ಬೆಂಬಲಿಗರು

ಗುರುವಾರ, ಮಾರ್ಚ್ 7, 2013

ಪುಸ್ತಕ ಕೊಳ್ಳುವುದು

ಪುಸ್ತಕ  ಕೊಂಡು  ಓದುವುದು ಒಳ್ಳೆಯ ಹವ್ಯಾಸ. ಕೊಳ್ಳಲಿರುವ ಕೃತಿ ಒಳ್ಳೆಯದಿದೆಯೋ ಇಲ್ಲವೋ ಎಂದು ಗೊತ್ತಾಗುವುದು ಹೇಗೆ?

ಪತ್ರಿಕೆಗಳಲ್ಲಿ ಬರುವ ವಿಮರ್ಶೆ ಗಳನ್ನು  ಓದುವುದು.ಇಂಗ್ಲಿಷ್ ಪುಸ್ತಕ ಗಳ ಬಗ್ಗೆ www.goodreads.com  ನಂತಹ ತಾಣಗಳಲ್ಲಿ ಓದಿ ಓದುಗರ ಅಭಿಪ್ರಾಯ ತಿಳಿಯ ಬಹುದು.ಕನ್ನಡದಲ್ಲೂ ಇತ್ತೀಚಿಗೆ http://www.chukkubukku.com/blog/posts

ಬ್ಲಾಗ್ ಹೊಸ ಪುಸ್ತಕಗಳ ಮಾದರಿ ಪುಟಗಳ ಓದುವ ಅವಕಾಶವನ್ನೂ ಮಾಡಿಕೊಡುತ್ತದೆ.ಈಗ ಕನ್ನಡ ಪುಸ್ತಕಗಳು  ಆನ್ ಲೈನಿನ್ನಲ್ಲೂ  ತರಿಸಿಕೊಳ್ಳುವ ಅವಕಾಶವಿದ್ದು  ಒಳನಾಡುಗಳಲ್ಲಿರುವರಿಗೆ ಅನುಕೂಲವಾಗಿದೆ. ಇವುಗಳಲ್ಲಿ  ಆಕೃತಿ ಬುಕ್ಸ  ಸಪ್ನಾ ಆನ್ಲೈನ್,ಗಳ (

ಸೇವೆ ಉತ್ತಮ. Flipkart ನಲ್ಲೂ  ಕನ್ನಡ ಪುಸ್ತಗಳು ಸಿಗುತ್ತವೆ. ಇನ್ನು ಐ ಬಿ ಎಚ್ , ಗೀತಾ ಬುಕ್ ಹೌಸ್ , ಮನೋಹರ ಗ್ರಂಥ

ಮಾಲಾ  ಆನ್ಲೈನ್ ಮಳಿಗೆಗಳನ್ನು ತೆರೆದಿವೆ.ನವಕರ್ನಾಟಕ  ಪ್ರಕಾಶನದವರು Flipkart ನೊಂದಿಗೆ ಒಡಂಬಡಿಕೆ ಮಾಡಿಕೊಂಡು

ತಮ್ಮ ಹೊತ್ತಿಗೆಗಳು ಅಲ್ಲಿ ಸಿಗುವ  ವ್ಯವಸ್ತೆ ಮಾಡಿದೆ.

ಇಂಗ್ಲಿಷ್  ಪುಸ್ತಕಗಳನ್ನು ಕೊಳ್ಳಲು ಬಯಸುವವರು  ಯಾವ  ಮಳಿಗೆಯವರು ಎಷ್ಟು ಇಳುವರಿ ಕೊಡುತ್ತಾರೆ೦ದು

ತಿಳಿದುಕೊಂಡು

ಆರ್ಡರ್  ಮಾಡ ಬಹುದು. ಅದಕ್ಕಾಗಿ  http://www.indiabookstore.net/  ನಲ್ಲಿ ನಮಗೆ ಬೇಕಾದ  ಪುಸ್ತಕದ ಹೆಸರು

ನಮೂದಿಸಿದರೆ ಆಯಿತು. ಯಾವ ಯಾವ ಅಂಗಡಿಯಲ್ಲಿ ಎಷ್ಟು ಕ್ರಯ ಎಂದು ಬರುತ್ತದೆ. ಮಳಿಗೆಯವರು  ಸಾಗಣೆ ವೆಚ್ಚ

ಉಚಿತವಾಗ ಬೇಕಿದ್ದರೆ ಇ೦ತಿಷ್ಟು  ಮೊತ್ತದ  ಖರೀದಿ ಬೇಕೆಂದು ತಿಳಿಸಿರುತ್ತಾರೆ. ಈ ಸೌಲಭ್ಯ  ಜಂಗಲೀ ಯಂತಹ ತಾಣದಲ್ಲೂ

 ಲಭ್ಯವಿದೆ. ಹೆಚ್ಚಿನ  ಅಂಗಡಿಯವರಲ್ಲಿ  ಕ್ಯಾಶ್ ಆನ್  ಡೆಲಿವರಿ  ಅಂದರೆ ಮೊದಲಿನ  ವಿ ಪಿ ಪಿ ಯಂತಹ ಸೌಲಭ್ಯ ಇದೆ.

ಇಲ್ಲವಾದಲ್ಲಿ  ಡೆಬಿಟ್ ಕಾರ್ಡ್ ಉಪಯೋಗಿಸಿ  ಪಾವತಿ ಮಾಡಬಹುದು.

ಪುಸ್ತಕ ಗಳೆಂದರೆ  ನನ್ನ  ಜೀವ ಸಂಗಾತಿಗಳು. ಆಟಿಗೆಗಳ ಅಂಗಡಿಗಳನ್ನು ಕಂಡ ಮಕ್ಕಳ ಕಣ್ಣು ಕಾಲುಗಳು ಅತ್ತ  ಓಡುವಂತೆ

ಈಗಲೂ  ಆರ೦ಕುಶ ವಿಟೊಡ೦ ಓಡುವುದೆನ್ನ ಕಾಲುಂ. ಸಾಹಿತ್ಯ ಸಮ್ಮೇಳನಗಳಲ್ಲಿ ಪುಸ್ತಕ ಪ್ರದರ್ಶನ ಮಾರಾಟ ಇರುತ್ತದೆ.

ಇಂತಹ ಸಂದರ್ಭದಲ್ಲಿ  ನಾನು ಮೊದಲು ಎಲಾ ಮಳಿಗೆಗಳಿಗೂ ಭೇಟಿ ನೀಡಿ ನಾನು ಕೊಳಹುದಾದ ಪುಸ್ತಕಗಳ ಪಟ್ಟಿ

ಮಾಡುತ್ತೇನೆ  ಆ ಮೇಲೆ ನನ್ನ ಬಜೆಟ್ ಗೆ ಅನುಗುಣ ವಾಗಿ  ಅದನ್ನು ಪರಿಷ್ಕರಿಸಿ ಎರಡನೇ ಸುತ್ತಿನಲ್ಲಿ  ಖರೀದಿ ಮಾಡುತ್ತೇನೆ.

 ಹುಬ್ಬಳ್ಳಿಯ ಸಾಹಿತ್ಯ ಭಂಡಾರ ,ಹಾಸನ ದ ಜಯಂತ ಬುಕ್ ಹೌಸ್ ,ಬೆಂಗಳೂರಿನ ಮತ್ತು ಮೈಸೂರಿನ ಗೀತ ಬುಕ್ ಹೌಸ್,

ಅತ್ರೀ ಬುಕ್ ಹೌಸ್, ನವಕರ್ನಾಟಕ ,ಸಪ್ನಾ ಇವು ನನ್ನ ಭಂಡಾರ ದ ಹೆಚ್ಚಿನ ಪುಸ್ತಕಗಳನ್ನು ಕೊಟ್ಟವು.

ಮಾಹಿತಿ ಉಪಯುಕ್ತ ವಾಗಿದೆಯೆ?



akrutibooks.com  

sapnaonline.com       

gbhmysore.com                                                                                             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ