ಕರೆಂಟ್ ಬಿಲ್ ನಲ್ಲಿ ಸ್ವಲ್ಪ ಸಮಸ್ಯೆ ಇದ್ದುದರಿಂದ ಮೇಸ್ಕೋಮ್ ಕಚೇರಿಗೆ ಹೋಗಿದ್ದೆ .ನನ್ನ ಸಮಸ್ಯೆ ಅಳಿಸಿ ನಿವಾರಣೆ ಆಯಿತು .ಮೊದಲು ಕರ್ನಾಟಕದಲ್ಲಿ ಇಡೀ ರಾಜ್ಯಕ್ಕೆ ಒಂದು ಎಲೆಕ್ಟ್ರಿಸಿಟಿ ಬೋರ್ಡ್ ಇತ್ತು .ಅದನ್ನು ಹಲವು ನಿಗಮ ಗಳನ್ನು ಆಗಿ ವಿಂಗ ಡಿಸಿರುವರು . ಅವುಗಳು ಸ್ವಾಯತ್ತ ನಿಗಮಗಳಾಗಿ ಕೆಲಸ ಮಾಡುತ್ತಿವೆ .ಮತ್ತು ಕಾರ್ಯ ಕ್ಷಮತೆಯಲ್ಲಿ ಗಮನಾರ್ಹ ಸುದಾರಣೆ ಆಗಿದೆ .
ನಮ್ಮ ದೇಶದಲ್ಲಿ ಇಂದನ ರಂಗದಲ್ಲಿ ಸುಧಾರಣೆ ಆರಂಬಿಸಿದವರು ವಾಜಪೇಯಿ ಮಂತ್ರಿ ಮಂಡಲದಲ್ಲಿ ಆ ಖಾತೆ ಯ ಸಚಿವರಾಗಿದ್ದ ರಂಗರಾಜನ್ ಕುಮಾರಮಂಗಲಮ್ ಅವರು . ಇವರ ತಂದೆ ಮೋಹನ ಕುಮಾರಮಂಗಲಮ್ .ತಾಯಿ ಕಲ್ಯಾಣಿ ಮುಖರ್ಜಿ .
ಇವರ ತಾಯಿ ಪಶ್ಚಿಮ ಬಂಗಾಳದ ಮುಖ್ಯ ಮಂತ್ರಿ ಆಗಿದ್ದ ಅಜಯ ಕುಮಾರ ಮುಖರ್ಜಿ ಅವರ ಮಗಳು .
ತಂದೆ ಮೋಹನ ಕುಮಾರಮಂಗಲಮ್ ಕಮ್ಯೂನಿಸ್ಟ್ ಚಿಂತಕರು .ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವರೂ ಆಗಿದ್ದವರು .ವಿಮಾನ ದುರಂತದಲ್ಲಿ ಮೃತರಾದರು .ಇವರ ತಂದೆ ಸುಬ್ಬರಾಯಣ್ , ತಮಿಳನಾಡು ಸೇಲಂ ಸಮೀಪದ ಕುಮಾರಮಂಗಲಮ್ ಎಂಬಲ್ಲಿ ಭಾರೀ ಜಮೀಂದಾರರು.ಮುಂದೆ ಸ್ವಲ್ಪಕಾಲ ಮದ್ರಾಸ್ ಪ್ರಾಂತ್ಯದ ಮುಖ್ಯ ಮಂತ್ರಿಯೂ ಆಗಿದ್ದವರು.ಮುಂದೆ ಸ್ವತಂತ್ರ ಭಾರತದಲ್ಲಿ ಮಹಾರಾಷ್ಟ್ರ ದ ರಾಜ್ಯಪಾಲ ರೂ ಆಗಿದ್ದರು .
ಕುದ್ಮಲ್ ರಂಗ ರಾಯರು ಮಂಗಳೂರು ನಾಗರಿಕರಿಗೆ ಎಂದೂ ನೆನಪಿನಲ್ಲಿ ಇಟ್ಟು ಕೊಳ್ಳ ಬೇಕಾದ ಮಹಾನುಭಾವರು .(1859-1928) .ದಲಿತರು ಮತ್ತು ಮಹಿಳೆಯರ ಏಳಿಗೆಗೆ ಮತ್ತು ಶಿಕ್ಷಣಕ್ಕೆ ತಮ್ಮ ತನು ಮನ ಧನ ಮುಡಿಪಿಟ್ಟವರು .ಅವರ ಮಗಳು ರಾಧಾದೇವಿ .ಬಾಲ ವಿಧವೆಯಾದ ಅವರನ್ನು ಮದ್ರಾಸ್ ನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಕಳುಹಿದರು.ಅಲ್ಲಿ ಶ್ರೀ ಸುಬ್ಬರಾಯನ್ ಪರಿಚಯ ಆಗಿ ಅವರನ್ನು ವಿವಾಹ ಆದರು.
ಈ ದಂಪತಿಗಳಿಗೆ ನಾಲ್ವರು ಮಕ್ಕಳು .ಮೊದಲನೆಯವರು ಭಾರತದ ಭೂಸೇನೆ ಮುಖ್ಯಸ್ಥ ರಾಗಿದ್ದ ಪಿ ಪಿ ಕುಮಾರ ಮಂಗಲಮ್ .ಮೂರನೆಯವರು ಮೇಲೆ ಹೇಳಿದ ಮೋಹನ ಕುಮಾರ ಮಂಗಲಮ್ .ಅವರ ಮಗನೆ ರಂಗರಾಜನ್ ಕುಮಾರ ಮಂಗಲಮ್ .
ಇವರು ಇಂದನ ಸಚಿವರಾಗಿ ಆ ರಂಗದಲ್ಲಿ ಸುಧಾರಣೆಗಳನ್ನು ತಂದರು .ಅದರ ಮುಂದುವರಿದ ಪರಿಣಾಮ ಗಳೇ ಈ ಎಸ್ಕೋಮ್ ಗಳು.
ಕುದ್ಮುಲ್ ರಂಗ ರಾವು
ರಂಗರಾಜನ್ ಕುಮಾರ ಮಂಗಲಮ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ