ಬೆಂಬಲಿಗರು

ಸೋಮವಾರ, ಮೇ 18, 2015

ಅರುಣಾ ಶಾನ್ ಭೋಗ್ ಅವರಿಗೆ ಅದರಾಂಜಲಿ



ಮುಂಬೈ ಕೆ ಇ ಎಂ ಆಸ್ಪತ್ರೆಯಲ್ಲಿ ಕೆಲಸ ಮಾಡುತಿದ್ದ  ನಮ್ಮ ಉತ್ತರ ಕನ್ನಡದ 

ಹುಡುಗಿ ಅರುಣಾ ಶಾನ್ ಭೋಗ್ .ನರ್ಸ್ ಆಗಿದ್ದ ಆಕೆ ಆಸ್ಪತ್ರೆಯ ಆಹಾರ 

ಪದಾರ್ಥ ಗಳನ್ನು ಕದಿಯುತ್ತಿದ್ದ  ವಾರ್ಡ್ ಬಾಯ್  ಸೋಹನ್ ಲಾಲ್ ಬಾತ್ರ 

ವಾಲ್ಮೀಕಿ ಯನ್ನು  ಎಚ್ಚರಿಸಿದ್ದಳು .ಪ್ರತೀಕಾರವಾಗಿ ರಾತ್ರಿ ಕರ್ತವ್ಯ ಮುಗಿಸಿ 

ಹೋಗುವ ವೇಳೆ ಕಾದು ನಿಂತು ಆಕೆಯ ಮೇಲೆ ಆಕ್ರಮಣ ಮಾಡಿ ,ಉಸಿರುಗಟ್ಟಿಸಿ 

ಅತ್ಯಾಚಾರ ಮಾಡಿದ .ಇದರಿಂದ ಕಳೆದು ಕೊಂಡ ಪ್ರಜ್ಞೆ ಪೂರ್ಣವಾಗಿ  ಆಕೆಗೆ 

ಬರಲೇ ಇಲ್ಲ .

ಆದರೆ ಆಕೆಯನ್ನು ಸಹೋದ್ಯೋಗಿಗಳು ಚೆನ್ನಾಗಿ ಆರೈಕೆ ಮಾಡಿದರು .ಮಲಗಿದಲ್ಲೇ 

ಇದ್ದರೂ  ಬೆಡ್ ಸೊರ್ ಆಗದಂತೆ ನೋಡಿ ಕೊಂಡರು.ಸುಪ್ರೀಂಕೋರ್ಟ್ ನಲ್ಲಿ 

ಪತ್ರಕರ್ತೆ ಓರ್ವಳು ಆಕೆಗೆ ದಯಾ ಮರಣ ಪಾಲಿಸುವಂತೆ ಅರ್ಜಿ ಸಲ್ಲಿಸಿದಾಗ 

ಆಸ್ಪತ್ರೆಯ  ಉದ್ಯೋಗಿಗಳು ಅದನ್ನು ವಿರೋದಿಸಿದರು .

ಆಕೆಯ ಕುಟುಂಬವೂ ಕಲಾಕ್ರಮೇಣ ಆಕೆಯ ಯೋಗ ಕ್ಷೇಮ ವಿಚಾರಿಸುದನ್ನು 

ಬಿಟ್ಟಿತ್ತು. ಆದರೂ ಸಹೋದ್ಯೋಗಿಗಳು  ಅವಳ ಆಸರೆಯಾಗಿ ನಿಂತರು 

      ತನ್ನ ಕರ್ತವ್ಯ  ಪ್ರಜ್ಞೆ ಗಾಗಿ  ಜೀವನ ವನ್ನೇ ತೆತ್ತ  ಅರುಣಾ ಮತ್ತು  ಅವಳ 

ಆರೈಕೆಯನ್ನು  ತಪಸ್ಸಿನೋಪಾದಿಯಲ್ಲಿ  ಗೈದ ಕೆ ಇ ಎಂ ಅಸ್ಪತ್ರೆಯ 

ಉದ್ಯೋಗಿಗಳಿಗೆ   ನಮೋನ್ನಮಃ
( ಅರುಣಾ  ೧೮.೫.೨೦೧೫ ರಂದು ಕೊನೆಯುಸಿರು ಎಳೆದರು )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ