ಬೆಂಬಲಿಗರು

ಶನಿವಾರ, ಆಗಸ್ಟ್ 29, 2020

ಓದದಿದ್ದರೆ ಕಳೆದು ಹೋಗು ತ್ತಿದ್ದ ಕೃತಿ ರತ್ನ

 വേരുകൾ | Verukal by Malayattoor Ramakrishnanಲೋಕ್ ಡೌನ್  ಅವಧಿಯಲ್ಲಿ  ಓದಿದ  ಬಹಳ ಶ್ರೇಷ್ಠ  ಕಾದಂಬರಿ .ಮಲಯಾಳಂ ಭಾಷೆಯಲ್ಲಿ  ವೇರುಕಳ್ ಅಂದರೆ ಬೇರುಗಳು ಎಂಬ ಹೆಸರಿನಲ್ಲಿ ಪ್ರಕಟವಾದ  ಮಲಯಾತ್ತೂರ್  ರಾಮಕೃಷ್ಣನ್ ಅವರ ಪ್ರಸಿದ್ದ ಕಾದಂಬರಿ .

ಕಥಾನಾಯಕ  ರಾಜಧಾನಿಯಲ್ಲಿ ದೊಡ್ಡ ಹುದ್ದೆಯಲ್ಲಿ ಇದ್ದು ಅವನ ಹೆಂಡತಿ ಶ್ರೀಮಂತರ ಮನೆಯಿಂದ ಬಂದವಳು .ನಗರದಲ್ಲಿ  ಹೊಸ ಮನೆ ಕಟ್ಟುವ  ಉದ್ದೇಶ .ನಾಯಕ ತನ್ನ ಆದಾಯ ಕ್ಕೆ  ಅನುಗುಣವಾದ ಮತ್ತು ವಾಸಕ್ಕೆ ಅವಶ್ಯವಿರುವಷ್ಟು  ದೊಡ್ಡ ಮನೆ ಸಾಕೆಂಬ ಮನೋ ಭಾವನೆಯವನು ;ಹೆಂಡತಿಗೆ ಮಾತ್ರ  ದೊಡ್ಡ ಬಂಗಲೆಯೇ ಬೇಕೆಂಬ ಹಟ. ಹೆಚ್ಚಿನ ವೆಚ್ಚ ಸರಿದೂಗಿಸಲು  ಊರಿನಲ್ಲಿ ಇರುವ ಪಿತ್ರಾರ್ಜಿತ ಆಸ್ತಿ ಮಾರುವಂತೆ  ಅವಳ ಸೂಚನೆ .

ಅದರಂತೆ  ಒಲ್ಲದ ಮನಸ್ಸಿನಲ್ಲಿ  ಊರಿಗೆ ಹೊರಡುತ್ತಾನೆ .ಅಲ್ಲಿ ಅವನ ಪಾಲಿನ ಆಸ್ತಿಯನ್ನು ಸಹೋದರಿಯರು ನೋಡಿಕೊಳ್ಳುತ್ತಿರುತ್ತಾರೆ .ಊರ ಸರಹದ್ದು ಹೊಕ್ಕ ಒಡನೆ  ಕಾದಂಬರಿ ಆರಂಭ . ಊರಿನ ದೇವಸ್ಥಾನ ,ಕೆರೆ ,ತೋಟ ,ತಿರುವುಗಳು ,

ಬಾಲ್ಯದಲ್ಲಿ  ಒಡನಾಡಿದ ವ್ಯಕ್ತಿಗಳು  ಜ್ನಾಪಕ ಚಿತ್ರ ಶಾಲೆಯನ್ನೇ ತೆರೆದಿಡುತ್ತವೆ .

ತನ್ನ ಮನದ ಆಳದೊಳಗೆ ಮಡಿಚಿ ಇಟ್ಟ ಬಾಲ್ಯ ಯೌವನ ದ  ನೋವು ನಲಿವು ,ಕನಸುಗಳು ,ನಿರಾಶೆ ,ಪ್ರೀತಿ ಪ್ರಣಯ ಒಂದೊಂದೇ ತಿರುವಿನಲ್ಲಿ ತೆರೆದಿಡುತ್ತವೆ .ಮನುಷ್ಯನಿನಿಗೆ  ಭೌತಿಕ ಹೇಗೋ  ಮಾನಸಿಕ ಅಸ್ತಿತ್ವ ಮುಖ್ಯ .ಅದರ ಬೇರುಗಳು ತನ್ನ ಹುಟ್ಟಿದ ಊರಿನಲ್ಲಿಯೇ ಇವೆ .ಇದನ್ನು ಮಾರಿದರೆ  ಮೂಲ ಕತ್ತರಿಸಿದಂತೆ ಎಂದು ಆಸ್ತಿ ಮಾರುವ ಯೋಚನೆ ಬದಲಿಸಿ ಮರಳುವ ಕಥೆ .ಮೂಲ ಮಲಯಾಳಂ 

ಕೃತಿಯನ್ನು  ವಿ ಅಬ್ದುಲ್ಲಾ ಸೊಗಸಾಗಿ ಇಂಗ್ಲಿಷ್ ಗೆ ಅನುವಾದಿಸಿದ್ದಾರೆ .

ಮರಗಳಂತೆ ಮನುಷ್ಯನ  ತನ್ನ ತನವೂ ಬೇರುಗಳನ್ನು ಅವಲಂಬಿಸಿ ಅದರ ಮೂಲಕ ಜೀವಿಸುತ್ತದೆ .

ಬುಧವಾರ, ಆಗಸ್ಟ್ 26, 2020

ಕೆಲವು ಆರೋಗ್ಯ ವಿಚಾರಗಳು


ವೈದ್ಯ  ಶಾಸ್ತ್ರ ದಲ್ಲಿ  ಗಮನೀಯ ಬೆಳವಣಿಗೆ ಆಗಿದ್ದರೂ  ಹಲವು ನಂಬಿಕೆಗಳು  ಯಾವುದೇ ವೈಜ್ನಾನಿಕ ಆಧಾರ ಇಲ್ಲದೆ ಪ್ರಚಲಿತ ವಾಗಿ  ನಿಂತಿವೆ .ಅವುಗಳಲ್ಲಿ  ಕೆಲವನ್ನು ಆರಿಸಿ ವಿಶ್ಲೇಷಿಸುವ ಪ್ರಯತ್ನ .

ಇತ್ತೀಚೆಗೆ ನಮ್ಮ ಊರಿನಲ್ಲಿ ಡೆಂಗ್ಯೂ ಜ್ವರದ ಹಾವಳಿ ಇತ್ತು .ಇದು ಸೊಳ್ಳೆಗಳಿಂದ ಹರಡುವ  ವೈರಸ್ ಜನ್ಯ ಕಾಯಿಲೆ .ಈ ಜ್ವರದಲ್ಲಿ ರಕ್ತ ಸ್ಥಂಭಕ ಕಣಗಳಾದ ಪ್ಲಾಟೆಲೆಟ್ ಗಳು  ಕಡಿಮೆ ಆಗುತ್ತವೆ .ಆದರೆ  ಈ ಕಾಯಿಲೆ  ಗಂಭೀರ ವಾಗುವುದು ಈ ಕಾರಣಕ್ಕೆ ಅಲ್ಲ . ಬದಲಾಗಿ ರಕ್ತ ನಾಳ ಗಳಿಂದ  ದ್ರವಾಂಶ ಸೋರಿ ಹೋಗಿ  ರಕ್ತದ ಒತ್ತಡ  ದಿಡೀರೆಂದು ಕುಸಿಯುವುದು ;ಇದನ್ನು ಡೆಂಗ್ಯೂ ಶೋಕ್ ಎನ್ನುವರು .ಆದರೆ ಸಾಮಾಜಿಕ ಮತ್ತು ಸಮೂಹ  ಮಾಧ್ಯಮ ಗಳಲ್ಲಿ  ಪ್ಲಾಟೆಲೆಟ್ ಕೊರತೆಯಿಂದಲೇ ಸಾವು ಸಂಭವಿಸಿದೆ ಎಂದು ಬಿಂಬಿಸುತ್ತಾರೆ .ಡೆಂಗ್ಯೂ ಕಾಯಿಲೆಯಲ್ಲಿ  ಕಡಿಮೆ ಆದ ಪ್ಲಾಟೆಲೆಟ್ ಕಣಗಳು  ತಂತಾನಾಗಿಯೇ ಸರಿ ಆಗುವವು .ಅದು ಹತ್ತು ಸಾವಿರ ಕ್ಕಿಂತ  ಕಡಿಮೆ ಆದರೆ (ನಾರ್ಮಲ್ 1.5 ಲಕ್ಷ ದಿಂದ 4.5 ಲಕ್ಷ ಡೆಸಿ ಲೀಟರ್ ರಕ್ತ ಕ್ಕೆ )ಅಥವಾ ರಕ್ತ  ಸ್ರಾವ ದ ಲಕ್ಷಣ ಗಳು  ಇದ್ದರೆ ಮಾತ್ರ  ಪ್ಲಾಟೆಲೆಟ್ ಕೊಡ ಬೇಕಾಗಿ ಬರುವುದು .ಇದಕ್ಕಾಗಿ ಪ್ರತ್ಯೇಕ  ಹಣ್ಣು (ದುಬಾರಿಯಾದ ಕಿವಿ ಹಣ್ಣು ,ಅಥವಾ ಪಪ್ಪಾಯಿ ಇತ್ಯಾದಿ )ತಿನ್ನುವ ಅವಶ್ಯ ಇಲ್ಲ ಮಾತ್ರವಲ್ಲ ಪ್ರತ್ಯೇಕ ಉಪಯೋಗವೂ ಇಲ್ಲ .ಯಾವುದೇ ಸುಲಭ ವಾಗಿ  ಸಿಗುವ ಹಣ್ಣು ಹಂಪಲೇ ಸಾಕು .ದಿನಕ್ಕೆ ಎರಡು ಮೂರು  ಭಾರಿ ರಕ್ತ ಪರೀಕ್ಷೆ ಮಾಡುವುದೂ ಬೇಕಾಗಿಲ್ಲ .

ಡೆಂಗ್ಯೂ ಕಾಯಿಲೆಯಲ್ಲಿ ರಕ್ತ ನಾಳದಿಂದ  ದ್ರವಾಂಶ ಸೋರಿ ರಕ್ತದ ಒತ್ತಡ ಕಡಿಮೆ ಆಗುವುದು ಎಂದೆನಷ್ಟೆ .ಇದೇ ತರಹದ ಪರಿಣಾಮ ಡೆಂಗ್ಯೂ ಇಲ್ಲದವರಲ್ಲಿ  ಶರೀರ ದಿಂದ  ರಕ್ತ ಸ್ರಾವ ಆದರೆ ,ತೀವ್ರ ಅತಿಸಾರ ದಿಂದ ಆಗ ಬಹುದು .ಮತ್ತು ಹೃದಯದ ವೈಫಲ್ಯದಲ್ಲಿ  ರಕ್ತ ಸಾಕಷ್ಟು  ಪಂಪ್  ಆಗದೆ  ಬಿ ಪಿ ಕುಸಿಯ ಬಹುದು .ಇದು ಬಿಟ್ಟು ಲೋ ಬಿ ಪಿ  ಎಂಬ ಕಾಯಿಲೆ ಪ್ರತ್ಯೇಕ ಇಲ್ಲ .ನಮ್ಮ ರಕ್ತದ ಒತ್ತಡ 120/80 ಎಂದು ಇದ್ದರೂ  ಹಲವರಲ್ಲಿ ಅದು 100/80 ,90/70 ಇತ್ಯಾದಿ ಇರ ಬಹುದು ಮತ್ತ್ತು ಅವರು ಯಾವುದೇ ತೊಂದರೆ ಇಲ್ಲದೆ ಓಡಾಡಿ ಕೊಂಡು ಇರುವರು .ಆದುದರಿಂದ ಅದು ಕಾಯಿಲೆ ಅಲ್ಲ .

ಅಧಿಕ ರಕ್ತದ ಒತ್ತಡ ಸಾಮಾನ್ಯ ಕಾಯಿಲೆ .ಬಹು ಮಂದಿಯಲ್ಲಿ ರೋಗ ಲಕ್ಷಣ ಇರುವುದಿಲ್ಲ .ಆದರೆ ಚಿಕಿತ್ಸೆ ಅವಶ್ಯ .ಇಲ್ಲದಿದ್ದರೆ ಹೃದಯ ,ಮೂತ್ರ ಪಿಂಡ ಮತ್ತು ಮೆದುಳಿಗೆ ಹಾನಿ ಆಗ ಬಹುದು .ಆಸ್ಪತ್ರೆಗೆ  ಹೊಸದಾಗಿ ಬಂದವರ  ಮೊದಲ ಬಿ ಪಿ ನಾರ್ಮಲ್ ಗಿಂತ ಸ್ವಲ್ಪ ಜಾಸ್ತಿ ಇರುತ್ತದೆ .ಆಗ ನಾವು ಸ್ವಲ್ಪ ಸಮಯ ಬಿಟ್ಟು ಪುನಃ ರಕ್ತದ ಒತ್ತಡ ನೋಡುತ್ತೇವೆ .ಮತ್ತೂ ಸಂದೇಹ ಇದ್ದರೆ ಇನ್ನೊಂದು ದಿನ ಬರ ಹೇಳುತ್ತೇವೆ .ಆಸ್ಪತ್ರೆಯ ಮೊದಲ ಭೇಟಿಯ ರಕ್ತದ ಒತ್ತಡ ಏರಿಕೆಗೆ ಬಿಳಿ ಕೋಟ್ ರಕ್ತದೊತ್ತಡ ಎನ್ನುವರು .ಇದಕ್ಕೆ ಚಿಕಿತ್ಸೆ ಬೇಡ ,ಪುನಃ ಪರಿಶೋದಿಸುವಾಗ ತೊಂದರೆ ಇದ್ದರೆ ಚಿಕಿತ್ಸೆ .ಇದಲ್ಲದೆ ಆಸ್ತಮಾ ಕಾಯಿಲೆ ,ಮೂತ್ರದ ಕಲ್ಲು . ಮೈಗ್ರೈನ್ ತಲೆ ನೋವು ಇತ್ಯಾದಿ ಜಾಸ್ತಿ ತೊಂದರೆ ಕೊಡುತ್ತಿರುವಾಗ ಬಿ ಪಿ ಪರಿಶೋದನೆ ಮಾಡಿದರೆ ಸ್ವಲ್ಪ ಜಾಸ್ತಿಯೇ ಇರುವುದು .ಮೂಲ ಕಾಯಿಲೆ ಶಮನ ಆಗುವಾಗ ಬಿ ಪಿ ತಾನೇ ಇಳಿಯುವುದು . ರಕ್ತ ಹೆಪ್ಪು ಗಟ್ಟಿ  ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆದಾಗ ರಕ್ಷಣಾತ್ಮಕ ವಾಗಿ  ಬಿ ಪಿ ಏರುವುದು .ಅದನ್ನು ಕೂಡಲೇ ಕಡಿಮೆ ಮಾಡಿದರೆ ಮೆದುಳಿಗೆ ಇನ್ನಷ್ಟು ಹಾನಿ ಆಗುವುದು .

ಬಹಳ ಮಂದಿ ತಿಳಿದಂತೆ ತಲೆ ನೋವಿಗೆ  ಅಧಿಕ ರಕ್ತದೊತ್ತಡ ಸಾಮಾನ್ಯ ಕಾರಣ ಅಲ್ಲ .ತಲೆ ತಿರುಗುವುದಕ್ಕೂ ಅಲ್ಲ .ಯಾವುದೇ ಸೋಂಕು ರೋಗ ಅಥವಾ ಮೆದುಳಿನ ಗಡ್ಡೆ ಇತ್ಯಾದಿಗಳನ್ನು ಹೊರತು ಪಡೆಸಿದರೆ  ತಲೆನೋವಿಗೆ ಮುಖ್ಯ ಕಾರಣ ಉದ್ವೇಗ ಎರಡನೇ ಸ್ಥಾನದಲ್ಲಿ ಮೈಗ್ರೈನ್ ಇದೆ .ಕಣ್ಣಿನ ದೃಷ್ಟಿ ದೋಷವೂ ತಲೆ ನೋವು ಉಂಟು ಮಾಡುವುದು ಕಮ್ಮಿ .ತಲೆ ತಿರುಗುವುದಕ್ಕೆ ಮುಖ್ಯ ಕಾರಣ ಶರೀರದ ಸಮತೋಲನ ಕಾಪಾಡುವ  ಕಿವಿ ಯೊಳಗೆ  ಅಂತರ್ಗತ  ಅಂಗದ ಕಾರ್ಯ ವ್ಯತ್ಯಯ .ಈ ತರಹ ತಲೆ ತಿರುಗುವಾಗ ಬಿ ಪಿ ನೋಡಿದರೆ ಸ್ವಲ್ಪ ಜಾಸ್ತಿ ಇದ್ದೀತು.ಆದರೆ ಮೊದಲ ಚಿಕಿತ್ಸೆ ಮೂಲ ರೋಗಕ್ಕೆ .

ಸಕ್ಕರೆ ಕಾಯಿಲೆ ಈಗ ಸಾಮಾನ್ಯ ಮತ್ತು ಸಣ್ಣ ವಯಸ್ಸಿನಲ್ಲಿಯೇ ಕಾಣಿಸಿ ಕೊಳ್ಳುವುದು .ಇದಕ್ಕೆ ಮೊದಲ ಉಪಚಾರ ಪಥ್ಯ. ಗಮನಿಸ ಬೇಕಾದ ಅಂಶ ಎಂದರೆ ನಾವು ಉಪಯೋಗಿಸುವ ಏಕ ದಳ ಧಾನ್ಯಗಳಾದ ಅಕ್ಕಿ ,ಗೋದಿ ,ರಾಗಿ ,ಜೋಳ ಇತ್ಯಾದಿಗಳ ಸಕ್ಕರೆ ಪ್ರಮಾಣದಲ್ಲಿ ಗಮನೀಯ ವ್ಯತ್ಯಾಸ ಇಲ್ಲ .ಕರುಳಿನಿಂದ ರಕ್ತಕ್ಕೆ ಸಕ್ಕರೆ ಸೇರುವ ಸಮಯ ಅಲ್ಪ ಸ್ವಲ್ಪ ಹೆಚ್ಚು ಕಡಿಮೆ ಇದ್ದೀತು .ಹಾಗಲ ಕಾಯಿ ,ಉಪ್ಪಿನ ಕಾಯಿತಿಂದರೆ ರಕ್ತದ ಸಕ್ಕರೆ ಕಡಿಮೆ ಆಗದು .ಸಕ್ಕರೆ ಕಾಯಿಲೆಗೆ ಕೊಡುವ ಮಾತ್ರೆಯ ಪವರ್ ಅದರ ಗಾತ್ರವನ್ನು ಮತ್ತು  ಮಿಲ್ಲಿ ಗ್ರಾಂ ,ಗ್ರಾಂ ಗಳ ಮೇಲೆ ನಿರ್ಧಾರ ಆಗದೆ ಔಷಧಿ ಯ ಮೇಲೆ ಇರುವುದು .ಇತರ ಕಾಯಿಲೆಗಳಿಗೂ .ಉದಾಹರಣೆಗೆ ಡಯಬಿಟಿಸ್ ಗೆ ಕೊಡುವ ಮೆಟ್ ಫೋರ್ಮೀನ್ ಎಂಬ ಮಾತ್ರೆ ನೋಡಲು ದೊಡ್ಡದು ಇದ್ದು 500 ಮಿಲಿಗ್ರಾಂ 10000 ಮಿಲಿಗ್ರಾಂ ಪ್ರಮಾಣದಲ್ಲಿ ಬರುತ್ತವೆ .ಆದರೆ ಇದು ಗ್ಲಿಮಿ ಪೇರೈಡ್ ಎಂಬ 1 ಮಿಲಿಗ್ರಾಂ ನ ಸಣ್ಣ ಮಾತ್ರೆಗಿಂತ  ಎಸ್ಟೋ ಕಡಿಮೆ ಪವರ್ ನದು .

 

ಕಾಮಾಲೆ ರೋಗ ಎನ್ನುವರು .ಆದರೆ ಕಾಮಾಲೆ ಜ್ವರ ,ತಲೆನೋವು ,ಕೆಮ್ಮು ಇವುಗಳಂತೆ ಒಂದು ರೋಗ ಲಕ್ಷಣ ಮಾತ್ರ .ಹಳದಿ ರೋಗ ಎಂಬುದು ನಮ್ಮ ಕೆಂಪು ರಕ್ತ ಕಣಗಲ  ವ್ಯತ್ಯಯ ಗೊಂಡ ಉತ್ತರ ಕಾಂಡ .ಕೆಂಪು ಕಣಗಳು ಆಯುಸ್ಸು ಮುಗಿದೊಡನೆ ಜೀರ್ಣ ಗೊಂಡು ಬಿಲಿರುಬಿನ್ ಎಂಬ ಹಳದಿ ವಸ್ತು ಲಿವರ್ ,ಪಿತ್ತ ಕೋಶ ,ಪಿತ್ತ ನಾಲಗಳ ಮೂಲಕ ಕರುಳಿಗೆ ಸಾಗಿ ವಿಸರ್ಜನೆ ಗೊಳ್ಳುವುದು .ಮಲದ  ಹಳದಿ ಬಣ್ಣಕ್ಕೆ ಕಾರಣ ಇದು.ಕೆಂಪು ರಕ್ತದ ಕಣಗಳು ಕೆಲವು ಕಾಯಿಲೆಗಳಲ್ಲಿ ಆಯುಸ್ಸು ಮುಗಿಯುವ ಮುಂಚೆಯೇ ಅತಿಯಾಗಿ ನಶಿಸುತ್ತವೆ .ಆಗಲೂ ರಕ್ತದಲ್ಲಿ ಬಿಲಿರುಬಿನ್ ಜಾಸ್ತಿ ಆಗಿ ಹಳದಿ ಕಾಣುವುದು .ಇನ್ನು ವಾಡಿಕೆಯಲ್ಲಿ ಕಾಮಾಲೆ ಎಂದು ಕರೆಯುವ ಕಾಯಿಲೆ ಲಿವರ್ ನ ವೈರಸ್ ಸೋಂಕು .ಹೆಪಟೈಟೀಸ್ ಎ ,ಬಿ ,ಸಿ ,ಡಿ ,ಇ ಇತ್ಯಾದಿ ವೈರಸ್ ಯಕೃತ್ (ಲಿವರ್)ಕಾಡುವ ವೈರಸ್ ಗಳು .ಎ ಮತ್ತು ಇ ನೀರು ಆಹಾರದ ಮೂಲಕ  ಹರಡಿದರೆ ಬಿ ಮತ್ತು ಸಿ  ರಕ್ತದ ಮೂಲಕ . ಮುಂದೆ ಲಿವರ್ ದಾಟಿ ಕರುಳಿನ ದಾರಿಯಲ್ಲಿ ಯಾವುದಾದರೂ ಗಡ್ಡೆ  ಅಥವಾ ಪಿತ್ತ ನಾಳದ ಕಲ್ಲು ಬಿಲಿರುಬಿನ್  ಹರಿವಿಗೆ  ತಡೆ ಒಡ್ಡಿದರೂ ಕಾಮಾಲೆ ಬರುವುದು .ಇನ್ನು ಮಲೇರಿಯಾ ,ಇಲಿ ಜ್ವರಗಳು  ಲಿವರ್ ,ಕೆಂಪು ರಕ್ತ ಕಣಗಳಿಗೆ ಹಾನಿ ಮಾಡಿ ಜಾಂಡಿಸ್ ಬರ ಬಹುದು . ಇವುಗಳಿಗೆ ಎಲ್ಲಾ ಪ್ರತ್ಯೇಕ ಚಿಕಿತ್ಸೆ ಇದೆ .ವಾಡಿಕೆಯಲ್ಲಿ ಇರುವ ಕಠಿಣ ಪಥ್ಯ ವೂ ಬೇಡ .ವೈರಸ್ ನಿಂದ ಬಂದ ಸೋಂಕು ಬಹುತೇಕ ತಾನೇ ಶಮನ ಗೊಂಡರೂ ಮಲೇರಿಯಾ ,ಇಲಿ ಜ್ವರ ,ಪಿತ್ತ ನಾಳದ ಕಲ್ಲು ಇತ್ಯಾದಿ ಸಮಸ್ಯೆಗಳಿಗೆ ಅವುಗಳದೆ ಚಿಕಿತ್ಸೆ  ಇವೆ ಕಾಮಾಲೆ ಎಂದು ಹಳ್ಳಿ ಮದ್ದು ಮಾಡಿ ಕುಳಿತರೆ ಅಪಾಯ .

 

    ಹೃದಯದ ಆಘಾತ ಎಲ್ಲರೂ ಕೇಳಿದ್ದೇವೆ .ಹಠಾತ್ ರಕ್ತ  ಪೂರೈಕೆ ವ್ಯತ್ಯಯ ಆಗಿ ಅಂಗ ದ  ಕಾರ್ಯ ವೈಫಲ್ಯ ವೇ  ಆಘಾತ .ಇಂತಹುದೇ ಸಮಸ್ಯೆ ಮೆದುಳಿನಲ್ಲಿ ಬಂದಾಗ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಆಗುವುದು .ಇದು ಮೆದುಳಿನ ರಕ್ತನಾಳಗಳ ರಕ್ತ ಹೆಪ್ಪು ಗಟ್ಟುವಿಕೆ ಯಿಂದ  ಅಥವಾ ರಕ್ತ ಸ್ರಾವದಿಂದ ಬರ ಬಹುದು ,ಎಡದ ಮೆದುಳಿನ ಆಘಾತದಿಂದ  ಬಲ ದ ಕೈ ಕಾಲು ಬಲ ಹೀನ ವಾಗ ಬಹುದು  ,ಮಾತು ಬೀಳ ಬಹುದು .ಇಲ್ಲಿ ಕಾಯಿಲೆ ಇರುವುದು ಮೆದುಳಿನಲ್ಲಿ ,ಆದುದರಿಂದ ಮೂಲ ಚಿಕಿತ್ಸೆ ಅದಕ್ಕೆ .ಉಪಯೋಗಿಸದೆ ಮರಗಟ್ಟುವುದನ್ನು ತಡೆಗಟ್ಟಲು ಕೈ ಕಾಲಿಗೆ ವ್ಯಾಯಾಮ ಮಾಡಿಸುವರು .ಮೆದುಳಿನ ರಕ್ತ ಹೆಪ್ಪು ಕರಗಿಸುವ ಔಷಧಿಗಳು ಲಭ್ಯವಿವೆ .ಆದರೆ ಮೂರು ನಾಲ್ಕು ಗಂಟೆಗಳ ಒಳಗೆ ಕೊಟ್ಟರೆ ಹೆಚ್ಚು ಪರಿಣಾಮ .

ಸರ್ಪ ಸುತ್ತು ಎಂದು ಕರೆಯಲ್ಪಡುವ  ಕಾಯಿಲೆ ವೈರಸ್ ನರಕ್ಕೆ ಆದಾಗ ಬರುವ ಕಾಯಿಲೆ .ಇದನ್ನು ನರ ಕೋಟಲೆ ಎನ್ನುವುದು ಉತ್ತಮ .ಆಧುನಿಕ ವೈದ್ಯ ಪದ್ದತಿ ಯಲ್ಲಿ  ಇದಕ್ಕೆ ಉತ್ತಮ ಔಷಧಿ ,ಇದೆ .ಆರಂಭದಲ್ಲಿಯೇ ಕೊಟ್ಟರೆ ಹೆಚ್ಚು ಪರಿಣಾಮ ಕಾರಿ .ಇದು ಸರ್ಪದೋಷ ಅಥವಾ ಯಾವುದೇ ಶಾಪದಿಂದ ಬರುವ ಜಡ್ಡು ಅಲ್ಲ .ಸರಿ ಉಪಚಾರ ಮಾಡದಿದ್ದಲ್ಲಿ  ಹುಣ್ಣು ಮಾದರೂ ನೋವು ಉಳಿಯುವುದು .

   ಇನ್ನು ಸಂಕ್ಷಿಪ್ತ ವಾಗಿ  ಕೆಲವು ವಿಚಾರಗಳು .

ಆಸ್ತಮಾ ಕಾಯಿಲೆಗೆ ತಿನ್ನುವ ಮಾತ್ರೆಗಳಿಂತ ಸೇದುವ ಔಷಧಿ ಉತ್ತಮ .ಹೆಚ್ಚು ಪರಿಣಾಮಕಾರಿ ,ಕಡಿಮೆ ಅಡ್ಡ ಪರಿಣಾಮ .ತಿನ್ನುವ ಮಾತ್ರೆಗಳ ಸಾವಿರದ ಒಂದು ಪ್ರಮಾಣದ ಔಷದಿ ಸಾಕಾಗುವುದು .ಬಹಳ ಮಂದಿ ಸೇದುವ ಔಷಧಿ (ಇನ್ಹೇಲರ್)ಹೆಚ್ಕು  ಸ್ಟ್ರಾಂಗ್ .ಒಮ್ಮೆ ಆರಂಬಿಸಿದರೆ ಅಭ್ಯಾಸ ಆಗುವುದು ,ಎಂಬಿತ್ಯಾದಿ  ಅಪನಂಬಿಕೆ ಹೊಂದಿರುತ್ತಾರೆ .ಇದು ಸರಿಯಲ್ಲ .

ಆಹಾರದಲ್ಲಿ ಹಣ್ಣಿನ ರಸಕ್ಕಿಂತ ಇಡೀ ಹಣ್ಣು ತಿನ್ನುವುದು ಒಳ್ಳೆಯದು .ಹಣ್ಣಿನ ನಾರು ಕರುಳ ಚಲನೆಗೆ ಸಹಾಯಕ .ಹಣ್ಣು ತಿನ್ನುವ ಶಕ್ತಿ ಇಲ್ಲದವರು ಮಾತ್ರ ಜ್ಯೂಸ್ ಮಾಡಿ ಸೇವಿಸಿರಿ .ಕೇವಲ ಅಕ್ಕಿ ಹಾಕಿ ಮಾಡುವ ತಿಂಡಿಗಳಿಂತ ಉದ್ದು ಸೇರಿಸಿ ಮಾಡುವ ಇಡ್ಲಿ ಇತ್ಯಾದಿ ಹೆಚ್ಕು ಸಮತೂಕ .ಏಕೆಂದರೆ ದ್ವಿದಳ ಧಾನ್ಯಗಳಲ್ಲಿ ಸಸಾರ ಜನಕ ಅಧಿಕ .ಬ್ರೆಡ್ ಮತ್ತು ಎಳನೀರು ಗಳಲ್ಲಿ  ಸಾಮಾನ್ಯವಾಗಿ ತಿಳಿದುಕೊಂಡಂತಾ ಆರೋಗ್ಯ ಸ್ನೇಹಿ ಅಥವಾ ರೋಗ ಪ್ರತಿ ಬಂಧಕ  ಅಂಶಗಳು ಇಲ್ಲ .

ಹೆಚ್ಚಿನ ಕಾಯಿಲೆಗಳಿಗೆ ಪಥ್ಯ ಅವಶ್ಯವಿಲ್ಲ .ಸಕ್ಕರೆ ಕಾಯಿಲೆ ,ಹೃದಯ ರೋಗ ಇತ್ಯಾದಿಗಳಲ್ಲಿ ವೈದ್ಯರ ಸಲಹೆ ಮೇರೆ ಆಹಾರ ಕ್ರಮ ಬದಲಾಯಿಸ ಬೇಕು .ಬಾಳಂತಿಯರು  ಸಮ ತೂಕದ ಆಹಾರ ಸೇವಿಸುವುದು ಮುಖ್ಯ .ಅವರ ಆಹಾರದಲ್ಲಿ ದ್ವಿದಳ ಧಾನ್ಯ ,ಬೀಜಗಳು ,ಮಾಂಸ ಮೀನು ಹಣ್ಣು ತರಕಾರಿ  ಸೇರಿದ್ದರೆ ಉತ್ತಮ ,ನಮ್ಮಲ್ಲಿ ಅದು ನಂಜು ಇದು ನಂಜು ಎಂದು ಅವರ ಬಾಯಿ ಕಟ್ಟಿ ಬರೀ ಅನ್ನ ,ಹಾಲು ತುಪ್ಪ ಕೊಡುವರು .ಇದು ತಪ್ಪು .

ಬೊಜ್ಜು ಒಂದು ಕಾಯಿಲೆ .ಎಳವೆಯಲ್ಲಿ ಸ್ಥೂಲ ಕಾಯವು  ಮುಂದೆ ಹೃದ್ರೋಗ ,ಸಂದಿ ವಾತ ,ಸಕ್ಕರೆ ಕಾಯಿಲೆ, ಮನೋ ಖಿನ್ನತೆ ಮತ್ತು ಕೆಲವೊಮ್ಮೆ ಕಾನ್ಸರ್ ಗೂ ಕಾರಣ ವಾಗ  ಬಲ್ಲುದು. ಕಾಳಿದಾಸನು ಕಮಲೇ ಕಮಲೋತ್ಪತ್ತಿ ಎಂದಂತೆ  ಸ್ಥೂಲ ಕಾಯೆ ಸ್ಥೂಲ ಕಾಯೋತ್ಪತ್ತಿ ಎನ್ನ ಬಹುದು .ಒಮ್ಮೆ ಬೊಜ್ಜು ಬಂದರೆ ವ್ಯಾಯಾಮ ಕಷ್ಟವೆನಿಸುವುದು .ಇನ್ನಷ್ಟು ಬೊಜ್ಜು ಬರುವುದು .ತಪ್ಪಿದ ಆಹಾರ ಕ್ರಮ ಅಥವಾ ಕ್ರಮ ವಿಲ್ಲದ ಆಹಾರ ,ಇಲ್ಲದ ವ್ಯಾಯಾಮ ಇದಕ್ಕೆ ಮೂಲ ಕಾರಣ .ನಡೆಯುವುದು ಮತ್ತು ಶ್ರಮ ಜೀವನ ಪ್ರತಿಷ್ಟೆಗೆ ಕುಂದು  ಎಂಬ ಮನೋಭಾವ  ಮತ್ತು ಇದರಿಂದ ವಾಹನ ಅವಲಂಬನೆ ಅಪಾಯಕಾರಿ .

ಮಂಜು ಎಂದರೆ ಹವೆ ತಂಪು ಆದಾಗ  ವಾತಾವರಣದ ನೀರಾವಿ ಸಾಂದ್ರ ಗೊಂಡು ಭಾರವಾಗಿ ಕೆಳಗೆ ಇಳಿಯುವುದು .ಅದಷ್ಟೇ ಆದರೆ ಅಡ್ಡಿಯಿಲ್ಲ ,ಆದರೆ ಅದು ತನ್ನೊಡನೆ ಧೂಳು ,ವಾಹನ ಗಳ  ಹೊಗೆಯ ರಸಾಯನಿಕಗಳು  ಇತ್ಯಾದಿಗಳನ್ನು ಜತೆಗೆ ತರುವುದರಿಂದ  ಅಲ್ಲರ್ಜಿ ಮತ್ತು ಶೀತ ಇತ್ಯಾದಿ ಆಗುವುದು .ಅದಕ್ಕೆ ತಲೆಗೆ ಟೊಪ್ಪಿ ಇಟ್ಟರೆ ಪ್ರಯೋಜನ ಇಲ್ಲ ,ಮಾಸ್ಕ್ ಹಾಕ ಬಹುದು .ಅದರಂತೆ ಬಹಳ ಮಂದಿ ತಾವು ಯಾವುದೋ ಸಮಾರಂಭದಲ್ಲಿ ಶರಭತ್ ಕುಡಿದು ಅಥವಾ ಐಸ್ ಕ್ರೀಂ ತಿಂದು ಕೆಮ್ಮು  ಬಂತು ಎನ್ನುವರು .ಇಲ್ಲಿ ಶ್ವಾಸ ಸಂಬಂಧಿ ರೋಗಗಳು ಬಹುತೇಕ  ಗಾಳಿಯಲ್ಲಿ ಹರಡುವಂತವು.ಶೀತ  ಕೆಮ್ಮು ಇರುವವರ ಬಳಿ ಮಾತನಾಡುವುದರಿಂದ ಮತ್ತು ಅವರ ಸೀನು ಕೆಮ್ಮು ವಿನ ವೈರಸ್ ಗಳು  ಕಲ್ಯಾಣ ಮಂಟಪದಲ್ಲಿ ಯಥೇಚ್ಛ ಇರುವುವು .

ಸೋಮವಾರ, ಆಗಸ್ಟ್ 17, 2020

ಅಲ್ಲಿ ಪಾಸಿಟಿವ್ ಇಲ್ಲಿ ನೆಗೆಟಿವ್?

(ವಾಚಕರೆ  ನಿಮಗೆ ನನ್ನ ಬ್ಲಾಗ್ ಉಪಯುಕ್ತ ಅನಿಸಿದರೆ  ಫಾಲೋ  ಚಿನ್ಹೆ  ಒತ್ತಿರಿ ಮತ್ತು ಬಲದ  ತುದಿಯಲ್ಲಿ ನಿಮ್ಮ  ಈ ಮೇಯಿಲ್  ವಿಳಾಸ ದಾಖಲಿಸಿರಿ .ನಾನು ಹೊಸ ಲೇಖನ ಪೋಸ್ಟ್  ಮಾಡಿದ ಒಡನೆ ನಿಮಗೆ ಸೂಚನೆ ಬರುವುದು )

 

ದೃಶ್ಯ ಮಾಧ್ಯಮದಲ್ಲಿ   ನೀವು ನೋಡಿರ ಬಹುದು .ಒಂದು ಕಡೆ ಕೋವಿಡ್  ಪೋಸಿಟಿವ್ ಇನ್ನೊಂದು ಕಡೆ ಕೋವಿಡ್ ಇಲ್ಲ ? ಇದೆಂಥಾ ಕಥೆ ? ಇದೆಂತಹ ಮೋಸ ?ಇತ್ಯಾದಿ .

ಆದರೆ ಇದರಲ್ಲಿ ಸೋಜಿಗ ಇಲ್ಲ .ಯಾಕೆಂದರೆ ಮನುಷ್ಯ ನಿರ್ಮಿತ ಟೆಸ್ಟ್ ಗಳು ನೂರಕ್ಕೆ ನೂರು ನಿಖರ ಇರುವುದಿಲ್ಲ .

ಯಾವುದೇ ಟೆಸ್ಟ್ ನ  ವಿಶ್ವಾಸರ್ಹತೆ  ಕುರಿತು ಎರಡು ಮಾಪನ ಇರುತ್ತವೆ .ಒಂದು ಸೂಕ್ಷ್ಮತೆ  (sensitivity) ಮತ್ತೊಂದು  ನಿರ್ಧಿಷ್ಟತೆ (specificity).ನಿಜವಾಗಿ ಒಂದು ಕಾಯಿಲೆ ಇರುವುದು ಟೆಸ್ಟ್  ಅವಗಣನೆ ಮಾಡದೆ ಇರುವುದು ಸೂಕ್ಷ್ಮತೆ . ಯಾರಿಗೆ ಕಾಯಿಲೆ ಇಲ್ಲಾ ಎಂದು ಸರಿಯಾಗಿ ಹೇಳುವುದು ನಿರ್ಧಿಷ್ಟತೆ .ಬಹಳ ಟೆಸ್ಟ್ ಗಳು 

ನೂರಕ್ಕೆ ನೂರು  ಸೂಕ್ಷ್ಮ ಅಥವಾ ನಿರ್ದಿಷ್ಟ ಆಗಿರುವುದಿಲ್ಲ .

ಅದಲ್ಲದೆ ಟೆಸ್ಟ್ ಮಾಡಲು  ರಕ್ತ ,ಗಂಟಲು ದ್ರವ ಅಥವಾ ಇನ್ನಿತರ ಮಾದರಿ ಯನ್ನು ಹೇಗೆ ಸಂಗ್ರಹ ಮಾಡಿದ್ದೇವೆ ,ಹೇಗೆ ಸಾಗಣೆ ಮಾಡಿದ್ದೇವೆ ಎಂಬುದು ಮುಖ್ಯ .ಅವೈಜ್ನಾನಿಕ ಮಾದರಿ ಶೇಖರಣೆ ಮತ್ತು  ಸಾಗಣೆ  ತಪ್ಪು ಫಲಿತಾಂಶ ಕೊಡುವುದು .

ಕೆಲವೊಮ್ಮೆ  ಸಂಗ್ರಹಿಸಿದ  ಮಾದರಿಯ  ಪ್ರಮಾಣ ಸಾಕಷ್ಟು ಇಲ್ಲದಿರ ಬಹುದು .ಶೇಖರಣೆ ಮಾಡಿದ  ಅಂಗಾಂಶ ದಲ್ಲಿ  ರೋಗಾಣು  ಸಾಂದ್ರತೆ ಕಮ್ಮಿ ಇರ ಬಹುದು .ಇಂತಹ ವೇಳೆ  ತಪ್ಪಾಗಿ ಕಾಯಿಲೆ ಇಲ್ಲ ಎಂಬ ರಿಪೋರ್ಟ್ ಬರ ಬಹುದು .

ಶುಕ್ರವಾರ, ಆಗಸ್ಟ್ 14, 2020

ಕೋವಿಡಾಯಣ---2

 ಕಾಮೂ ವಿನ ಪ್ಲೇಗ್  ಕಾದಂಬರಿಯಲ್ಲಿ  ಕೋಟಾರ್ಡ್ ಎಂಬ ಪಾತ್ರ ಇದೆ. ಊರಿನಲ್ಲಿ ಪ್ಲೇಗ್ ಮಾರಿ ಬಂದಾಗ  ಸಂತೋಷ ಪಟ್ಟವನು ಅವನೊಬ್ಬನೇ.ಹಿಂದೆ ಮಾಡಿದ ಯಾವುದೋ ಅಪರಾಧಕ್ಕೆ  ಪೊಲೀಸರು ಅವನ ಹಿಂದೆ ಇದ್ದಾರೆ ಎಂದು ಸದಾ ಭಯದ ನೆರಳಿನಲ್ಲಿ ಇದ್ದ ಅವನಿಗೆ ಪ್ಲೇಗ್ ಹಾವಳಿ ಸಮಯದಲ್ಲಿ  ,ಪೊಲೀಸರು  ರೋಗ ನಿಯಂತ್ರಣ ಕೆಲಸದಲ್ಲಿ ಮಗ್ನ ರಾಗಿದ್ದುದರಿಂದ  ತನ್ನ ಸುದ್ದಿಗೆ ಬರಲಾರರು ಎಂಬ ನಂಬಿಕೆ . ಅಲ್ಲದೆ ಸಂದಿಗ್ದ ಸಮಯದಲ್ಲಿ  ಕಳ್ಳ ಸಾಗಾಣಿಕೆ ಮಾಡಿ ಧನಾರ್ಜನೆ ಮಾಡುತ್ತಿದ್ದ .

ನಿರೂಪಕನ ಶಬ್ದಗಳಲ್ಲಿ " ಈ ಸಾಂಕ್ರಾಮಿಕವು ಅವನಲ್ಲಿ (ಕೊಟ್ರಾಡ್)ಹೆಮ್ಮೆ ಉಂಟು ಮಾಡಿತು. ಏಕಾಂತವನ್ನು ದ್ವೇಷಿಸುತ್ತಲಿದ್ದ  ಏಕಾಂಗಿಗೆ ಒಂದು ಜತೆ ಯಾಯಿತು .ತನ್ನ ಸುತ್ತ ಮುತ್ತಲಿನವರು ,ಅವರ ಮೂಡನಂಬಿಕೆಗಳು, ಆಧಾರ ರಹಿತ ಭಯ ,ತಾವು ರೋಗದ ಬಗ್ಗೆ ಮಾತನಾಡುವುದೇ ಎಂಬ ಹಟ ಹೊತ್ತು ಯಾವಾಗಲೂ ಅದರ ಬಗ್ಗೆ ಮಾತನಾಡುತ್ತಿರುವವರು , ಇವರೊಡನೆ ಅವನು ಸಂತೋಷದಿಂದ  ಒಂದಾದನು "

ಕೋವಿಡ್ ಹಾವಳಿಯ ಈ ಕಾಲದಲ್ಲಿ  ಸೋಪ್ ,ಸೋಂಕುನಾಶಕ ಉತ್ಪಾದಿಸುವವರಿಗೆ ವ್ಯಾಪಾರ ಹೆಚ್ಚುವುದು .ಎಲ್ಲಿ ನೋಡಿದರಲ್ಲಿ ಅವುಗಳ ಜಾಹೀರಾತು .ಗುಣಗಾನ .ಈಗ ಸೌಂದಯ್ಯ ವೃದ್ಧಿ ಸುವ  ಕೆಲಸ  ಬದಿಗಿಟ್ಟು  ರೋಗ  ವೈರಸ್ ನಾಶ ಕೈಗೆತ್ತಿ ಕೊಂಡಂತಿದೆ .

             ಇಮ್ಮುನಿಟಿ ಬೂಸ್ಟರ್ ತಯಾರಿಸುವ (ಇದಕ್ಕೆ ವೈಜ್ನಾನಿಕ ಆಧಾರ ಇಲ್ಲದಿದ್ದರೂ ) ಉತ್ಪಾದಕರು ನಾಯಿ ಕೊಡೆ ಗಳಂತೆ ಹುಟ್ಟಿ ಕೊಂಡಿದ್ದಾರೆ .ಎಲ್ಲ ಪತ್ರಿಕೆಗಳಲ್ಲಿ ಅವುಗಳ ಆಕರ್ಷಕ ಜಾಹೀರಾತು .ಅವಕ್ಕೆ ಹಾಕುವ ಹಣದಲ್ಲಿ  ಒಳ್ಳೆಯ ಆಹಾರ ,ಹಣ್ಣು ಹಂಪಲು ಜತೆಗೆ  ವ್ಯಾಯಾಮ  ಇದ್ದರೆ ,ಇಮ್ಮುನಿಟಿ  ಬೂಸ್ಟರ್  ಆಗುವುದು .

     ಟಿ ವಿ ವಾಹಿನಿಗಳು  ಮರಣ ಮೃದಂಗ  ,ಕೋವಿಡ್ ರಣ ಕೇಕೆ ಎಂದು ಬೊಬ್ಬಿರಿದು  ಜನರಲ್ಲಿ ಇನ್ನೂ ಭಯ ಹೆಚ್ಚುವಂತೆ ಮಾಡುತ್ತಿವೆ .ಇದರಿಂದ ಅವುಗಳ ಟಿ ಆರ್ ಪಿ ಹೆಚ್ಚಿದೆಯೋ ಅರಿಯದು .ಸ್ವಯಮ್ ಘೋಷಿತ  ಕೋವಿಡ್ ತಜ್ನರನ್ನು ಕರೆಯಿಸಿ ವೀಕ್ಷಕರ  ಗೊಂದಲವನ್ನು ಹೆಚ್ಚಿಸುತ್ತಿವೆ .

ಇನ್ನು ಅಳುವವರಿಗೆ  ತಮ್ಮ ಯಾವುದೇ ವೈಫಲ್ಯವನ್ನು  ಆರೋಪಿಸಲು  ಒಂದು ನೆಪ ಸಿಕ್ಕಿದೆ.ಅದು ಕೋವಿಡ್ .

ಗುರುವಾರ, ಆಗಸ್ಟ್ 13, 2020

ಎಲ್ಲಿಯ ಮೇಸ್ಕೋಮ್ ಎಲ್ಲಿಯ ರಂಗ ರಾವು

ಕರೆಂಟ್ ಬಿಲ್ ನಲ್ಲಿ  ಸ್ವಲ್ಪ ಸಮಸ್ಯೆ  ಇದ್ದುದರಿಂದ  ಮೇಸ್ಕೋಮ್ ಕಚೇರಿಗೆ  ಹೋಗಿದ್ದೆ .ನನ್ನ ಸಮಸ್ಯೆ ಅಳಿಸಿ  ನಿವಾರಣೆ ಆಯಿತು .ಮೊದಲು ಕರ್ನಾಟಕದಲ್ಲಿ  ಇಡೀ ರಾಜ್ಯಕ್ಕೆ  ಒಂದು ಎಲೆಕ್ಟ್ರಿಸಿಟಿ ಬೋರ್ಡ್ ಇತ್ತು .ಅದನ್ನು ಹಲವು ನಿಗಮ ಗಳನ್ನು ಆಗಿ ವಿಂಗ ಡಿಸಿರುವರು . ಅವುಗಳು ಸ್ವಾಯತ್ತ ನಿಗಮಗಳಾಗಿ ಕೆಲಸ ಮಾಡುತ್ತಿವೆ .ಮತ್ತು ಕಾರ್ಯ ಕ್ಷಮತೆಯಲ್ಲಿ  ಗಮನಾರ್ಹ ಸುದಾರಣೆ ಆಗಿದೆ .

ನಮ್ಮ ದೇಶದಲ್ಲಿ  ಇಂದನ ರಂಗದಲ್ಲಿ  ಸುಧಾರಣೆ ಆರಂಬಿಸಿದವರು  ವಾಜಪೇಯಿ ಮಂತ್ರಿ ಮಂಡಲದಲ್ಲಿ  ಆ ಖಾತೆ ಯ  ಸಚಿವರಾಗಿದ್ದ  ರಂಗರಾಜನ್ ಕುಮಾರಮಂಗಲಮ್ ಅವರು . ಇವರ ತಂದೆ ಮೋಹನ ಕುಮಾರಮಂಗಲಮ್ .ತಾಯಿ ಕಲ್ಯಾಣಿ ಮುಖರ್ಜಿ .

ಇವರ ತಾಯಿ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಆಗಿದ್ದ ಅಜಯ ಕುಮಾರ ಮುಖರ್ಜಿ ಅವರ ಮಗಳು .

ತಂದೆ ಮೋಹನ ಕುಮಾರಮಂಗಲಮ್  ಕಮ್ಯೂನಿಸ್ಟ್  ಚಿಂತಕರು .ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರೂ ಆಗಿದ್ದವರು .ವಿಮಾನ ದುರಂತದಲ್ಲಿ ಮೃತರಾದರು .ಇವರ  ತಂದೆ  ಸುಬ್ಬರಾಯಣ್  , ತಮಿಳನಾಡು ಸೇಲಂ ಸಮೀಪದ  ಕುಮಾರಮಂಗಲಮ್ ಎಂಬಲ್ಲಿ  ಭಾರೀ ಜಮೀಂದಾರರು.ಮುಂದೆ ಸ್ವಲ್ಪಕಾಲ ಮದ್ರಾಸ್ ಪ್ರಾಂತ್ಯದ ಮುಖ್ಯ ಮಂತ್ರಿಯೂ ಆಗಿದ್ದವರು.ಮುಂದೆ ಸ್ವತಂತ್ರ ಭಾರತದಲ್ಲಿ  ಮಹಾರಾಷ್ಟ್ರ ದ   ರಾಜ್ಯಪಾಲ ರೂ ಆಗಿದ್ದರು .

ಕುದ್ಮಲ್ ರಂಗ ರಾಯರು  ಮಂಗಳೂರು ನಾಗರಿಕರಿಗೆ  ಎಂದೂ ನೆನಪಿನಲ್ಲಿ  ಇಟ್ಟು ಕೊಳ್ಳ ಬೇಕಾದ ಮಹಾನುಭಾವರು .(1859-1928) .ದಲಿತರು ಮತ್ತು ಮಹಿಳೆಯರ ಏಳಿಗೆಗೆ ಮತ್ತು ಶಿಕ್ಷಣಕ್ಕೆ  ತಮ್ಮ ತನು ಮನ ಧನ ಮುಡಿಪಿಟ್ಟವರು .ಅವರ ಮಗಳು ರಾಧಾದೇವಿ .ಬಾಲ ವಿಧವೆಯಾದ ಅವರನ್ನು ಮದ್ರಾಸ್ ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ  ಕಳುಹಿದರು.ಅಲ್ಲಿ  ಶ್ರೀ ಸುಬ್ಬರಾಯನ್ ಪರಿಚಯ ಆಗಿ ಅವರನ್ನು ವಿವಾಹ  ಆದರು.

ಈ ದಂಪತಿಗಳಿಗೆ  ನಾಲ್ವರು ಮಕ್ಕಳು .ಮೊದಲನೆಯವರು  ಭಾರತದ  ಭೂಸೇನೆ ಮುಖ್ಯಸ್ಥ ರಾಗಿದ್ದ  ಪಿ ಪಿ ಕುಮಾರ ಮಂಗಲಮ್ .ಮೂರನೆಯವರು  ಮೇಲೆ ಹೇಳಿದ ಮೋಹನ ಕುಮಾರ ಮಂಗಲಮ್ .ಅವರ ಮಗನೆ  ರಂಗರಾಜನ್  ಕುಮಾರ ಮಂಗಲಮ್ .

ಇವರು  ಇಂದನ ಸಚಿವರಾಗಿ  ಆ ರಂಗದಲ್ಲಿ  ಸುಧಾರಣೆಗಳನ್ನು ತಂದರು .ಅದರ  ಮುಂದುವರಿದ  ಪರಿಣಾಮ ಗಳೇ  ಈ ಎಸ್ಕೋಮ್ ಗಳು.

 KarnatakaHistory: Kudmul Ranga Rao, The Well-wisher of the Dalitsಕುದ್ಮುಲ್ ರಂಗ ರಾವು

 

 

 Rangarajan Kumaramangalam - Profile, Biography and Life History | Veethi

    ರಂಗರಾಜನ್ ಕುಮಾರ ಮಂಗಲಮ್

ಕೋವಿಡಾಯಣ

 ಮಿತ್ರರು  ಒಬ್ಬರು  ನೀವು ವೈದ್ಯರಾಗಿ  ಕೋವಿಡ್ಬಗ್ಗೆ  ಸ್ವಲ್ಪ ಬರೆಯಿರಿ ಎಂದು ಕೋರಿದ್ದಾರೆ .ಈಗಾಗಲೇ  ಮಾಧ್ಯಮ ಗಳಲ್ಲಿ  ಇದರ ಬಗ್ಗೆ  ಅಜೀರ್ಣ ವಾಗುವಷ್ಟು ಮಾಹಿತಿ ಬಂದಿರುವುದರಿಂದ  ನನ್ನದೂ ಸ್ವಲ್ಪ ಇರಲಿ ಎಂದು  ಗೊತ್ತಿರುವುದನ್ನು ಗೊತ್ತಿಲ್ಲದುದನ್ನೂ ಸೇರಿಸಿ  ಗೊಂದಲ ಉಂಟು ಮಾಡುವುದು ಬೇಡ ಎಂದಿದ್ದೇನೆ .ಆದರೂ ಸರಳವಾದ ಕೆಲವು ವಿಚಾರ ಹಂಚಿ ಕೊಳ್ಳುವೆನು .

       ಕೋವಿಡ್ 19 ವೈರಸ್ ಕಾಯಿಲೆ .ವೈರಸ್ ಗೆ ಜೀವ ಕೋಶ ಇಲ್ಲ .ಜೀವ ತಂತು ಮಾತ್ರ .ಬ್ಯಾಕ್ಟೀರಿಯಾ ಗೆ ಜೀವ ಕೋಶ ಇದೆ .

ಆದುದರಿಂದ  ವೈರಸ್ ಆತಿಥೇಯ ಇಲ್ಲದೆ ಬದುಕದು .ಇದು ಹೊಸ ವೈರಸ್ ಅಲ್ಲ .ಕೋರೋನಾ ಜಾತಿಯ ಹಲವಾರು ವೈರಸ್ ಗಳು ಮೊದಲೂ ಇದ್ದವು . ಮನುಷ್ಯರಲ್ಲಿ ಶೀತ ಜ್ವರ ಇತ್ಯಾದಿ ಉಂಟು ಮಾಡುತ್ತಿದ್ದ  ಸುಮಾರು ಏಳು ವಿಧದ  ಈ ಜಾತಿಯ ವೈರಸ್ ಇದ್ದುವು .ಮನುಷ್ಯರಂತೆ ಇವೂ ದೇವರ  ಸೃಷ್ಟಿ. ಇವು ಮನುಷ್ಯ ಜೀವಿಯನ್ನು ಆಕ್ರಮಣ ಮಾಡಿದಾಗ  ಜೈವಿಕ ಹೋರಾಟ ನಡೆಯುತ್ತದೆ .ದೇಹದಲ್ಲಿ ರಕ್ಷಣಾತ್ಮಕ ವಾಗಿ ಪ್ರತಿ ವಿಷ ಅಥವಾ ಅಂಟಿಬೋಡಿ ಉತ್ಪತ್ತಿ ಆಗುವುದು .ಅಗ್ನಿ ಅಸ್ತ್ರಕ್ಕೆ ವಿರುದ್ದ ವರುಣಾಸ್ತ್ರ ಇದ್ದಂತೆ .ಈ ಆತಿಥೇಯ ಅಥವಾ ಅತಿಥಿ ಯಾರೂ ಗೆಲ್ಲ ಬಹುದು ,ಸೋಲ ಬಹುದು .ಅದು ದೈವೇಚ್ಛೆ .ಪುನಃ ಪುನಃ ಸೋತು ಹೋದರೆ ಈ  ವೈರಸ್ ಗಳು  ಪರಾಭವ ಗೊಂಡ ರಾಕ್ಷಸ ಅಥವಾ ದೇವತೆಗಳಂತೆ  ಈಶ್ವರ ತಪಸ್ಸು ಮಾಡುವವು .ಸುಪ್ರೀತ ನಾದ ಈಶ್ವರನು  ಈಗಾಗಲೇ  ಮನುಷ್ಯರಲ್ಲಿ ಇರುವ  ಆಯುಧಗಳು ಗುರುತು ಹಿಡಿಯದಂತೆ  ಅವುಗಳ ಆಕರ ಸ್ವಲ್ಪ ಬದಲಾವಣೆ ಮಾಡುವನು .ಇದನ್ನು ಅಂಟಿಜೆನಿಕ್ ಡ್ರಿಫ್ಟ್ ಎನ್ನುವರು . ಅಲ್ಲದೇ ಇನ್ನೂ ಕೆಲ ಹೊಸ ಮಾರಕ ಆಯುಧ ಪ್ರಧಾನ ಮಾಡುವನು .ಇದರಿಂದ  ಶಕ್ತನಾದ  ಅಸುರನಂತೆ  ವೈರಸ್ ಸಮಯ ನೋಡಿ ಆಕ್ರಮಿಸುವುದು .

ಇದು  ಹೊಸ ರೂಪದ ವೈರಿ .ಇದನ್ನು  ನಮಗೆ ಮೊದಲೇ ಪರಿಚಯ ,ನಮ್ಮ ಕೈಯ್ಯಲ್ಲಿ ಸಿದ್ದ  ಔಷಧಿ ಇದೆ ಎಂದು ಹೇಳುವುದು ರಾಮಾಯಣ ಕಾಲದಲ್ಲಿಯೇ  ವಿಮಾನ ಇತ್ತು ಎಂದು ಹೇಳಿದಂತೆ ಆಗುವುದು . ಇದರ ಚಿಕಿತ್ಸೆ ಮತ್ತು  ತಡೆ ಗಟ್ಟುವಿಕೆ  ಬಗ್ಗೆ ವೈಜ್ನಾನಿಕ  ಮತ್ತು  ವೈಚಾರಿಕ ಸಮುದ್ರ ಮಥನ ನಡೆಯುತ್ತಿದೆ .ಅಮೃತ  ಔಷಧಿ ರೂಪದಲ್ಲಿ  ಅಥವಾ ಲಸಿಕೆ ರೂಪದಲ್ಲಿ ಬಂದೀತು .

 ಆಧುನಿಕ ವೈದ್ಯ ಶಾಸ್ತ್ರದಲ್ಲಿ  ಒಂದು ಔಷಧಿಯನ್ನು  ಪ್ರಯೋಗಿಸಲು  ಬಹಳ ಹಂತಗಳಿವೆ .ಈ ವಿಚಾರ ಬರೆದು ನಿಮ್ಮ ತಲೆ ತಿನ್ನುವುದಿಲ್ಲ .ಕೆಲವು ಮಂದಿಗೆ ಒಂದು ಔಷಧಿ ಕೊಟ್ಟು ಗುಣಮುಖರಾದರು ಎಂದರೆ ಕಾಕತಾಳಿಯವೂ ಇದ್ದೀತು. ಸಕ್ಕರೆ ಕಾಯಿಲೆ  ಮತ್ತು ಇನ್ನೂ ಕೆಲವು  ಸಾಂಕ್ರಾಮಿಕ ರೋಗಗಳಿಗೆ ತನ್ನ ಔಷಧಿ ರಾಮ ಬಾಣ ಎಂದು ಹಲವರು ಹೇಳಿಕೊಳ್ಳುವರು .ಅದನ್ನು ನಂಬುವುದು ಬಿಡುವುದು  ಅವರವರಿಗೆ ನಮ್ಮ ದೇಶದಲ್ಲಿ ಬಿಟ್ಟಿರುವರು .ಇಂತಹ ವೈರಸ್ ಕಾಯಿಲೆಗಳು   ಯಾವುದೇ ಉಪಚಾರ ಇಲ್ಲದೆ ಉಪಶಮನ ಹೊಂದುವುದು ಹೆಚ್ಚು .

ನಮ್ಮ ದೇಶದಲ್ಲಿ ಮರಣ ಸಂಖ್ಯೆ ಕಮ್ಮಿ ಇರುವುದಕ್ಕೆ  ನಮ್ಮ ಶರೀರ ರಚನೆ ,ಮತ್ತು ಸ್ವಲ್ಪ ಮಟ್ಟಿಗೆ ಆಗಾಗ ಕೆಮ್ಮು ಶೀತ  ವೈರಸ್ ಗಳ ವಿರುದ್ದ ನಮ್ಮ ಶರೀರದಲ್ಲಿ  ಈಗಾಗಲೇ  ಇರುವ ಪ್ರತಿ ವಿಷ ಕಾರಣ ಇರ ಬಹುದು .(ಇದನ್ನು ಕ್ರೋಸ್ ಇಮ್ಮುನಿಟಿ ಎನ್ನುವರು )ಇದಲ್ಲದೆ ಈ ವೈರಸ್ ಆಕ್ರಮಿಸಿದ ಹಲವರಿಗೆ  ರೋಗವೇ ಬಂದಿಲ್ಲ .ಅಂದರೆ ಕಾಳಗದಲ್ಲಿ ಅತಿಥೇಯರೆ  ಜಯಶಾಲಿ .ಮೊದಲೇ ಕೆಲವು ಕಾಯಿಲೆ ಇದ್ದು ಶಿಥಿಲ ವಾದ  ವೈರಿ ಎಂದರೆ  ವೈರಸಿನ ಕಾರ್ಯ ಸಲೀಸು .ರಥ ದ  ಗಾಲಿ ಮುರಿದ ಕರ್ಣನ ಎದುರಿಸಿದ ಅರ್ಜುನನಂತೆ .

ಮುಂಬೈ ನಗರದ ಧಾರವಿ  ಸ್ಲಮ್ ನಲ್ಲಿ  ಅಂತರ ಕಾಯುವುದು ,ಮಾಸ್ಕ್ ಉಪಯೋಗ ಇತ್ಯಾದಿ ಕಷ್ಟ .ಅಲ್ಲಿ  ಬಹಳ ಜನ  ರಲ್ಲಿ 

ವೈರಸ್ ಇದ್ದರೂ ರೋಗ ಬಂದಿಲ್ಲ ವಂತೆ .ವಿಜ್ನಾನಿಗಳು ವೈರಸ್  ಸೋಂಕು ಆಹ್ವಾನಿಸಿ ನೈಸರ್ಗಿಕ  ಪ್ರತಿವಿಷ  ಉತ್ಪಾದಿಸುವ ಇದು ಸರಿಯೇ ತಪ್ಪೇ ಎಂಬುದಾಗಿ  ಚರ್ಚಿಸುತ್ತಿದ್ದಾರೆ .

ಬುಧವಾರ, ಆಗಸ್ಟ್ 12, 2020

ಮಾಸ್ಕ್ ಪುರಾಣವು

 ಕೋರೋನಾ ಹಾವಳಿಯಿಂದ  ಈಗ ಮೊದಲು  ಆಸ್ಪತ್ರೆಯ ಒ ಟಿ ಗಳಲ್ಲಿ ಕಾಣ ಸಿಗುತ್ತಿದ್ದ  ಮಾಸ್ಕ್ ಈಗ ಎಲ್ಲೆಡೆ  ರಾರಾಜಿಸುತ್ತಿದೆ .ನೀವು ಯಾವುದೇ ಪತ್ರಿಕೆ ಅಥವಾ  ಟಿ ವಿ ,ಇಂಟರ್ನೆಟ್  ನೋಡಿದರೆ  ವಿವಿಧ ಬಣ್ಣಗಳ ,ಚಿತ್ತಾಕರ್ಷಕ ಮಾಸ್ಕ್ ಗಳ ಜಾಹೀರಾತು .

ಯಾವುದೇ  ಗಂಡಾಂತರಗಳನ್ನು  ಅವಕಾಶ ಗಳಾಗಿ  ಪರಿವರ್ತಿಸ ಬಹುದು ಎಂಬುದಕ್ಕೆ ಒಂದು ಉದಾಹರಣೆ .ಮಾಸ್ಕ್ ತಯಾರಿಕೆ ಒಂದು  ಬೇಡಿಕೆಯ ಉದ್ಯಮ ಆಗಿದೆ .ಚೀನಾ ದೇಶ ವಂತೂ  ಜಗತ್ತಿನ ಮೂಲೆ ಮೂಲೆ ಗಳಿಗೆ ತನ್ನ ಮುಖವಾಡ (ಮಾಸ್ಕ್) ರಫ್ತು ಮಾಡಿ (ಭಾರತಕ್ಕೂ ಸೇರಿ) ತನ್ನ  ಧನ ಬಲ ಹೆಚ್ಚಿಸಿ ಕೊಂಡಿದೆ .

ಮಾಸ್ಕ್ ಬಗ್ಗೆ ಹಲವು  ಜೋಕ್ ಗಳು ಹರಿದಾಡುತ್ತಿವೆ .ಗಂಡನಿಗೆ ಹೆಂಡತಿಯ ಗುರುತು ಸಿಕ್ಕದ್ದು ,ತಾಯಿ ಬೇರೆಯವರ ಮಕ್ಕಳನ್ನು ತನ್ನ ಮಗುವೆಂದು ಎಳೆದು ತಂದದ್ದು ಇತ್ಯಾದಿ .ಸಾಲ ಕೊಂಡು ವಾಪಸು ಕೊಡಲಾರದವರು  ದೊಡ್ಡ ಮಾಸ್ಕ್ ಧರಿಸಿ ಓಡುವರು .ಕಳ್ಳ ರಿಗೆ ಮಾಸ್ಕ್ ರಕ್ಷೆ ಆಗುವುದು .ದರೋಡೆ ಕೋರರು ಕರಿ ಮಾಸ್ಕ್ ಧರಿಸಿ ಬೆನ್ನಿನಲ್ಲಿ ತಮ್ಮ ಸಂಪಾದನೆಯೊಂದಿಗೆ ಓಡುವಚಿತ್ರ  ಚಂದಮಾಮ ಕಾಲದಿಂದಲೂ ಪರಿಚಿತ .

Bank Robber Mask Cartoon , Free Transparent Clipart - ClipartKeyಈಗಿನ ಕೋರೋನಾಯುಗದಲ್ಲಿ  ಒಬ್ಬೊಬ್ಬರಿಗೆ ಒಂದೊಂದು ಮಾಸ್ಕ್ .ಕೋರೋನಾ ರೋಗಿಗಳ ಸೇವೆ ಮಾಡುವವರಿಗೆ , ಇತರ ವೈದ್ಯಕೀಯ ಸಿಬ್ಬಂದಿಗೆ ,ಜನ ಸಾಮಾನ್ಯರಿಗೆ ಎಲ್ಲರಿಗೂ ಒಂದೇ ತರಹದ ಮಾಸ್ಕ್ ಸಾಲದು .ದುರದೃಷ್ಟ ವಶಾತ್  ಬಹಳ ಮಂದಿ  ಮಾಸ್ಕ್ ಎಂದರೆ  ಕರೋನ ಬೆದರಿಸಲು ಇರುವ  ಬೆದರು ಬೊಂಬೆ ಎಂದು ತಿಳಿದಿದ್ದಾರೆ .ಅದು ಮೂಗುಬಾಯಿ ಮುಚ್ಚ್ಚಿರದೆ  ದವಡೆಯ ಕೆಳಗೆ ನೇತಾಡುತ್ತಿರುತ್ತದೆ . ವೈರಸ್ ಮಾಸ್ಕ್ ಕಂಡು ಓಡಿ ಪೋಪುದೇ?ಅಲ್ಲ  ಮೂಗು ಬಾಯಿಗೆ ಮಾಸ್ಕ್  ಸೆಕ್ಯೂರಿಟೀ ಜನವೇ ?ವೈರಸ್ ಬಲ್ಲುದೈಯ್ಯ  ಶ್ವಾಶೋಶ್ಚ್ವಾಸದ ಮಾರ್ಗ ,ದೂರದ ಮಾಸ್ಕ್ ಗೆ ಅದು ಬೆದರದಯ್ಯ .

ಇನ್ನೂ ವೈದ್ಯ ಶಾಸ್ತ್ರದಲ್ಲಿ  ಇನ್ನೊಂದು ಶಬ್ದ ಇದೆ ,ಅದನ್ನು  ಮಾಸ್ಕೆಡ್(masked) ಫೇಸ್ ಎನ್ನುವರು , ಇದು ಪಾರ್ಕಿಂಸನ್  ಕಾಯಿಲೆಯ ಮುಖ್ಯ ಲಕ್ಷಣ . ಇವರ  ಮೊಗದಲ್ಲಿ  ಭಾವನೆಗಳಿಗೆ ಅನುಗುಣವಾದ  ಬದಲಾವಣೆಗಳು  ಇರದೆ ಒಂದೇ ತರಹ ಇರುವುದು .ಕಾರಣ ಮಾಂಸ ಖಂಡಗಳ ಸಂಕುಚನ ವಿಕಸನ  ಈ ರೋಗದಲ್ಲಿ ನಿಧಾನ .

ಅಂತೂ ಏನೂ ಅಪರಾಧ ಮಾಡದೆಯೆ ಮುಖ ಮುಚ್ಚಿ ನಡೆಯುವಂತೆ ಆಯಿತು ಮಾತ್ರವಲ್ಲ ಮುಖ ಮುಚ್ಚದೆ ನಡೆಯುವುದೇ ಅಪರಾಧ  ಎನಿಸಿತು


ಮಂಗಳವಾರ, ಆಗಸ್ಟ್ 11, 2020

ವಿಜ್ನಾನದಲ್ಲಿ ಕಳೆದು ಹೋಗುತ್ತಿದೆಯೇ ಸಮಾಜ (ಮತ್ತು ಜೀವನ)

 ಆಸ್ಪತ್ರೆಯ  ಸ್ಕ್ಯಾನ್ ರೂಮಿನ  ಹೊರಗಡೆ  ಗರ್ಬಿಣಿ  ,ಹೆಣ್ಣು ಮಕ್ಕಳು ಉದ್ವೇಗದಿಂದ ಪೊರ್ಮ್ ತುಂಬಿಸುತ್ತಾ  ಕುಳಿತಿರುವ ದೃಶ್ಯ 

.ಒಂದು ಕೈಯಲ್ಲಿ ಆಧಾರ್ ಕಾರ್ಡ್ ,ಮತ್ತೊಂದರಲ್ಲಿ  ಪಿ ಎನ್ ಡಿ ಟಿ  ಫೋರ್ಮ್. ವಿಮಾನ ನಿಲ್ದಾಣದಲ್ಲಿ  ಎಮಿಗ್ರೇಷನ್ ಫೋರ್ಮ್

ಬ್ಯಾಂಕ್ ನಲ್ಲಿ ಚಲನ್ ,ಶಾಲೆ ಕೋಲೇಜ್ ಅಡ್ಮಿಷನ್ ಅರ್ಜಿ ಬರೆವ ರೀತಿ . ಅವರ ಮೊಗದಲ್ಲಿ ಉದ್ವೇಗ ,ಕಾತುರ .

      ಹಿಂದೆ ಮನೆಯಲ್ಲಿ ಹೆಣ್ಣು ಮಗಳು ಗರ್ಭಿಣಿ  ಆದಾಗ ಎಲ್ಲರಿಗೂ ಸಂತಸ .ಮನೆಯಲ್ಲಿ ಅಜ್ಜಿ ಅಮ್ಮ  ಚಿಕ್ಕಮ್ಮ ದೊಡ್ಡಮ್ಮ ಎಲ್ಲರ ಪ್ರೀತಿಯ ಆರೈಕೆ . ಇವರೆಲ್ಲ  ಹತ್ತು ಹೆತ್ತವರು . ಗರ್ಬಿಣಿ ಯಾಗಿ  ಹೆರುವ ವರೆಗಿನ  ಎಲ್ಲಾ ಹಂತಗಳ ಶಾರೀರಿಕ ಬದಲಾವಣೆ ಮಗುವಿನ ಚಲನ ಇತ್ಯಾದಿಗಳ ಬಗ್ಗೆ ಸ್ವಯಂ ಅನುಭವ ಇರುವವರು . ಹಲ ಮಕ್ಕಳನ್ನು ಹೊತ್ತು ಹೆತ್ತು ಸಾಕಿದ ಪ್ರಯೋಗಿಕ ಅನುಭವ ಈಗಿನ ಪ್ರಸೂತಿ ವೈದ್ಯರಿಗೂ ಇರಲಾರದು .ಗರ್ಭಿಣಿಯರ ಸಣ್ಣ ಪುಟ್ಟ ತೊಂದರೆಗಳಿಗೆ ಮನೆಯಲ್ಲಿಯೇ ಪರಿಹಾರ ಸಿಗುವುದು .

          ಈಗ ಹಾಗಲ್ಲ .ಗರ್ಭವತಿ ಆದ ಒಡನೆ  ವೈದ್ಯರ ಅಪಾಯಿಂಟ್ ಮೆಂಟ್ , ಅವರನ್ನು ನೋಡಿದ ಮೇಲೆ  ಸ್ಕ್ಯಾನ್ ,ಆಧಾರ್ ಕಾರ್ಡ್  ಮತ್ತೆ ಅಲ್ಲಿ ಕ್ಯೂ .ಏಲ್ಲಾ ಆಗಿ  ಡೆಲಿವೇರಿ ಸಮಯ ಆಸ್ಪತ್ರೆ ರೂಂ ಹುಡುಕುವುದು ,ನಂತರ ಮಕ್ಕಳ ಡಾಕ್ಟರು ,ರೋಗ ಪ್ರತಿಭಂದಕ ಚುಚ್ಚು ಮದ್ದು ,ಅದರ ತಾರೀಕುಗಳು ,ಕ್ಯೂ ಇತ್ಯಾದಿ .

 ವಿಜ್ನಾನ ಬೆಳೆದಿದೆ .ಅದು ಜೀವನ ಹಗುರ ಆಗಲು ಪೂರಕ ಆಗಬೇಕು .ಹಿಂದೆ ಗರ್ಭಿಣಿಣಿಯರಿಗೆ ಊರ ದಾಯಿಯೇ ವೈದ್ಯೆ.ಆಮೇಲೆ  ಬಂದ ವೈದ್ಯರಿಗೆ ತಮ್ಮ ಕೈಯ್ಯೆ ಸ್ಕ್ಯಾನ್ ಯಂತ್ರ . ಅವರ  ಅಭಯ ಹಸ್ತ ದ  ಸ್ಪರ್ಶ ಧೈರ್ಯ ಕೊಡುವುದು .ಸ್ಕ್ಯಾನ್ ಬಂದ ಮೇಲೆ ಈ ತರಹದ ಕೂಲಂಕುಷ ಪರೀಕ್ಷೆ ಕಡಿಮೆ ಆಗಿರ ಬಹುದು .ಸ್ಕ್ಯಾನ್ ನ ಮೇಲೆ ಹೆಚ್ಚು ಅವಲಂಬನೆ .ಸ್ಕ್ಯಾನ್  ಡಾಕ್ಟರಿರಿಗೂ  ಮಗುವಿನ ಲಿಂಗ ಪರೀಕ್ಷೆ ಮಾಡದೆ ಇರಲು (ಇದು ಒಳ್ಳೆಯದೇ) ಕೆಲವು ಫೋರ್ಮ್ ಗಳು ,ದಫ್ತರುಗಳು .

                     ಮಗುವಿನ ಆರೈಕೆಯೂ ಸಂತೋಷದಯಕ ಏನಿಲ್ಲ ,ಸಣ್ಣ ಸಣ್ಣ ಶೀತ ಕೆಮ್ಮು ಬಂದರೂ ಭಯ .ಧೈರ್ಯ ಹೇಳುವ ಹಿರಿಯರಿಲ್ಲ .ಮಕ್ಕಳ ಡಾಕ್ಟರ ಕ್ಲಿನಿಕ್ ಎದುರು ಭಾರೀ ಕ್ಯೂ .

ಮಗುವಿಗೆ ಆಧಾರ್ ಕಾರ್ಡ್ .ಮಗುವಿಗೆ ನರ್ಸರಿಯಲ್ಲಿ ಸೀಟ್ ಕಾದಿರಿಸುವುದು .ಒಳ್ಳೆಯ ಇಂಗ್ಲಿಷ್ ಮೀಡಿಯಂ ಶಾಲೆ ಯ  ಹುಡುಕಾಟ .

ಹಿಂದೆ ನಮ್ಮನ್ನು ಹೆತ್ತವರಿಗೆ ಕಾಡದ ಹಲವು ಚಿಂತೆಗಳು ,ಅವರು ಆನಂದಿಸಿದ ಮೈಲುಗಲ್ಲುಗಳು ಈಗ  ಉದ್ವೇಗ ಜನಕಗಳು .

ನಮ್ಮ ಬಾಲ್ಯ ನಾವು ಪ್ರಕೃತಿಯಲ್ಲಿ ಆನಂದಿಸಿದೆವು ,ಹೆತ್ತವರಿಗೆ ಅದರ ಗೊಡವೆ ಇರಲಿಲ್ಲ ,ಈಗ ಹೆತ್ತವರೂ ಮಕ್ಕಳೂ ಜೀವಿಸುವ ಜೀವನ ರೂಪಿಸುವ  ಚಿಂತೆಯಲ್ಲಿಯೇ ಕಳೆಯುತ್ತಿದ್ದಂತೆ ಭಾಸ ವಾಗುತ್ತದೆ . ಜೀವಿಸುವ ಭರಾಟೆಯಲ್ಲಿ  ಕಳೆದು ಕೊಂಡೆವೆ ಜೀವನ ? ಮುಂದುವರಿದ ವಿಜ್ನಾನದಲ್ಲಿ  ಕಳೆದು ಹೋಯಿತೆ ಸಮಾಜ?















ಸೋಮವಾರ, ಆಗಸ್ಟ್ 10, 2020

ಸರಕಾರಿ ಮತ್ತು ಖಾಸಗಿ ಆಸ್ಪತ್ರೆ ಯಾವುದು ಉತ್ತಮ ?

ರಾಜಕಾರಣಿಗಳು ಮತ್ತು  ಉಳ್ಳವರು ತಮಗೆ ರೋಗ ಬಂದಾಗ ಖಾಸಗಿ ಆಸ್ಪತ್ರೆಗಳಿಗೆ  ಹೋಗುವುದರ ಬಗ್ಗೆ  ಆಗಾಗ್ಗೆ ಚರ್ಚೆ 

ಆಗುವುದು .ಇದರಲ್ಲಿ ಒಂದು  ನಂಬಿಕೆ  ಖಾಸಗಿ ಆಸ್ಪತ್ರೆ  ಚಿಕಿತ್ಸೆಯ ಗುಣಮಟ್ಟ ಮೇಲು ಎಂಬುದು .ಇದು ವಾಸ್ತವವೇ?

ಇನ್ನೊಂದು ವಿಚಾರ  ಮೆಡಿಕಲ್ ಕಾಲೇಜ್ ಆಸ್ಪತ್ರೆಗಳ ಬಗ್ಗೆ ,ಇವುಗಳಲ್ಲಿ ಖಾಸಗಿ ಮತ್ತು ಸರಕಾರಿ ಎರಡೂ ಇವೆ

  ಸಾಧಾರಣ ಸರಕಾರೀ ಆಸ್ಪತ್ರೆ  ವಿಚಾರ  ಗಮನಿಸಿದರೆ  ಇಲ್ಲಿ  ಒಳ್ಳೆಯ ಅನುಭವಿ  ದಾದಿಯರು ಇರುತ್ತಾರೆ .ಸರಕಾರಿ ಕೆಲಸದ 

ಭದ್ರತೆ ಮತ್ತು ಒಳ್ಳೆಯ ಸಂಬಳ ,ನಿವೃತ್ತಿ ವೇತನ ಇತ್ಯಾದಿ ಇರುವುದರಿಂದ  ಅವರು ಬೇರೆ ಖಾಸಗಿ ಆಸ್ಪತ್ರೆ ಗೋ  ವಿದೇಶಕ್ಕೋ 

ಹೋಗುವುದು ಕಡಿಮೆ .ಅನುಭವಿ ದಾದಿಯರು ಆಸ್ಪತ್ರೆಯ  ಜೀವನಾಡಿ .ವೈದ್ಯರು   ಪರೀಕ್ಷಿಸಿ ಚಿಕಿತ್ಸೆ ಬರೆದು ಹೋದಮೇಲೆ 

ಅದನ್ನು  ರೋಗಿಗೆ ನೀಡಿ ,ರೋಗಿಯ ಕ್ಷಣ ಕ್ಷಣದ  ಬದಲಾವಣೆ  ಅವರ ಕಂಗಾವಲಿನಲ್ಲಿ .ರೋಗ ಮತ್ತು ರೋಗಿಗಳನ್ನು ನೋಡಿ 

ನೋಡಿ ಅವರಲ್ಲಿ ಅನುಭವದ ಒಂದು ಒಳಗಣ್ಣು  ಇರುತ್ತದೆ .ಇದು ಬಹಳ ಮುಖ್ಯ .ಇಂತಹ  ದಾದಿಯರು ವೈದ್ಯರು  ಕಣ್ತಪ್ಪಿನಿಂದ 

ಬಿಟ್ಟು ಹೋದ ಅಂಶಗಳನ್ನು ಅವರ ಗಮನಕ್ಕೆ ತರುವರು ,ಮತ್ತು  ರೋಗ ನಿರ್ಧಾರದ ಸಮಯದಲ್ಲಿ ಬೇರೆ ಸಾಧ್ಯತೆಗಳ ಬಗ್ಗೆ  ವೈದ್ಯರಿಗೆ  ಸೂಚನೆ ನಿಡುವರು. ಇಂದು ಬಹುತೇಕ  ಖಾಸಗಿ ಆಸ್ಪತ್ರೆಯಲ್ಲಿ  ಕಾಣ ಸಿಗದು .

   ವೈದ್ಯರಿಗೆ  ಸಂಬಂದಿಸಿ ಹೇಳುವುದಾದರೆ  ಸರಕಾರಿ ಆಸ್ಪತ್ರೆಯಲ್ಲಿ  ಕೆಲಸದ  ಬಾಹುಳ್ಯ ಹೆಚ್ಚು  ಇದ್ದರೂ  ಅವರಿಗೆ ಸರಕಾರದ  ರಕ್ಷೆ ಇರುತ್ತದೆ . ಇತ್ತೀಚಿನ ದಿನಗಳಲ್ಲಿ  ವೈದ್ಯರು  ಸೇವ ನ್ಯೂನತೆ ವ್ಯಾಜ್ಯಗಳನ್ನು  ತಪ್ಪಿಸಲು ರಕ್ಷಣಾತ್ಮಕ  ವಾಗಿರುತ್ತಾರೆ .ಅಂದರೆ  ಜನಸಾಮಾನ್ಯರಿಗೆ  ಅನಾವಶ್ಯಕ ಮತ್ತು  ಧನಾರ್ಜನೆ  ಉದ್ದೇಶದಿಂದ  ಎಂದು ಕಾಣುವ ಪರೀಕ್ಷೆಗಳನ್ನು  ಮಾಡಿಸಬೇಕಾದ  ಪರಿಸ್ಥಿತಿ  ಇದೆ. ಇದು ಸರಕಾರಿ  ಆಸ್ಪತ್ರೆಗಳಲ್ಲಿ  ಅಷ್ಟಾಗಿ ಇರಲಾರದು .

          ಇನ್ನು ಸರಕಾರಿ ವೈದ್ಯಕೀಯ  ಕಾಲೇಜ್  ಆಸ್ಪತ್ರೆ  ಗಮನಿಸಿದರೆ ಇಲ್ಲಿ ಹಿರಿಯ ವೈದ್ಯರೊಡನೆ ,ಪ್ರತಿಭಾವಂತ  ಹೌಸ್ ಸುರ್ಜನ್  , ಮತ್ತು ಸ್ನಾತಕೋತ್ತರ  ವಿದ್ಯಾರ್ಥಿ ಗಳ ಸೇವೆಯೂ  ಇರುತ್ತದೆ. ಕೆಲವರು ವೈದ್ಯಕೀಯ  ಕಾಲೇಜ್ ಆಸ್ಪತ್ರೆಗೆ  ಹೋಗಲು ಹಿಂದೇಟು ಹಾಕುವರು .ಅಲ್ಲಿ  ಕಲಿಯುವ  ವಿದ್ಯಾರ್ಥಿಗಳು  ,ಅರೆಬೆಂದ ವೈದ್ಯರು  ಅವರ ಪರೀಕ್ಷಾ ಪ್ರಾಣಿಗಳು ರೋಗಿಗಳು  ಎಂಬ ಪ್ರಚಾರ ಇದೆ. ಆದರೆ ಇದು ಸರಿಯಲ್ಲ .ಒಂದನೆದಾಗಿ  ರೋಗಿಗಳ ಆರೈಕೆಗೆ  ವೈದ್ಯರ ತಂಡ ವೇ ಇರುತ್ತದೆ .ಒಬ್ಬ ಸಿಗದಿದ್ದರೆ ಇನ್ನೊಬ್ಬ ಇರುವನು .ಒಬ್ಬನಿಗೆ  ಯಾವುದಾದರೂ ರೋಗವಿಚಾರ   ಗಣನೆಗೆ ಬಾರದಿದ್ದಲ್ಲಿ ಇನ್ನೊಬ್ಬ ಕಾಣುವನು .ಮತ್ತು  ಬಹುತೇಕ ಕಲಿಯುವ  ವೈದ್ಯರಿಗೆ  ಕಾರ್ಯೋತ್ಸಾಹ  ಇರುತ್ತದೆ .ಇದು ಸಾಧಾರಣ  ಖಾಸಗಿ  ಆಸ್ಪತ್ರೆ ಗಳಲ್ಲಿ ಸಿಗದು .

ಖಾಸಗಿ  ಆಸ್ಪತ್ರೆಗಲು ನೋಡಲು ನಿರ್ಮಲ ಆಗಿರುತ್ತವೆ .ಸೀಬ್ಬಂದಿ  ಆಕರ್ಷಕ  ಸಮವಸ್ತ್ರದಲ್ಲಿ  ಇರುತ್ತಾರೆ .ಹೊಸ ಹೊಸ ಪರೀಕ್ಷಾ ವಿಧಾನಗಳು  ಇರುತ್ತವೆ .ಅವುಗಳನ್ನು ಶಾಲಾ ಸೋಲ ಮಾಡಿ ಕಟ್ಟಿರುತ್ತಾರೆ .ಅವರು ಸರಕಾರದ ಹಲವು ನಿಭಂದನೆಗಳಿಗೆ  ಒಳಪಟ್ಟಿರುತ್ತಾರೆ .ಹಲವು ಬಗೆ ತೆರಿಗೆ ಪಾವತಿಸ ಬೇಕಾಗುವುದು .ಇದನ್ನೆಲ್ಲ  ಪರಿಗಣಿಸಿಯೇ  ಚಿಕಿತ್ಸಾ ವೆಚ್ಚ ವೆಚಹೆಚ್ಚು ಇದ್ದಂತೆ ಕಾಣುವುದು .ಸೇವಾ ನ್ಯೂನತೆ ಬಗ್ಗೆ ವ್ಯಾಜ್ಯಗಳು ಹೆಚ್ಚು ಆಗುತ್ತಿರುವ ಸಂದರ್ಭದಲ್ಲಿ  ಮಾಡುವ  ಟೆಸ್ಟ್ ಗಳೂ ಹೆಚ್ಚು ಆಗುತ್ತವೆ .

ವೈದ್ಯಕೀಯ ಕ್ಷೇತ್ರದಲ್ಲಿ  ಸೇವಾ ಮನೋಭಾವ ,ರೋಗಿಗಳ ಕಾಳಜಿ  ಇವುಗಳನ್ನು  ಒಳ ಹೊಕ್ಕ ಮೇಲೆ ರೂಡಿಸಿ ಕೊಳ್ಳಬೇಕಷ್ಟೆ .ವೈದ್ಯಕೀಯ ಸ್ನಾತಕ  ಮತ್ತು ಸ್ನಾತಕೋತ್ತರ  ತರಗತಿಗಳಿಗೆ  ಪ್ರವೇಶ ಕೊಡುವಾಗ ಸಿ ಈ ಟಿ ಯ ಅಂಕದ ಮೇಲೆ ನಿರ್ಧಾರ ಆಗುವುದು .ಮಾನವೀಯ ಅನುಕಂಪ ,ಸೇವಾ ತಾತ್ಪರ್ಯ  ಗಣನೆಗೆ ಬಾರದು .ಒಬ್ಬ ಸ್ನಾತಕ  ವೈದ್ಯಕೀಯ ವಿದ್ಯಾರ್ಥಿ  ಯಲ್ಲಿ  ಈ ಗುಣಗಳು  ಯೆಥೇಶ್ಚ ಇದ್ದರೂ ಆತನಿಗೆ  ಸ್ನಾತಕೋತ್ತರ  ಸೀಟ್ ಕೊಡಿಸುವ  ಹಕ್ಕು  ಮೆಡಿಕಲ್ ಕಾಲೇಜ್ ಅಧ್ಯಾಪಕರಿಗೆ ಇಲ್ಲ .ಒಂದೋ ಅವನಲ್ಲಿ  ಹಣ ಇರಬೇಕು  ಅಥವಾ  ಸಿ ಈ ಟಿ  ರಾಂಕ್  ಪಡೆಯುವ  ತಾಕತ್ತು .  ಸರಕಾರಿ  ವೈದ್ಯಕೀಯ ಸೇವೆಗಳಿಗೆ 

ವೈದ್ಯರ ಸೇರ್ಪಡೆ   ಪ್ರತಿಭೆ ಮತ್ತು ಸೇವಾ ಮನೋಭಾವದ ಮೇಲೆ ಆಗುವುದು ಎಂದು ಈಗಿನ ಪರಿಸ್ತಿತಿ ಯಲ್ಲಿ  ಹೇಳಲಾಗದು .

 

          

ಶನಿವಾರ, ಆಗಸ್ಟ್ 8, 2020

ಕಾಮೂವಿನ ಪ್ಲೇಗೂ ಇಂದಿನ ಕೋವಿಡ್ಡೂ

ನೋಬೆಲ್ ಪ್ರಶಸ್ತಿ ವಿಜೇತ  ಬರಹಗಾರ ಆಲ್ಬರ್ಟ್ ಕಾಮೂ ಅವರ ಕಾದಂಬರಿ ಪ್ರಕಟವಾದ ವರ್ಷ 1947 .ಈ ಸಂಕೀರ್ಣ 

ಕಾದಂಬರಿಯು  ಪ್ರಸ್ತುತ ಕೋರೋನ ಕೋಲಾಹಲ ಕಾಲದಲ್ಲಿ  ಪ್ರಸ್ತುತ ವಾಗಿ ಕಾಣುತ್ತದೆ .ಸಾರ್ವಕಾಲಿಕವಾಗಿ ಸಲ್ಲುವ 

 ಕೃತಿಗಳೆಂದರೆ ಹೀಗೆ .ಈ ಕೃತಿ ಯ ಕೆಲವು ಪ್ಯಾರಾ ಗಳ ಕನ್ನಡ ಅನುವಾದ ನನಗೆ ತಿಳಿದಂತೆ ಮಾಡಿದ್ದೇನೆ .ಈ ಸಾಲುಗಳು 

ಹೆಕ್ಕಿ ತೆಗೆದವು , ಕ್ರಮಾಂಕದಲ್ಲಿ ಒಂದರ ನಂತರ ಒಂದು ಅಲ್ಲ .

 

 


 

ಬಹಳ  ಮಂದಿ  ಈ ಸಾಂಕ್ರಾಮಿಕ ಬಹು ಬೇಗ ಅಂತ್ಯ ಕಾಣುವುದು ಮತ್ತು ತಮ್ಮ  ಕುಟುಂಬವನ್ನು

ತಗಲದು ಎಂಬ ಆಶಾಭಾವನೆಯಲ್ಲಿ  ಇದ್ದರು. ಅದರಿಂದ ತಮ್ಮ ಆಚರಣೆಗಳಲ್ಲಿ ಯಾವುದೇ

ಮಾರ್ಪಾಟು ಮಾಡುವ ಅವಶ್ಯಕತೆ ಕಂಡಂತೆ ಇಲ್ಲ .ಪ್ಲೇಗ್ ಕಾಯಿಲೆ ತಾನಾಗಿ ಬಂದು ಹೋಗುವ     

ಅನಪೇಕ್ಷಿತ  ಅತಿಥಿ  ಯಂತೆ  ಕಂಡಿತು .ದಿಗಿಲು ಇತ್ತು ;ಆದರೆ ತಮ್ಮ ಅಸ್ತಿತ್ವ ಕ್ಕೆ ಅಪಾಯದ  ಬಂದೀತೆಂಬ ಯೋಚನೆ ಇನ್ನೂ  ಬಂದಂತಿಲ್ಲ .ಇದುವರೆಗೆ ತಾವು ಜೀವಿಸುತ್ತಿದ್ದ  ಜೀವನ  ಮರೆತು  ಹೋಗುವ ಸ್ಥಿತಿ ಇನ್ನೂ ಬಂದಂತಿಲ್ಲ . ಎಲ್ಲರೂ ಪರಿಸ್ಥಿತಿ ಯಾವ ತಿರುವನ್ನು ಪಡೆಯುವುದು 

ಎಂದು ಕಾತುರರಾಗಿದ್ದರು . ಇನ್ನು ಈ ಕಾಯಿಲೆ ಕೆಲವರಲ್ಲಿ ಅತೀವ ಧಾರ್ಮಿಕ ನಂಬಿಕೆ  ಉಂಟು ಮಾಡಿದರೆ ಇನ್ನು ಹಲವರಲ್ಲಿ  ತಾತ್ಸಾರ .ಇದಕ್ಕೆ ಒಳ್ಳೆಯ ಶಬ್ದ  ವಸ್ತು ನಿಷ್ಠತೆ. ಡಾ ರಿಯೂ(ಒಂದು ಪಾತ್ರ )ಕೇಳಿದಂತೆ  ಸಪ್ತಾಹಿಕ ಪ್ರಾರ್ಥನೆಗೆ  ಹೋಗುವವರು  ಅದರಿಂದ ಏನೂ ಹಾನಿ ಇಲ್ಲವಲ್ಲ ಎಂಬ ಯೋಚನಾ ಲಹರಿಯವರು . ತಾರೋ (ಒಂದು ಪಾತ್ರ ) ತನ್ನ  ಪುಸ್ತಕದಲ್ಲಿ ಬರೆದು ಕೊಂಡಿದ್ದಂತೆ

ಚೀನಿಯರು  ಪ್ಲೇಗು ಪ್ರತಿಭೆಯ ಮುಂದೆ ತಮಟೆ ಬಾರಿಸುತ್ತಿದ್ದರಂತೆ ;ಆದರೆ ತಮಟೆ ಸೇವೆಯು ರೋಗ ಪ್ರತಿಭಂದಕ  ಕ್ರಮಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಲು ಅದಾರಗಳಿಲ್ಲ.ಅದಕ್ಕೂ ಮುನ್ನ ಪ್ಲೇಗ್ ಪ್ರತಿಭೆ ಅಥವಾ ಪ್ಲೇಗ್ ದೇವತೆ ಯ  ಅಸ್ತಿತ್ವವೇ ಪ್ರಶ್ನಾರ್ಹ;ನಮಗೆ ಈ ವಿಚಾರದಲ್ಲಿ ಇರುವ ಮೌಢ್ಯವೇ ಇದರ ಬಗೆಗಿನ ಯಾವುದೇ ಅಭಿಪ್ರಾಯವನ್ನು  ಇಲ್ಲದಾಗಿಸುತ್ತದೆ .

 

ಹಲವು ಶತಮಾನಗಳ ಹಿಂದೆ ಅಬ್ಯ್ಸ್ಸೇನಿಯ ದ  ಕ್ರಿಶ್ಚಿಯನರು  ಪ್ಲೇಗ್ ಸುಲಭ ಮೋಕ್ಷಕ್ಕೆ ದೇವರು

ಕೊಟ್ಟ ದಾರಿ ಎಂದು ನಂಬಿದ್ದರು .ಇದುವರೆಗೆ ರೋಗ ಭಾದಿಸದಿದ್ದವರು  ಮರಣ ಹೊಂದಿದ ಪ್ಲೇಗ್ ರೋಗಿಗಳ ಬಟ್ಟೆಯನ್ನು ಸುತ್ತಿ ರೋಗ ಆಹ್ವಾನಿಸುತ್ತಿದ್ದರಂತೆ .ಆದರೆ ಮೋಕ್ಷ ಸಾಕ್ಷಾತ್ಕಾತರಕ್ಕೆ ಇಂತಹ ದಾರಿ ನಾನು ಅನುಮೋದಿಸಲಾರೆ .

 

ಬ್ಯಾಂಕಿಂಗ್ ,ರಫ್ತು ವ್ಯವಹಾರ ,ಹಣ್ಣು ಮತ್ತು ವೈನ್ ವ್ಯಾಪಾರ ,ಇನ್ಸೂರೆನ್ಸ್ ,ಕಾಂಟ್ರ್ಯಾಕ್ಟ್ ವ್ಯವಹಾರ   ಅವರು  ಮೇಧಾವಿಗಳು  ಮತ್ತು ಸದುದ್ದೇಶ ಹೊಂದಿದವರು ಆದರೂ ಪ್ಲೇಗ್ ವಿಚಾರದಲ್ಲಿ  ಅವರ  ಕ್ಷಮತೆ ಸೊನ್ನೆ.

 

ಪ್ಲೇಗ್ ಉಪಟಳ ಮುಂದುವರಿದಂತೆ ರೇಡಿಯೊ ದಲ್ಲಿ ವಾರದ ಅಂಕಿ ಅಂಶಗಳ ಬದಲಿಗೆ ಪ್ರತಿ ನಿತ್ಯ ತೊಂಬತ್ತೆರಡು ,ನೂರ ಏಳು ಮತ್ತು ನೂರ ಮೂವತ್ತು ಸಾವುಗಳು ಪ್ರಸಾರ ಮಾಡಲ್ಪಟ್ಟವು .ವೃತ್ತಪತ್ರಿಕೆಗಳು ಮತ್ತು ಅಧಿಕಾರಿಗಳು ಪ್ಲೇಗ್ ನೊಡನೆ ಚೆಂಡಾಟ ಆಡುತ್ತಿವೆ .ನೂರ ಮೂವತ್ತು ಒಂಬಯ್ನೂರ ಹತ್ತಕ್ಕಿಂತ ಕಡಿಮೆ ಎಂದು ಬೀಗುತ್ತಿವೆ “ ಇನ್ನೂ ಕೆಲವು ಗಮನಾರ್ಹ ಸಂಗತಿಗಳು ಕಂಡು ಬಂದವು .ಒಂದು ಒಂಟಿ ಓಣಿಯಲ್ಲಿ ಓರ್ವ ಮಹಿಳೆ ಕಿಟಕಿ ಬಾಗಿಲು ತೆರೆದು ಎರಡು ಆರ್ಭಟ

ಕೊಟ್ಟು ಕಿಟಿಕಿ ಹಾಕಿದಳು . ಔಷಧಿ ಅಂಗಡಿಗಳಿಂದ   ಚೀಪುವ  ಪೆಪ್ಪೆರ್ಮಿಂಟ್  ಗುಳಿಗೆಗಳು ಮಾಯವಾದವು . ಅದರಿಂದ ರೋಗ  ಭಾದಿಸದು ಎಂಬ ನಂಬಿಕೆ .

 

 

 ಒಂದೆಡೆ ಕಾಗದದ ಅಭಾವದಿಂದ ದೈನಿಕಗಳು ತಮ್ಮ  ಪುಟಗಳ ಸಂಖ್ಯೆ ಕಡಿಮೆ ಮಾಡಿದರೆ  ಇನ್ನೊಂದೆಡೆ  ಪ್ಲೇಗ್ ಕ್ರಾನಿಕಲ್  ಎಂಬ ಹೊಸ ಪತ್ರಿಕೆಯ ಉದಯವಾಯಿತು .ಅದು ನಗರದ ಜನತೆಗೆ ನಿಖರವಾಗಿ ಸೋಂಕಿನ  ಏರು  ಶಮನ  ಹಾಗೂ ಭವಿಷ್ಯದ ಬಗ್ಗೆ ಮಾಹಿತಿ ನೀಡುವ ಮತ್ತು ಹೋರಾಟದಲ್ಲಿ ಭಾಗಿಯಾಗುವ ಎಲ್ಲಾ ಸ್ತರದ ಜನತೆಗೆ ತನ್ನ ಕಾಲಮ್ಮುಗಳನ್ನು ತೆರೆದಿಡುವ  ಆಶ್ವಾಸನೆ ಯೊಂದಿಗೆ  ಹಾಗೂ ಜನರ ಆತ್ಮ ಸ್ಥೈರ್ಯ ಎತ್ತಿ ಹಿಡಿಯುವ ಮತ್ತು ಇತ್ತೀಚೆಗಿನ ಸರಕಾರೀ ಆದೇಶಗಳನ್ನು ಪ್ರಕಟಿಸುವುದಲ್ಲದೆ  ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯ ಒಗ್ಗೂಡಿಸುದು  ತನ್ನ ಧ್ಯೇಯ ಎಂದಿತು. ಆದರೆ ಯಥಾರ್ಥದಲ್ಲಿ ಅದು ಪ್ಲೇಗ್ ರೋಗಕ್ಕೆ ‘’ದೋಷರಹಿತ “ವೆಂದು ಹೇಳಿಕೊಳ್ಳುವ ಔಷಧಿಗಳ  ಜಾಹಿರಾತುಗಳ  ತಾಣ ಆಯಿತು.

ಸರ್ವಶಕ್ತನಾದ ದೇವನನ್ನು  ನಂಬಿದ್ದರೆ  ತಾನು (ವೈದ್ಯ ) ರೋಗಿಗಳ ಚಿಕಿತ್ಸೆ ಯನ್ನು ಬಿಟ್ಟು ಅವನ ಮೇಲೆ ಭಾರ ಹಾಕುತ್ತಿದ್ದೆ .ಜಗದ ಜನರು ಯಾರೂ ಅಂತಹ ದೇವನ ಮೇಲೆ ನಂಬಿಕೆ ಇದ್ದವರಲ್ಲ . ದೇವರನ್ನು ನಂಬುತ್ತಿದ್ದ ಪಾನೆಲ್ಯೂ(ಪಾದರಿ) ಸೇರಿ. ದೈವ  ಸಾಮ್ರಾಜ್ಯದ ಮುಂದೆ ಎಲ್ಲರೂ ಸಂಪೂರ್ಣ ಶರಣಾಗತರಲ್ಲ ಎಂಬ ಅಂಶ ಸಾಬೀತಾಯಿತು .

 

ಜಗತ್ತಿನ ವ್ಯವಸ್ಥೆ ಸಾವಿನಿಂದ ನಿರ್ಧಾರವಾಗುತ್ತಿರುವ ಸಮಯದಲ್ಲಿ ಅವನನ್ನು ನಂಬದಿರುವುದೇ ದೇವರಿಗೆ  ಕ್ಷೇಮ  ಮತ್ತು ನಮ್ಮ ಸರ್ವ ಶಕ್ತಿಯನ್ನು ಸ್ವರ್ಗದಲ್ಲಿ ಮೌನವಾಗಿರುವ ಅವನನ್ನು ಕಡೆಗಣಿಸಿ  ಸಾವಿನ ವಿರುದ್ದ ಹೊರಡಲು ಮೀಸಲಿರಿಸುವುದೇ ಲೇಸು .

 

ಮರುದಿನ ತಾರು (ಒಂದು ಪಾತ್ರ) ತನ್ನ ಮೊದಲ ಸ್ವಯಂ

 ಸೇವಕ ತಂಡವನ್ನು ಸೇರಿಸಿದನು .ಇನ್ನೂ ಹಲವರು ಅನುಸರಿಸಿದರು. ಇವರಿಗೆ ಸಲ್ಲದ ಪ್ರಾಮುಖ್ಯತೆ ನೀಡುವುದು ನಿರೂಪಕನ ಉದ್ದೇಶ ಅಲ್ಲ .ಆದರೂ ಇಂದು ಹಲವು ಸಹ ನಾಗರಿಕರು ತಮ್ಮ ಸೇವೆಯನ್ನು ಉತ್ಪ್ರೇಕ್ಷೆ ಮಾಡುವ ಪ್ರಲೋಭನೆಗೆ ಒಳಗಾಗಿರುವುದು ನಿಶ್ಶಂಶಯ.