಪ್ಪುವುದು .ಇದನ್ನು ಹಿಂತಿರುಗಲಾಗದ  ಹರ್ನಿಯಾ ಮತ್ತು ಗ್ಯಾಂಗ್ರೀನ್ 

ಎನ್ನುವರು . ಇವು ಜೀವಕ್ಕೆ ಸಂಚಕಾರ ತರುವವು . ಆದುದರಿಂದ ಹರ್ನಿಯಾ ವನ್ನು 

ಮೊದಲ ಹಂತದಲ್ಲಿಯೇ  ಶಸ್ತ್ರ ಚಿಕಿತ್ಸೆ ಮೂಲಕ ಸರ್ ಪಡಿಸಿ   ಕೊಳ್ಳ ಬೇಕು .

ಈ  ಶಸ್ತ್ರಚಿಕಿತ್ಸೆಯನ್ನು ತೆರೆದ ಪದ್ಧತಿ ಮತ್ತು ಉದರ ದರ್ಶಕ ( ಲಪರೋಸ್ಕಾಪ್ 

)ಮೂಲಕ ಮಾಡಿಸ ಬಹುದು .

ಬಹು ದಿನದ ಕೆಮ್ಮು ,ದಮ್ಮು ,ಮೂತ್ರ ತಡೆ ,ಅಪೌಷ್ಟಿಕತೆ   ಇತ್ಯಾದಿಗಳು  

ಹರ್ನಿಯ  ಉಂಟು ಮಾಡ ಬಲ್ಲುವು .

ಕೆಲವೊಮ್ಮೆ  ಹೊಟ್ಟೆಯ ಮೇಲೆ ಮೊದಲು ಮಾಡಿದ ಶಸ್ತ್ರ ಚಿಕಿತ್ಸೆ ಯ  ಗಾಯದ 

ಬಳಿ ಮಾಂಸ ಖಂಡಗಳು ದುರ್ಬಲ ಗೊಂಡು ಹರ್ನಿಯಾ ಉಂಟಾಗುವುದು .

ಇದನ್ನು ಇನ್ಸಿಶನಲ್  ಹರ್ನಿಯಾ ಎನ್ನುವರು 

ಇನ್ನು  ಕೆಲವರಲ್ಲಿ ಹೊಕ್ಕುಳ ಸುತ್ತ  ಹರ್ನಿಯಾ ಆಗುವುದು .ಇದನ್ನು  ಅಂಬಿಲಿಕಲ್

ಹರ್ನಿಯಾ ಎನ್ನುವರು .
  ಜಠರದ ಭಾಗವು  ವಪೆಯ ಅನ್ನನಾಳ ರಂದ್ರದ  ಮೂಲಕ ಎದೆ ಯಾ ಗೂಡಿಗೆ 

ಇಣುಕಿದರೆ ಅದನ್ನು ಹಯಟಸ್ ಹರ್ನಿಯಾ ಎನ್ನುವರು.
ಇದು ಎದೆ  ಉರಿಗೆ ಕಾರಣ ವಾಗ ಬಹುದು .

ಹೈಡ್ರೋಸೀಲ್ 

ವ್ರುಷಣ ಚೀಲದಲ್ಲಿ  ನೀರು ತುಂಬಿ ಗಾತ್ರ ದೊಡ್ಡದಾಗುವುದು .ಹಿಂದೆ ಅನೆ ಕಾಲು 

ರೋಗದವರಲ್ಲಿ  ಇದು ಬರುತ್ತಿತ್ತು .ಸ್ಥಳೀಯ ಸೋಂಕು ,ಮತ್ತು ಜಲೋದರ 

ಉಂಟಾಗುವ  ಲಿವರ್ ,ಕಿಡ್ನಿ ,ಹೃದಯ ರೋಗಗಳಲ್ಲಿ  ಕೂಡಾ ಇಲ್ಲಿ  ನೀರು  ಸೇರ

ಬಹುದು .

ಹೈಡ್ರೋ ಸೀಲ್  ನ್ನು  ಸರಳ  ಶಸ್ತ್ರ ಚಿಕಿತ್ಸೆಯಿಂದ  ಗುಣ ಪಡಿಸುವರು .

ಕೆಲವೊಮ್ಮೆ  ಹರ್ನಿಯಾ  ಮತ್ತು  ಹೈಡ್ರೋ ಸೀಲ್ ಜತೆಯಾಗಿ ಬರುವವು 

ಕರ್ಣ ಕೋಲಾಹಲ ಮತ್ತು ತಲೆ ತಿರುಗುವುದು

   ಕರ್ಣ ಕೋಲಾಹಲ ಮತ್ತು ತಲೆ ತಿರುಗುವಿಕೆ
 
ನಮ್ಮ ಶರೀರವನ್ನು  ಸಮತೋಲನ ದಲ್ಲಿ ಇಡುವ ಸಂಕೀರ್ಣ ವ್ಯವಸ್ಥೆ ಇದೆ .

ಇದರ ಉಗಮ ಒಳ ಕಿವಿಯಿಂದ ಆರಂಭ .

ಒಳ ಕಿವಿಯ ಒಳಗೆ ಶಂಖಾಕಾರದ ಅಂಗ ಇದೆ.ಅದರಲ್ಲಿನ  ಮಾಪನಾ ಕಲ್ಲುಗಳು ತಲೆ ಆಡಿದಂತೆ ನಮ್ಮ

ಶರೀರದ ಸಮತೋಲನದ  ಬಗ್ಗೆ ವಿವರಗಳು ಸಂಗ್ರಹಿಸಿ ನರಗಳ ಮೂಲಕ 

ಮೆದುಳಿಗೆ ರವಾನೆ ಮಾಡುವವು  .ಮೆದುಳಿನಲ್ಲಿ ಅದರಿಂದ ಬಂದ ಸಂದೇಶಗಳ 

ವಿಶ್ಲೇಷಣೆ ಆಗಿ ನಮ್ಮ ಅವಯವಗಳಿಗೆ ಸೂಕ್ತ ಸಂದೇಶ ಹೋಗುವುದು .ಈ ನರವು 

ನಮ್ಮ ಶ್ರವಣ ನರದ ಜತೆಯಲ್ಲಿ ಇರುವುದು .ಹಲವು ಬಾರಿ  ಈ ವ್ಯವಸ್ಥೆಯಲ್ಲಿ ತನ್ನಿಂದ ತಾನೇ ಏರುಪೇರು ಆಗುವುದು . ಇನ್ನು ಕೆಲವು ಬಾರಿ 
ಒಳ ಕಿವಿಯ ಸೋಂಕು ಉಂಟಾದಾಗ  ಈ ವ್ಯವಸ್ಥೆ ಏರುಪೇರಾಗಿ ನಮಗೆ  ತಲೆ ತಿರುಗುವುದು .ವಾಂತಿ ಯೂ ಬರಬಹುದು .ಇದನ್ನು ವರ್ಟಿಗೊ ಎನ್ನುವರು .ಪ್ರಯಾಣ ಕ್ಕೆ ಸಂಬಂದಿಸಿದ ತಲೆತಿರುಗುವಿಕೆ ಮತ್ತು ವಾಂತಿ ಇದೇ ಕಾರಣ.ಕೆಲವು ಔಷಧಿಗಳು ಇಂತಹದೇ ತೊಂದರೆ ಉಂಟು ಮಾಡ ಬಲ್ಲವು .                ಉದಾ  ;    ಜೆಂಟಾ ಮೈಸಿನ್ . ಈ ನರಗಳಿಗೆ ಹಾನಿ ಮಾಡಿ  ತಲೆ ತಿರುಗುವುದು ಮತ್ತು  ಸಮತೋಲ ತಪ್ಪುವುದು ಉಂಟಾಗ ಬಹುದು .

ಅದೇ ರೀತಿ  ಮದ್ಯಪಾನಿಗಳಲ್ಲಿ  ಮೆದುಳಿನ  ಸಮತೋಲ ಕಾಪಾಡುವ 

ಜೀವಕೋಶಗಳು ಹಾನಿ ಗೊಂಡು ಇದೇ ಚಿನ್ಹೆಗಳು ಕಾಣಿಸಿ ಕೊಳ್ಳಬಹುದು .

ತಲೆ ತಿರುಗುವುದಕ್ಕೆ  ಏರಿದ ಬಿ ಪಿ  ಸಾಮಾನ್ಯ ಕಾರಣ ಅಲ್ಲ .ಕರ್ಣ ಕಾರಣಕ್ಕೆ ತಲೆ ತಿರುಗುವಾಗ ರಕ್ತದ ಒತ್ತಡ ನೋಡಿದರೆ ತಾತ್ಕಾಲಿಕ ವಾಗಿ ಜಾಸ್ತಿ ಇರಬಹುದು

ನಮ್ಮ ಕಿವಿ ಒಳಗಿನ  ಸಮತೋಲನ ಕಾಪಾಡುವ ವ್ಯವಸ್ಥೆಯ ಏರು ಪೇರು ಕಾರಣ

ಇದನ್ನು ಸರಿಪಡಿಸುವ ಔಷಧಿಗಳು ಇವೆ .

ಶುಕ್ರವಾರ, ಜೂನ್ 5, 2015

ತಲೆ ನೋವು



ತಲೆನೋವು ಕಾಡದವರಿಲ್ಲ. ಇದರಲ್ಲಿ ಎರಡು ಮುಖ್ಯ ಪ್ರಭೇದ ಗಳು ಇವೆ .

೧. ಪ್ರಾಥಮಿಕ ತಲೆನೋವುಗಳು ಉದಾ ಮೈಗ್ರೇನ್ , ಉದ್ವೇಗದ ತಲೆನೋವು

೨.  ಅನ್ಯ ನಿಮಿತ್ತ ತಲೆನೋವು  ಉದಾ  ಮಲೇರಿಯ ,ಡೆಂಗು, ಮೆನೆಂಜೈಟಿಸ್.

ಮೆದುಳು ಜ್ವರ ದಂತಹ ಸೋಂಕು , ತಲೆಯ ಗಾಯ ,ಮೆದುಳಿನ ಗಡ್ಡೆಗಳು

ಜನರು ಸಾಮಾನ್ಯವಾಗಿ ತಿಳಿದಿರುವಂತೆ    ಕಣ್ಣಿನ ದೃಷ್ಟಿ ದೋಷ ಮತ್ತು ಏರು

ರಕ್ತದ ಒತ್ತಡ ತಲೆನೋವಿಗೆ  ಕಾರಣವಾಗಿರುವುದು ಬಹಳ ಅಪರೂಪ .ಕನ್ನಡಕ

ತಲೆನೋವಿಗೆ  ಪರಿಹಾರವಾಗದು .

                           


ಮೈಗ್ರೈನ್

ಸುಮಾರು ೧೬ % ಪ್ರಾಥಮಿಕ ತಲೆನೋವುಗಳಿಗೆ  ಕಾರಣ  ಮೈಗೈನ್ .

ಅಂತರ ರಾಷ್ಟ್ರೀಯ  ತಲೆನೋವು   ಸಂಘವು  ಈ ಕಾಯಿಲೆಯ ನ್ನು 

ಗುರುತಿಸಲು  ಕೆಲವು ಮಾನ ದಂಡಗಳನ್ನು  ರೂಪಿಸಿದೆ

ಕೆಳಗಿನ ನಾಲ್ಕು  ಅಂಶಗಲ್ಲಿ  ಕನಿಷ್ಠ  ಎರಡು ಇರಬೇಕು

೧. ಒಂದು ಪಾರ್ಶ್ವದ ತಲೆ  ಶೂಲೆ

೨. ತುಡಿಯುವ (pulsating)ತಲೆ ನೋವು

೩.ತೀವ್ರ ತರ ತಲೆ ನೋವು

೪ ನಡೆಯುವುದು ,ಮೆಟ್ಟಲು ಹತ್ತುವಂತಹ ಸಾಮಾನ್ಯ ಚಟುವಟಿಕೆಗಳೂ

ತಲೆನೋವನ್ನು  ಹೆಚ್ಚಿಸುವವು .

ಇದರೊಡನೆ    ತಲೆನೋವಿನೊಡನೆ  ಕೆಳಗಿನ ಒಂದು ಅಂಶ ಪೂ

ರಕವಾಗಿರಬೇಕು

೧ . ಪ್ರಕಾಶ (ಬೆಳಕು )ದ್ವೇಷ  ಅಥವಾ ಶಬ್ದ ದ್ವೇಷ

೨.  ವಾಕರಿಕೆ ಅಥವಾ ವಾಂತಿ

ಮೇಲೆ ಕಾಣಿಸಿದ   ೪ ರಿಂದ ೭೨ ಗಂಟೆಗಳ  ವರೆಗಿನ ಕನಿಷ್ಠ  ೫ ತಲೆನೋವುಗಳು

ಇದ್ದರೆ ಮಾತ್ರ  ಅದನ್ನು  ಮೈಗ್ರೈನ್ ಎನ್ನುವರು .

ಹಲವರಲ್ಲಿ  ಮೈಗ್ರೈನ್ ನ  ಪೂರ್ವ ಸೂಚನೆ  (aura) ಲಕ್ಷಣ ಗಳು

ತಲೆನೋವಿಗಿಂತ ಮೊದಲು ಕಾಣಿಸಿ ಕೊಳ್ಳುವವು.ಇವು  ಕಣ್ಣಿನ ಎದುರು

ನರ್ತಿಸುವ ಬಿಂದುಗಳು ,ಪ್ರಕಾಶ ಪುಂಜ ಅಥವಾ ದೃಷ್ಟಿ ಹೀನತೆ

ರೂಪದಲ್ಲಿ ,ಅತೀವ ಹಸಿವೆ ,ಮೂತ್ರಶಂಕೆ ,ಮುಖದಲ್ಲಿ ಇರುವೆ ಹರಿದಂತೆ

ಇತ್ಯಾದಿ ರೂಪದಲ್ಲಿ ಇರುವುವು
1134815-1142556-11801134815-1142556-1182



1134815-1142556-11791134815-1142556-1181

ಮೈಗ್ರೈನ್  ಪೂರ್ವ ಸೂಚನೆಯ ದೃಷ್ಟಿ ವಿಕಾರಗಳು (ಮೇಲಿನ ಚಿತ್ರಗಳು )

ಉದ್ವೇಗದ ತಲೆನೋವು (ಟೆನ್ಶನ್ ಟೈಪ್  ಹೆಡ್ಡೇಕ್ )

ಪ್ರಾಥಮಿಕ ತಲೆನೋವಿಗೆ    ೬೭% (ಮೈಗ್ರೈನ್ ಗಿಂತ ಮೂರು ಪಟ್ಟು ) ಕಾರಣ

ಉದ್ವೇಗದ ತಲೆನೋವು ಎಂದು ಕರೆಯಿಸಿಕೊಳ್ಳಲು  ಕೆಳಗಿನ ನಾಲ್ಕರಲ್ಲಿ ಎರಡು

ಅಂಶಗಳು  ಇರಬೇಕು .

೧   ಒತ್ತಿದಂತೆ ಅಥವಾ ಹಿಂಡಿದಂತೆ ಇರುವ ನೋವು (ತುಡಿತ ರಹಿತ )

೨.  ಮುಂದಲೆ ಅಥವಾ ಹಿಂದಲೆ ನೋವು

೩ ಇಬ್ಬದಿ ತಲೆ ನೋವು

೪ ಸಾಮಾನ್ಯ ಚಟುವಟಿಕೆ ಯಿಂದ  ಏರದ ತಲೆ ನೋವು

ಮೈಗ್ರೈನ್ ನಂತೆ  ಪೂರ್ವ ಸೂಚನಾ ಚಿನ್ಹೆ ಗಳೂ ವಾಕರಿಕೆ ವಾಂತಿಯೂ

ಇರದು .ಮಾನಸಿಕ ಉದ್ವೇಗದ ಹಿನ್ನಲೆ ಇರುವುದು .

ಮೈಗ್ರೈನ್ ಅಥವಾ ಉದ್ವೇಗದ ತಲೆನೋವಿನ  ಪತ್ತೆಗೆ  ತಲೆಯ ಸ್ಕ್ಯಾನ್ ನ

ಅವಶ್ಯಕತೆ ಇರುವುದಿಲ್ಲ .

ಆದರೆ  ಇದುವರೆಗೆ ಕಂಡರಿಯದ ತಲೆನೋವು ,  ನೋವಿನೊಡನೆ ನಿಲ್ಲದ

ವಾಂತಿ ,ನೂತನ ನರದೌರ್ಬಲ್ಯ ಇತ್ಯಾದಿ ಕಂಡು ಬಂದರೆ  ಮೆದುಳಿನ ರಕ್ತಸ್ರಾವ

ಇದೆಯೋ ಎಂದು ನೋಡಲು ಸ್ಕ್ಯಾನ್ ಮಾಡುವರು .

ಬಾಲಂಗೋಚಿ :  ದಶಕಗಳ ಹಿಂದೆ ದೂರ ದರ್ಶನದಲ್ಲಿ ಮಧ್ಯಾಹ್ನ ಪ್ರಶಸ್ತಿ

ವಿಜೇತ ಚಲನ ಚಿತ್ರ ತೋರಿಸುತ್ತಿದ್ದರು .ಹಲವರಿಗೆ ಇವು ತಲೆನೋವು

ತರಿಸುತ್ತಿದ್ದವು ,ತಮಾಷೆಯೆಂದರೆ  ಅದರ ಪ್ರಾಯೋಜಕರು ಅಮ್ರುತಾ೦ಜನ್!

ಈ ತಲೆನೋವಿನ ಮುಲಾಮುಗಳಲ್ಲಿ  ಚರ್ಮ ಉರಿ ಉಂಟು ಮಾಡುವ ವಸ್ತು

ಗಳಿರುತ್ತವೆ .ಅವುಗಳನ್ನು ಕೌಂಟರ್ ಇರಿ ಟೆ೦ಟ ಅಂದರೆ ಪ್ರತ್ಯುರಿ ಎನ್ನುವರು .

ಅವುಗಳು ಉಂಟು ಮಾಡುವ ಉರಿ ಮೂಲ ನೋವನ್ನು ಭಾಗಶಃ ಮರೆಯುವಂತೆ

ಮಾಡುವುದು .ಜೀವನದಲ್ಲಿ ದೊಡ್ಡ ಸಂಕಷ್ಟ ಸಣ್ಣ ಸಮಸ್ಯೆಯನ್ನು
ಮರೆಸುವಂತೆ .

ಗುರುವಾರ, ಜೂನ್ 4, 2015

ಹೃದಯಾಘಾತ -3

  ಹೃದಯಾಘಾತ 3
ಕೆಲವು ಪ್ರಶ್ನೆಗಳು 

ಎದೆ ನೋವಿಗೆ ಬೇರೆ ಕಾರಣಗಳು 

 ಅನ್ನನಾಳದ ಉರಿ .ಜಠರದಲ್ಲಿ ಇರುವ ಆಮ್ಲ ಅನ್ನನಾಳಕ್ಕೆ  ಬಂದರೆ ಉರಿ ನೋವು 

ಬರುವುದು .

ಶ್ವಾಶಕೋಶ ದಲ್ಲಿನ  ಸೋಂಕು ,ಗಡ್ಡೆಗಳು ಎದೆನೋವಿಗೆ ಕಾರಣ ಇರ ಬಹುದು .

ಕೆಲವೊಮ್ಮೆ ಶ್ವಾಸಕೋಶ ತೂತು ಬಿದ್ದು ಎದೆಯೊಳಗೆ ಗಾಳಿ ತುಂಬಿ ಎದೆನೋವು 

ಮತ್ತು ದಮ್ಮು ಉಂಟಾಗಬಹುದು .ಇದನ್ನು ನ್ಯುಮೋ ಥೊರಕ್ಷ್  ಎನ್ನುವರು .

ಎದೆಯ ಪಕ್ಕೆಲುಬು ಮತ್ತು ಮುಂದೆಲುಬಿನ ನಡುವಿನ ಗಂಟಿನ ವಾತ 

 ಎದೆನೋವಿನ ಸಾಮಾನ್ಯ ಕಾರಣ .ನಮ್ಮ ಉಸಿರು ಇರುವ ತನಕ  ಈ 

ಗಂಟುಗಳಿಗೆ ವಿಶ್ರಾಂತಿ ಇಲ್ಲದಿರುವುದರಿಂದ  ಇಲ್ಲಿ ಬಂದ ನೋವು ಬೇಗನೆ 

ಕಡಿಮೆಯಾಗದು .ಆದರೂ ಇದು ದೊಡ್ಡ ವಾತ ವೇನಲ್ಲ .

ಎದೆಯ ಚರ್ಮ ದಲ್ಲಿ  ನರ ಕೋಟಲೆ (ಸರ್ಪ ಸುತ್ತು ) ಬಂದರೆ ನೋವು ಇರುವುದು .

ಕೆಲವೊಮ್ಮೆ ಮನಸಿನ ಉದ್ವೇಗವು ಸುಮ್ಮನೇ ಎದೆನೋವಿನ  ರೂಪದಲ್ಲಿ 

ಕಾಣಿಸಿ ಕೊಳ್ಳುವುದು.

ಇ ಸಿ ಜಿ ಸರಿ ಇದ್ದರೆ ಹೃದಯಾಘಾತ ಆಗಿಲ್ಲ ಎಂದು ಹೇಳ ಬಹುದೇ ?

ಇಲ್ಲ .ಇ ಸಿ ಜಿ ಸರಿ ಇದ್ದು  ಹೃದಯಾಘಾತ ದ ಲಕ್ಷಣ ಇದ್ದರೆ ಇ ಸಿ ಜಿ  ಪುನಃ

ಮಾಡುವರು .ಅಲ್ಲದೆ ರಕ್ತ ಪರೀಕ್ಷೆಗೆ ಒಳಪಡಿಸುವರು.

ಹೃದಯಾಘಾತ  ಮುಂದೆ ಬರುವದೋ ಎಂದು ಕಂಡು ಹಿಡಿಯಲು 

ಆರೋಗ್ಯವಂತರಿಗೆ  ಇ ಸಿ ಜಿ ಮಾಡುವುದರಿಂದ ಹೆಚ್ಚ್ಚಿನ ಪ್ರಯೋಜನ ಇಲ್ಲ .


ಹೃದಯದ  ವೈಫಲ್ಯ (ಹಾರ್ಟ್ ಫೈಲ್ಲ್ಯುರ್ ) ಮತ್ತು  ಹೃದಯಾಘಾತ( ಹಾರ್ಟ್ 

ಅಟಾಕ್) ಕ್ಕೆ ಇರುವ ವ್ಯತ್ಯಾಸ ?

 ಹೃದಯದ ವೈಫಲ್ಯ  ಹೃದಯದ ಕವಾಟ ಗಳ ತೊಂದರೆ , ಕಾರೋನರಿ ರಕ್ತ 

ನಾಳಗಳ ತಡೆ , ವರ್ಶಾಂತರ ಗಳ  ದಮ್ಮಿನ ಕಾಯಿಲೆ ,ತೀವ್ರ ರಕ್ತ  ಹೀನತೆ 

ಇತ್ಯಾದಿ ಕಾಯಿಲೆಗಳಿಂದ ಬರ ಬಹುದು .ಹೃದಯಾಘಾತವೂ ಒಂದು ಕಾರಣ .

ಎಲ್ಲರೂ ಕೊಲೆಸ್ಟರಾಲ್  ಔಷಧಿ ಸೇವಿಸಿದರೆ ಒಳ್ಳೆಯದಲ್ಲವೇ ?

ಅಲ್ಲ ,ಅದಕ್ಕೆ ನಿರ್ಧಿಷ್ಟ ವೈಜ್ಞಾನಿಕ ಮಾನ ದಂಡಗಳಿವೆ. ಈ ಔಷ ಧಿಗಳಿಗೂ ಅಡ್ಡ 

ಪರಿಣಾಮ ಗಳಿವೆ .
ಯಾವ ಎಣ್ಣೆ ಒಳ್ಳೆಯದು ?ತೆಂಗಿನ ಎಣ್ಣೆ ಒಳ್ಳೆಯದೋ ಸೂರ್ಯಕಾಂತಿ ಎಣ್ಣೆ 
 
ಒಳ್ಳೆಯದೋ ?ಬೀchi ಯವರಲ್ಲಿ ಉದ್ದ ಜಡೆಯವಳನ್ನು ಮದುವೆ  ಆಗುವುದು
 
 ಒಳ್ಳೆಯದೋ ಮೋಟು ಜಡೆಯವಳನ್ನು ಮದುವೆ ಆಗುವುದು ಒಳ್ಳೆಯದೋ ಎಂದು 
 
ಕೇಳಿದ್ದಕ್ಕೆ ಮಾಡುವೆ ಆಗುವುದು ಒಳ್ಳೆಯದು ಎಂದು ನಿನಗೆ ಯಾರು ಹೇಳಿದರು 
 
 ?ಎಂದು ಮರು ಪ್ರಶ್ನೆ ಹಾಕಿದರಂತೆ .ಆದುದರಿಂದ ಎಣ್ಣೆ ಉಪಯೋಗ ಹಿತ ಮಿತ 
 
ಇರಲಿ .ರೈಸ್ ಬ್ರಾನ್  ಎಣ್ಣೆ ,ನೆಲಕಡಲೆ ಎಣ್ಣೆ ಪರವಾಗಿಲ್ಲ(ಆಲಿವ್ ಎಣ್ಣೆ ಅತ್ಯುತ್ತಮ 
 
,ಆದರೆ ಬಹಳ ತುಟ್ಟಿ .ತೆಂಗಿನ ಎಣ್ಣೆಯ ಬಗ್ಗೆ ಕೆಳಗೆಕೊಟ್ಟ ಲಿಂಕ್ ಓದಿರಿ . 

 https://www.ahajournals.org/doi/10.1161/CIRCULATIONAHA.119.043052

ಹಣ್ಣು ಹಸಿ ತರಕಾರಿ ಒಳ್ಳೆಯದು ,ಧೂಮ ಪಾನ ಪೂರ್ಣ ನಿಷಿದ್ಧ

ಬುಧವಾರ, ಜೂನ್ 3, 2015

ಹೃದಯಾಘಾತ -೨

ಹೃದಯಾಘಾತಕ್ಕೆ  ಮುನ್ನುಡಿ ಹೂಡುವ  ಅಂಶಗಳು ಯಾವುವು?

ಬದಲಾಯಿಸಲು ಸಾಧ್ಯವಿಲ್ಲದ  ಅಂಶಗಳು 

೧ .ಕುಟುಂಬದಲ್ಲಿ   ಹೃದ್ರೋಗದ ಇತಿಹಾಸ 

೨ ಗಂಡು ಲಿಂಗ 

೩ ವಯಸ್ಸು ,

ಬದಲಾಯಿಸ ಬಹುದಾದ ಅಂಶಗಳು 

೧ ಧೂಮ ಪಾನ 

೨ ಸಕ್ಕರೆ ಕಾಯಿಲೆ 

೩ ಏರು ರಕ್ತದದೊತ್ತಡ

೪ ರಕ್ತದಲ್ಲಿನ ಅತಿ ಕೊಬ್ಬು (ಕೊಲೆಸ್ತಿರೋಲ್ ಸೇರಿ )

೫. ಬೊಜ್ಜು 

೬. ಕಡಿಮೆ ಶಾರೀರಿಕ ಶ್ರಮ 

೭ ಉದ್ವೇಗ 

ಹೃದಯಾಘಾತ ವನ್ನು  ಹೇಗೆ  ದೃಡೀಕರಿಸುತ್ತಾರೆ ?

ರೋಗಿಯ ಎದೆ ನೋವಿನ ಪರಿ  ಹೃದಯಾಘಾತವನ್ನು ಸೂಚಿಸುವುದು .


ಇ ಸಿ ಜಿ ಎಂಬ ಪರೀಕ್ಷೆಯು ಹೆಚ್ಚು ಕಮ್ಮಿ ಅದನ್ನು ದೃಡೀಕರಿಸುವುದು .    

                         
                              ನಾರ್ಮಲ್ ಇ ಸಿ ಜಿ 

                                 
                             ಹೃದಯಾಘಾತ ತೋರಿಸುವ  ಇ ಸಿ ಜಿ 
ಸಂಶಯ ಇದ್ದರೆ ರಕ್ತ ಪರೀಕ್ಷೆ  ಸಿ ಕೆ ಎಂ ಬಿ  ಮತ್ತು  ಟ್ರೋಪೋನಿನ್  ಐ ಎಂಬ 

ಎರಡು ಪರೀಕ್ಷೆಗಳು  ಹೃದಯಾಘಾತವನ್ನು ಖಚಿತ ಪಡಿಸುವಲ್ಲಿ ಸಹಾಯಕ .

ಇದರೊಂದಿಗೆ  ಹೃದಯದ ಸ್ಕ್ಯಾನ್ -ಇಕೋ ಕಾರ್ಡಿಯೋ ಗ್ರಾಫಿ ಕೂಡ ವೈದ್ಯರ 

ಬತ್ತಳಿಕೆಯಲ್ಲಿಯುವ ಒಂದು ಪರೀಕ್ಷಾ ಕ್ರಮ .

ಇನ್ನು ಅಂಜಿಯೋಗ್ರಾಂ ಎಂಬ ಪರೀಕ್ಷೆ ಬಗ್ಗೆ ನೀವು ಕೇಳಿರ ಬಹುದು .ಇಲ್ಲಿ  ಕಾಲಿನ 

ಅಥವಾ ಕೈಯ ಅಪದಮನಿ ಗಳ ಮೂಲಕ  ಒಂದು ಕೊಳವೆಯನ್ನು ತೂರಿ  ಅದನ್ನು 


ಕ್ಷ ಕಿರಣ  ಯಂತ್ರದ ಸಹಾಯದಿಂದ ಮೆಲ್ಲ ಮೆಲ್ಲನೆ  ಮಹಾ ಅಪಧಮನಿಯಲ್ಲಿ 

ಹೃದಯದ  ಕೊರೋನರಿ ರಕ್ತನಾಳದ ಉಗಮ ಸ್ಥಾನಕ್ಕೆ ತಂದು  ಅದರ ಮೂಲಕ 


ಬಣ್ಣದ ಚುಚ್ಚು ಮದ್ದು ( dye ) ಕೊಟ್ಟು ವೀಡಿಯೊ ಚಿತ್ರೀಕರಣ ಮಾಡುವರು .

ಇದರಿಂದ ಯಾವ ನಾಳದಲ್ಲಿ ಎಷ್ಟು ತಡೆ ಇದೆ ಎಂದು ತಿಳಿಯುವುದು .


    ಬಾಣದ ಗುರುತು ತಡೆ (ಬ್ಲಾಕ್ ) ತೋರಿಸುವುದು .

ಚಿಕಿತ್ಸೆ  :   

 ರೋಗಿಯನ್ನು  ಅತಿ ಗಮನ ತುರ್ತು ವಿಭಾಗದಲ್ಲಿ ದಾಖಲಿಸುವರು .

ರಕ್ತ ಸ್ಥಂಭಕ  ಪ್ಲೇಟ್ ಲೆಟ್ ವಿರೋಧಿ  ಔಷಧಿ  ಗಳಾದ  ಆಸ್ಪಿರಿನ್ , 

ಕ್ಲೋಪಿದೊಗ್ರೆಲ್ , ಕೊಲೆಸ್ತೆರೋಲ್  ನಿಗ್ರಹಿಸುವ  ಸ್ಟಾಟಿನ್  ಮತ್ತು   ನೋವಿಗೆ 

ಮೊರ್ಫಿನ್  ಕೊಡುವರು .ಆಮ್ಲಜನಕ   ಪುರಾಣ ಮಾಡುವರು .ಹೃದಯದ 

ಬಡಿತ , ರಕ್ತದ ಒತ್ತಡಗಳ ಮೇಲೆ   ಮಾಪಕಗಳ ಮೂಲಕ   ಕಣ್ಣಿಡುವರು .


    

ಹೃದಯದ ರಕ್ತ ನಾಳಗಳ   ಹೆಪ್ಪು ಕರಗಿಸುವ  ಔಷಧಿಗಳು ಇವೆ .ಉದಾ 


ಸ್ತ್ರೆಪ್ತೋಕೈನೆಸ್ , ಇವುಗಳನ್ನು ಕೊಡುವರು .

ಇನ್ನು ಕೆಲವೊಮ್ಮೆ  ನೇರವಾಗಿ ಅನ್ಜಿಯೋಗ್ರಂ ಮಾಡಿ ಕೊಳವೆ ಮೂಲಕ 

ರಕ್ತನಾಳದ ತಡೆ ನಿವಾರಿಸುವರು .ಇದನ್ನು ಪ್ರಾಥಮಿಕ  ತಡೆ ನಿವಾರಣೆ ಅಥವಾ 


ಪ್ರೈಮರಿ ಅಂಜಿಯೋ ಪ್ಲಾಸ್ಟಿ ಎಂದು ಕರೆಯುವರು .


ಹೃದಯಾಘಾತದಿಂದ ಸಾವು ಹೇಗೆ ಉಂಟಾಗುವುದು ?


೧  ಮುಖ್ಯ್ಹ ರಕ್ತನಾಳದಲ್ಲಿ ದೊಡ್ಡ ತಡೆ ಉಂಟಾದರೆ  ಹೃದಯದ  ಮಾಂಸ 

ಖಂಡಗಳು  ಪೂರ್ಣ ವಿಫಲ ಗೊಂಡು ಮೆದುಳು  ರಕ್ತವಿಲ್ಲದೆ  ಸಾವು 

ಉಂಟಾಗುವುದು .

೨  ಆಘಾತಕ್ಕೆ ಒಳ ಗಾದ ಹೃದಯ  ದ  ಬಡಿತ ತೀವ್ರ  ಏರು ಪೇರಾಗಿ 

 (arrythmias) ಸಾವು ಬರುವುದು . ಅತೀ ಕಡಿಮೆ ಹೃದಯ ಬಡಿತಕ್ಕೆ 


ಪೇಸ್ ಮೇಕರ್ ಇಡುವರು . ಅತೀ ಏರು ಉಂಟಾದಲ್ಲಿ ಶಾಕ್ ಕೊಡುವರು 

ಮತ್ತು  ಬಡಿತ   ಸ್ಹ್ತಿಮಿತ ಕ್ಕೆ ತರುವ  ಔಷಧಿ ನೀಡುವರು .

 ಇಷ್ಟೆಲ್ಲಾ  ಇದ್ದರೂ  ಅನಾಯೇಸೇ ಮರಣಂ (ವಿನಾ ದೈನ್ಯೇನ  ಜೀವಿತಂ) ಎಂದು 


ಪ್ರಾರ್ಥಿಸುವವರಿಗೆ  ಹೃದಯಾಘಾತ ವರ  ವಾಗಿ ಪರಿಣಮಿಸುವುದು