ಬೆಂಬಲಿಗರು

ಭಾನುವಾರ, ಜೂನ್ 7, 2015

ಹರ್ನಿಯ ಹೈಡ್ರೋಸೀಲ್ ಇತ್ಯಾದಿ

ಅರೋಗ್ಯ ಕ್ಷೇತ್ರದಲ್ಲಿ  ಸಾಮಾನ್ಯವಾಗಿ ಕೇಳಿ ಬರುವ ಶಬ್ದಗಳು .ಹಲವರಿಗೆ ಇದರ 

ಬಗ್ಗೆ  ಸ್ಥೂಲವಾದ ಕಲ್ಪನೆ ಇದೆ.

ಸರಳ ಭಾಷೆಯಲ್ಲಿ ಹೇಳುವುದಾದರೆ   ದೇಹದ ಒಂದು ಅಂಗವು ತನ್ನ ನಿಯಮಿತ 

 ಗಡಿ ದಾಟಿ ನುಸುಳುವಿಕೆ (ಕ್ರಾಸ್ ಬಾರ್ಡರ್  ಇ೦ಟ್ರುಶನ್) ಹೆರ್ನಿಯಾ .

ಉದಾಹರಣೆಗೆ ಉದರದೊಳಗೆ  ಸೀಮಿತ ವಾಗಿರ ಬೇಕಾದ ಕರುಳು ಬಳ್ಳಿಗಳು 

 ಹೊಟ್ಟೆಯ ದುರ್ಬಲ ಮಾಂಸ ಖಂಡ ಗಳ ಮೂಲಕ ಹೊರಕ್ಕೆ ತಲೆ ಹಾಕುವುದು .


 ಮೇಲಿನ  ಚಿತ್ರದಲ್ಲಿ  ಕಾಣುವುದು  ಇಂಗ್ವಿನಲ್  ಹರ್ನಿಯ .ತೊಡೆ ಬುಡದ ಈ  

ಪ್ರದೇಶಕ್ಕೆ ಇಂಗ್ವೈನಲ್ ಪ್ರದೇಶ ಎನ್ನುವರು . ಗರ್ಭಸ್ಥ ಶಿಶುವಿನಲ್ಲಿ  ಉದರವಾಸಿ 

ಯಾಗಿದ್ದ   ವೃಷಣಗಳು  ನಡೆದು ಬಂದ ಹಾದಿ ಇಲ್ಲಿದೆ .ಈ ಪ್ರದೇಶದ  ಮಾಂಸ 

ಖಂಡ ಗಳ ಬಲ ಕಮ್ಮಿಯಾದರೆ  ಹೊಟ್ಟೆಯಿಂದ ಕರುಳು ಮತ್ತು  ಅದರ ಪೊರೆ 

ಈ  ಜಾಗದ ಮೂಲಕ ಹೊರಗೆ ಇಣುಕುವುದು .ಕೆಮ್ಮು ಬಂದಾಗ ,ಮೂತ್ರ ಮಲ 

ವಿಸರ್ಜನೆಗೆ  ತಿಣುಕಿದಾಗ ಹೊಟ್ಟೆಯ ಒಳಗಿನ ಒತ್ತಡದಿಂದ  ಹೊರ ಬಂದು ಮತ್ತೆ 

ಒಳ ಹೋಗುವುವು. ಆದರೆ ಕ್ರಮೇಣ  ಹೊರ ಬಂದ ಕರುಳು ಒಳ ಹೋಗದೆ  ಅದರ 

ರಕ್ತ ನಾಳಗಳು  ಕಡಿದಾದ ಕಣಿವೆಯಲ್ಲಿ ಒತ್ತಲ್ಪಟ್ಟು  ಈ ಭಾಗದ ಕರುಳು 

ಸಾವನ್ನಪ್ಪುವುದು .ಇದನ್ನು ಹಿಂತಿರುಗಲಾಗದ  ಹರ್ನಿಯಾ ಮತ್ತು ಗ್ಯಾಂಗ್ರೀನ್ 

ಎನ್ನುವರು . ಇವು ಜೀವಕ್ಕೆ ಸಂಚಕಾರ ತರುವವು . ಆದುದರಿಂದ ಹರ್ನಿಯಾ ವನ್ನು 

ಮೊದಲ ಹಂತದಲ್ಲಿಯೇ  ಶಸ್ತ್ರ ಚಿಕಿತ್ಸೆ ಮೂಲಕ ಸರ್ ಪಡಿಸಿ   ಕೊಳ್ಳ ಬೇಕು .

ಈ  ಶಸ್ತ್ರಚಿಕಿತ್ಸೆಯನ್ನು ತೆರೆದ ಪದ್ಧತಿ ಮತ್ತು ಉದರ ದರ್ಶಕ ( ಲಪರೋಸ್ಕಾಪ್ 

)ಮೂಲಕ ಮಾಡಿಸ ಬಹುದು .

ಬಹು ದಿನದ ಕೆಮ್ಮು ,ದಮ್ಮು ,ಮೂತ್ರ ತಡೆ ,ಅಪೌಷ್ಟಿಕತೆ   ಇತ್ಯಾದಿಗಳು  

ಹರ್ನಿಯ  ಉಂಟು ಮಾಡ ಬಲ್ಲುವು .

ಕೆಲವೊಮ್ಮೆ  ಹೊಟ್ಟೆಯ ಮೇಲೆ ಮೊದಲು ಮಾಡಿದ ಶಸ್ತ್ರ ಚಿಕಿತ್ಸೆ ಯ  ಗಾಯದ 

ಬಳಿ ಮಾಂಸ ಖಂಡಗಳು ದುರ್ಬಲ ಗೊಂಡು ಹರ್ನಿಯಾ ಉಂಟಾಗುವುದು .

ಇದನ್ನು ಇನ್ಸಿಶನಲ್  ಹರ್ನಿಯಾ ಎನ್ನುವರು 

ಇನ್ನು  ಕೆಲವರಲ್ಲಿ ಹೊಕ್ಕುಳ ಸುತ್ತ  ಹರ್ನಿಯಾ ಆಗುವುದು .ಇದನ್ನು  ಅಂಬಿಲಿಕಲ್

ಹರ್ನಿಯಾ ಎನ್ನುವರು .
  ಜಠರದ ಭಾಗವು  ವಪೆಯ ಅನ್ನನಾಳ ರಂದ್ರದ  ಮೂಲಕ ಎದೆ ಯಾ ಗೂಡಿಗೆ 

ಇಣುಕಿದರೆ ಅದನ್ನು ಹಯಟಸ್ ಹರ್ನಿಯಾ ಎನ್ನುವರು.
ಇದು ಎದೆ  ಉರಿಗೆ ಕಾರಣ ವಾಗ ಬಹುದು .

ಹೈಡ್ರೋಸೀಲ್ 

ವ್ರುಷಣ ಚೀಲದಲ್ಲಿ  ನೀರು ತುಂಬಿ ಗಾತ್ರ ದೊಡ್ಡದಾಗುವುದು .ಹಿಂದೆ ಅನೆ ಕಾಲು 

ರೋಗದವರಲ್ಲಿ  ಇದು ಬರುತ್ತಿತ್ತು .ಸ್ಥಳೀಯ ಸೋಂಕು ,ಮತ್ತು ಜಲೋದರ 

ಉಂಟಾಗುವ  ಲಿವರ್ ,ಕಿಡ್ನಿ ,ಹೃದಯ ರೋಗಗಳಲ್ಲಿ  ಕೂಡಾ ಇಲ್ಲಿ  ನೀರು  ಸೇರ

ಬಹುದು .

ಹೈಡ್ರೋ ಸೀಲ್  ನ್ನು  ಸರಳ  ಶಸ್ತ್ರ ಚಿಕಿತ್ಸೆಯಿಂದ  ಗುಣ ಪಡಿಸುವರು .

ಕೆಲವೊಮ್ಮೆ  ಹರ್ನಿಯಾ  ಮತ್ತು  ಹೈಡ್ರೋ ಸೀಲ್ ಜತೆಯಾಗಿ ಬರುವವು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ