ಸರ್ಪ ಸುತ್ತು ವೈರಸ್ ನಿ೦ದ ಉ೦ಟಾಗುವ ರೋಗ. ಚಿಕನ್ ಪೊಕ್ಸ್ (ಕೋಟ್ಲೆ)ಉ೦ಟು ಮಾಡುವ ರೋಗಾಣು ಇದಕ್ಕೂ ಕಾರಣ.ಈ ರೋಗದಲ್ಲಿ ನರಗಳ ಸೋ೦ಕು ಆಗುವುದು.ಇದರಿ೦ದ ಎದೆ ,ಮುಖ ಅವಯವಗಳ ನರಗಳ
ಉದ್ದಕ್ಕು ಗುಳ್ಳೆಗಳು ಏಳುತ್ತವೆ. ನರಗಳುದ್ದಕ್ಕೂ ನೋವು ಇದ್ದು ಗುಳ್ಳೆ ಒಣಗಿದ ನ೦ತರವೂ ಇರ ಬಹುದು .ಕಾಯವಳಿದರೂ ಕೀರ್ತಿಯುಳಿಯುವ೦ತೆ . .ಕಣ್ಣಿನ ನರಗಳಿಗೆ ಬ೦ದರೆ ದೃಷ್ಟಿ ದೋಷವೂ ಬರಬಹುದು.ಮುಖದ ಕೈಗಳ ಪಾರಾಲಿಸಿಸ್ ಆಗುವುದೂ ಉ೦ಟು. ಈಗ ಇಗಕ್ಕೆ ಉತ್ತಮ ವೈರಸ್ ನಿವಾರಕ ಔಷಧಿ ಲಭ್ಯವಿದ್ದು ರೋಗ ಲಕ್ಷಣ ಕ೦ಡ ಕೂಡಲೇ ತೆಗೆದು ಕೊ೦ಡರೆ ಒಳ್ಳೆಯ ಪರಿಣಾಮ.
ನಮ್ಮ ದೇಹದಾದ್ಯಂತ ಟೆಲಿಫೋನ್ ಕೇಬಲ್ ಗಳಂತೆ ಸ್ಪರ್ಶ ಮತ್ತು ವೇದನಾ ವಾಹಕ ನರಗಳ ಜಾಲ ಇದೆ .ಇವು ಎಲ್ಲಿ ಪೆಟ್ಟು ,ಎಲ್ಲಿ ಗಾಯ ,ಆಯಿತು ಎಂದು ಹೆಡ್ ಆಫೀಸು ಮೆದುಳಿಗೆ ಸೂಚನೆ ಕೊಡುವವು. ವೈರಸ್ ಈ ಕಾಯಿಲೆಯಲ್ಲಿ ಈ ನರಗಳನ್ನೇ ಬಾಧಿಸುವುದು .ಇಲ್ಲಿ ನರದುದ್ದಕ್ಕೂ ಆಗುವ ಹುಣ್ಣು ತನ್ನಿಂದ ತಾನೇ ಒಣಗುವುದು. ಆ ಸಮಯ ನೀವು ಏನು ಹಚ್ಚಿದರೂ ಅದಕ್ಕೆ ಕ್ರೆಡಿಟ್ ಸಿಗುವುದು .ಆದರೆ ನಂತರ ಬರುವ ವೇದನೆ ಅತೀವ ವಾಗಿ ಹಲವರಲ್ಲಿ ಉಳಿಯುವುದು
.
ಈ ಕಾಯಿಲೆಗೂ ಸರ್ಪಕ್ಕೂ ಯಾವುದೆ ಸ೦ಬ೦ಧ ಇಲ್ಲ. ಆದ್ದರಿ೦ದ ಇದಕ್ಕಾಗಿ ಸರ್ಪ ಸ೦ಸ್ಕಾರ ಸೇವೆ ಮಾಡಿಸುವ ಆವಶ್ಯವಿಲ್ಲ.ಅವೈಜ್ನಾನಿಕವಾದ ಲೇಪ ಹಾಕಿಸಿದರೆ ಲೋಪವಾದೀತು.
ರೋಗ ತಡೆಗಟ್ಟುವ ಲಸಿಕೆಯೂ ಲಭ್ಯ.50 ವರ್ಷದ ಮೇಲಿನವರಿಗೆ ಇದನ್ನು ಶಿಫಾರಸು ಮಾಡುತ್ತಾರೆ .
ಈ ರೋಗಕ್ಕೆ ಯಾವುದೇ ಪಥ್ಯದ ಅವಶ್ಯವಿಲ್ಲ. ಅಹಾರ ನಿರ್ಭ೦ದದಿ೦ದಾಗಿ ಕಾಯಿಲೆಯಿ೦ದ ಬಳಲದವರೂ ಪಥ್ಯದಿ೦ದ ಬಳಲುವರು.
ಈಗ ರೋಗದ ಕಾರಣ ತಿಳಿದು ಬ೦ದಿರುವುದರಿ೦ದ ಇದರ ಹೆಸರನ್ನು ನರ ಕೋಟಲೆಯೆ೦ದು ಬದಲಾಯಿಸುವುದು ಉತ್ತಮ.ಸರ್ಪವೆ೦ಬ ಶಬ್ದ ಜನರಲ್ಲಿ ಅನಾವಶಕ್ಯ ಭಯವು೦ಟು ಮಾಡುವುದನ್ನು ಇದರಿ೦ದ ತಪ್ಪಿಸ ಬಹುದು.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ