ಆಸ್ಪತ್ರೆಯ ಸ್ಕ್ಯಾನ್ ರೂಮಿನ ಹೊರಗಡೆ ಗರ್ಬಿಣಿ ,ಹೆಣ್ಣು ಮಕ್ಕಳು ಉದ್ವೇಗದಿಂದ ಪೊರ್ಮ್ ತುಂಬಿಸುತ್ತಾ ಕುಳಿತಿರುವ ದೃಶ್ಯ
.ಒಂದು ಕೈಯಲ್ಲಿ ಆಧಾರ್ ಕಾರ್ಡ್ ,ಮತ್ತೊಂದರಲ್ಲಿ ಪಿ ಎನ್ ಡಿ ಟಿ ಫೋರ್ಮ್. ವಿಮಾನ ನಿಲ್ದಾಣದಲ್ಲಿ ಎಮಿಗ್ರೇಷನ್ ಫೋರ್ಮ್
ಬ್ಯಾಂಕ್ ನಲ್ಲಿ ಚಲನ್ ,ಶಾಲೆ ಕೋಲೇಜ್ ಅಡ್ಮಿಷನ್ ಅರ್ಜಿ ಬರೆವ ರೀತಿ . ಅವರ ಮೊಗದಲ್ಲಿ ಉದ್ವೇಗ ,ಕಾತುರ .
ಹಿಂದೆ ಮನೆಯಲ್ಲಿ ಹೆಣ್ಣು ಮಗಳು ಗರ್ಭಿಣಿ ಆದಾಗ ಎಲ್ಲರಿಗೂ ಸಂತಸ .ಮನೆಯಲ್ಲಿ ಅಜ್ಜಿ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಎಲ್ಲರ ಪ್ರೀತಿಯ ಆರೈಕೆ . ಇವರೆಲ್ಲ ಹತ್ತು ಹೆತ್ತವರು . ಗರ್ಬಿಣಿ ಯಾಗಿ ಹೆರುವ ವರೆಗಿನ ಎಲ್ಲಾ ಹಂತಗಳ ಶಾರೀರಿಕ ಬದಲಾವಣೆ ಮಗುವಿನ ಚಲನ ಇತ್ಯಾದಿಗಳ ಬಗ್ಗೆ ಸ್ವಯಂ ಅನುಭವ ಇರುವವರು . ಹಲ ಮಕ್ಕಳನ್ನು ಹೊತ್ತು ಹೆತ್ತು ಸಾಕಿದ ಪ್ರಯೋಗಿಕ ಅನುಭವ ಈಗಿನ ಪ್ರಸೂತಿ ವೈದ್ಯರಿಗೂ ಇರಲಾರದು .ಗರ್ಭಿಣಿಯರ ಸಣ್ಣ ಪುಟ್ಟ ತೊಂದರೆಗಳಿಗೆ ಮನೆಯಲ್ಲಿಯೇ ಪರಿಹಾರ ಸಿಗುವುದು .
ಈಗ ಹಾಗಲ್ಲ .ಗರ್ಭವತಿ ಆದ ಒಡನೆ ವೈದ್ಯರ ಅಪಾಯಿಂಟ್ ಮೆಂಟ್ , ಅವರನ್ನು ನೋಡಿದ ಮೇಲೆ ಸ್ಕ್ಯಾನ್ ,ಆಧಾರ್ ಕಾರ್ಡ್ ಮತ್ತೆ ಅಲ್ಲಿ ಕ್ಯೂ .ಏಲ್ಲಾ ಆಗಿ ಡೆಲಿವೇರಿ ಸಮಯ ಆಸ್ಪತ್ರೆ ರೂಂ ಹುಡುಕುವುದು ,ನಂತರ ಮಕ್ಕಳ ಡಾಕ್ಟರು ,ರೋಗ ಪ್ರತಿಭಂದಕ ಚುಚ್ಚು ಮದ್ದು ,ಅದರ ತಾರೀಕುಗಳು ,ಕ್ಯೂ ಇತ್ಯಾದಿ .
ವಿಜ್ನಾನ ಬೆಳೆದಿದೆ .ಅದು ಜೀವನ ಹಗುರ ಆಗಲು ಪೂರಕ ಆಗಬೇಕು .ಹಿಂದೆ ಗರ್ಭಿಣಿಣಿಯರಿಗೆ ಊರ ದಾಯಿಯೇ ವೈದ್ಯೆ.ಆಮೇಲೆ ಬಂದ ವೈದ್ಯರಿಗೆ ತಮ್ಮ ಕೈಯ್ಯೆ ಸ್ಕ್ಯಾನ್ ಯಂತ್ರ . ಅವರ ಅಭಯ ಹಸ್ತ ದ ಸ್ಪರ್ಶ ಧೈರ್ಯ ಕೊಡುವುದು .ಸ್ಕ್ಯಾನ್ ಬಂದ ಮೇಲೆ ಈ ತರಹದ ಕೂಲಂಕುಷ ಪರೀಕ್ಷೆ ಕಡಿಮೆ ಆಗಿರ ಬಹುದು .ಸ್ಕ್ಯಾನ್ ನ ಮೇಲೆ ಹೆಚ್ಚು ಅವಲಂಬನೆ .ಸ್ಕ್ಯಾನ್ ಡಾಕ್ಟರಿರಿಗೂ ಮಗುವಿನ ಲಿಂಗ ಪರೀಕ್ಷೆ ಮಾಡದೆ ಇರಲು (ಇದು ಒಳ್ಳೆಯದೇ) ಕೆಲವು ಫೋರ್ಮ್ ಗಳು ,ದಫ್ತರುಗಳು .
ಮಗುವಿನ ಆರೈಕೆಯೂ ಸಂತೋಷದಯಕ ಏನಿಲ್ಲ ,ಸಣ್ಣ ಸಣ್ಣ ಶೀತ ಕೆಮ್ಮು ಬಂದರೂ ಭಯ .ಧೈರ್ಯ ಹೇಳುವ ಹಿರಿಯರಿಲ್ಲ .ಮಕ್ಕಳ ಡಾಕ್ಟರ ಕ್ಲಿನಿಕ್ ಎದುರು ಭಾರೀ ಕ್ಯೂ .
ಮಗುವಿಗೆ ಆಧಾರ್ ಕಾರ್ಡ್ .ಮಗುವಿಗೆ ನರ್ಸರಿಯಲ್ಲಿ ಸೀಟ್ ಕಾದಿರಿಸುವುದು .ಒಳ್ಳೆಯ ಇಂಗ್ಲಿಷ್ ಮೀಡಿಯಂ ಶಾಲೆ ಯ ಹುಡುಕಾಟ .
ಹಿಂದೆ ನಮ್ಮನ್ನು ಹೆತ್ತವರಿಗೆ ಕಾಡದ ಹಲವು ಚಿಂತೆಗಳು ,ಅವರು ಆನಂದಿಸಿದ ಮೈಲುಗಲ್ಲುಗಳು ಈಗ ಉದ್ವೇಗ ಜನಕಗಳು .
ನಮ್ಮ ಬಾಲ್ಯ ನಾವು ಪ್ರಕೃತಿಯಲ್ಲಿ ಆನಂದಿಸಿದೆವು ,ಹೆತ್ತವರಿಗೆ ಅದರ ಗೊಡವೆ ಇರಲಿಲ್ಲ ,ಈಗ ಹೆತ್ತವರೂ ಮಕ್ಕಳೂ ಜೀವಿಸುವ ಜೀವನ ರೂಪಿಸುವ ಚಿಂತೆಯಲ್ಲಿಯೇ ಕಳೆಯುತ್ತಿದ್ದಂತೆ ಭಾಸ ವಾಗುತ್ತದೆ . ಜೀವಿಸುವ ಭರಾಟೆಯಲ್ಲಿ ಕಳೆದು ಕೊಂಡೆವೆ ಜೀವನ ? ಮುಂದುವರಿದ ವಿಜ್ನಾನದಲ್ಲಿ ಕಳೆದು ಹೋಯಿತೆ ಸಮಾಜ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ