ರಾಜಕಾರಣಿಗಳು ಮತ್ತು ಉಳ್ಳವರು ತಮಗೆ ರೋಗ ಬಂದಾಗ ಖಾಸಗಿ ಆಸ್ಪತ್ರೆಗಳಿಗೆ ಹೋಗುವುದರ ಬಗ್ಗೆ ಆಗಾಗ್ಗೆ ಚರ್ಚೆ
ಆಗುವುದು .ಇದರಲ್ಲಿ ಒಂದು ನಂಬಿಕೆ ಖಾಸಗಿ ಆಸ್ಪತ್ರೆ ಚಿಕಿತ್ಸೆಯ ಗುಣಮಟ್ಟ ಮೇಲು ಎಂಬುದು .ಇದು ವಾಸ್ತವವೇ?
ಇನ್ನೊಂದು ವಿಚಾರ ಮೆಡಿಕಲ್ ಕಾಲೇಜ್ ಆಸ್ಪತ್ರೆಗಳ ಬಗ್ಗೆ ,ಇವುಗಳಲ್ಲಿ ಖಾಸಗಿ ಮತ್ತು ಸರಕಾರಿ ಎರಡೂ ಇವೆ
ಸಾಧಾರಣ ಸರಕಾರೀ ಆಸ್ಪತ್ರೆ ವಿಚಾರ ಗಮನಿಸಿದರೆ ಇಲ್ಲಿ ಒಳ್ಳೆಯ ಅನುಭವಿ ದಾದಿಯರು ಇರುತ್ತಾರೆ .ಸರಕಾರಿ ಕೆಲಸದ
ಭದ್ರತೆ ಮತ್ತು ಒಳ್ಳೆಯ ಸಂಬಳ ,ನಿವೃತ್ತಿ ವೇತನ ಇತ್ಯಾದಿ ಇರುವುದರಿಂದ ಅವರು ಬೇರೆ ಖಾಸಗಿ ಆಸ್ಪತ್ರೆ ಗೋ ವಿದೇಶಕ್ಕೋ
ಹೋಗುವುದು ಕಡಿಮೆ .ಅನುಭವಿ ದಾದಿಯರು ಆಸ್ಪತ್ರೆಯ ಜೀವನಾಡಿ .ವೈದ್ಯರು ಪರೀಕ್ಷಿಸಿ ಚಿಕಿತ್ಸೆ ಬರೆದು ಹೋದಮೇಲೆ
ಅದನ್ನು ರೋಗಿಗೆ ನೀಡಿ ,ರೋಗಿಯ ಕ್ಷಣ ಕ್ಷಣದ ಬದಲಾವಣೆ ಅವರ ಕಂಗಾವಲಿನಲ್ಲಿ .ರೋಗ ಮತ್ತು ರೋಗಿಗಳನ್ನು ನೋಡಿ
ನೋಡಿ ಅವರಲ್ಲಿ ಅನುಭವದ ಒಂದು ಒಳಗಣ್ಣು ಇರುತ್ತದೆ .ಇದು ಬಹಳ ಮುಖ್ಯ .ಇಂತಹ ದಾದಿಯರು ವೈದ್ಯರು ಕಣ್ತಪ್ಪಿನಿಂದ
ಬಿಟ್ಟು ಹೋದ ಅಂಶಗಳನ್ನು ಅವರ ಗಮನಕ್ಕೆ ತರುವರು ,ಮತ್ತು ರೋಗ ನಿರ್ಧಾರದ ಸಮಯದಲ್ಲಿ ಬೇರೆ ಸಾಧ್ಯತೆಗಳ ಬಗ್ಗೆ ವೈದ್ಯರಿಗೆ ಸೂಚನೆ ನಿಡುವರು. ಇಂದು ಬಹುತೇಕ ಖಾಸಗಿ ಆಸ್ಪತ್ರೆಯಲ್ಲಿ ಕಾಣ ಸಿಗದು .
ವೈದ್ಯರಿಗೆ ಸಂಬಂದಿಸಿ ಹೇಳುವುದಾದರೆ ಸರಕಾರಿ ಆಸ್ಪತ್ರೆಯಲ್ಲಿ ಕೆಲಸದ ಬಾಹುಳ್ಯ ಹೆಚ್ಚು ಇದ್ದರೂ ಅವರಿಗೆ ಸರಕಾರದ ರಕ್ಷೆ ಇರುತ್ತದೆ . ಇತ್ತೀಚಿನ ದಿನಗಳಲ್ಲಿ ವೈದ್ಯರು ಸೇವ ನ್ಯೂನತೆ ವ್ಯಾಜ್ಯಗಳನ್ನು ತಪ್ಪಿಸಲು ರಕ್ಷಣಾತ್ಮಕ ವಾಗಿರುತ್ತಾರೆ .ಅಂದರೆ ಜನಸಾಮಾನ್ಯರಿಗೆ ಅನಾವಶ್ಯಕ ಮತ್ತು ಧನಾರ್ಜನೆ ಉದ್ದೇಶದಿಂದ ಎಂದು ಕಾಣುವ ಪರೀಕ್ಷೆಗಳನ್ನು ಮಾಡಿಸಬೇಕಾದ ಪರಿಸ್ಥಿತಿ ಇದೆ. ಇದು ಸರಕಾರಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಇರಲಾರದು .
ಇನ್ನು ಸರಕಾರಿ ವೈದ್ಯಕೀಯ ಕಾಲೇಜ್ ಆಸ್ಪತ್ರೆ ಗಮನಿಸಿದರೆ ಇಲ್ಲಿ ಹಿರಿಯ ವೈದ್ಯರೊಡನೆ ,ಪ್ರತಿಭಾವಂತ ಹೌಸ್ ಸುರ್ಜನ್ , ಮತ್ತು ಸ್ನಾತಕೋತ್ತರ ವಿದ್ಯಾರ್ಥಿ ಗಳ ಸೇವೆಯೂ ಇರುತ್ತದೆ. ಕೆಲವರು ವೈದ್ಯಕೀಯ ಕಾಲೇಜ್ ಆಸ್ಪತ್ರೆಗೆ ಹೋಗಲು ಹಿಂದೇಟು ಹಾಕುವರು .ಅಲ್ಲಿ ಕಲಿಯುವ ವಿದ್ಯಾರ್ಥಿಗಳು ,ಅರೆಬೆಂದ ವೈದ್ಯರು ಅವರ ಪರೀಕ್ಷಾ ಪ್ರಾಣಿಗಳು ರೋಗಿಗಳು ಎಂಬ ಪ್ರಚಾರ ಇದೆ. ಆದರೆ ಇದು ಸರಿಯಲ್ಲ .ಒಂದನೆದಾಗಿ ರೋಗಿಗಳ ಆರೈಕೆಗೆ ವೈದ್ಯರ ತಂಡ ವೇ ಇರುತ್ತದೆ .ಒಬ್ಬ ಸಿಗದಿದ್ದರೆ ಇನ್ನೊಬ್ಬ ಇರುವನು .ಒಬ್ಬನಿಗೆ ಯಾವುದಾದರೂ ರೋಗವಿಚಾರ ಗಣನೆಗೆ ಬಾರದಿದ್ದಲ್ಲಿ ಇನ್ನೊಬ್ಬ ಕಾಣುವನು .ಮತ್ತು ಬಹುತೇಕ ಕಲಿಯುವ ವೈದ್ಯರಿಗೆ ಕಾರ್ಯೋತ್ಸಾಹ ಇರುತ್ತದೆ .ಇದು ಸಾಧಾರಣ ಖಾಸಗಿ ಆಸ್ಪತ್ರೆ ಗಳಲ್ಲಿ ಸಿಗದು .
ಖಾಸಗಿ ಆಸ್ಪತ್ರೆಗಲು ನೋಡಲು ನಿರ್ಮಲ ಆಗಿರುತ್ತವೆ .ಸೀಬ್ಬಂದಿ ಆಕರ್ಷಕ ಸಮವಸ್ತ್ರದಲ್ಲಿ ಇರುತ್ತಾರೆ .ಹೊಸ ಹೊಸ ಪರೀಕ್ಷಾ ವಿಧಾನಗಳು ಇರುತ್ತವೆ .ಅವುಗಳನ್ನು ಶಾಲಾ ಸೋಲ ಮಾಡಿ ಕಟ್ಟಿರುತ್ತಾರೆ .ಅವರು ಸರಕಾರದ ಹಲವು ನಿಭಂದನೆಗಳಿಗೆ ಒಳಪಟ್ಟಿರುತ್ತಾರೆ .ಹಲವು ಬಗೆ ತೆರಿಗೆ ಪಾವತಿಸ ಬೇಕಾಗುವುದು .ಇದನ್ನೆಲ್ಲ ಪರಿಗಣಿಸಿಯೇ ಚಿಕಿತ್ಸಾ ವೆಚ್ಚ ವೆಚಹೆಚ್ಚು ಇದ್ದಂತೆ ಕಾಣುವುದು .ಸೇವಾ ನ್ಯೂನತೆ ಬಗ್ಗೆ ವ್ಯಾಜ್ಯಗಳು ಹೆಚ್ಚು ಆಗುತ್ತಿರುವ ಸಂದರ್ಭದಲ್ಲಿ ಮಾಡುವ ಟೆಸ್ಟ್ ಗಳೂ ಹೆಚ್ಚು ಆಗುತ್ತವೆ .
ವೈದ್ಯಕೀಯ ಕ್ಷೇತ್ರದಲ್ಲಿ ಸೇವಾ ಮನೋಭಾವ ,ರೋಗಿಗಳ ಕಾಳಜಿ ಇವುಗಳನ್ನು ಒಳ ಹೊಕ್ಕ ಮೇಲೆ ರೂಡಿಸಿ ಕೊಳ್ಳಬೇಕಷ್ಟೆ .ವೈದ್ಯಕೀಯ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಕೊಡುವಾಗ ಸಿ ಈ ಟಿ ಯ ಅಂಕದ ಮೇಲೆ ನಿರ್ಧಾರ ಆಗುವುದು .ಮಾನವೀಯ ಅನುಕಂಪ ,ಸೇವಾ ತಾತ್ಪರ್ಯ ಗಣನೆಗೆ ಬಾರದು .ಒಬ್ಬ ಸ್ನಾತಕ ವೈದ್ಯಕೀಯ ವಿದ್ಯಾರ್ಥಿ ಯಲ್ಲಿ ಈ ಗುಣಗಳು ಯೆಥೇಶ್ಚ ಇದ್ದರೂ ಆತನಿಗೆ ಸ್ನಾತಕೋತ್ತರ ಸೀಟ್ ಕೊಡಿಸುವ ಹಕ್ಕು ಮೆಡಿಕಲ್ ಕಾಲೇಜ್ ಅಧ್ಯಾಪಕರಿಗೆ ಇಲ್ಲ .ಒಂದೋ ಅವನಲ್ಲಿ ಹಣ ಇರಬೇಕು ಅಥವಾ ಸಿ ಈ ಟಿ ರಾಂಕ್ ಪಡೆಯುವ ತಾಕತ್ತು . ಸರಕಾರಿ ವೈದ್ಯಕೀಯ ಸೇವೆಗಳಿಗೆ
ವೈದ್ಯರ ಸೇರ್ಪಡೆ ಪ್ರತಿಭೆ ಮತ್ತು ಸೇವಾ ಮನೋಭಾವದ ಮೇಲೆ ಆಗುವುದು ಎಂದು ಈಗಿನ ಪರಿಸ್ತಿತಿ ಯಲ್ಲಿ ಹೇಳಲಾಗದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ