ಬೆಂಬಲಿಗರು

ಗುರುವಾರ, ಮೇ 28, 2015

ಶರೀರದಲ್ಲಿ ನೀರು ಬರುವುದು

ಶರೀರದಲ್ಲಿ  ಕೆಲವೊಮ್ಮೆ ನೀರು ತುಂಬಿದಂತೆ ಆಗುವುದು ,ಇದನ್ನು ಅಂಗ್ಲ 

ಭಾಷೆಯಲ್ಲಿ  ಎಡಿಮಾ ಎನ್ನುವರು .ಹೆಚ್ಚಾಗಿ ಕಾಲುಗಳಲ್ಲಿ ,ಕಣ್ಣಿನ ಸುತ್ತ ,ಉದರ 

ಮತ್ತು ಕೆಲವೊಮ್ಮೆ ಇಡೀ ಶರೀರದಲ್ಲಿ ನೀರು ತುಂಬುವುದು .ಈ ತರಹ ನೀರು 

ನಿಂತಾಗ  ಭಯವಾಗುವುದು .ಮತ್ತು ಮೂತ್ರಪಿಂಡ(ಕಿಡ್ನಿ) ಗಳ ಕಾಯಿಲೆ ಎಂದು 

ಹಲವರು ಭಾವಿಸುವರು .ಇದು ಸರಿಯಲ್ಲ.

   ನಮ್ಮ ರಕ್ತದಲ್ಲಿ ನೀರನ್ನು ರಕ್ತನಾಳ ಗಳ ಒಳಗೆ ಹಿಡಿದಿರುವ ಶಕ್ತಿ ಸಸಾರಜನಕ .

ನೀರನ್ನು ಹೊರ ದೂಡುವ ಶಕ್ತಿ  ರಕ್ತನಾಳದ ಒಳಗಿನ ದ್ರವದ ಒತ್ತಡ ಹೊರ 

 ದೂಡಲು ನೋಡುವುದು .ಈ ಶಕ್ತಿಗಳ ಸಮರಸವೇ ಅರೋಗ್ಯ ,ವಿರಸ ವೇ ರೋಗ .

                         

ಈಗ  ಸಸಾರಜನಕ ಹೇಗೆ  ಕಮ್ಮಿಯಾಗುವುದು ಎಂದು ನೋಡೋಣ .

೧  .ಆಹಾರದಲ್ಲಿ   ಸಸಾರಜನಕದ ಕೊರತೆ .ಪೌಷ್ಟಿಕ ಆಹಾರದಿಂದ  ವಂಚಿತರು 

೨.  ಮೂತ್ರದಲ್ಲಿ ಸಸಾರಜನಕ ನಷ್ಟವಾಗುವುದು .ಸಾಮಾನ್ಯವಾಗಿ  ಮೂತ್ರದಲ್ಲಿ 

ಸಸಾರಜನಕ  ವಿಸರ್ಜಿಸಲ್ಪದುವುದಿಲ್ಲ .ಆದರೆ  ಮೂತ್ರಪಿಂಡಗಳ  ರೋಗದಲ್ಲಿ 

ಅದು  ಅತಿಯಾಗಿ ವಿಸ್ರಜಿಸಲ್ಪಟ್ಟು  ರಕ್ತದಲ್ಲಿ  ಸಸಾರಜನಕದ ಕೊರತೆ 

 ಉಂಟಾಗುವುದು .ಇದನ್ನು  ನೆಪ್ಫ್ರೋಟಿಕ್  ಸಿಂಡ್ರೋಮ್  ಎನ್ನುವರು .

೩.  ಲಿವರ್ ಶರೀರದ ಆಹಾರದ ಉಗ್ರಾಣ ,ಅಲ್ಲದೆ  ಸಸಾರಜನಕದ  ಉತ್ಪಾದನೆ 

ಮಾಡುವ  ಕಾರ್ಖಾನೆ .ಮದ್ಯಪಾನ , ವೈರಲ್  ಕಾಯಿಲೆಯಿಂದ  ಲಿವರ್ 

ಕಾರ್ಯ  ಕುಂಟಿತ ವಾಗಿ  ರಕ್ತದಲ್ಲಿ   ಸಸಾರಜನಕ ಕಂಮಿಯಾಗುವುದು. .

ಮೇಲೆ ಹೇಳಿದ ಸಂದರ್ಭಗಳಲ್ಲಿ   ನೀರು ರಕ್ತ ನಾಳ ಗಳಿಂದ ಹೊರ ಹೋಗಿ 

ಚರ್ಮದ ಅಡಿಯಲ್ಲಿ  ಶೇಖರಣೆ ಆಗುವುದು ಲಿವರ್  ಕಾಯಿಲೆಯಲ್ಲಿ  ಉದರದಲ್ಲಿ 

ನೀರು ಸೇರುವುದು ಹೆಚ್ಚ್ಚು 
 ಇದನ್ನು  ಜಲೋದರ ಎನ್ನುವರು .

ರಕ್ತ ನಾಳಗಲ್ಲಿ  ರಕ್ತ ಸಂಚರಿಸುತ್ತಲೇ ಇರ ಬೇಕು .ಈ ಜಂಗಮ 

ಸ್ಥಿತಿಗೆ   ಹೃದಯದ  ಸಹಕಾರ ಅತ್ಯವಶ್ಯ .  ಹೃದಯ ಸರಿಯಾಗಿ  ಕೆಲಸ 

ಮಾಡದಿದ್ದರೆ   ಅಬಿಧಮನಿ ಗಳಿಂದ  ರಕ್ತವು  ಹೃದಯಕ್ಕೆ  ಖಾಲಿಯಾಗದೆ  

ರಕ್ತನಾಳಗಳಲ್ಲಿನ  ಜಲದ ಒತ್ತಡ ಏರುವುದು ,ಇದರಿಂದ  ನೀರು ಹೊರಕ್ಕೆ 

ಸೋರಿ  ಅಂಗಾಂಗಗಳಲ್ಲಿ  ನೀರು ಬರುವುದು .

ಇನ್ನು ಕೆಲವು ಔಷಧಿಗಳೂ  ಕಾಲಿನಲ್ಲಿ  ನೀರು ಬರುವಂತೆ  ಮಾಡ ಬಹುದು 

ಉದಾ . ನಿಫೆಡೆಪಿನ್,ಅಮ್ಲೊಡಿಪಿನ್ ನಂತಹ  ಬಿ ಪಿ ಗೆ ಕೊಡುವ  ಔಷಧಿಗಳು 

ನೋವು ನಿವಾರಕ ಔಷಧಿಗಳು ಇತ್ಯಾದಿ .

ಬಿ ಅನ್ನಾಂಗ ಥಯಾಮಿನ್ ಕೊರತೆ ಯಿಂದ   ನೀರು ಸೇರುವುದು  ಇತ್ತೀಚಿಗೆ 

ಪುನಃ ಕಾಣಿಸಿ ಕೊಳ್ಳುತ್ತಿದೆ .ಇದಕ್ಕೆ ಆಹಾರದಲ್ಲಿ  ಅನ್ನಾಂಗ ವಿರೋಧಿ 

ವಸ್ತುಗಳು ಇರುವುದುದೇ ಕಾರಣ ಎನ್ನುವರು .

ಫೈಲೆರಿಯ  ,ಮತ್ತು ಬ್ಯಾಕ್ಟೀರಿಯಾ  ಸೋಂಕುಗಳು  ಅವು  ಕಾಡಿದ ಅವಯವ 

ಗಳಲ್ಲಿ  ಬಾವು ಉಂಟು ಮಾಡುವವು .ಥೈರಾಯಿಡ್  ಹೊರ್ಮೊನ್ ಕೊರತೆಯಿಂದ

ಅವಯವ  ಮತ್ತು  ಮುಖ ಗಳಲ್ಲಿ  ನೀರು ತುಂಬಿದಂತೆ ಕಾಣುವುದು .


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ