ಕೋರೋನಾ ಹಾವಳಿಯಿಂದ ಈಗ ಮೊದಲು ಆಸ್ಪತ್ರೆಯ ಒ ಟಿ ಗಳಲ್ಲಿ ಕಾಣ ಸಿಗುತ್ತಿದ್ದ ಮಾಸ್ಕ್ ಈಗ ಎಲ್ಲೆಡೆ ರಾರಾಜಿಸುತ್ತಿದೆ .ನೀವು ಯಾವುದೇ ಪತ್ರಿಕೆ ಅಥವಾ ಟಿ ವಿ ,ಇಂಟರ್ನೆಟ್ ನೋಡಿದರೆ ವಿವಿಧ ಬಣ್ಣಗಳ ,ಚಿತ್ತಾಕರ್ಷಕ ಮಾಸ್ಕ್ ಗಳ ಜಾಹೀರಾತು .
ಯಾವುದೇ ಗಂಡಾಂತರಗಳನ್ನು ಅವಕಾಶ ಗಳಾಗಿ ಪರಿವರ್ತಿಸ ಬಹುದು ಎಂಬುದಕ್ಕೆ ಒಂದು ಉದಾಹರಣೆ .ಮಾಸ್ಕ್ ತಯಾರಿಕೆ ಒಂದು ಬೇಡಿಕೆಯ ಉದ್ಯಮ ಆಗಿದೆ .ಚೀನಾ ದೇಶ ವಂತೂ ಜಗತ್ತಿನ ಮೂಲೆ ಮೂಲೆ ಗಳಿಗೆ ತನ್ನ ಮುಖವಾಡ (ಮಾಸ್ಕ್) ರಫ್ತು ಮಾಡಿ (ಭಾರತಕ್ಕೂ ಸೇರಿ) ತನ್ನ ಧನ ಬಲ ಹೆಚ್ಚಿಸಿ ಕೊಂಡಿದೆ .
ಮಾಸ್ಕ್ ಬಗ್ಗೆ ಹಲವು ಜೋಕ್ ಗಳು ಹರಿದಾಡುತ್ತಿವೆ .ಗಂಡನಿಗೆ ಹೆಂಡತಿಯ ಗುರುತು ಸಿಕ್ಕದ್ದು ,ತಾಯಿ ಬೇರೆಯವರ ಮಕ್ಕಳನ್ನು ತನ್ನ ಮಗುವೆಂದು ಎಳೆದು ತಂದದ್ದು ಇತ್ಯಾದಿ .ಸಾಲ ಕೊಂಡು ವಾಪಸು ಕೊಡಲಾರದವರು ದೊಡ್ಡ ಮಾಸ್ಕ್ ಧರಿಸಿ ಓಡುವರು .ಕಳ್ಳ ರಿಗೆ ಮಾಸ್ಕ್ ರಕ್ಷೆ ಆಗುವುದು .ದರೋಡೆ ಕೋರರು ಕರಿ ಮಾಸ್ಕ್ ಧರಿಸಿ ಬೆನ್ನಿನಲ್ಲಿ ತಮ್ಮ ಸಂಪಾದನೆಯೊಂದಿಗೆ ಓಡುವಚಿತ್ರ ಚಂದಮಾಮ ಕಾಲದಿಂದಲೂ ಪರಿಚಿತ .
ಈಗಿನ ಕೋರೋನಾಯುಗದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಮಾಸ್ಕ್ .ಕೋರೋನಾ ರೋಗಿಗಳ ಸೇವೆ ಮಾಡುವವರಿಗೆ , ಇತರ ವೈದ್ಯಕೀಯ ಸಿಬ್ಬಂದಿಗೆ ,ಜನ ಸಾಮಾನ್ಯರಿಗೆ ಎಲ್ಲರಿಗೂ ಒಂದೇ ತರಹದ ಮಾಸ್ಕ್ ಸಾಲದು .ದುರದೃಷ್ಟ ವಶಾತ್ ಬಹಳ ಮಂದಿ ಮಾಸ್ಕ್ ಎಂದರೆ ಕರೋನ ಬೆದರಿಸಲು ಇರುವ ಬೆದರು ಬೊಂಬೆ ಎಂದು ತಿಳಿದಿದ್ದಾರೆ .ಅದು ಮೂಗುಬಾಯಿ ಮುಚ್ಚ್ಚಿರದೆ ದವಡೆಯ ಕೆಳಗೆ ನೇತಾಡುತ್ತಿರುತ್ತದೆ . ವೈರಸ್ ಮಾಸ್ಕ್ ಕಂಡು ಓಡಿ ಪೋಪುದೇ?ಅಲ್ಲ ಮೂಗು ಬಾಯಿಗೆ ಮಾಸ್ಕ್ ಸೆಕ್ಯೂರಿಟೀ ಜನವೇ ?ವೈರಸ್ ಬಲ್ಲುದೈಯ್ಯ ಶ್ವಾಶೋಶ್ಚ್ವಾಸದ ಮಾರ್ಗ ,ದೂರದ ಮಾಸ್ಕ್ ಗೆ ಅದು ಬೆದರದಯ್ಯ .
ಇನ್ನೂ ವೈದ್ಯ ಶಾಸ್ತ್ರದಲ್ಲಿ ಇನ್ನೊಂದು ಶಬ್ದ ಇದೆ ,ಅದನ್ನು ಮಾಸ್ಕೆಡ್(masked) ಫೇಸ್ ಎನ್ನುವರು , ಇದು ಪಾರ್ಕಿಂಸನ್ ಕಾಯಿಲೆಯ ಮುಖ್ಯ ಲಕ್ಷಣ . ಇವರ ಮೊಗದಲ್ಲಿ ಭಾವನೆಗಳಿಗೆ ಅನುಗುಣವಾದ ಬದಲಾವಣೆಗಳು ಇರದೆ ಒಂದೇ ತರಹ ಇರುವುದು .ಕಾರಣ ಮಾಂಸ ಖಂಡಗಳ ಸಂಕುಚನ ವಿಕಸನ ಈ ರೋಗದಲ್ಲಿ ನಿಧಾನ .
ಅಂತೂ ಏನೂ ಅಪರಾಧ ಮಾಡದೆಯೆ ಮುಖ ಮುಚ್ಚಿ ನಡೆಯುವಂತೆ ಆಯಿತು ಮಾತ್ರವಲ್ಲ ಮುಖ ಮುಚ್ಚದೆ ನಡೆಯುವುದೇ ಅಪರಾಧ ಎನಿಸಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ