ಬೆಂಬಲಿಗರು

ಬುಧವಾರ, ಜೂನ್ 3, 2015

ಹೃದಯಾಘಾತ -೨

ಹೃದಯಾಘಾತಕ್ಕೆ  ಮುನ್ನುಡಿ ಹೂಡುವ  ಅಂಶಗಳು ಯಾವುವು?

ಬದಲಾಯಿಸಲು ಸಾಧ್ಯವಿಲ್ಲದ  ಅಂಶಗಳು 

೧ .ಕುಟುಂಬದಲ್ಲಿ   ಹೃದ್ರೋಗದ ಇತಿಹಾಸ 

೨ ಗಂಡು ಲಿಂಗ 

೩ ವಯಸ್ಸು ,

ಬದಲಾಯಿಸ ಬಹುದಾದ ಅಂಶಗಳು 

೧ ಧೂಮ ಪಾನ 

೨ ಸಕ್ಕರೆ ಕಾಯಿಲೆ 

೩ ಏರು ರಕ್ತದದೊತ್ತಡ

೪ ರಕ್ತದಲ್ಲಿನ ಅತಿ ಕೊಬ್ಬು (ಕೊಲೆಸ್ತಿರೋಲ್ ಸೇರಿ )

೫. ಬೊಜ್ಜು 

೬. ಕಡಿಮೆ ಶಾರೀರಿಕ ಶ್ರಮ 

೭ ಉದ್ವೇಗ 

ಹೃದಯಾಘಾತ ವನ್ನು  ಹೇಗೆ  ದೃಡೀಕರಿಸುತ್ತಾರೆ ?

ರೋಗಿಯ ಎದೆ ನೋವಿನ ಪರಿ  ಹೃದಯಾಘಾತವನ್ನು ಸೂಚಿಸುವುದು .


ಇ ಸಿ ಜಿ ಎಂಬ ಪರೀಕ್ಷೆಯು ಹೆಚ್ಚು ಕಮ್ಮಿ ಅದನ್ನು ದೃಡೀಕರಿಸುವುದು .    

                         
                              ನಾರ್ಮಲ್ ಇ ಸಿ ಜಿ 

                                 
                             ಹೃದಯಾಘಾತ ತೋರಿಸುವ  ಇ ಸಿ ಜಿ 
ಸಂಶಯ ಇದ್ದರೆ ರಕ್ತ ಪರೀಕ್ಷೆ  ಸಿ ಕೆ ಎಂ ಬಿ  ಮತ್ತು  ಟ್ರೋಪೋನಿನ್  ಐ ಎಂಬ 

ಎರಡು ಪರೀಕ್ಷೆಗಳು  ಹೃದಯಾಘಾತವನ್ನು ಖಚಿತ ಪಡಿಸುವಲ್ಲಿ ಸಹಾಯಕ .

ಇದರೊಂದಿಗೆ  ಹೃದಯದ ಸ್ಕ್ಯಾನ್ -ಇಕೋ ಕಾರ್ಡಿಯೋ ಗ್ರಾಫಿ ಕೂಡ ವೈದ್ಯರ 

ಬತ್ತಳಿಕೆಯಲ್ಲಿಯುವ ಒಂದು ಪರೀಕ್ಷಾ ಕ್ರಮ .

ಇನ್ನು ಅಂಜಿಯೋಗ್ರಾಂ ಎಂಬ ಪರೀಕ್ಷೆ ಬಗ್ಗೆ ನೀವು ಕೇಳಿರ ಬಹುದು .ಇಲ್ಲಿ  ಕಾಲಿನ 

ಅಥವಾ ಕೈಯ ಅಪದಮನಿ ಗಳ ಮೂಲಕ  ಒಂದು ಕೊಳವೆಯನ್ನು ತೂರಿ  ಅದನ್ನು 


ಕ್ಷ ಕಿರಣ  ಯಂತ್ರದ ಸಹಾಯದಿಂದ ಮೆಲ್ಲ ಮೆಲ್ಲನೆ  ಮಹಾ ಅಪಧಮನಿಯಲ್ಲಿ 

ಹೃದಯದ  ಕೊರೋನರಿ ರಕ್ತನಾಳದ ಉಗಮ ಸ್ಥಾನಕ್ಕೆ ತಂದು  ಅದರ ಮೂಲಕ 


ಬಣ್ಣದ ಚುಚ್ಚು ಮದ್ದು ( dye ) ಕೊಟ್ಟು ವೀಡಿಯೊ ಚಿತ್ರೀಕರಣ ಮಾಡುವರು .

ಇದರಿಂದ ಯಾವ ನಾಳದಲ್ಲಿ ಎಷ್ಟು ತಡೆ ಇದೆ ಎಂದು ತಿಳಿಯುವುದು .


    ಬಾಣದ ಗುರುತು ತಡೆ (ಬ್ಲಾಕ್ ) ತೋರಿಸುವುದು .

ಚಿಕಿತ್ಸೆ  :   

 ರೋಗಿಯನ್ನು  ಅತಿ ಗಮನ ತುರ್ತು ವಿಭಾಗದಲ್ಲಿ ದಾಖಲಿಸುವರು .

ರಕ್ತ ಸ್ಥಂಭಕ  ಪ್ಲೇಟ್ ಲೆಟ್ ವಿರೋಧಿ  ಔಷಧಿ  ಗಳಾದ  ಆಸ್ಪಿರಿನ್ , 

ಕ್ಲೋಪಿದೊಗ್ರೆಲ್ , ಕೊಲೆಸ್ತೆರೋಲ್  ನಿಗ್ರಹಿಸುವ  ಸ್ಟಾಟಿನ್  ಮತ್ತು   ನೋವಿಗೆ 

ಮೊರ್ಫಿನ್  ಕೊಡುವರು .ಆಮ್ಲಜನಕ   ಪುರಾಣ ಮಾಡುವರು .ಹೃದಯದ 

ಬಡಿತ , ರಕ್ತದ ಒತ್ತಡಗಳ ಮೇಲೆ   ಮಾಪಕಗಳ ಮೂಲಕ   ಕಣ್ಣಿಡುವರು .


    

ಹೃದಯದ ರಕ್ತ ನಾಳಗಳ   ಹೆಪ್ಪು ಕರಗಿಸುವ  ಔಷಧಿಗಳು ಇವೆ .ಉದಾ 


ಸ್ತ್ರೆಪ್ತೋಕೈನೆಸ್ , ಇವುಗಳನ್ನು ಕೊಡುವರು .

ಇನ್ನು ಕೆಲವೊಮ್ಮೆ  ನೇರವಾಗಿ ಅನ್ಜಿಯೋಗ್ರಂ ಮಾಡಿ ಕೊಳವೆ ಮೂಲಕ 

ರಕ್ತನಾಳದ ತಡೆ ನಿವಾರಿಸುವರು .ಇದನ್ನು ಪ್ರಾಥಮಿಕ  ತಡೆ ನಿವಾರಣೆ ಅಥವಾ 


ಪ್ರೈಮರಿ ಅಂಜಿಯೋ ಪ್ಲಾಸ್ಟಿ ಎಂದು ಕರೆಯುವರು .


ಹೃದಯಾಘಾತದಿಂದ ಸಾವು ಹೇಗೆ ಉಂಟಾಗುವುದು ?


೧  ಮುಖ್ಯ್ಹ ರಕ್ತನಾಳದಲ್ಲಿ ದೊಡ್ಡ ತಡೆ ಉಂಟಾದರೆ  ಹೃದಯದ  ಮಾಂಸ 

ಖಂಡಗಳು  ಪೂರ್ಣ ವಿಫಲ ಗೊಂಡು ಮೆದುಳು  ರಕ್ತವಿಲ್ಲದೆ  ಸಾವು 

ಉಂಟಾಗುವುದು .

೨  ಆಘಾತಕ್ಕೆ ಒಳ ಗಾದ ಹೃದಯ  ದ  ಬಡಿತ ತೀವ್ರ  ಏರು ಪೇರಾಗಿ 

 (arrythmias) ಸಾವು ಬರುವುದು . ಅತೀ ಕಡಿಮೆ ಹೃದಯ ಬಡಿತಕ್ಕೆ 


ಪೇಸ್ ಮೇಕರ್ ಇಡುವರು . ಅತೀ ಏರು ಉಂಟಾದಲ್ಲಿ ಶಾಕ್ ಕೊಡುವರು 

ಮತ್ತು  ಬಡಿತ   ಸ್ಹ್ತಿಮಿತ ಕ್ಕೆ ತರುವ  ಔಷಧಿ ನೀಡುವರು .

 ಇಷ್ಟೆಲ್ಲಾ  ಇದ್ದರೂ  ಅನಾಯೇಸೇ ಮರಣಂ (ವಿನಾ ದೈನ್ಯೇನ  ಜೀವಿತಂ) ಎಂದು 


ಪ್ರಾರ್ಥಿಸುವವರಿಗೆ  ಹೃದಯಾಘಾತ ವರ  ವಾಗಿ ಪರಿಣಮಿಸುವುದು 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ