ಇತ್ತೀಚಿಗೆ ಆಸ್ಪತ್ರೆಯಲ್ಲಿ ರೋಗಿ ಮೃತ ಪಟ್ಟಾಗ ವೈದ್ಯರು ಮತ್ತು ಸಿಬ್ಬಂದಿ ಮೇಲೆ
ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ ,ಕೆಲವು ಸಂದರ್ಭಗಳಲ್ಲಿ ಸಿಬ್ಬಂದಿ ನಿರ್ಲಕ್ಷ್ಯ
ಕಾರಣ ಇರ ಬಹುದಾದರೂ ಉಳಿದ ಕಡೆ ಈ ಹಿಂಸೆಯನ್ನು ಸಮರ್ಥಿಸಿ
ಕೊಳ್ಳಲಾಗದು .
ಒಬ್ಬರು ರೋಗಿ ಬಿದ್ದು ಕಾಲು ಎಲುಬು ಮುರಿದಿತ್ತು .ಬೇರೆ ಏನೂ ತೊಂದರೆ
ಇರಲಿಲ್ಲವಾದ್ದರಿಂದ ಅದನ್ನು ಸರಿ ಪಡಿಸಿ ಕಳುಹಿಸಲಾಯಿತು .ಸ್ವಲ್ಪ ದಿನಗಳ
ನಂತರ ಅವರಿಗೆ ಅಪಸ್ಮಾರ ಶುರುವಾಯಿತು .ಅದಕ್ಕಾಗಿ ತಲೆಯ ಸ್ಕ್ಯಾನ್
ಮಾಡಿದಾಗ ಅವರಿಗೆ ಮೆದುಳಿನ ಹಳೆಯ ರಕ್ತ ಸ್ರಾವ ಇತ್ತು .ಅಂದರೆ ಈ ರಕ್ತ
ಸ್ರಾವ ಯಾವುದೇ ಲಕ್ಷ್ನಣ ಗಳಿಲ್ಲದೆ ಮೌನ ವಾಗಿತ್ತು .ಒಂದು ವೇಳೆ ಶಸ್ತ್ರ ಚಿಕಿತ್ಸೆ
ಸಮಯದಲ್ಲಿ ಇದರಿಂದ ತೊಂದರೆ ಬಂದು ರೋಗಿಯ ಪ್ರಾಣಕ್ಕೆ ಸಂಚಕಾರ
ಬಂದಿದ್ದರೆ ಹೇಗೆ ವಿವರಿಸುವುದು ?
ಬಾಣಂತಿಯರ ಸಾವು ಬಹಳ ಅನೀರಿಕ್ಷಿತ ,ಹಾಗೆಯೇ ಹೆಚ್ಚು ಅಹಿತಕರ
ಘಟನೆಗಳು ಇದರಿಂದ ನಡೆಯುವವು .ಅಮ್ನಿಯಟಿಕ್ ಫ್ಲೂಯಿಡ್ ಎಂಬೋಲಿಸಂ (ಅಂದರೆ ಗರ್ಭ ನೀರಿನ ರಕ್ತ ಸೇರುವಿಕೆ )ಎಂಬ ಮಾರಣಾಂತಿಕ ಕಾಯಿಲೆ ಇದೆ .ಇದು ನಾವು ಅಲೋಚಿಸುತ್ತಿವ ಹೊತ್ತಿನಲ್ಲಿ ರೋಗಿಯ ಪ್ರಾಣ ತೆಗೆದು ಕೊಳ್ಳುವುದು ,ಅಲ್ಲದೆ
ಇದರ ನಿರೀಕ್ಷೆಗೆ ಯಾವುದೇ ಟೆಸ್ಟ್ ಇಲ್ಲ ,ಅಲ್ಲದೆ ಇದನ್ನು ಸಮರ್ಥಿಸಲೂ
ಟೆಸ್ಟ್ ಇಲ್ಲ .ದುರದೃಷ್ಟವಶಾತ್ ರೋಗಿಗೆ ಯಾವುದಾದರೂ ಸಾಮಾನ್ಯ
ಚುಚ್ಚು ಮದ್ದು ಕೊಟ್ಟ ನಂತರ ಅವರಿಗೆ ಈ ಸಂಗತಿ ಆದರೆ ಕಾಕ ತಾಳೀಯ
ಮತ್ತು ಇಂಜೆಕ್ಷನ್ ಮತ್ತು ನರ್ಸ್ ನಿರಪರಾಧಿ .
ಇನ್ನೊಂದು ಬಾಳಂತಿಯರಲ್ಲಿ ಉಂಟಾಗುವ ದುರಂತ ರಕ್ತ ಹೆಪ್ಪುಗಟ್ಟದಿರುವುದು .
ಅವಘಡದ ರಕ್ತಸ್ರಾವ (abruptio placenta ) ಇದು ಮಾಸ ಬಿದ್ದ ಮೇಲೂ ರಕ್ತ
ಹೆಪ್ಪು ಗಟ್ಟ ದ ಕಾಯಿಲೆ .
ಬಾಳಂತಿ ಯರ ಮೆದುಳಿನ ರಕ್ತ ಹೆಪ್ಪುಗಟ್ಟುವಿಕೆ ಎಂಬ ಕಾಯಿಲೆ ಇದೆ ,ಇದರಿಂದ
ಅಪಸ್ಮಾರ ,ತಲೆನೋವು ಮತ್ತು ಕೆಲವೊಮ್ಮೆ ಸಾವೂ ಸಂಭವಿಸ ಬಹುದು .
ಮೇಲೆ ಹೇಳಿದ ಕಾಯಿಲೆಗಳು ಅಪರೂಪ ಮತ್ತು ಮೊದಲೇ ಕಂಡು ಹಿಡಿಯ
ಬಹುದಾದುವಲ್ಲ , ಇದಕ್ಕೆ ವೈದ್ಯರು ಮತ್ತು ಸಿಬ್ಬಂದಿಯನ್ನು ನಿಂದಿಸಿ ಫಲವಿಲ್ಲ .
ಹಾಗೆಂದು ಬರುವ ಗರ್ಭಿಣಿ ಯರನ್ನು ಈ ಕಾಯಿಲೆಗಳು ಬಂದರೂ ಬರ
ಬಹುದು ಎಂದು ಹೆದರಿಸುವುದು ಎಷ್ಟು ಸಾಧು ?
ಇನ್ನು ಒಂದು ಕಾಯಿಲೆ ಇದೆ .ಹೃದಯದ ಮಾಂಸ ಖಂಡ ಗಳು ಹುಟ್ಟಿದಾರಭ್ಯ
ದಪ್ಪವಾಗಿದ್ದು ಏನೂ ತೊಂದರೆ ಪ್ರಕಟ ಪಡಿಸುವುದಿಲ್ಲ .ಆದರೆ ಕೆಲವೊಮ್ಮೆ
ಅನೀರಿಕ್ಷಿತವಾಗಿ ಅತಿಯಾಗಿ ಕಂಪಿಸ ತೊಡಗಿ ,ಹೃದಯ ವೈಫಲ್ಯ ದಿಂದ
ಸಾವನ್ನಪ್ಪುವರು .ಕ್ರೀಡಾ ಮೈದಾನದಲ್ಲಿ ಸಂಭವಿಸುವ ಬಹು ಪಾಲು ಸಡನ್
ಸಾವುಗಳಿಗೆ ಇದು ಕಾರಣ .ಈ ಸಂಗತಿ ಆಸ್ಪತ್ರೆಯಲ್ಲಿ ಸಂಭವಿಸಿದರೆ ?
ಇನ್ನೊಂದು ಕಾಯಿಲೆ ಇದೆ .ಕಾಲಿನ ಅಭಿದಮನಿಗಳಲ್ಲಿ ರಕ್ತ ಹೆಪ್ಪು ಗಟ್ಟಿ ಆ ಹೆಪ್ಪು
ಅಲ್ಲಿಂದ ನಿಧಾನವಾಗಿ ಹೃದಯಕ್ಕೆ ಹೋಗಿ ,ಮತ್ತೆ ಶುದ್ಧಿಕರಣಕ್ಕೆ ಶ್ವಾಸ ಕೋಶಕ್ಕೆ
ಹೋಗುವಾಗ ಅಲ್ಲಿಯ ರಕ್ತ ನಾಳ ಬ್ಲಾಕ್ ಆಗಿ ರೋಗಿಗೆ ಸಡನ್ ದಮ್ಮು
ಕೆಲವೊಮ್ಮೆ ಅನಿರೀಕ್ಷಿತ ಸಾವು ಉಂಟಾಗಬಹುದು .ಬಹಳ ದಿನ ಮಲಗಿರುವ
ರೋಗಿಗಳಲ್ಲಿ ಇದು ಸಾಮಾನ್ಯ .ಈಗ ಆಸ್ಪತ್ರೆಗಳಲ್ಲಿ ಈ ತರಹ ಹೆಪ್ಪು ಗಟ್ಟ ದ
ಹಾಗೆ ಚುಚ್ಚುಮದ್ದು ಕೊಡುವರು .
ಬೇರೆ ಕಾಯಿಲೆಗೆ ದಾಖಲಾದವರಿಗೆ ಹೃದಯಾಘಾತ ಸಂಭವಿಸ ಬಹುದು ,
ಅದರಲ್ಲೂ ನೋವಿಲ್ಲದ (ಸೈಲೆಂಟ್ ) ಹೃದಯಾಘಾತ ಎಂಬುದಿದೆ .ಇದರಿಂದ
ಮೃತ ಪಟ್ಟರೆ ಹೇಗೆ ಗೊತ್ತಾದೀತು.ಭಾರೀ ಹೃದಯಾಘಾತದಲ್ಲಿ ಇ ಸಿ ಜಿ
ಮಾಡಲೂ ಸಮಯ ಇರುವುದಿಲ್ಲ .

Hope people read and understand these
ಪ್ರತ್ಯುತ್ತರಅಳಿಸಿ