ಬೆಂಬಲಿಗರು

ಶುಕ್ರವಾರ, ಜೂನ್ 5, 2015

ತಲೆ ನೋವು



ತಲೆನೋವು ಕಾಡದವರಿಲ್ಲ. ಇದರಲ್ಲಿ ಎರಡು ಮುಖ್ಯ ಪ್ರಭೇದ ಗಳು ಇವೆ .

೧. ಪ್ರಾಥಮಿಕ ತಲೆನೋವುಗಳು ಉದಾ ಮೈಗ್ರೇನ್ , ಉದ್ವೇಗದ ತಲೆನೋವು

೨.  ಅನ್ಯ ನಿಮಿತ್ತ ತಲೆನೋವು  ಉದಾ  ಮಲೇರಿಯ ,ಡೆಂಗು, ಮೆನೆಂಜೈಟಿಸ್.

ಮೆದುಳು ಜ್ವರ ದಂತಹ ಸೋಂಕು , ತಲೆಯ ಗಾಯ ,ಮೆದುಳಿನ ಗಡ್ಡೆಗಳು

ಜನರು ಸಾಮಾನ್ಯವಾಗಿ ತಿಳಿದಿರುವಂತೆ    ಕಣ್ಣಿನ ದೃಷ್ಟಿ ದೋಷ ಮತ್ತು ಏರು

ರಕ್ತದ ಒತ್ತಡ ತಲೆನೋವಿಗೆ  ಕಾರಣವಾಗಿರುವುದು ಬಹಳ ಅಪರೂಪ .ಕನ್ನಡಕ

ತಲೆನೋವಿಗೆ  ಪರಿಹಾರವಾಗದು .

                           


ಮೈಗ್ರೈನ್

ಸುಮಾರು ೧೬ % ಪ್ರಾಥಮಿಕ ತಲೆನೋವುಗಳಿಗೆ  ಕಾರಣ  ಮೈಗೈನ್ .

ಅಂತರ ರಾಷ್ಟ್ರೀಯ  ತಲೆನೋವು   ಸಂಘವು  ಈ ಕಾಯಿಲೆಯ ನ್ನು 

ಗುರುತಿಸಲು  ಕೆಲವು ಮಾನ ದಂಡಗಳನ್ನು  ರೂಪಿಸಿದೆ

ಕೆಳಗಿನ ನಾಲ್ಕು  ಅಂಶಗಲ್ಲಿ  ಕನಿಷ್ಠ  ಎರಡು ಇರಬೇಕು

೧. ಒಂದು ಪಾರ್ಶ್ವದ ತಲೆ  ಶೂಲೆ

೨. ತುಡಿಯುವ (pulsating)ತಲೆ ನೋವು

೩.ತೀವ್ರ ತರ ತಲೆ ನೋವು

೪ ನಡೆಯುವುದು ,ಮೆಟ್ಟಲು ಹತ್ತುವಂತಹ ಸಾಮಾನ್ಯ ಚಟುವಟಿಕೆಗಳೂ

ತಲೆನೋವನ್ನು  ಹೆಚ್ಚಿಸುವವು .

ಇದರೊಡನೆ    ತಲೆನೋವಿನೊಡನೆ  ಕೆಳಗಿನ ಒಂದು ಅಂಶ ಪೂ

ರಕವಾಗಿರಬೇಕು

೧ . ಪ್ರಕಾಶ (ಬೆಳಕು )ದ್ವೇಷ  ಅಥವಾ ಶಬ್ದ ದ್ವೇಷ

೨.  ವಾಕರಿಕೆ ಅಥವಾ ವಾಂತಿ

ಮೇಲೆ ಕಾಣಿಸಿದ   ೪ ರಿಂದ ೭೨ ಗಂಟೆಗಳ  ವರೆಗಿನ ಕನಿಷ್ಠ  ೫ ತಲೆನೋವುಗಳು

ಇದ್ದರೆ ಮಾತ್ರ  ಅದನ್ನು  ಮೈಗ್ರೈನ್ ಎನ್ನುವರು .

ಹಲವರಲ್ಲಿ  ಮೈಗ್ರೈನ್ ನ  ಪೂರ್ವ ಸೂಚನೆ  (aura) ಲಕ್ಷಣ ಗಳು

ತಲೆನೋವಿಗಿಂತ ಮೊದಲು ಕಾಣಿಸಿ ಕೊಳ್ಳುವವು.ಇವು  ಕಣ್ಣಿನ ಎದುರು

ನರ್ತಿಸುವ ಬಿಂದುಗಳು ,ಪ್ರಕಾಶ ಪುಂಜ ಅಥವಾ ದೃಷ್ಟಿ ಹೀನತೆ

ರೂಪದಲ್ಲಿ ,ಅತೀವ ಹಸಿವೆ ,ಮೂತ್ರಶಂಕೆ ,ಮುಖದಲ್ಲಿ ಇರುವೆ ಹರಿದಂತೆ

ಇತ್ಯಾದಿ ರೂಪದಲ್ಲಿ ಇರುವುವು
1134815-1142556-11801134815-1142556-1182



1134815-1142556-11791134815-1142556-1181

ಮೈಗ್ರೈನ್  ಪೂರ್ವ ಸೂಚನೆಯ ದೃಷ್ಟಿ ವಿಕಾರಗಳು (ಮೇಲಿನ ಚಿತ್ರಗಳು )

ಉದ್ವೇಗದ ತಲೆನೋವು (ಟೆನ್ಶನ್ ಟೈಪ್  ಹೆಡ್ಡೇಕ್ )

ಪ್ರಾಥಮಿಕ ತಲೆನೋವಿಗೆ    ೬೭% (ಮೈಗ್ರೈನ್ ಗಿಂತ ಮೂರು ಪಟ್ಟು ) ಕಾರಣ

ಉದ್ವೇಗದ ತಲೆನೋವು ಎಂದು ಕರೆಯಿಸಿಕೊಳ್ಳಲು  ಕೆಳಗಿನ ನಾಲ್ಕರಲ್ಲಿ ಎರಡು

ಅಂಶಗಳು  ಇರಬೇಕು .

೧   ಒತ್ತಿದಂತೆ ಅಥವಾ ಹಿಂಡಿದಂತೆ ಇರುವ ನೋವು (ತುಡಿತ ರಹಿತ )

೨.  ಮುಂದಲೆ ಅಥವಾ ಹಿಂದಲೆ ನೋವು

೩ ಇಬ್ಬದಿ ತಲೆ ನೋವು

೪ ಸಾಮಾನ್ಯ ಚಟುವಟಿಕೆ ಯಿಂದ  ಏರದ ತಲೆ ನೋವು

ಮೈಗ್ರೈನ್ ನಂತೆ  ಪೂರ್ವ ಸೂಚನಾ ಚಿನ್ಹೆ ಗಳೂ ವಾಕರಿಕೆ ವಾಂತಿಯೂ

ಇರದು .ಮಾನಸಿಕ ಉದ್ವೇಗದ ಹಿನ್ನಲೆ ಇರುವುದು .

ಮೈಗ್ರೈನ್ ಅಥವಾ ಉದ್ವೇಗದ ತಲೆನೋವಿನ  ಪತ್ತೆಗೆ  ತಲೆಯ ಸ್ಕ್ಯಾನ್ ನ

ಅವಶ್ಯಕತೆ ಇರುವುದಿಲ್ಲ .

ಆದರೆ  ಇದುವರೆಗೆ ಕಂಡರಿಯದ ತಲೆನೋವು ,  ನೋವಿನೊಡನೆ ನಿಲ್ಲದ

ವಾಂತಿ ,ನೂತನ ನರದೌರ್ಬಲ್ಯ ಇತ್ಯಾದಿ ಕಂಡು ಬಂದರೆ  ಮೆದುಳಿನ ರಕ್ತಸ್ರಾವ

ಇದೆಯೋ ಎಂದು ನೋಡಲು ಸ್ಕ್ಯಾನ್ ಮಾಡುವರು .

ಬಾಲಂಗೋಚಿ :  ದಶಕಗಳ ಹಿಂದೆ ದೂರ ದರ್ಶನದಲ್ಲಿ ಮಧ್ಯಾಹ್ನ ಪ್ರಶಸ್ತಿ

ವಿಜೇತ ಚಲನ ಚಿತ್ರ ತೋರಿಸುತ್ತಿದ್ದರು .ಹಲವರಿಗೆ ಇವು ತಲೆನೋವು

ತರಿಸುತ್ತಿದ್ದವು ,ತಮಾಷೆಯೆಂದರೆ  ಅದರ ಪ್ರಾಯೋಜಕರು ಅಮ್ರುತಾ೦ಜನ್!

ಈ ತಲೆನೋವಿನ ಮುಲಾಮುಗಳಲ್ಲಿ  ಚರ್ಮ ಉರಿ ಉಂಟು ಮಾಡುವ ವಸ್ತು

ಗಳಿರುತ್ತವೆ .ಅವುಗಳನ್ನು ಕೌಂಟರ್ ಇರಿ ಟೆ೦ಟ ಅಂದರೆ ಪ್ರತ್ಯುರಿ ಎನ್ನುವರು .

ಅವುಗಳು ಉಂಟು ಮಾಡುವ ಉರಿ ಮೂಲ ನೋವನ್ನು ಭಾಗಶಃ ಮರೆಯುವಂತೆ

ಮಾಡುವುದು .ಜೀವನದಲ್ಲಿ ದೊಡ್ಡ ಸಂಕಷ್ಟ ಸಣ್ಣ ಸಮಸ್ಯೆಯನ್ನು
ಮರೆಸುವಂತೆ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ