ಬೆಂಬಲಿಗರು

ಸೋಮವಾರ, ಮೇ 11, 2015

ಯಕ್ಷಗಾನ ತಾಳ ಮದ್ದಳೆಯ ಹರವುಗಳು

                          

ನಿನ್ನೆ ಒಂದು ಯಕ್ಷಗಾನ ತಾಳ ಮದ್ದಳೆ  ,ಪ್ರಸಂಗ  ಪಾದುಕಾ ಪ್ರಧಾನ . ಮೊದಲು 

ಹಲವು ಭಾರಿ  ಕೇಳಿದ ಕತೆ .ಆದರೂ ನಿತ್ಯ ನೂತನ ವಾಗಿ ತೋರುತ್ತದೆ 

.ಕರಾವಳಿಯಲ್ಲಿ  ಈ ಕಲೆ ಜನಪ್ರಿಯ ಆಗುವುದಕ್ಕೆ  ಪುರಾಣ ಕತೆಗಳಲ್ಲಿನ  

ವಿಚಾರಗಳನ್ನು ಬೇರೆ ಬೇರೆ ಆಯಾಮಗಳಲ್ಲಿ   ವಿಮರ್ಶೆ ಮಾಡುವ   ವಿಪುಲ 

 ಅವಕಾಶ ಇರುವ  ಮಾಧ್ಯಮ ಆಗಿರುವುದು .ಕತೆಯ ಹಂದರ  ಎಲ್ಲರಿಗೆ 

ತಿಳಿದಿರುವುದು .ಆದುದರಿಂದ ಅದರ  ವಿಸ್ತಾರ ,ಕಲಾವಿದರ  ಜ್ಞಾನ  ಭಂಡಾರ 

ಮತ್ತು  ವಾಕ್ ಶಕ್ತಿ ಗೆ ಹೊಂದಿಕೊಂಡು  ಮಂಡನೆ ಆಗುವಾಗ 

 ನ್ಯಾಯಾಲಯದಲ್ಲಿನ  ರೋಚಕ  ಕೇಸ್  ಮಂಡನೆ ಯಂತೆ  ಕೇಳುಗರಿಗೆ 

 ಮನೋರಂಜನೆಮತ್ತು  ಜ್ಞಾನಾರ್ಜನೆ



.ಯಕ್ಷಗಾನ ಬಯಲಾಟದಲ್ಲಿ  ವೇಷ ಭೂಷಣ ಧರಿಸಿ  ಪಾತ್ರದಾರಿ  ಅರ್ಥ ಹೇಳಿದರೆ 

ತಾಳ ಮದ್ದಲೆಯಲ್ಲಿ  ವೇಷ ಭೂಷಣ ಇಲ್ಲ .ಭಾಗವತರ  ಪದ್ಯ ಮತ್ತು  ಆಯಾ 

ಪಾತ್ರದಾರಿಗಳಿಂದ  ಪದ್ಯಕ್ಕೆ  ಅನುಗುಣವಾಗಿ ಅರ್ಥ .

ಪಾದುಕಾ ಪ್ರಧಾನ ಪ್ರಸಂಗದಲ್ಲಿ  ,ತಂದೆಯ ಸಾವು ಮತ್ತು  ರಾಮ ಕಾಡಿಗೆ 

ತೆರಳಿದ ಸುದ್ದಿ ತಿಳಿದು ಅಯೋಧ್ಯೆಗೆ ಬಂದ ಭರತ ತನ್ನ ತಾಯಿಯ ಕೃತ್ಯ ದಿಂದ 

ನೊಂದು  ರಾಮನಿಲ್ಲದ ರಾಜ್ಯ ತನಗೇಕೆ ಎಂದು  ,ರಾಮನನ್ನು ಕರೆತರುವುದಕ್ಕಾಗಿ 

ಅರಣ್ಯಕ್ಕೆ ಬಂದು ಮರಳಿ ಬಂದು ರಾಜ್ಯದ ಅಧಿಕಾರ ಸ್ವೀಕರಿಸುವಂತೆ  

ವಿನಂತಿಸುವ  ಕತೆ.ಯಕ್ಷಗಾನದ ದಿಗ್ಗಜರಾದ  ಕುಂಬ್ಳೆ ಸುಂದರ ರಾವ್ 

ಭರತ ಮತ್ತು ಪ್ರಭಾಕರ ಜೋಷಿ ರಾಮನ ಪಾತ್ರ .

ಭರತ : ರಾಮ ತಂದೆ ತೀರಿ ಕೊಂಡಾಗ  ಪಟ್ಟಕ್ಕೆ ಅರ್ಹ ಜ್ಯೇಷ್ಠ ಪುತ್ರ .ಅವನಿಗೆ 

ಅನಾರೋಗ್ಯ ,ಅಂಗ ವೈಕಲ್ಯ ಅಥವಾ ಚಾರಿತ್ರ್ಯ ಹೀನತೆ ಇದ್ದಾಗ ಮಾತ್ರ 

ತಮ್ಮನಿಗೆ ಪಟ್ಟ ಕಟ್ಟ ಬಹುದು ,ಆದುದರಿಂದ ನೀನೆ ಅಯೋಧ್ಯೆಗೆ ಬಂದು 

ಸಿಂಹಾಸನ ಏರುವುದು ಉಚಿತ 

ರಾಮ : ನೀನು ಹೇಳುವುದು ಸರಿ .ಆದರೆ  ನೀನು ಹೇಳಿದ ಅಂಶಗಳಲ್ಲದೆ

ಹಿರಿಯ ಮಗನು ವ್ರತಾಧರಿ ಆಗಿದ್ದರೂ ತಮ್ಮನಿಗೆ ಪಟ್ಟ ಕಟ್ಟ ಬಹುದು .

ತಂದೆಯು ಚಿಕ್ಕಮ್ಮನಿಗೆ ಕೊಟ್ಟ ವಾಕ್ಯದ ಪರಿ ಪಾಲನೆ ಮಾಡುವುದಕ್ಕಾಗಿ 

ನಾನು ವನವಾಸ ವ್ರತ  ಹಿಡಿದವನು .ಆದುದರಿಂದ ತಮ್ಮನಾದ ನೀನು 

ರಾಜ್ಯಭಾರ ಮಾಡು .

ಭರತ :  ನನ್ನ ತಾಯಿ ಕೈಕೇಯಿ ಈಗ  ಪಶ್ಚಾತ್ತಾಪ ಪಟ್ಟುಕೊಂಡು ತನ್ನ ಮಾತು 

ಹಿಂತೆಗೆದುಕೊಂಡು ನಿನ್ನನ್ನು ಕೂಡಿ ಮರಳಲು ನನ್ನೊಡನೆ ಬಂದಿರುವಳು .

ರಾಮ :  ಈ ಮಾತು ನಮ್ಮ ತಂದೆ ಮತ್ತು ಚಿಕ್ಕಮ್ಮನ  ನಡುವೆ  ಆದುದು .

ನಮ್ಮ ತಂದೆ ಈಗ ಇಲ್ಲ .ಆದುದರಿಂದ ಅದನ್ನು ಈಗ ಏಕ ಪಕ್ಷೀಯ ವಾಗಿ 

ಹಿಂದೆ ಪಡೆಯಲು ಆಗದು .ಅಲ್ಲದೆ ಹಿಂದೆ ಯುದ್ಧ ಕಾಲದಲ್ಲಿ ತಂದೆಯ 

ಪ್ರಾಣ ಉಳಿಸಿದುದೇ ಚಿಕ್ಕಮ್ಮ .ಆ ಸಂಧರ್ಭದಲ್ಲಿ ತಂದೆ ಕೊಟ್ಟ ವರ .

ನಮ್ಮ ಚಿಕ್ಕಮ್ಮ ಅಂದು ಇರದಿದ್ದಲ್ಲಿ  ನಾವು  ಈ ಭೂಮಿಯಲ್ಲಿ  ಧಶರಥ 

ಮಹಾರಾಜನ   ಮಕ್ಕಳಾಗಿ ಜನಿಸುವ ಅವಕಾಶ ವೆ  ಬರುತ್ತಿರಲಿಲ್ಲ .ಆಕೆ ಅಷ್ಟಕ್ಕೂ 

ದೊಡ್ಡ ,ನಡೆಸಿ ಕೊಡಲಾಗದ ವರವೇನೂ ಕೇಳಿಲ್ಲ .ಆದುದರಿಂದ ನಾನು 

ಹಿಂದೆ ಬರುವುದು ಸರಿಯಲ್ಲ .

ಭರತ :  ನನ್ನ ತಾಯಿ ವರ ಕೇಳಿರ ಬಹುದು .ಆದರೆ ತಂದೆಯವರು ಅದಕ್ಕೆ 

ಸಮ್ಮತಿ ಕೊಟ್ಟಿರಲಿಲ್ಲ .ತಾಯಿಯ ಮಾತು ಕೇಳಿ  ಬಾಯಿ ಕಟ್ಟಿ ಹೋದಂತೆ 

ಇದ್ದವರು  ನೀನು ಕಾಡು ತಲುಪುತ್ತಿದ್ದಂತೆ  ಬಿದ್ದು ಹಾಸಿಗೆ ಸೇರಿ ಪ್ರಾಣ ಬಿಟ್ಟರಲ್ಲ 

ಆದುದರಿಂದ ಪಿತೃ ವಾಕ್ಯ ಭಂಗ ಆಗುವುದಿಲ್ಲ .

ರಾಮ : ನೀನು ಹೇಳುವುದು ಮೇಲ್ನೋಟಕ್ಕೆ ಸರಿ ಕಂಡರೂ  ತಾಯಿ ತನಗೆ 

ಹಿಂದೆ ಕೊಡಲ್ಪಟ್ಟ ವರವನ್ನು ಮುಂದೆ ಯಾವಾಗ ಬೇಕಿದ್ದರೂ  ಪಡೆಯುವ 

ಅವಕಾಶ ತಂದೆ ಕೊಟ್ಟಿದ್ದರಿಂದ ಆಕೆ ಕೇಳಿದ ಒಡನೆ ತಂದೆಯವರು ಅನುಮತಿಸಿದ 

ಹಾಗೆ ಆಗುವುದು .

ಭರತ : ಸರಿ ,ಈಗ ನಾನು ಅಯೋಧ್ಯೆಯ ಚಕ್ರವರ್ತಿ ,ನೀನು ಪ್ರಜೆ .ನಾನು 

ನಿನಗೆ ಆಜ್ಞೆ ಮಾಡುವೆನು .ಕೂಡಲೇ ಅಯೋಧ್ಯೆಗೆ ಮರಳಿ ಪಟ್ಟ ಸ್ವೀಕರಿಸು .

ರಾಮ :ಸರಿ ,ನಿನ್ನ ಆಜ್ಞೆಗೆ ಯನ್ನು ಶಿರಸಾವರಿಸಿ ನಾನು ಪಟ್ಟ ಸ್ವೀಕರಿಸಿ 

ಹೇಳುತ್ತೇನೆ ,ತಂದೆಯವರ  ಮಾತು ಪಾಲಿಸುವುದಕ್ಕೆ ನಾನು ವನವಾಸ 

ಮಾಡಿ ಹದಿನಾಲ್ಕು ವರುಷ ಕಳೆದು  ಮರಳಿ ಬರುವ ವರೆಗೆ   ಪ್ರಜೆಗಳಿಗೆ 

ಯಾವುದೇ ಕುಂದು ಬರದಂತೆ  ರಾಜ್ಯ ಭಾರ ಮಾಡುವಂತವನಾಗು .

ಭರತ ;(ಕುಂಬ್ಳೆ ಸುಂದರ ರಾವ್ ).ಸರಿ ಅಯೋಧ್ಯೆಯಿಂದ ಹೊರಡುವಾಗ 

ಪ್ರಜೆಗಳಿಗೆ ರಾಮನನ್ನು ಕೂಡಿಕೊಂಡೆ ಮರಳುವೆನೆಂದು ಹೇಳಿ ಬಂದಿದ್ದೇನೆ .

ಈಗ ನಾನು ಬರಿಗೈಲಿ ಹೋದರೆ ಹೋದ ರಾಯ ಬಂದ ರಾಯ ಸುಂದರ ರಾಯ 

ಎಂದು  ಲೇವಡಿ ಮಾಡುವರು .ಅದಕ್ಕೆ ನಿನ್ನ ಪಾದುಕೆಗಳನ್ನು ದಯಪಾಲಿಸು 

ಸಿಂಹಾಸನದಮೇಲೆ ಇಟ್ಟು ನಿನ್ನ ಹೆಸರಿನಲ್ಲಿ ಆಡಳಿತ ನಡೆಸುವೆನು.









ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ