ಬೆಂಬಲಿಗರು

ಶನಿವಾರ, ಆಗಸ್ಟ್ 8, 2020

ಕಾಮೂವಿನ ಪ್ಲೇಗೂ ಇಂದಿನ ಕೋವಿಡ್ಡೂ

ನೋಬೆಲ್ ಪ್ರಶಸ್ತಿ ವಿಜೇತ  ಬರಹಗಾರ ಆಲ್ಬರ್ಟ್ ಕಾಮೂ ಅವರ ಕಾದಂಬರಿ ಪ್ರಕಟವಾದ ವರ್ಷ 1947 .ಈ ಸಂಕೀರ್ಣ 

ಕಾದಂಬರಿಯು  ಪ್ರಸ್ತುತ ಕೋರೋನ ಕೋಲಾಹಲ ಕಾಲದಲ್ಲಿ  ಪ್ರಸ್ತುತ ವಾಗಿ ಕಾಣುತ್ತದೆ .ಸಾರ್ವಕಾಲಿಕವಾಗಿ ಸಲ್ಲುವ 

 ಕೃತಿಗಳೆಂದರೆ ಹೀಗೆ .ಈ ಕೃತಿ ಯ ಕೆಲವು ಪ್ಯಾರಾ ಗಳ ಕನ್ನಡ ಅನುವಾದ ನನಗೆ ತಿಳಿದಂತೆ ಮಾಡಿದ್ದೇನೆ .ಈ ಸಾಲುಗಳು 

ಹೆಕ್ಕಿ ತೆಗೆದವು , ಕ್ರಮಾಂಕದಲ್ಲಿ ಒಂದರ ನಂತರ ಒಂದು ಅಲ್ಲ .

 

 


 

ಬಹಳ  ಮಂದಿ  ಈ ಸಾಂಕ್ರಾಮಿಕ ಬಹು ಬೇಗ ಅಂತ್ಯ ಕಾಣುವುದು ಮತ್ತು ತಮ್ಮ  ಕುಟುಂಬವನ್ನು

ತಗಲದು ಎಂಬ ಆಶಾಭಾವನೆಯಲ್ಲಿ  ಇದ್ದರು. ಅದರಿಂದ ತಮ್ಮ ಆಚರಣೆಗಳಲ್ಲಿ ಯಾವುದೇ

ಮಾರ್ಪಾಟು ಮಾಡುವ ಅವಶ್ಯಕತೆ ಕಂಡಂತೆ ಇಲ್ಲ .ಪ್ಲೇಗ್ ಕಾಯಿಲೆ ತಾನಾಗಿ ಬಂದು ಹೋಗುವ     

ಅನಪೇಕ್ಷಿತ  ಅತಿಥಿ  ಯಂತೆ  ಕಂಡಿತು .ದಿಗಿಲು ಇತ್ತು ;ಆದರೆ ತಮ್ಮ ಅಸ್ತಿತ್ವ ಕ್ಕೆ ಅಪಾಯದ  ಬಂದೀತೆಂಬ ಯೋಚನೆ ಇನ್ನೂ  ಬಂದಂತಿಲ್ಲ .ಇದುವರೆಗೆ ತಾವು ಜೀವಿಸುತ್ತಿದ್ದ  ಜೀವನ  ಮರೆತು  ಹೋಗುವ ಸ್ಥಿತಿ ಇನ್ನೂ ಬಂದಂತಿಲ್ಲ . ಎಲ್ಲರೂ ಪರಿಸ್ಥಿತಿ ಯಾವ ತಿರುವನ್ನು ಪಡೆಯುವುದು 

ಎಂದು ಕಾತುರರಾಗಿದ್ದರು . ಇನ್ನು ಈ ಕಾಯಿಲೆ ಕೆಲವರಲ್ಲಿ ಅತೀವ ಧಾರ್ಮಿಕ ನಂಬಿಕೆ  ಉಂಟು ಮಾಡಿದರೆ ಇನ್ನು ಹಲವರಲ್ಲಿ  ತಾತ್ಸಾರ .ಇದಕ್ಕೆ ಒಳ್ಳೆಯ ಶಬ್ದ  ವಸ್ತು ನಿಷ್ಠತೆ. ಡಾ ರಿಯೂ(ಒಂದು ಪಾತ್ರ )ಕೇಳಿದಂತೆ  ಸಪ್ತಾಹಿಕ ಪ್ರಾರ್ಥನೆಗೆ  ಹೋಗುವವರು  ಅದರಿಂದ ಏನೂ ಹಾನಿ ಇಲ್ಲವಲ್ಲ ಎಂಬ ಯೋಚನಾ ಲಹರಿಯವರು . ತಾರೋ (ಒಂದು ಪಾತ್ರ ) ತನ್ನ  ಪುಸ್ತಕದಲ್ಲಿ ಬರೆದು ಕೊಂಡಿದ್ದಂತೆ

ಚೀನಿಯರು  ಪ್ಲೇಗು ಪ್ರತಿಭೆಯ ಮುಂದೆ ತಮಟೆ ಬಾರಿಸುತ್ತಿದ್ದರಂತೆ ;ಆದರೆ ತಮಟೆ ಸೇವೆಯು ರೋಗ ಪ್ರತಿಭಂದಕ  ಕ್ರಮಗಳಿಗಿಂತ ಹೆಚ್ಚು ಪರಿಣಾಮಕಾರಿ ಎಂದು ಹೇಳಲು ಅದಾರಗಳಿಲ್ಲ.ಅದಕ್ಕೂ ಮುನ್ನ ಪ್ಲೇಗ್ ಪ್ರತಿಭೆ ಅಥವಾ ಪ್ಲೇಗ್ ದೇವತೆ ಯ  ಅಸ್ತಿತ್ವವೇ ಪ್ರಶ್ನಾರ್ಹ;ನಮಗೆ ಈ ವಿಚಾರದಲ್ಲಿ ಇರುವ ಮೌಢ್ಯವೇ ಇದರ ಬಗೆಗಿನ ಯಾವುದೇ ಅಭಿಪ್ರಾಯವನ್ನು  ಇಲ್ಲದಾಗಿಸುತ್ತದೆ .

 

ಹಲವು ಶತಮಾನಗಳ ಹಿಂದೆ ಅಬ್ಯ್ಸ್ಸೇನಿಯ ದ  ಕ್ರಿಶ್ಚಿಯನರು  ಪ್ಲೇಗ್ ಸುಲಭ ಮೋಕ್ಷಕ್ಕೆ ದೇವರು

ಕೊಟ್ಟ ದಾರಿ ಎಂದು ನಂಬಿದ್ದರು .ಇದುವರೆಗೆ ರೋಗ ಭಾದಿಸದಿದ್ದವರು  ಮರಣ ಹೊಂದಿದ ಪ್ಲೇಗ್ ರೋಗಿಗಳ ಬಟ್ಟೆಯನ್ನು ಸುತ್ತಿ ರೋಗ ಆಹ್ವಾನಿಸುತ್ತಿದ್ದರಂತೆ .ಆದರೆ ಮೋಕ್ಷ ಸಾಕ್ಷಾತ್ಕಾತರಕ್ಕೆ ಇಂತಹ ದಾರಿ ನಾನು ಅನುಮೋದಿಸಲಾರೆ .

 

ಬ್ಯಾಂಕಿಂಗ್ ,ರಫ್ತು ವ್ಯವಹಾರ ,ಹಣ್ಣು ಮತ್ತು ವೈನ್ ವ್ಯಾಪಾರ ,ಇನ್ಸೂರೆನ್ಸ್ ,ಕಾಂಟ್ರ್ಯಾಕ್ಟ್ ವ್ಯವಹಾರ   ಅವರು  ಮೇಧಾವಿಗಳು  ಮತ್ತು ಸದುದ್ದೇಶ ಹೊಂದಿದವರು ಆದರೂ ಪ್ಲೇಗ್ ವಿಚಾರದಲ್ಲಿ  ಅವರ  ಕ್ಷಮತೆ ಸೊನ್ನೆ.

 

ಪ್ಲೇಗ್ ಉಪಟಳ ಮುಂದುವರಿದಂತೆ ರೇಡಿಯೊ ದಲ್ಲಿ ವಾರದ ಅಂಕಿ ಅಂಶಗಳ ಬದಲಿಗೆ ಪ್ರತಿ ನಿತ್ಯ ತೊಂಬತ್ತೆರಡು ,ನೂರ ಏಳು ಮತ್ತು ನೂರ ಮೂವತ್ತು ಸಾವುಗಳು ಪ್ರಸಾರ ಮಾಡಲ್ಪಟ್ಟವು .ವೃತ್ತಪತ್ರಿಕೆಗಳು ಮತ್ತು ಅಧಿಕಾರಿಗಳು ಪ್ಲೇಗ್ ನೊಡನೆ ಚೆಂಡಾಟ ಆಡುತ್ತಿವೆ .ನೂರ ಮೂವತ್ತು ಒಂಬಯ್ನೂರ ಹತ್ತಕ್ಕಿಂತ ಕಡಿಮೆ ಎಂದು ಬೀಗುತ್ತಿವೆ “ ಇನ್ನೂ ಕೆಲವು ಗಮನಾರ್ಹ ಸಂಗತಿಗಳು ಕಂಡು ಬಂದವು .ಒಂದು ಒಂಟಿ ಓಣಿಯಲ್ಲಿ ಓರ್ವ ಮಹಿಳೆ ಕಿಟಕಿ ಬಾಗಿಲು ತೆರೆದು ಎರಡು ಆರ್ಭಟ

ಕೊಟ್ಟು ಕಿಟಿಕಿ ಹಾಕಿದಳು . ಔಷಧಿ ಅಂಗಡಿಗಳಿಂದ   ಚೀಪುವ  ಪೆಪ್ಪೆರ್ಮಿಂಟ್  ಗುಳಿಗೆಗಳು ಮಾಯವಾದವು . ಅದರಿಂದ ರೋಗ  ಭಾದಿಸದು ಎಂಬ ನಂಬಿಕೆ .

 

 

 ಒಂದೆಡೆ ಕಾಗದದ ಅಭಾವದಿಂದ ದೈನಿಕಗಳು ತಮ್ಮ  ಪುಟಗಳ ಸಂಖ್ಯೆ ಕಡಿಮೆ ಮಾಡಿದರೆ  ಇನ್ನೊಂದೆಡೆ  ಪ್ಲೇಗ್ ಕ್ರಾನಿಕಲ್  ಎಂಬ ಹೊಸ ಪತ್ರಿಕೆಯ ಉದಯವಾಯಿತು .ಅದು ನಗರದ ಜನತೆಗೆ ನಿಖರವಾಗಿ ಸೋಂಕಿನ  ಏರು  ಶಮನ  ಹಾಗೂ ಭವಿಷ್ಯದ ಬಗ್ಗೆ ಮಾಹಿತಿ ನೀಡುವ ಮತ್ತು ಹೋರಾಟದಲ್ಲಿ ಭಾಗಿಯಾಗುವ ಎಲ್ಲಾ ಸ್ತರದ ಜನತೆಗೆ ತನ್ನ ಕಾಲಮ್ಮುಗಳನ್ನು ತೆರೆದಿಡುವ  ಆಶ್ವಾಸನೆ ಯೊಂದಿಗೆ  ಹಾಗೂ ಜನರ ಆತ್ಮ ಸ್ಥೈರ್ಯ ಎತ್ತಿ ಹಿಡಿಯುವ ಮತ್ತು ಇತ್ತೀಚೆಗಿನ ಸರಕಾರೀ ಆದೇಶಗಳನ್ನು ಪ್ರಕಟಿಸುವುದಲ್ಲದೆ  ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯ ಒಗ್ಗೂಡಿಸುದು  ತನ್ನ ಧ್ಯೇಯ ಎಂದಿತು. ಆದರೆ ಯಥಾರ್ಥದಲ್ಲಿ ಅದು ಪ್ಲೇಗ್ ರೋಗಕ್ಕೆ ‘’ದೋಷರಹಿತ “ವೆಂದು ಹೇಳಿಕೊಳ್ಳುವ ಔಷಧಿಗಳ  ಜಾಹಿರಾತುಗಳ  ತಾಣ ಆಯಿತು.

ಸರ್ವಶಕ್ತನಾದ ದೇವನನ್ನು  ನಂಬಿದ್ದರೆ  ತಾನು (ವೈದ್ಯ ) ರೋಗಿಗಳ ಚಿಕಿತ್ಸೆ ಯನ್ನು ಬಿಟ್ಟು ಅವನ ಮೇಲೆ ಭಾರ ಹಾಕುತ್ತಿದ್ದೆ .ಜಗದ ಜನರು ಯಾರೂ ಅಂತಹ ದೇವನ ಮೇಲೆ ನಂಬಿಕೆ ಇದ್ದವರಲ್ಲ . ದೇವರನ್ನು ನಂಬುತ್ತಿದ್ದ ಪಾನೆಲ್ಯೂ(ಪಾದರಿ) ಸೇರಿ. ದೈವ  ಸಾಮ್ರಾಜ್ಯದ ಮುಂದೆ ಎಲ್ಲರೂ ಸಂಪೂರ್ಣ ಶರಣಾಗತರಲ್ಲ ಎಂಬ ಅಂಶ ಸಾಬೀತಾಯಿತು .

 

ಜಗತ್ತಿನ ವ್ಯವಸ್ಥೆ ಸಾವಿನಿಂದ ನಿರ್ಧಾರವಾಗುತ್ತಿರುವ ಸಮಯದಲ್ಲಿ ಅವನನ್ನು ನಂಬದಿರುವುದೇ ದೇವರಿಗೆ  ಕ್ಷೇಮ  ಮತ್ತು ನಮ್ಮ ಸರ್ವ ಶಕ್ತಿಯನ್ನು ಸ್ವರ್ಗದಲ್ಲಿ ಮೌನವಾಗಿರುವ ಅವನನ್ನು ಕಡೆಗಣಿಸಿ  ಸಾವಿನ ವಿರುದ್ದ ಹೊರಡಲು ಮೀಸಲಿರಿಸುವುದೇ ಲೇಸು .

 

ಮರುದಿನ ತಾರು (ಒಂದು ಪಾತ್ರ) ತನ್ನ ಮೊದಲ ಸ್ವಯಂ

 ಸೇವಕ ತಂಡವನ್ನು ಸೇರಿಸಿದನು .ಇನ್ನೂ ಹಲವರು ಅನುಸರಿಸಿದರು. ಇವರಿಗೆ ಸಲ್ಲದ ಪ್ರಾಮುಖ್ಯತೆ ನೀಡುವುದು ನಿರೂಪಕನ ಉದ್ದೇಶ ಅಲ್ಲ .ಆದರೂ ಇಂದು ಹಲವು ಸಹ ನಾಗರಿಕರು ತಮ್ಮ ಸೇವೆಯನ್ನು ಉತ್ಪ್ರೇಕ್ಷೆ ಮಾಡುವ ಪ್ರಲೋಭನೆಗೆ ಒಳಗಾಗಿರುವುದು ನಿಶ್ಶಂಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ