ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 20, 2019

ಮರೆಯಾದರೂ ಮರೆಯಲಾಗದ ಕಾರ್ಕಳ ರಾಮಚಂದ್ರ

            

ಕಾರ್ಕಳ ಎಂದೊಡನೆ  ನೆನಪಿಗೆ ಬರುವುದು  ತ್ಯಾಗಮೂರ್ತಿ  ಗೋಮಟೇಶ್ವರ ,

ಶಿಲ್ಪಿ ರೆಂಜಾಳ ಗೋಪಾಲ ಶೆಣಾಯ ಮತ್ತು  ಪ್ರಾಧ್ಯಾಪಕ ಸಾಹಿತಿ ಮತ್ತು 

ಸಂಘಟಕ  ಎಂ ರಾಮಚಂದ್ರ .ಸೇಡಿಯಾಪು ಕೃಷ್ಣ ಭಟ್ ಅವರ ಶಿಷ್ಯ ಎಂದು 

ತಮ್ಮನ್ನು ಕರೆದು ಕೊಳ್ಳುತ್ತಿದ್ದ ಶ್ರಿಯುತರು ಕಾರ್ಕಳವನ್ನು ಸಾಹಿತ್ಯ ದ  ಕಾಶಿ 

ಯನ್ನಾಗಿ ಮಾಡಿದರು .ಇವರ ಆತಿಥ್ಯ ಸವಿಯದ ,ಕಾರ್ಯಕ್ರಮಗಳಲ್ಲಿ 

ಭಾಗವಹಿಸದ ಕನ್ನಡ ಸಾಹಿತಿಗಳು ವಿರಳ .ಮೊದಲು ಭುವನೇಂದ್ರ ಕಾಲೇಜ್ ,

ನಿವೃತ್ತಿ ನಂತರ  ಕಾರ್ಕಳ ಸಾಹಿತ್ಯ  ಸಂಘ ದ ಮೂಲಕ  ಅವ್ಯಾಹತ ಸಾಹಿತ್ಯ 

ಚಟುವಟಿಗಳನ್ನು ದಣಿವಿಲ್ಲದೆ  ತಪಸ್ಸಿನಂತೆ  ನಡೆಸಿದ ಮಹಾನ್ ಚೇತನ .ಇದಲ್ಲದೆ 

ಜಿಲ್ಲೆಯ  ದೊಡ್ಡಸಾಹಿತ್ಯ ಚಟುವಟಿಕೆ ಗಳಲ್ಲಿ ಇವರ ಸೇವೆ ಸದಾ .ಇವರ 

ಕೆಲಸ ಕಾರ್ಯಗಳಲ್ಲಿ  ಶಿಸ್ತು ,ಒಪ್ಪ ಓರಣ .

ನಿನ್ನೆ ಕನ್ನಡ ಪುಸ್ತಕ ಪ್ರಾಧಿಕಾರ ಅವರ ಸಾಹಿತ್ಯ  ಕೈಂಕರ್ಯ ಗುರುತಿಸಿ ಜೆ ಪಿ 

ರಾಜರತ್ನಂ ಪುರಸ್ಕಾರ ಘೋಷಿಸಿತ್ತು .ಜೆ ಪಿ ರಾಜರತ್ನಂ ಅವರ ಶಿಷ್ಯನಲ್ಲದ ಶಿಷ್ಯ 

ಅವರು ನನ್ನ ಗುರುವಲ್ಲದ ಗುರು ಎಂದು ಒಂದು ಕಡೆ ರಾಮಚಂದ್ರ  ಹೇಳಿ 

ಕೊಂಡಿದ್ದಾರೆ .ಅಂತಹವರ ಹೆಸರಿನ ಪ್ರಶಸ್ತಿ ಬಂದಾಗ ಸಹಜವಾಗಿ ಸಂತೋಷ 

ವಾಗಿರ ಬೇಕು .ಅಲ್ಲದೆ ಅವರೆಂದೂ ಪ್ರಶಸ್ತಿಗಳ ಹಿಂದೆ ಹೋದವರಲ್ಲ .ನನ್ನಂತಹ 

ಸಾಹಿತ್ಯೇತರ  ಕ್ಷೇತ್ರದವರನ್ನೂ ಕನ್ನಡ ಸಾಹಿತ್ಯದಲ್ಲಿ ಇರುವ ಮಮತೆ ಕಂಡು 

ಪ್ರೋತ್ಸಾಹಿಸಿದವರು .

                        
ನಿನ್ನೆಯಷ್ಟೇ ಅವರನ್ನು ಅಭಿನಂದಿಸಿ ಹತ್ತು ನಿಮಿಷ  ದೂರವಾಣಿ ಯಲ್ಲಿ 

ಮಾತನಾಡಿದ್ದೆ .ಪ್ರಾಯಶಃ ನನ್ನಂತೆ ಹಲವು ಅಭಿಮಾನಿಗಳ ಜೊತೆ ಮಾತನಾಡಿ 

ಹೃದಯ ತುಂಬಿ ಬಂದಿರ ಬೇಕು .ಮಾಸ್ತಿ 125 ಸಮಾರಂಭದಲ್ಲಿ  ಬಂದ ಅತಿಥಿ 

ಸಾಹಿತಿ  ಕರ್ನಾಟಕದ ಎರಡು ಆಘೋಷಿತ ವಿಶ್ವವಿದ್ಯಾಲಯ ಗಳು ಎರ್ಯ 

ಲಕ್ಷ್ಮಿನಾರಾಯಣ ಆಳ್ವ ಮತ್ತು ಕಾರ್ಕಳ ರಾಮಚಂದ್ರ ಎಂದು ಹೇಳಿದ್ದರಲ್ಲಿ ಉತ್ಪ್ರೇಕ್ಷೆ 

ಇಲ್ಲ .ಇಬ್ಬರೂ ಒಂದೇ ವರ್ಷ ನಮ್ಮನ್ನು ಅಗಲಿದ್ದು ,ಗೋವಿಂದ ಪೈ ಗಳು  

ಕೈಲಾಸಂ ನಿಧನ ರಾದಾಗ ,ಅದನ್ನೇ ರಾಮಚಂದ್ರ ಅವರು ರಾಜರತ್ನಂ ಬಗ್ಗೆ 

ಬರೆದಂತೆ where will we get another Karkala Ramachandra 

sir?another Erya Laxminarayana Alva?ಸಾಹಿತ್ಯ ಸೇವೆಯಲ್ಲಿ ರಾಮ 

ಲಕ್ಷ್ಮಣರಂತೆ  ಎರ್ಯ ,ಕಾರ್ಕಳ .ಏರ್ಯರೆ  ಮೇಲಿನಿಂದ ರಾಮಚಂದ್ರ ರಿಗೆ 

ಬಲೆಯೇ ಮೂಳು ಒಂಜಿ  ಸಾಹಿತ್ಯ ಕಾರ್ಯಕ್ರಮ ಮಲ್ಪುಗ ಎಂದು ಕರೆಸಿ 

ಕೊಂಡರೋ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ