ಬೆಂಬಲಿಗರು

ಶುಕ್ರವಾರ, ಮೇ 29, 2015

ಹೃದಯಾಘಾತ ೧

       ಹೃದಯಾಘಾತ 1
ಎಲ್ಲರೂ ಹೆದರುವ  ಕಾಯಿಲೆ ಹೃದಯಾಘಾತ .ಆಘಾತ ಎಂದರೆ  ಯಾವುದೇ 

ದೀರ್ಘ ಮುನ್ಸೂಚನೆ ಇಲ್ಲದೆ ಎರಗುವ ಆಕ್ರಮಣ .

 ಹೃದಯ ದೇಹದ ಎಲ್ಲಾ ಭಾಗಗಳಿಗೆ  ಆಹಾರ ,ಮತ್ತು ಆಮ್ಲಜನಕ ರಕ್ತದ ಮೂಲಕ 

ಸರಬರಾಜು ಮಾಡುವ ಅಂಗ .ಇಂತಹ ಪ್ರಾಮುಖ್ಯ ಅಂಗಕ್ಕೆ ರಕ್ತ ಸರಬರಾಜು 

ಮಾಡುವ  ರಕ್ತ ನಾಳ ಗಳಿಗೆ ಕೊರೋನರಿ  ರಕ್ತನಾಳ ಎನ್ನುವರು .ತನ್ನ ಒಳಗೆ 

ರಕ್ತ ಇದ್ದರೂ ಆಯಿಲ್ ಟ್ಯಾಂಕರ್  ವಾಹನಕ್ಕೆ ಬೇರೆ ಡಿಸೇಲ್ ಟ್ಯಾಂಕ್ ಮತ್ತು 

ಪೈಪ್ ಇರುವಂತೆ   ಹೃದಯಕ್ಕೆ ಇವು.

             

ಮಹಾ ಅಪಧಮನಿ  ಯಿಂದ  ಕವಲೊಡೆವ  ಕೊರೋನರಿ ನಾಳಗಳಲ್ಲಿ 

ಮುಖ್ಯವಾಗಿ  ಬಲ ಮತ್ತು ಎಡ ಎಂಬ  ಎರಡು ಮುಖ್ಯ ವಾದುವು .ಹೃದಯದ 

ಎಡ ಭಾಗ ಹೆಚ್ಚು ಕೆಲಸ ಮಾಡ ಬೇಕಾದುದರಿಂದ   ಎಡದ ರಕ್ತನಾಳ ದಲ್ಲಿ 

ಹೆಚ್ಚು  ರಕ್ತ  ಸಂಚಾರ .ಎಡದ  ಕೊಳವೆ  ಮುಂದೆ  ಎಡ ಮುಂದಕ್ಕೆ  ಇಳಿಯುವ 

ಮತ್ತು  ಎಡ ಸುತ್ತು ಹಾಕುವ  ಎಂದು ವಿಭಜನೆ ಹೊಂದುವುದು.. ಹಾಗೆ ಒಟ್ಟು 

ಮೂರು ಪ್ರಧಾನ  ರಕ್ತನಾಳಗಳು ಆದುವು .ಇವುಗಳ ತೊಂದರೆಯನ್ನೇ 

ಒಂದು ನಾಳದ (ಸಿಂಗಲ್ ವೆಸ್ಸೆಲ್) ಬ್ಲಾಕ್ ,ಮೂರು ಬ್ಲಾಕ್ ಇತ್ಯಾದಿ  ಹೇಳುವರು .

ಹೃದಯಾಘಾತ ಉಂಟಾಗುವ ಪರಿ 

ಮೊದಮೊದಲು ರಕ್ತನಾಳದ  ಒಳ ಪದರಿನ ಕೆಳಗೆ  ಕೊಬ್ಬು ಶೇಖರಣೆ ಆಗುವುದು .

ಇದನ್ನು ಫ್ಯಾಟಿ ಸ್ಟ್ರೀಕ್ ಎನ್ನುವರು ,ಇದು ಬೆಳೆದು ರಕ್ತನಾಳದಲ್ಲಿ  ಮೊದಲು 

ಭಾಗಶ  ತಡೆ ಏರ್ಪಡಿಸುವುದು .ಮುಂದೆ ಒಳಪದರ  ಒಡೆದು  ರಕ್ತ ಹೆಪ್ಪು ಗಟ್ಟಿಸುವ 

ವಸ್ತುಗಳನ್ನು  ಆಕರ್ಶಿಸಿ ಪ್ರಚೋದಿಸುವುದು .ಇವುಗಳಲ್ಲಿ  ಪ್ಲೇಟ್ ಲೆಟ್  ರಕ್ತ 

ಕಣಗಳು ( ಇವುಗಳ ಬಗ್ಗೆ ವಿವರhttps://padmangri.blogspot.com/2020/11/blog-post_20.html) ಮತ್ತು ಹೆಪ್ಪು ಗಟ್ಟಿಸುವ ರಾಸಾಯನಿಕಗಳು ಸೇರಿ  ಈ ಭಾಗದಲ್ಲಿ ರಕ್ತ 

ಹೆಪ್ಪುಗಟ್ಟಿ   ರಕ್ತ ಸಂಚಾರಕ್ಕೆ ಪೂರ್ಣ ತಡೆ ಏರ್ಪಡುವುದು .ರಕ್ತದ ಮೂಲಕ 

ಆಮ್ಲಜನಕ ,ಆಹಾರ ಸಿಗದೆ ಹೃದಯದ ಮಾಂಸ ಖಂಡಗಳು  ಬಸವಳಿದು 

ಬೆಂಡಾಗಿ ಕೂಗುವುವು.ಅದುವೇ  ಎದೆ ನೋವಿಗೆ ಕಾರಣ .ಪರಿಸ್ತಿತಿ   

ಸುಧಾ ರಿಸದಿದ್ದಲ್ಲಿ ಆ ಭಾಗದ ಮಾಂಸ ಖಂಡ ಸತ್ತು  ಹೃದಯ  ರಕ್ತ  ಪಂಪ್ 

ಮಾಡುವ  ಕಾರ್ಯದಲ್ಲಿ  ವ್ಯತ್ಯಯ ಆಗುವುದು .ಮೆದುಳಿಗೆ ರಕ್ತ ಬಂದ್ ಆದರೆ 

ಸಾವು ಸಂಭವಿಸುವುದು .






ಹೃದಯದ  ಆರ್ತನಾದ  ಎದೆ ನೋವಿನ ರೂಪದಲ್ಲಿ .ನೋವು  ಎದೆ ಮಧ್ಯದಲ್ಲಿ 

ಒತ್ತಿದಂತೆ ,  ಎಡದ ಕೈ ಮತ್ತು ದವಡೆಗೆ  ಪಸರಿಸುವುದು .ಸಿನೆಮಾ ದಲ್ಲಿ ತೋರಿಸುವಂತೆ ಎಡ ಭಾಗದಲ್ಲಿ ನೋವು ಬರುವುದು ಕಡಿಮೆ ..ಕೆಲವೊಮ್ಮೆ 

ಹೊಟ್ಟೆ ನೋವು ರೂಪದಲ್ಲಿ ಬರಬಹುದು .ಅತಿಯಾಗಿ ಬೆವರುವುದು .

ಇನ್ನು ಮೌನ  ಆಘಾತ (ಸೈಲೆಂಟ್ ಅಟ್ಯಾಕ್ ) ದಲ್ಲಿ ನೋವು ಇರದು .ಇದು 

ಸಕ್ಕರೆ ಕಾಯಿಲೆ ಯವರಲ್ಲಿ ಸಾಮಾನ್ಯ .ನೋವು ವಾಹಕ ನರಗಳ ದೌರ್ಬಲ್ಯ 

ಇದಕ್ಕೆ ಕಾರಣ .                                                                     

            
https://youtu.be/mLmKq5bQOg0
 

ಗುರುವಾರ, ಮೇ 28, 2015

ಶರೀರದಲ್ಲಿ ನೀರು ಬರುವುದು

ಶರೀರದಲ್ಲಿ  ಕೆಲವೊಮ್ಮೆ ನೀರು ತುಂಬಿದಂತೆ ಆಗುವುದು ,ಇದನ್ನು ಅಂಗ್ಲ 

ಭಾಷೆಯಲ್ಲಿ  ಎಡಿಮಾ ಎನ್ನುವರು .ಹೆಚ್ಚಾಗಿ ಕಾಲುಗಳಲ್ಲಿ ,ಕಣ್ಣಿನ ಸುತ್ತ ,ಉದರ 

ಮತ್ತು ಕೆಲವೊಮ್ಮೆ ಇಡೀ ಶರೀರದಲ್ಲಿ ನೀರು ತುಂಬುವುದು .ಈ ತರಹ ನೀರು 

ನಿಂತಾಗ  ಭಯವಾಗುವುದು .ಮತ್ತು ಮೂತ್ರಪಿಂಡ(ಕಿಡ್ನಿ) ಗಳ ಕಾಯಿಲೆ ಎಂದು 

ಹಲವರು ಭಾವಿಸುವರು .ಇದು ಸರಿಯಲ್ಲ.

   ನಮ್ಮ ರಕ್ತದಲ್ಲಿ ನೀರನ್ನು ರಕ್ತನಾಳ ಗಳ ಒಳಗೆ ಹಿಡಿದಿರುವ ಶಕ್ತಿ ಸಸಾರಜನಕ .

ನೀರನ್ನು ಹೊರ ದೂಡುವ ಶಕ್ತಿ  ರಕ್ತನಾಳದ ಒಳಗಿನ ದ್ರವದ ಒತ್ತಡ ಹೊರ 

 ದೂಡಲು ನೋಡುವುದು .ಈ ಶಕ್ತಿಗಳ ಸಮರಸವೇ ಅರೋಗ್ಯ ,ವಿರಸ ವೇ ರೋಗ .

                         

ಈಗ  ಸಸಾರಜನಕ ಹೇಗೆ  ಕಮ್ಮಿಯಾಗುವುದು ಎಂದು ನೋಡೋಣ .

೧  .ಆಹಾರದಲ್ಲಿ   ಸಸಾರಜನಕದ ಕೊರತೆ .ಪೌಷ್ಟಿಕ ಆಹಾರದಿಂದ  ವಂಚಿತರು 

೨.  ಮೂತ್ರದಲ್ಲಿ ಸಸಾರಜನಕ ನಷ್ಟವಾಗುವುದು .ಸಾಮಾನ್ಯವಾಗಿ  ಮೂತ್ರದಲ್ಲಿ 

ಸಸಾರಜನಕ  ವಿಸರ್ಜಿಸಲ್ಪದುವುದಿಲ್ಲ .ಆದರೆ  ಮೂತ್ರಪಿಂಡಗಳ  ರೋಗದಲ್ಲಿ 

ಅದು  ಅತಿಯಾಗಿ ವಿಸ್ರಜಿಸಲ್ಪಟ್ಟು  ರಕ್ತದಲ್ಲಿ  ಸಸಾರಜನಕದ ಕೊರತೆ 

 ಉಂಟಾಗುವುದು .ಇದನ್ನು  ನೆಪ್ಫ್ರೋಟಿಕ್  ಸಿಂಡ್ರೋಮ್  ಎನ್ನುವರು .

೩.  ಲಿವರ್ ಶರೀರದ ಆಹಾರದ ಉಗ್ರಾಣ ,ಅಲ್ಲದೆ  ಸಸಾರಜನಕದ  ಉತ್ಪಾದನೆ 

ಮಾಡುವ  ಕಾರ್ಖಾನೆ .ಮದ್ಯಪಾನ , ವೈರಲ್  ಕಾಯಿಲೆಯಿಂದ  ಲಿವರ್ 

ಕಾರ್ಯ  ಕುಂಟಿತ ವಾಗಿ  ರಕ್ತದಲ್ಲಿ   ಸಸಾರಜನಕ ಕಂಮಿಯಾಗುವುದು. .

ಮೇಲೆ ಹೇಳಿದ ಸಂದರ್ಭಗಳಲ್ಲಿ   ನೀರು ರಕ್ತ ನಾಳ ಗಳಿಂದ ಹೊರ ಹೋಗಿ 

ಚರ್ಮದ ಅಡಿಯಲ್ಲಿ  ಶೇಖರಣೆ ಆಗುವುದು ಲಿವರ್  ಕಾಯಿಲೆಯಲ್ಲಿ  ಉದರದಲ್ಲಿ 

ನೀರು ಸೇರುವುದು ಹೆಚ್ಚ್ಚು 
 ಇದನ್ನು  ಜಲೋದರ ಎನ್ನುವರು .

ರಕ್ತ ನಾಳಗಲ್ಲಿ  ರಕ್ತ ಸಂಚರಿಸುತ್ತಲೇ ಇರ ಬೇಕು .ಈ ಜಂಗಮ 

ಸ್ಥಿತಿಗೆ   ಹೃದಯದ  ಸಹಕಾರ ಅತ್ಯವಶ್ಯ .  ಹೃದಯ ಸರಿಯಾಗಿ  ಕೆಲಸ 

ಮಾಡದಿದ್ದರೆ   ಅಬಿಧಮನಿ ಗಳಿಂದ  ರಕ್ತವು  ಹೃದಯಕ್ಕೆ  ಖಾಲಿಯಾಗದೆ  

ರಕ್ತನಾಳಗಳಲ್ಲಿನ  ಜಲದ ಒತ್ತಡ ಏರುವುದು ,ಇದರಿಂದ  ನೀರು ಹೊರಕ್ಕೆ 

ಸೋರಿ  ಅಂಗಾಂಗಗಳಲ್ಲಿ  ನೀರು ಬರುವುದು .

ಇನ್ನು ಕೆಲವು ಔಷಧಿಗಳೂ  ಕಾಲಿನಲ್ಲಿ  ನೀರು ಬರುವಂತೆ  ಮಾಡ ಬಹುದು 

ಉದಾ . ನಿಫೆಡೆಪಿನ್,ಅಮ್ಲೊಡಿಪಿನ್ ನಂತಹ  ಬಿ ಪಿ ಗೆ ಕೊಡುವ  ಔಷಧಿಗಳು 

ನೋವು ನಿವಾರಕ ಔಷಧಿಗಳು ಇತ್ಯಾದಿ .

ಬಿ ಅನ್ನಾಂಗ ಥಯಾಮಿನ್ ಕೊರತೆ ಯಿಂದ   ನೀರು ಸೇರುವುದು  ಇತ್ತೀಚಿಗೆ 

ಪುನಃ ಕಾಣಿಸಿ ಕೊಳ್ಳುತ್ತಿದೆ .ಇದಕ್ಕೆ ಆಹಾರದಲ್ಲಿ  ಅನ್ನಾಂಗ ವಿರೋಧಿ 

ವಸ್ತುಗಳು ಇರುವುದುದೇ ಕಾರಣ ಎನ್ನುವರು .

ಫೈಲೆರಿಯ  ,ಮತ್ತು ಬ್ಯಾಕ್ಟೀರಿಯಾ  ಸೋಂಕುಗಳು  ಅವು  ಕಾಡಿದ ಅವಯವ 

ಗಳಲ್ಲಿ  ಬಾವು ಉಂಟು ಮಾಡುವವು .ಥೈರಾಯಿಡ್  ಹೊರ್ಮೊನ್ ಕೊರತೆಯಿಂದ

ಅವಯವ  ಮತ್ತು  ಮುಖ ಗಳಲ್ಲಿ  ನೀರು ತುಂಬಿದಂತೆ ಕಾಣುವುದು .


ಸೋಮವಾರ, ಮೇ 18, 2015

ಅರುಣಾ ಶಾನ್ ಭೋಗ್ ಅವರಿಗೆ ಅದರಾಂಜಲಿ



ಮುಂಬೈ ಕೆ ಇ ಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದ  ನಮ್ಮ ಉತ್ತರ ಕನ್ನಡದ 

ಹುಡುಗಿ ಅರುಣಾ ಶಾನ್ ಭೋಗ್ .ನರ್ಸ್ ಆಗಿದ್ದ ಆಕೆ ಆಸ್ಪತ್ರೆಯ ಆಹಾರ 

ಪದಾರ್ಥ ಗಳನ್ನು ಕದಿಯುತ್ತಿದ್ದ  ವಾರ್ಡ್ ಬಾಯ್  ಸೋಹನ್ ಲಾಲ್ ಬಾತ್ರ 

ವಾಲ್ಮೀಕಿ ಯನ್ನು  ಎಚ್ಚರಿಸಿದ್ದಳು .ಪ್ರತೀಕಾರವಾಗಿ ರಾತ್ರಿ ಕರ್ತವ್ಯ ಮುಗಿಸಿ 

ಹೋಗುವ ವೇಳೆ ಕಾದು ನಿಂತು ಆಕೆಯ ಮೇಲೆ ಆಕ್ರಮಣ ಮಾಡಿ ,ಉಸಿರುಗಟ್ಟಿಸಿ 

ಅತ್ಯಾಚಾರ ಮಾಡಿದ .ಇದರಿಂದ ಕಳೆದು ಕೊಂಡ ಪ್ರಜ್ಞೆ ಪೂರ್ಣವಾಗಿ  ಆಕೆಗೆ 

ಬರಲೇ ಇಲ್ಲ .

ಆದರೆ ಆಕೆಯನ್ನು ಸಹೋದ್ಯೋಗಿಗಳು ಚೆನ್ನಾಗಿ ಆರೈಕೆ ಮಾಡಿದರು .ಮಲಗಿದಲ್ಲೇ 

ಇದ್ದರೂ  ಬೆಡ್ ಸೊರ್ ಆಗದಂತೆ ನೋಡಿ ಕೊಂಡರು.ಸುಪ್ರೀಂಕೋರ್ಟ್ ನಲ್ಲಿ 

ಪತ್ರಕರ್ತೆ ಓರ್ವಳು ಆಕೆಗೆ ದಯಾ ಮರಣ ಪಾಲಿಸುವಂತೆ ಅರ್ಜಿ ಸಲ್ಲಿಸಿದಾಗ 

ಆಸ್ಪತ್ರೆಯ  ಉದ್ಯೋಗಿಗಳು ಅದನ್ನು ವಿರೋದಿಸಿದರು .

ಆಕೆಯ ಕುಟುಂಬವೂ ಕಲಾಕ್ರಮೇಣ ಆಕೆಯ ಯೋಗ ಕ್ಷೇಮ ವಿಚಾರಿಸುದನ್ನು 

ಬಿಟ್ಟಿತ್ತು. ಆದರೂ ಸಹೋದ್ಯೋಗಿಗಳು  ಅವಳ ಆಸರೆಯಾಗಿ ನಿಂತರು 

      ತನ್ನ ಕರ್ತವ್ಯ  ಪ್ರಜ್ಞೆ ಗಾಗಿ  ಜೀವನ ವನ್ನೇ ತೆತ್ತ  ಅರುಣಾ ಮತ್ತು  ಅವಳ 

ಆರೈಕೆಯನ್ನು  ತಪಸ್ಸಿನೋಪಾದಿಯಲ್ಲಿ  ಗೈದ ಕೆ ಇ ಎಂ ಅಸ್ಪತ್ರೆಯ 

ಉದ್ಯೋಗಿಗಳಿಗೆ   ನಮೋನ್ನಮಃ
( ಅರುಣಾ  ೧೮.೫.೨೦೧೫ ರಂದು ಕೊನೆಯುಸಿರು ಎಳೆದರು )

ಸೋಮವಾರ, ಮೇ 11, 2015

ಯಕ್ಷಗಾನ ತಾಳ ಮದ್ದಳೆಯ ಹರವುಗಳು

                          

ನಿನ್ನೆ ಒಂದು ಯಕ್ಷಗಾನ ತಾಳ ಮದ್ದಳೆ  ,ಪ್ರಸಂಗ  ಪಾದುಕಾ ಪ್ರಧಾನ . ಮೊದಲು 

ಹಲವು ಭಾರಿ  ಕೇಳಿದ ಕತೆ .ಆದರೂ ನಿತ್ಯ ನೂತನ ವಾಗಿ ತೋರುತ್ತದೆ 

.ಕರಾವಳಿಯಲ್ಲಿ  ಈ ಕಲೆ ಜನಪ್ರಿಯ ಆಗುವುದಕ್ಕೆ  ಪುರಾಣ ಕತೆಗಳಲ್ಲಿನ  

ವಿಚಾರಗಳನ್ನು ಬೇರೆ ಬೇರೆ ಆಯಾಮಗಳಲ್ಲಿ   ವಿಮರ್ಶೆ ಮಾಡುವ   ವಿಪುಲ 

 ಅವಕಾಶ ಇರುವ  ಮಾಧ್ಯಮ ಆಗಿರುವುದು .ಕತೆಯ ಹಂದರ  ಎಲ್ಲರಿಗೆ 

ತಿಳಿದಿರುವುದು .ಆದುದರಿಂದ ಅದರ  ವಿಸ್ತಾರ ,ಕಲಾವಿದರ  ಜ್ಞಾನ  ಭಂಡಾರ 

ಮತ್ತು  ವಾಕ್ ಶಕ್ತಿ ಗೆ ಹೊಂದಿಕೊಂಡು  ಮಂಡನೆ ಆಗುವಾಗ 

 ನ್ಯಾಯಾಲಯದಲ್ಲಿನ  ರೋಚಕ  ಕೇಸ್  ಮಂಡನೆ ಯಂತೆ  ಕೇಳುಗರಿಗೆ 

 ಮನೋರಂಜನೆಮತ್ತು  ಜ್ಞಾನಾರ್ಜನೆ



.ಯಕ್ಷಗಾನ ಬಯಲಾಟದಲ್ಲಿ  ವೇಷ ಭೂಷಣ ಧರಿಸಿ  ಪಾತ್ರದಾರಿ  ಅರ್ಥ ಹೇಳಿದರೆ 

ತಾಳ ಮದ್ದಲೆಯಲ್ಲಿ  ವೇಷ ಭೂಷಣ ಇಲ್ಲ .ಭಾಗವತರ  ಪದ್ಯ ಮತ್ತು  ಆಯಾ 

ಪಾತ್ರದಾರಿಗಳಿಂದ  ಪದ್ಯಕ್ಕೆ  ಅನುಗುಣವಾಗಿ ಅರ್ಥ .

ಪಾದುಕಾ ಪ್ರಧಾನ ಪ್ರಸಂಗದಲ್ಲಿ  ,ತಂದೆಯ ಸಾವು ಮತ್ತು  ರಾಮ ಕಾಡಿಗೆ 

ತೆರಳಿದ ಸುದ್ದಿ ತಿಳಿದು ಅಯೋಧ್ಯೆಗೆ ಬಂದ ಭರತ ತನ್ನ ತಾಯಿಯ ಕೃತ್ಯ ದಿಂದ 

ನೊಂದು  ರಾಮನಿಲ್ಲದ ರಾಜ್ಯ ತನಗೇಕೆ ಎಂದು  ,ರಾಮನನ್ನು ಕರೆತರುವುದಕ್ಕಾಗಿ 

ಅರಣ್ಯಕ್ಕೆ ಬಂದು ಮರಳಿ ಬಂದು ರಾಜ್ಯದ ಅಧಿಕಾರ ಸ್ವೀಕರಿಸುವಂತೆ  

ವಿನಂತಿಸುವ  ಕತೆ.ಯಕ್ಷಗಾನದ ದಿಗ್ಗಜರಾದ  ಕುಂಬ್ಳೆ ಸುಂದರ ರಾವ್ 

ಭರತ ಮತ್ತು ಪ್ರಭಾಕರ ಜೋಷಿ ರಾಮನ ಪಾತ್ರ .

ಭರತ : ರಾಮ ತಂದೆ ತೀರಿ ಕೊಂಡಾಗ  ಪಟ್ಟಕ್ಕೆ ಅರ್ಹ ಜ್ಯೇಷ್ಠ ಪುತ್ರ .ಅವನಿಗೆ 

ಅನಾರೋಗ್ಯ ,ಅಂಗ ವೈಕಲ್ಯ ಅಥವಾ ಚಾರಿತ್ರ್ಯ ಹೀನತೆ ಇದ್ದಾಗ ಮಾತ್ರ 

ತಮ್ಮನಿಗೆ ಪಟ್ಟ ಕಟ್ಟ ಬಹುದು ,ಆದುದರಿಂದ ನೀನೆ ಅಯೋಧ್ಯೆಗೆ ಬಂದು 

ಸಿಂಹಾಸನ ಏರುವುದು ಉಚಿತ 

ರಾಮ : ನೀನು ಹೇಳುವುದು ಸರಿ .ಆದರೆ  ನೀನು ಹೇಳಿದ ಅಂಶಗಳಲ್ಲದೆ

ಹಿರಿಯ ಮಗನು ವ್ರತಾಧರಿ ಆಗಿದ್ದರೂ ತಮ್ಮನಿಗೆ ಪಟ್ಟ ಕಟ್ಟ ಬಹುದು .

ತಂದೆಯು ಚಿಕ್ಕಮ್ಮನಿಗೆ ಕೊಟ್ಟ ವಾಕ್ಯದ ಪರಿ ಪಾಲನೆ ಮಾಡುವುದಕ್ಕಾಗಿ 

ನಾನು ವನವಾಸ ವ್ರತ  ಹಿಡಿದವನು .ಆದುದರಿಂದ ತಮ್ಮನಾದ ನೀನು 

ರಾಜ್ಯಭಾರ ಮಾಡು .

ಭರತ :  ನನ್ನ ತಾಯಿ ಕೈಕೇಯಿ ಈಗ  ಪಶ್ಚಾತ್ತಾಪ ಪಟ್ಟುಕೊಂಡು ತನ್ನ ಮಾತು 

ಹಿಂತೆಗೆದುಕೊಂಡು ನಿನ್ನನ್ನು ಕೂಡಿ ಮರಳಲು ನನ್ನೊಡನೆ ಬಂದಿರುವಳು .

ರಾಮ :  ಈ ಮಾತು ನಮ್ಮ ತಂದೆ ಮತ್ತು ಚಿಕ್ಕಮ್ಮನ  ನಡುವೆ  ಆದುದು .

ನಮ್ಮ ತಂದೆ ಈಗ ಇಲ್ಲ .ಆದುದರಿಂದ ಅದನ್ನು ಈಗ ಏಕ ಪಕ್ಷೀಯ ವಾಗಿ 

ಹಿಂದೆ ಪಡೆಯಲು ಆಗದು .ಅಲ್ಲದೆ ಹಿಂದೆ ಯುದ್ಧ ಕಾಲದಲ್ಲಿ ತಂದೆಯ 

ಪ್ರಾಣ ಉಳಿಸಿದುದೇ ಚಿಕ್ಕಮ್ಮ .ಆ ಸಂಧರ್ಭದಲ್ಲಿ ತಂದೆ ಕೊಟ್ಟ ವರ .

ನಮ್ಮ ಚಿಕ್ಕಮ್ಮ ಅಂದು ಇರದಿದ್ದಲ್ಲಿ  ನಾವು  ಈ ಭೂಮಿಯಲ್ಲಿ  ಧಶರಥ 

ಮಹಾರಾಜನ   ಮಕ್ಕಳಾಗಿ ಜನಿಸುವ ಅವಕಾಶ ವೆ  ಬರುತ್ತಿರಲಿಲ್ಲ .ಆಕೆ ಅಷ್ಟಕ್ಕೂ 

ದೊಡ್ಡ ,ನಡೆಸಿ ಕೊಡಲಾಗದ ವರವೇನೂ ಕೇಳಿಲ್ಲ .ಆದುದರಿಂದ ನಾನು 

ಹಿಂದೆ ಬರುವುದು ಸರಿಯಲ್ಲ .

ಭರತ :  ನನ್ನ ತಾಯಿ ವರ ಕೇಳಿರ ಬಹುದು .ಆದರೆ ತಂದೆಯವರು ಅದಕ್ಕೆ 

ಸಮ್ಮತಿ ಕೊಟ್ಟಿರಲಿಲ್ಲ .ತಾಯಿಯ ಮಾತು ಕೇಳಿ  ಬಾಯಿ ಕಟ್ಟಿ ಹೋದಂತೆ 

ಇದ್ದವರು  ನೀನು ಕಾಡು ತಲುಪುತ್ತಿದ್ದಂತೆ  ಬಿದ್ದು ಹಾಸಿಗೆ ಸೇರಿ ಪ್ರಾಣ ಬಿಟ್ಟರಲ್ಲ 

ಆದುದರಿಂದ ಪಿತೃ ವಾಕ್ಯ ಭಂಗ ಆಗುವುದಿಲ್ಲ .

ರಾಮ : ನೀನು ಹೇಳುವುದು ಮೇಲ್ನೋಟಕ್ಕೆ ಸರಿ ಕಂಡರೂ  ತಾಯಿ ತನಗೆ 

ಹಿಂದೆ ಕೊಡಲ್ಪಟ್ಟ ವರವನ್ನು ಮುಂದೆ ಯಾವಾಗ ಬೇಕಿದ್ದರೂ  ಪಡೆಯುವ 

ಅವಕಾಶ ತಂದೆ ಕೊಟ್ಟಿದ್ದರಿಂದ ಆಕೆ ಕೇಳಿದ ಒಡನೆ ತಂದೆಯವರು ಅನುಮತಿಸಿದ 

ಹಾಗೆ ಆಗುವುದು .

ಭರತ : ಸರಿ ,ಈಗ ನಾನು ಅಯೋಧ್ಯೆಯ ಚಕ್ರವರ್ತಿ ,ನೀನು ಪ್ರಜೆ .ನಾನು 

ನಿನಗೆ ಆಜ್ಞೆ ಮಾಡುವೆನು .ಕೂಡಲೇ ಅಯೋಧ್ಯೆಗೆ ಮರಳಿ ಪಟ್ಟ ಸ್ವೀಕರಿಸು .

ರಾಮ :ಸರಿ ,ನಿನ್ನ ಆಜ್ಞೆಗೆ ಯನ್ನು ಶಿರಸಾವರಿಸಿ ನಾನು ಪಟ್ಟ ಸ್ವೀಕರಿಸಿ 

ಹೇಳುತ್ತೇನೆ ,ತಂದೆಯವರ  ಮಾತು ಪಾಲಿಸುವುದಕ್ಕೆ ನಾನು ವನವಾಸ 

ಮಾಡಿ ಹದಿನಾಲ್ಕು ವರುಷ ಕಳೆದು  ಮರಳಿ ಬರುವ ವರೆಗೆ   ಪ್ರಜೆಗಳಿಗೆ 

ಯಾವುದೇ ಕುಂದು ಬರದಂತೆ  ರಾಜ್ಯ ಭಾರ ಮಾಡುವಂತವನಾಗು .

ಭರತ ;(ಕುಂಬ್ಳೆ ಸುಂದರ ರಾವ್ ).ಸರಿ ಅಯೋಧ್ಯೆಯಿಂದ ಹೊರಡುವಾಗ 

ಪ್ರಜೆಗಳಿಗೆ ರಾಮನನ್ನು ಕೂಡಿಕೊಂಡೆ ಮರಳುವೆನೆಂದು ಹೇಳಿ ಬಂದಿದ್ದೇನೆ .

ಈಗ ನಾನು ಬರಿಗೈಲಿ ಹೋದರೆ ಹೋದ ರಾಯ ಬಂದ ರಾಯ ಸುಂದರ ರಾಯ 

ಎಂದು  ಲೇವಡಿ ಮಾಡುವರು .ಅದಕ್ಕೆ ನಿನ್ನ ಪಾದುಕೆಗಳನ್ನು ದಯಪಾಲಿಸು 

ಸಿಂಹಾಸನದಮೇಲೆ ಇಟ್ಟು ನಿನ್ನ ಹೆಸರಿನಲ್ಲಿ ಆಡಳಿತ ನಡೆಸುವೆನು.









ಗುರುವಾರ, ಮೇ 7, 2015

ಮಲೇರಿಯಾ ದಲ್ಲಿ ಜಾಂಡೀಸ್

ನಾನು ಹಿಂದೆ ಇದೇ ಬ್ಲಾಗ್ ನಲ್ಲಿ  ಕಾಮಾಲೆಯ ಬಗ್ಗೆ ಬರೆದಿದ್ದೆ .ಹಳದಿ  ಒಂದು 

ರೋಗ ಅಲ್ಲ ಅದು ಹಲವು ರೋಗಗಳ ಒಂದು ಲಕ್ಷಣ ಮಾತ್ರ . 

ಮಲೇರಿಯ ಮತ್ತು ಬೆಬಿಸಿಯ ಎಂಬ ಎರಡು ರೋಗಾಣು ಗಳಿವೆ .ಇವು ತಮ್ಮ 

ಜೀವನದ ಮುಖ್ಯ ಗಳಿಗೆಗಳನ್ನು ಕ್ರಮವಾಗಿ ಸೊಳ್ಳೆ ಮತ್ತು  ಉಣ್ಣಿ ಗಳಲ್ಲಿ ಕಳೆದರೂ 

ಮನುಜ ಶರೀರ ದೊಳಗೂ  ಹಾದು ಹೋಗುತ್ತವೆ. ಅವುಗಳ ಅಲೈಂಗಿಕ ಜೀವನ  

ಮನುಷ್ಯನಲ್ಲಿ ಇಟ್ಟನೂ ನಮ್ಮ ಶಿವ  ಲೈಂಗಿಕ ಜೀವನ ಕೀಟ ಗಳಲ್ಲಿ ಇಟ್ಟನು .


ಮಲೇರಿಯಾ ರೋಗಾಣು ಗಳು  ಸೊಳ್ಳೆ ಕಡಿತದಿಂದ ರಕ್ತ ಸೇರಿ ಕೆಂಪು ರಕ್ತ ಕಣ

ಗಳನ್ನು ತಮ್ಮ ಮನೆಯಾಗಿ  ಮಾಡಿ ಕೊಳ್ಳುತ್ತವೆ . ತಾವು ಅಲ್ಲಿ ಬೆಳೆದು  ಆ 

ಮೇಲೆ ಮನೆ ಮುರುಕ ಕೆಲಸ ಮಾಡುತ್ತವೆ.  ತಮ್ಮ ಆಶ್ರಯ ದಾತ ಕೆಂಪು 

ರಕ್ತ ಕಣ ಗಳನ್ನು ಛೇದಿಸಿ ಹೊರ ಬರುವಾಗ ರಕ್ತ ಕಣ ಗಳು ನಾಶ ಹೊಂದುತ್ತವೆ .

ಅವುಗಳಿಂದ ಬಿಡುಗಡೆ ಆದ ಬಿಲಿರುಬಿನ್ ಎಂಬ  ಹಳದಿ ವರ್ಣ ವಸ್ತು ರಕ್ತದಲ್ಲಿ 

ಶೇಖರ ಆಗಿ ಮೈಗೆ ಹಳದಿ ಬಣ್ಣ ಬರುವುದು .ಇದು ಮಲೇರಿಯಾ ಕಾಯಿಲೆಯ 

ಜಾಂಡೀಸ್ .ಇಲ್ಲಿ ಮಲೇರಿಯ ಕಾಯಿಲೆಗೆ ಔಷಧಿ ಮಾಡ ಬೇಕು ,ಯಾವುದೇ 

ಪಥ್ಯದ ಅವಶ್ಯಕತೆ ಇಲ್ಲ .






ಮಂಗಳವಾರ, ಮೇ 5, 2015

ಆಸ್ಪತ್ರೆಯ ಅನಿರೀಕ್ಷಿತ ಮರಣಗಳು

ಇತ್ತೀಚಿಗೆ ಆಸ್ಪತ್ರೆಯಲ್ಲಿ ರೋಗಿ  ಮೃತ ಪಟ್ಟಾಗ ವೈದ್ಯರು ಮತ್ತು ಸಿಬ್ಬಂದಿ  ಮೇಲೆ 

ಹಲ್ಲೆ ಪ್ರಕರಣಗಳು  ಹೆಚ್ಚಾಗಿವೆ ,ಕೆಲವು ಸಂದರ್ಭಗಳಲ್ಲಿ  ಸಿಬ್ಬಂದಿ  ನಿರ್ಲಕ್ಷ್ಯ

 ಕಾರಣ ಇರ ಬಹುದಾದರೂ  ಉಳಿದ ಕಡೆ   ಈ ಹಿಂಸೆಯನ್ನು  ಸಮರ್ಥಿಸಿ  

ಕೊಳ್ಳಲಾಗದು .

ಒಬ್ಬರು ರೋಗಿ ಬಿದ್ದು ಕಾಲು ಎಲುಬು ಮುರಿದಿತ್ತು .ಬೇರೆ ಏನೂ ತೊಂದರೆ 

ಇರಲಿಲ್ಲವಾದ್ದರಿಂದ  ಅದನ್ನು ಸರಿ ಪಡಿಸಿ ಕಳುಹಿಸಲಾಯಿತು .ಸ್ವಲ್ಪ ದಿನಗಳ 

ನಂತರ ಅವರಿಗೆ ಅಪಸ್ಮಾರ ಶುರುವಾಯಿತು .ಅದಕ್ಕಾಗಿ ತಲೆಯ  ಸ್ಕ್ಯಾನ್ 

ಮಾಡಿದಾಗ ಅವರಿಗೆ  ಮೆದುಳಿನ ಹಳೆಯ ರಕ್ತ ಸ್ರಾವ ಇತ್ತು .ಅಂದರೆ  ಈ ರಕ್ತ 

ಸ್ರಾವ ಯಾವುದೇ ಲಕ್ಷ್ನಣ ಗಳಿಲ್ಲದೆ  ಮೌನ ವಾಗಿತ್ತು .ಒಂದು ವೇಳೆ ಶಸ್ತ್ರ ಚಿಕಿತ್ಸೆ 

ಸಮಯದಲ್ಲಿ  ಇದರಿಂದ ತೊಂದರೆ ಬಂದು ರೋಗಿಯ ಪ್ರಾಣಕ್ಕೆ ಸಂಚಕಾರ 

ಬಂದಿದ್ದರೆ  ಹೇಗೆ ವಿವರಿಸುವುದು ?

ಬಾಣಂತಿಯರ ಸಾವು  ಬಹಳ  ಅನೀರಿಕ್ಷಿತ ,ಹಾಗೆಯೇ  ಹೆಚ್ಚು ಅಹಿತಕರ 

ಘಟನೆಗಳು  ಇದರಿಂದ ನಡೆಯುವವು .ಅಮ್ನಿಯಟಿಕ್ ಫ್ಲೂಯಿಡ್  ಎಂಬೋಲಿಸಂ (ಅಂದರೆ  ಗರ್ಭ ನೀರಿನ ರಕ್ತ ಸೇರುವಿಕೆ )ಎಂಬ ಮಾರಣಾಂತಿಕ ಕಾಯಿಲೆ ಇದೆ .ಇದು ನಾವು ಅಲೋಚಿಸುತ್ತಿವ ಹೊತ್ತಿನಲ್ಲಿ  ರೋಗಿಯ ಪ್ರಾಣ ತೆಗೆದು ಕೊಳ್ಳುವುದು ,ಅಲ್ಲದೆ 

ಇದರ ನಿರೀಕ್ಷೆಗೆ  ಯಾವುದೇ  ಟೆಸ್ಟ್ ಇಲ್ಲ ,ಅಲ್ಲದೆ ಇದನ್ನು ಸಮರ್ಥಿಸಲೂ 

ಟೆಸ್ಟ್ ಇಲ್ಲ .ದುರದೃಷ್ಟವಶಾತ್ ರೋಗಿಗೆ ಯಾವುದಾದರೂ  ಸಾಮಾನ್ಯ 

ಚುಚ್ಚು ಮದ್ದು  ಕೊಟ್ಟ ನಂತರ  ಅವರಿಗೆ ಈ ಸಂಗತಿ ಆದರೆ  ಕಾಕ ತಾಳೀಯ 

ಮತ್ತು ಇಂಜೆಕ್ಷನ್ ಮತ್ತು  ನರ್ಸ್ ನಿರಪರಾಧಿ .

  ಇನ್ನೊಂದು  ಬಾಳಂತಿಯರಲ್ಲಿ  ಉಂಟಾಗುವ ದುರಂತ  ರಕ್ತ ಹೆಪ್ಪುಗಟ್ಟದಿರುವುದು .

ಅವಘಡದ ರಕ್ತಸ್ರಾವ  (abruptio placenta ) ಇದು ಮಾಸ ಬಿದ್ದ ಮೇಲೂ ರಕ್ತ 

ಹೆಪ್ಪು ಗಟ್ಟ ದ ಕಾಯಿಲೆ .

ಬಾಳಂತಿ ಯರ ಮೆದುಳಿನ  ರಕ್ತ ಹೆಪ್ಪುಗಟ್ಟುವಿಕೆ  ಎಂಬ ಕಾಯಿಲೆ ಇದೆ ,ಇದರಿಂದ 

ಅಪಸ್ಮಾರ ,ತಲೆನೋವು  ಮತ್ತು ಕೆಲವೊಮ್ಮೆ ಸಾವೂ ಸಂಭವಿಸ ಬಹುದು .

ಮೇಲೆ ಹೇಳಿದ ಕಾಯಿಲೆಗಳು ಅಪರೂಪ ಮತ್ತು  ಮೊದಲೇ ಕಂಡು ಹಿಡಿಯ 

ಬಹುದಾದುವಲ್ಲ , ಇದಕ್ಕೆ  ವೈದ್ಯರು ಮತ್ತು ಸಿಬ್ಬಂದಿಯನ್ನು ನಿಂದಿಸಿ ಫಲವಿಲ್ಲ .

ಹಾಗೆಂದು  ಬರುವ ಗರ್ಭಿಣಿ ಯರನ್ನು  ಈ ಕಾಯಿಲೆಗಳು  ಬಂದರೂ ಬರ 

ಬಹುದು ಎಂದು ಹೆದರಿಸುವುದು ಎಷ್ಟು ಸಾಧು ?

  ಇನ್ನು  ಒಂದು ಕಾಯಿಲೆ ಇದೆ .ಹೃದಯದ ಮಾಂಸ ಖಂಡ ಗಳು ಹುಟ್ಟಿದಾರಭ್ಯ

ದಪ್ಪವಾಗಿದ್ದು  ಏನೂ ತೊಂದರೆ ಪ್ರಕಟ ಪಡಿಸುವುದಿಲ್ಲ .ಆದರೆ ಕೆಲವೊಮ್ಮೆ 

ಅನೀರಿಕ್ಷಿತವಾಗಿ  ಅತಿಯಾಗಿ ಕಂಪಿಸ  ತೊಡಗಿ ,ಹೃದಯ ವೈಫಲ್ಯ ದಿಂದ 

ಸಾವನ್ನಪ್ಪುವರು .ಕ್ರೀಡಾ ಮೈದಾನದಲ್ಲಿ ಸಂಭವಿಸುವ  ಬಹು ಪಾಲು ಸಡನ್ 

ಸಾವುಗಳಿಗೆ ಇದು ಕಾರಣ .ಈ ಸಂಗತಿ ಆಸ್ಪತ್ರೆಯಲ್ಲಿ ಸಂಭವಿಸಿದರೆ  ?

ಇನ್ನೊಂದು ಕಾಯಿಲೆ ಇದೆ .ಕಾಲಿನ ಅಭಿದಮನಿಗಳಲ್ಲಿ ರಕ್ತ  ಹೆಪ್ಪು ಗಟ್ಟಿ  ಆ ಹೆಪ್ಪು  

ಅಲ್ಲಿಂದ ನಿಧಾನವಾಗಿ ಹೃದಯಕ್ಕೆ ಹೋಗಿ ,ಮತ್ತೆ ಶುದ್ಧಿಕರಣಕ್ಕೆ ಶ್ವಾಸ ಕೋಶಕ್ಕೆ 

ಹೋಗುವಾಗ ಅಲ್ಲಿಯ ರಕ್ತ ನಾಳ ಬ್ಲಾಕ್ ಆಗಿ  ರೋಗಿಗೆ ಸಡನ್ ದಮ್ಮು 

ಕೆಲವೊಮ್ಮೆ  ಅನಿರೀಕ್ಷಿತ ಸಾವು ಉಂಟಾಗಬಹುದು .ಬಹಳ ದಿನ ಮಲಗಿರುವ 

ರೋಗಿಗಳಲ್ಲಿ ಇದು ಸಾಮಾನ್ಯ .ಈಗ ಆಸ್ಪತ್ರೆಗಳಲ್ಲಿ  ಈ ತರಹ ಹೆಪ್ಪು  ಗಟ್ಟ ದ 

ಹಾಗೆ  ಚುಚ್ಚುಮದ್ದು ಕೊಡುವರು .

 ಬೇರೆ ಕಾಯಿಲೆಗೆ ದಾಖಲಾದವರಿಗೆ ಹೃದಯಾಘಾತ ಸಂಭವಿಸ ಬಹುದು ,

ಅದರಲ್ಲೂ ನೋವಿಲ್ಲದ (ಸೈಲೆಂಟ್ ) ಹೃದಯಾಘಾತ ಎಂಬುದಿದೆ .ಇದರಿಂದ 

ಮೃತ ಪಟ್ಟರೆ ಹೇಗೆ ಗೊತ್ತಾದೀತು.ಭಾರೀ ಹೃದಯಾಘಾತದಲ್ಲಿ ಇ ಸಿ ಜಿ 

ಮಾಡಲೂ ಸಮಯ ಇರುವುದಿಲ್ಲ .




ಶನಿವಾರ, ಮೇ 2, 2015

ವರ ರೂಪದ ಶಾಪ


This is the excellent foppery of the world, that,
when we are sick in fortune,--often the surfeit
of our own behavior,--we make guilty of our
disasters the sun, the moon, and the stars: as
if we were villains by necessity; fools by
heavenly compulsion; knaves, thieves, and
treachers, by spherical predominance; drunkards,
liars, and adulterers, by an enforced obedience of
planetary influence; and all that we are evil in,
by a divine thrusting on: an admirable evasion
of whoremaster man, to lay his goatish
disposition to the charge of a star.”
William Shakespeare, King Lear


“When we are born, we cry that we are come to this great stage of fools.”
ರಾಮಪ್ಪನದು ಸಂತೃಪ್ತ ಕುಟುಂಬ .ಹೆಂಡತಿ ಮೂರು ಮಕ್ಕಳು .ಭೂ ಸುಧಾರಣೆ 

ಕಾನೂನಿನಡಿ ಸಿಕ್ಕಿದ ಮೂರು ಎಕರೆ ಭೂಮಿ .ಸ್ವಯಂ ದುಡಿದು ಸಂತೋಷದಿಂದ

ಕಾಲಾಪನೆ ಆಗುತ್ತಿತ್ತು.ಅಷ್ಟರಲ್ಲಿ  ಅವನ ಜಮೀನಿನ ಬಳಿ ಹೊಸ ಮಾರುಕಟ್ಟೆಗೆ 

ಹೋಗುವ  ಹೊಸ ರಸ್ತೆ ನಿರ್ಮಾಣದ ಯೋಜನೆ ಬಂದು ರಸ್ತೆಗಾಗಿ ವಶ ಪಡಿಸಿ 

ಕೊಂಡ  ಭೂಮಿಗೆ ಸರಕಾರದಿಂದ  ಭಾರೀ ಪರಿಹಾರ ಸಿಕ್ಕಿತು .ತನಗಿಂತ 

ಅದೃಷ್ಟ ಶಾಲಿ ಯಾರೂ ಇಲ್ಲ ಎಂದು ಕೊಂಡ.ರಸ್ತೆಯ ಯೋಜನೆಗಿಂತ ದೂರ 

ಇದ್ದ ಅವನ ತಮ್ಮಂದಿರು  ಇವನ ಭಾಗ್ಯ ಕಂಡು ಕೈ ಕೈ ಹಿಸುಕಿಕೊಂಡರು.

ಸರಕಾರದಿಂದ ಬಂದ ಹಣದಿಂದ  ರಸ್ತೆ ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ 

ಬಾಡಿಗೆಗೆ ಕೊಟ್ಟ .ತಾನು ಶ್ರೀಮಂತ ನಾದುದರಿಂದ  ಮಕ್ಕಳಿಗೆ  ದೊಡ್ಡವರ 

ಮನೆಯ ಹೆಣ್ಣು ಮಕ್ಕಳನ್ನೇ ತಂದ . ಅರೋಗ್ಯ ಸರಿ ಇರುವಾಗಲೇ ಮಕ್ಕಳಿಗೆ 

ಅಸ್ತಿ ಹಂಚಿ ಕೊಟ್ಟು  ತಾನು ಎಷ್ಟು ಅದೃಷ್ಟ ವಂತ ಇನ್ನು  ಸುಖಿ ವಿಶ್ರಾಂತ ಜೀವನ 

ಎಂದು ಕೊಳ್ಳುವಷ್ಟರಲ್ಲಿ ರೋಗ ಗ್ರಸ್ತ ನಾಗಿ ಹಾಸಿಗೆ ಹಿಡಿದ . ಅದು ವರೆಗೆ 

ಚೆನ್ನಾಗಿ ನೋಡಿ ಕೊಳ್ಳುತ್ತಿದ್ದ ಮಕ್ಕಳು ಉಪೇಕ್ಷೆ ಮಾಡ ತೊಡಗಿದರು .ದೊಡ್ಡ 

ಶ್ರೀಮಂತ ಕುಟುಂಬದಿಂದ ಬಂದ ಸೊಸೆಯರು ತಮಗೆ ನೋಡಿ ಕೊಳ್ಳಲು  ಆಗದು 

 ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಗಂಡಂದಿರಿಗೆ ದುಂಬಾಲು ಬಿದ್ದರು .ಸರಿ ಮನೆ 

ಹಿಂಸೆ ಯ ತಾಣ ಆಯಿತು .ಇವರ ಸ್ಥಿತಿ ತಿಳಿದ  ತಮ್ಮ ಬಂದು ತನ್ನ ಗುಡಿಸಲಿಗೆ 

ಕರೆದು ಕೊಂಡು ಹೋಗಿ ಉಪಚಾರ ಮಾಡಿದ . ರಾಮಪ್ಪ ಈಗ ಯೋಚಿಸುತ್ತಿದ್ದಾನೆ 

ಯಾವುದು ಅದೃಷ್ಟ ? ಯಾವುದು ಭಾಗ್ಯ ?

(ನೈಜ ಸಂಗತಿ ಆಧಾರಿತ )