ಬೆಂಬಲಿಗರು

ಶನಿವಾರ, ಮಾರ್ಚ್ 30, 2013

ಬ್ಲಡ್ ಪ್ರೆಶರ್ ಬಗ್ಗೆ

ಬಿ ಪಿ ಬಗ್ಗೆ ಹಲವು ಕಲ್ಪನೆಗಳಿವೆ .ಕೆಲವು ಸರಿಯೂ ಇನ್ನುಕೆಲವು ಅಧಾರ ರಹಿತವೂ ಆಗಿವೆ.

 

ನಾರ್ಮಲ್ ಆಗಿ ಬಿ.ಪಿ. ಯು ೧೪೦/೯೦ ರ ಒಳಗೆ ಇರಬೇಕು.ಇದು ಯಾವುದು ಮಿತಿಗಿಂತ ಹಚ್ಚಿದ್ದರೂ  ಹೈ ಬಿ.ಪಿ. ಅಥವಾ ಹೈಪರ್

 

ಟೆನ್ಸನ್ ಎಂದು ಕರೆಯಲ್ಪದುತ್ತದೆ. ಆಸ್ಪತ್ರೆಯಲ್ಲಿ ಬಿ.ಪಿ.ನೋಡುವುದಕ್ಕೆ ಮೊದಲು ಅರ್ಧ ಗಂಟೆ ಆರಾಮವಾಗಿ ಕುಳಿತಿರ ಬೇಕು.ಈ

ಅವಧಿಯಲ್ಲಿ ಸ್ಮೋಕ್ ಮಾಡಿರಬಾರದು. ಕೆಲವೊಮ್ಮೆ ಮೊದಲನೇ ಸಲ ನೋಡುವಾಗ ಬಿ.ಪಿ. ಸ್ವಲ್ಪ ಹೆಚ್ಚಿದ್ದರೂ ಪುನಃ ನೋಡುವುದು

 

ವಾಡಿಕೆ.ಆಸ್ಪತ್ರೆಯಲ್ಲಿ  ಮೊದಲ ಬಾರಿ ನೋಡುವಾಗ ಬಿ.ಪಿ.ಜಾಸ್ತಿ ಇರುವುದನ್ನು ವೈಟ್ ಕೋಟ್ ಹೈಪರ್ ಟೆನ್ಶನ್ ಎನ್ನುತ್ತಾರೆ.

 

ಇವರ ಬಿ ಪಿ ಯನ್ನು ಮನೆಯಲ್ಲಿ ನೋಡಿದರೆ ನಾರ್ಮಲ್ ಇರ ಬಹುದು.ಇವರಿಗೆ ಚಿಕಿತ್ಸೆ ಅನಾವಶ್ಯಕ.

 

ಎರಡು ಅಥವಾ ಹೆಚ್ಚು ಬಾರಿ ಒತ್ತಡ ಜಾಸ್ತಿ ಇದ್ದಾರೆ ರೋಗ ಲಕ್ಷಣ ಇಲ್ಲದಿದ್ದರೂ ಚಿಕಿತ್ಸೆ ಅನಿವಾರ್ಯ.ಇಲ್ಲದಿದ್ದರೆ ಅತಿಯಾದ ರಕ್ತದೊತ್ತಡ

 

ಹೃದಯ ಮೆದುಳು ಮತ್ತು ಮೂತ್ರ ಪಿಂಡ ಗಳ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ.ಉದಾಹರಣೆಗೆ

ಹೃದಯಾಘಾತ,ಪ್ಯಾರಾಲಿಸಿಸ್,,ಕಿಡ್ನಿ ಫೈಲೂರ್ ಇತ್ಯಾದಿ.ಬಹುತೇಕ ಅತಿ ರಕ್ತದೊತ್ತಡ ಯಾವುದೇ ರೋಗ ಲಕ್ಷಣ ಉಂಟು

ಮಾಡುವುದಿಲ್ಲ .ಸಾಮಾನ್ಯ ತಿಳುವಳಿಕೆಯಂತೆ ತಲೆ ನೋವು ತಿರುವುಕಿಕೆ ಬಿ ಪಿ ಯಿಂದ ಬರುವುದು ಅಪರೂಪ.ತಲೆನೋವಿನಿಂದಾಗಿ ಬಿ

ಪಿ ಜಾಸ್ತಿಯಾಗುವುದು ಸಾಮಾನ್ಯ.ನಿಮಗೆ ತಿಳಿದಿರಲಿ ತಲೆ ನೋವಿನ ಬಹುತೇಕ ಕಾರಣ ಟೆನ್ಸ್ಸನ್.

 

ಅದರಂತೆ ಮೂತ್ರದ ಕಲ್ಲಿನ ನೋವಿನಿಂದ ಬಳಳುವಾಗ ,ತೀವ್ರೆ ಉಬ್ಬಸ ಇದ್ದಾಗ ಬಿ.ಪಿ.ಸ್ವಲ್ಪ ಜಾಸ್ತಿ ಇರುತ್ತದೆ.ಅಂತಹ ಸಂದರ್ಭಗಳಲ್ಲಿ

ಮೂಲ ಕಾಯಿಲೆಗೆ ಚಿಕಿತ್ಸೆಯಾಗ ಬೇಕೇ ಹೊರತು ಬಿ.ಪಿ.ಗೆ ಅಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ