ಬೆಂಬಲಿಗರು

ಮಂಗಳವಾರ, ಮಾರ್ಚ್ 5, 2013

ನಗುಮೋಮು

ತ್ಯಾಗರಾಜರ ಜನಪ್ರಿಯ ಕೀರ್ತನೆ  ನಗುಮೊಮು .ಇದನ್ನು ಜನಪ್ರಿಯಗೊಳಿಸಿದವರು ಬಾಲಮುರಳಿಕೃಷ್ಣ
ಎನ್ನಬಹುದು.ಅಭೇರಿ ರಾಗದಲ್ಲಿ ಇದನ್ನು ಹಾಡುತ್ತಾರೆ.ಇದರ ಭಾವಾರ್ಥ ಹೀಗಿದೆ.
ನಿನ್ನ ನಗುಮೊಗವ ಕಾಣದೆ ದುಕ್ಕಿರುತಿರ್ಪ ಎನ್ನ ಸಾಂತ್ವನಗೊಳಿಸಲ್ ಬಾರೆಯಾ ಓ ರಘುವರಾ.
ಹೇ ಗೋವರ್ಧನಧಾರಿ ನಿನ್ನ ಬಳಗದವರು ನಿನಗೆ ಸರಿ ಎನಿಪ ಸಲಹೆ ನೀಡರೆ? ಇಲ್ಲವಾದರೆ ನನ್ನ ದುಖವನರಿತೂ
ನಗುಮುಖವನೇಕೆ ತೋರದಿರ್ಪೆ?
ನಿನ್ನ ಆಣತಿಗೊಪ್ಪಿ ಗರುಡನೊಡನೆ ಬಾರನೇ?ಸಗ್ಗದಿಮ್ ಭೂಮಿಗನತಿ ದೂರವೆಂದು ಅವನಂಬನೆ?ಜಗದೊಡೆಯಾ
ಯಾರೊಡನೆ ಮೊರೆಯಿಡಲಿ?
ಎನ್ನ ದುಖಿ ಮಾಡದಿರು ನಾ ಸಹಿಸಲಾರೆ.ಎನ್ನ ನಿನ್ನವನೆಂದು ಒಪ್ಪಿಕೊ ತ್ಯಾಗರಾಜವ೦ದಿತ ನಿನ್ನ ನಗುಮೊಗ ಕಾಣದೆ
ಚಿಂತಿಸುತಿರ್ಪ ಎನ್ನ ಪಾಲಿಸೆಯಾ ರಘುವರಾ.
ಬಾಲಮುರಲಿ ಕೃಷ್ಣ ತರುಣದಲ್ಲಿ ಮತ್ತು ವಯಸ್ಸು ಆದ ಮೇಲೆ ಹಾಡಿದ ಪರಿ
 
https://www.youtube.com/watch?v=aktURvfHWnE


https://www.youtube.com/watch?v=ZY0GQfLXkfE

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ