ಬೆಂಬಲಿಗರು

ಶನಿವಾರ, ಮಾರ್ಚ್ 30, 2013

ಗ್ಯಾಸ್ಟ್ರಿಕ್ ಟ್ರಬಲ್

 

ವೈದ್ಯ ಪ್ರಪಂಚದಲ್ಲಿ  ಈ ಶಬ್ದ ಅತಿಯಾಗಿ ಬಳಕೆಯಲ್ಲಿದೆ.ಅದರ ಅರ್ಥ ಬಹು ವಿಶಾಲ ವಾಗಿದೆ.ನಿಜವಾದ ಅರ್ಥದಲ್ಲಿ ನೋಡಿದರೆ 

ಗ್ಯಾಸ್ಟ್ರಿಕ್ ಎ೦ದರೆ ಜಠರ ಸಂಬಂದಿ ಎಂದು ಅರ್ಥ.ವಾಡಿಕೆಯಲ್ಲಿ ಅತಿ ಆಮ್ಲ ದಿಂದ ಹಿಡಿದು ಮೂತ್ರ ತೊಂದರೆ ವರೆಗೆ ಇದನ್ನು 

ಉಪಯೋಗಿಸುತ್ತಾರೆ.ಕೆಲವೊಮ್ಮೆ ಮೈಕೈ ನೋವು ತಲೆನೋವಿಗು ಇದನ್ನು ಎಳೆ ತರುವುದು ಉಂಟು.

 

ರೋಗಿಯು ಗ್ಯಾಸ್ಟ್ರಿಕ್ ಎಂದೊಡನೆ ಆಸಿಡ್ ಹಾರೀ ಮಾತ್ರೆ ಗಳನ್ನು ಬರೆಯುದು ಸಾಮಾನ್ಯವಾಗಿದೆ,ಇದು ಅನಾವಶ್ಯಕ ಮತ್ತು ಕರ್ಚು

ಹೆಚ್ಚಿಸುವ ದಾರಿ.

ಉದ್ವೇಗ ಟೆನ್ಸನ್ ಇರುವವರು ತಮಗರಿವಿಲ್ಲದಂತೆ ಗಾಳಿ ನುಂಗುತ್ತಾರೆ.ಅದೇ ಹೊಟ್ಟೆಯಲ್ಲಿ ವಾಯು ಉಪದ್ರ ಕೊಡುವುದು.ಅದಕ್ಕೂ

 

ಹೊಟ್ಟೆಯಲ್ಲಿರುವ ಆಮ್ಲದ ಅಂಶಕ್ಕೂ ಸಂಭಂದ ವಿಲ್ಲಾ.ಆದ್ದರಿಂದ ಇವರಿಗೆ ರಾಣಿಟಿದೀನ್ ,ಒಮೆಪ್ರಜೊಲ್ ನಂತಹ ಔಷಧಿ ಯಾಕೆ?

 

ಇನ್ನು ಉಬ್ಬಸ ರೋಗಿಗಳು ಕಷ್ಟ ಪಟ್ಟು ಉಸಿರಾಡುವಾಗ ಶ್ವಾಸ ಕೋಶಕ್ಕೆ ಹೋಗಬೇಕಾದ ಉಸಿರು ಗಾಳಿ ಹೊಟ್ಟೆಗೆ ಹೋಗಿ ಉಬ್ಬರ

 

ಉಂಟು ಮಾಡುವುದು ಸಾಮಾನ್ಯ ,ಇವರಿಗೆ ಅಸಿಡಿಟಿ ಗಿರುವ ಮದ್ದು ಯಾಕೆ?

 

ನಮ್ಮ ಹೊಟ್ಟೆಯಲ್ಲಿ ಯಾವಾಗಲೂ ಆಸಿಡ್ ಇರುತ್ತದೆ ,ಮತ್ತು ಜೀರ್ಣ ಕ್ರಿಯೆಗೆ ಅದು ಆವಷ್ಯವೂ ಹೌದು .ದೇಹದಲ್ಲಿ ರಕ್ತ ವುಂಟು

 

ಮಾಡಲು ಬೇಕಾದ ಕಬ್ಬಿಣವು ಹೊಟ್ಟೆಯಲ್ಲಿ ಆಮ್ಲವಿದ್ದರೆನೆ ಜೀರ್ಣ ವಾಗುವುದು.ಹೊಟ್ಟೆಯ ಕಿಚ್ಚನ್ನು ಸಂಪೂರ್ಣ ಹೋಗಲಾಡಿಸಿದರೆ

 

ಸೋಂಕು ರೋಗಗಳು (ಮುಖ್ಯವಾಗಿ ಹಿರಿಯ ನಾಗರಿಕರಲ್ಲಿ)ಬರಲು ಆಹ್ವಾನವಿತ್ತಂತೆ.

 

ಆದುದರಿ೦ದ ರೋಗಿಗಳು ತಮ್ಮ ತೊಂದರೆಯನ್ನು ನಿಖರ ವಾಗಿ ಹೇಳಬೇಕಲ್ಲದೆ ಗ್ಯಾಸ್ಟ್ರಿಕ್ ನಂತಹ  ಅಸ್ಪಸ್ಟ ಶಬ್ದಗಳನ್ನು ಬಿಡಬೇಕು .

ವೈದ್ಯರೂ  ಎಲ್ಲ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೂ ಆಮ್ಲ ಹರ ಔಷಧಿ ಬರೆಯುವುದು ಸಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ