(ವಾಚಕರೆ ನಿಮಗೆ ನನ್ನ ಬ್ಲಾಗ್ ಉಪಯುಕ್ತ ಅನಿಸಿದರೆ ಫಾಲೋ ಚಿನ್ಹೆ ಒತ್ತಿರಿ ಮತ್ತು ಬಲದ ತುದಿಯಲ್ಲಿ ನಿಮ್ಮ ಈ ಮೇಯಿಲ್ ವಿಳಾಸ ದಾಖಲಿಸಿರಿ .ನಾನು ಹೊಸ ಲೇಖನ ಪೋಸ್ಟ್ ಮಾಡಿದ ಒಡನೆ ನಿಮಗೆ ಸೂಚನೆ ಬರುವುದು )
ದೃಶ್ಯ ಮಾಧ್ಯಮದಲ್ಲಿ ನೀವು ನೋಡಿರ ಬಹುದು .ಒಂದು ಕಡೆ ಕೋವಿಡ್ ಪೋಸಿಟಿವ್ ಇನ್ನೊಂದು ಕಡೆ ಕೋವಿಡ್ ಇಲ್ಲ ? ಇದೆಂಥಾ ಕಥೆ ? ಇದೆಂತಹ ಮೋಸ ?ಇತ್ಯಾದಿ .
ಆದರೆ ಇದರಲ್ಲಿ ಸೋಜಿಗ ಇಲ್ಲ .ಯಾಕೆಂದರೆ ಮನುಷ್ಯ ನಿರ್ಮಿತ ಟೆಸ್ಟ್ ಗಳು ನೂರಕ್ಕೆ ನೂರು ನಿಖರ ಇರುವುದಿಲ್ಲ .
ಯಾವುದೇ ಟೆಸ್ಟ್ ನ ವಿಶ್ವಾಸರ್ಹತೆ ಕುರಿತು ಎರಡು ಮಾಪನ ಇರುತ್ತವೆ .ಒಂದು ಸೂಕ್ಷ್ಮತೆ (sensitivity) ಮತ್ತೊಂದು ನಿರ್ಧಿಷ್ಟತೆ (specificity).ನಿಜವಾಗಿ ಒಂದು ಕಾಯಿಲೆ ಇರುವುದು ಟೆಸ್ಟ್ ಅವಗಣನೆ ಮಾಡದೆ ಇರುವುದು ಸೂಕ್ಷ್ಮತೆ . ಯಾರಿಗೆ ಕಾಯಿಲೆ ಇಲ್ಲಾ ಎಂದು ಸರಿಯಾಗಿ ಹೇಳುವುದು ನಿರ್ಧಿಷ್ಟತೆ .ಬಹಳ ಟೆಸ್ಟ್ ಗಳು
ನೂರಕ್ಕೆ ನೂರು ಸೂಕ್ಷ್ಮ ಅಥವಾ ನಿರ್ದಿಷ್ಟ ಆಗಿರುವುದಿಲ್ಲ .
ಅದಲ್ಲದೆ ಟೆಸ್ಟ್ ಮಾಡಲು ರಕ್ತ ,ಗಂಟಲು ದ್ರವ ಅಥವಾ ಇನ್ನಿತರ ಮಾದರಿ ಯನ್ನು ಹೇಗೆ ಸಂಗ್ರಹ ಮಾಡಿದ್ದೇವೆ ,ಹೇಗೆ ಸಾಗಣೆ ಮಾಡಿದ್ದೇವೆ ಎಂಬುದು ಮುಖ್ಯ .ಅವೈಜ್ನಾನಿಕ ಮಾದರಿ ಶೇಖರಣೆ ಮತ್ತು ಸಾಗಣೆ ತಪ್ಪು ಫಲಿತಾಂಶ ಕೊಡುವುದು .
ಕೆಲವೊಮ್ಮೆ ಸಂಗ್ರಹಿಸಿದ ಮಾದರಿಯ ಪ್ರಮಾಣ ಸಾಕಷ್ಟು ಇಲ್ಲದಿರ ಬಹುದು .ಶೇಖರಣೆ ಮಾಡಿದ ಅಂಗಾಂಶ ದಲ್ಲಿ ರೋಗಾಣು ಸಾಂದ್ರತೆ ಕಮ್ಮಿ ಇರ ಬಹುದು .ಇಂತಹ ವೇಳೆ ತಪ್ಪಾಗಿ ಕಾಯಿಲೆ ಇಲ್ಲ ಎಂಬ ರಿಪೋರ್ಟ್ ಬರ ಬಹುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ