ಬೆಂಬಲಿಗರು

ಶುಕ್ರವಾರ, ಆಗಸ್ಟ್ 14, 2020

ಕೋವಿಡಾಯಣ---2

 ಕಾಮೂ ವಿನ ಪ್ಲೇಗ್  ಕಾದಂಬರಿಯಲ್ಲಿ  ಕೋಟಾರ್ಡ್ ಎಂಬ ಪಾತ್ರ ಇದೆ. ಊರಿನಲ್ಲಿ ಪ್ಲೇಗ್ ಮಾರಿ ಬಂದಾಗ  ಸಂತೋಷ ಪಟ್ಟವನು ಅವನೊಬ್ಬನೇ.ಹಿಂದೆ ಮಾಡಿದ ಯಾವುದೋ ಅಪರಾಧಕ್ಕೆ  ಪೊಲೀಸರು ಅವನ ಹಿಂದೆ ಇದ್ದಾರೆ ಎಂದು ಸದಾ ಭಯದ ನೆರಳಿನಲ್ಲಿ ಇದ್ದ ಅವನಿಗೆ ಪ್ಲೇಗ್ ಹಾವಳಿ ಸಮಯದಲ್ಲಿ  ,ಪೊಲೀಸರು  ರೋಗ ನಿಯಂತ್ರಣ ಕೆಲಸದಲ್ಲಿ ಮಗ್ನ ರಾಗಿದ್ದುದರಿಂದ  ತನ್ನ ಸುದ್ದಿಗೆ ಬರಲಾರರು ಎಂಬ ನಂಬಿಕೆ . ಅಲ್ಲದೆ ಸಂದಿಗ್ದ ಸಮಯದಲ್ಲಿ  ಕಳ್ಳ ಸಾಗಾಣಿಕೆ ಮಾಡಿ ಧನಾರ್ಜನೆ ಮಾಡುತ್ತಿದ್ದ .

ನಿರೂಪಕನ ಶಬ್ದಗಳಲ್ಲಿ " ಈ ಸಾಂಕ್ರಾಮಿಕವು ಅವನಲ್ಲಿ (ಕೊಟ್ರಾಡ್)ಹೆಮ್ಮೆ ಉಂಟು ಮಾಡಿತು. ಏಕಾಂತವನ್ನು ದ್ವೇಷಿಸುತ್ತಲಿದ್ದ  ಏಕಾಂಗಿಗೆ ಒಂದು ಜತೆ ಯಾಯಿತು .ತನ್ನ ಸುತ್ತ ಮುತ್ತಲಿನವರು ,ಅವರ ಮೂಡನಂಬಿಕೆಗಳು, ಆಧಾರ ರಹಿತ ಭಯ ,ತಾವು ರೋಗದ ಬಗ್ಗೆ ಮಾತನಾಡುವುದೇ ಎಂಬ ಹಟ ಹೊತ್ತು ಯಾವಾಗಲೂ ಅದರ ಬಗ್ಗೆ ಮಾತನಾಡುತ್ತಿರುವವರು , ಇವರೊಡನೆ ಅವನು ಸಂತೋಷದಿಂದ  ಒಂದಾದನು "

ಕೋವಿಡ್ ಹಾವಳಿಯ ಈ ಕಾಲದಲ್ಲಿ  ಸೋಪ್ ,ಸೋಂಕುನಾಶಕ ಉತ್ಪಾದಿಸುವವರಿಗೆ ವ್ಯಾಪಾರ ಹೆಚ್ಚುವುದು .ಎಲ್ಲಿ ನೋಡಿದರಲ್ಲಿ ಅವುಗಳ ಜಾಹೀರಾತು .ಗುಣಗಾನ .ಈಗ ಸೌಂದಯ್ಯ ವೃದ್ಧಿ ಸುವ  ಕೆಲಸ  ಬದಿಗಿಟ್ಟು  ರೋಗ  ವೈರಸ್ ನಾಶ ಕೈಗೆತ್ತಿ ಕೊಂಡಂತಿದೆ .

             ಇಮ್ಮುನಿಟಿ ಬೂಸ್ಟರ್ ತಯಾರಿಸುವ (ಇದಕ್ಕೆ ವೈಜ್ನಾನಿಕ ಆಧಾರ ಇಲ್ಲದಿದ್ದರೂ ) ಉತ್ಪಾದಕರು ನಾಯಿ ಕೊಡೆ ಗಳಂತೆ ಹುಟ್ಟಿ ಕೊಂಡಿದ್ದಾರೆ .ಎಲ್ಲ ಪತ್ರಿಕೆಗಳಲ್ಲಿ ಅವುಗಳ ಆಕರ್ಷಕ ಜಾಹೀರಾತು .ಅವಕ್ಕೆ ಹಾಕುವ ಹಣದಲ್ಲಿ  ಒಳ್ಳೆಯ ಆಹಾರ ,ಹಣ್ಣು ಹಂಪಲು ಜತೆಗೆ  ವ್ಯಾಯಾಮ  ಇದ್ದರೆ ,ಇಮ್ಮುನಿಟಿ  ಬೂಸ್ಟರ್  ಆಗುವುದು .

     ಟಿ ವಿ ವಾಹಿನಿಗಳು  ಮರಣ ಮೃದಂಗ  ,ಕೋವಿಡ್ ರಣ ಕೇಕೆ ಎಂದು ಬೊಬ್ಬಿರಿದು  ಜನರಲ್ಲಿ ಇನ್ನೂ ಭಯ ಹೆಚ್ಚುವಂತೆ ಮಾಡುತ್ತಿವೆ .ಇದರಿಂದ ಅವುಗಳ ಟಿ ಆರ್ ಪಿ ಹೆಚ್ಚಿದೆಯೋ ಅರಿಯದು .ಸ್ವಯಮ್ ಘೋಷಿತ  ಕೋವಿಡ್ ತಜ್ನರನ್ನು ಕರೆಯಿಸಿ ವೀಕ್ಷಕರ  ಗೊಂದಲವನ್ನು ಹೆಚ್ಚಿಸುತ್ತಿವೆ .

ಇನ್ನು ಅಳುವವರಿಗೆ  ತಮ್ಮ ಯಾವುದೇ ವೈಫಲ್ಯವನ್ನು  ಆರೋಪಿಸಲು  ಒಂದು ನೆಪ ಸಿಕ್ಕಿದೆ.ಅದು ಕೋವಿಡ್ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ