ಬೆಂಬಲಿಗರು

ಸೋಮವಾರ, ಮಾರ್ಚ್ 25, 2013

ಉತ್ತಮ ರಾಷ್ಟ್ರಪತಿ

ಇತ್ತೀಚಿಗೆ ಬಿಡುಗಡೆಯಾದ ಕುಶವಂತ್ ಸಿಂಘರ ಪುಸ್ತಕ ಕುಶವಂತ್ ನಾಮಾ ತಮ್ಮ ೯೮ ನೆ ವಯಸ್ಸಿನಲ್ಲಿ ಬರೆದ ಸಣ್ಣ

ಹೊತ್ತಿಗೆ.ತಮ್ಮ ಕೊನೆಯ ಕೃತಿಯಿರಬಹುದೆಂದು ಬರೆದಿದ್ದಾರೆ.ಎಲ್. ಕೆ.ಅದ್ವಾನಿ ತಮ್ಮ ಬ್ಲಾಗಿನಲ್ಲಿ ಈ ಪುಸ್ತಕ ವನ್ನು

ಒಂದೇ ಉಸಿರಿಗೆ ಓದಿ ಮುಗಿಸಿದೆನೆಂದು ಬರೆದಿದಿದ್ದಾರೆ.ಅದ್ವಾನಿಯವರು ಒಳ್ಳೆಯ ಓದುಗರು. ತಮ್ಮ ಜೀಎವನ ಚರಿತ್ರೆಯಲ್ಲಿ

ತಮ್ಮ ಈ ಹವ್ಯಾಸದ ಬಗ್ಗೆ ಬರೆದಿದ್ದ್ದಾರೆ.

ಮೇಲಿನ ಪುಸ್ತಕದಲ್ಲಿ ಭಾರತದ ಅತ್ಯುತ್ತಮ ರಾಷ್ಟ್ರಪತಿ ಅಬ್ದುಲ್ ಕಲಾಮ್ ಎಂದು ಸಿಂಗ್ ಬರೆದಿದ್ದಾರೆ.ದಿ.ರಾಧಾಕೃಷ್ಣನರು

ವಿದ್ವಾನ್ಸರಾಗಿದ್ದರೂ ನಡೆ ನುಡಿ ಬೇರೆಯಾಗಿತ್ತು .ಜಕಿರ್ ಹುಸ್ಸೇನ್ ತಿಳಿದವರಾಗಿದ್ದರೂ ತಮ್ಮ ಸೀಮಿತ ಕರ್ತವ್ಯದ ಹೊರಗೆ

ಏನನ್ನೂ ಮಾಡಲಿಲ್ಲ ಎಂದಿದ್ದಾರೆ.

ಕುಶ್ವಂತರ ಪ್ರಕಾರ ಒಳ್ಳೆಯ ರಾಷ್ಟ್ರಪತಿಗೆ ಇರಬೇಕಾದ ಗುಣಗಳು.

ಕೈ ಬಾಯಿ ಶುದ್ಧವಿರುವವರು,ಸ್ವಜನ ಪಕ್ಷಪಾತದಿಂದ ದೂರವಿರುವವರು,ನೀತಿ ನಿಯಮವಿದ್ದು,ಹೊಸ ವಿಚಾರಗಳಿಗೆ ತೆರೆದವರು,

ಧೈರ್ಯಶಾಲಿ.


ಈ ಪುಸ್ತಕದಲ್ಲಿ ಚೋ ರಾಮಸ್ವಾಮಿಯವರ ತುಗ್ಲಕ್ ಪತ್ರಿಕೆ ಯಲ್ಲಿ ಬಂದ ರಾಷ್ಟ್ರಪತಿ ಹುದ್ದೆಗಾಗಿ ಬಂದ ಅಣುಕು ಜಾಹೀರಾತು

ಒಂದನ್ನು ಉಲ್ಲೇಖಿಸಿದ್ದಾರೆ.

ಹುದ್ದೆ.- ಭಾರತದ ರಾಷ್ಟ್ರಪತಿ

ವೃದ್ಧರಿಗೂ ಅನಾರೋಗ್ಯ ಪೀಡಿತ ರಿಗೂ ಒಳ್ಳೆಯ ಉದ್ಯೋಗ.

ವಯಸ್ಸು. ೩೫ರ ಮೇಲೆ. ೮೦ ದಾಟಿದವರಿಗೆ ಪ್ರಾಶಸ್ತ್ಯ

ಜವಾಬ್ದಾರಿ

೧.ಗಣ ರಾಜ್ಯೋಸ್ತ್ಸವ ದಿನ ಧ್ವಜಾರೋಹಣ ಮಾಡಿ ಜನತೆಗೆ ಸಾಂತ್ವನ ಹೇಳುವುದು.

೨.ದಯಾ ಅರ್ಜಿಗಳ ಪರಿಶೀಲನೆ ಮತ್ತು ಯಾವುದೇ ನಿರ್ಧಾರ ತೆಗೆದು ಕೊಳ್ಳದೇ ಇರುವುದು.

೩.ಕುಟುಂಬ ಸಮೇತ ವಿದೇಶ ಯಾತ್ರೆ ಕೈಗೊಳ್ಳುವುದು.

ಸಂಬಳ- ರೂ೧೫೦೦೦೦ ಮಾಸಿಕ

ಸವಲತ್ತುಗಳು. ಇಲ್ಲಿ ಬರೆಯಲು ಸ್ಥಲಾವಕಾಶವಿಲ್ಲದಿರುವುದರಿಂದ ರೂ ೧೦ ರ ಕ್ರೋಸ್ದ್ ಪೋಸ್ಟಲ್ ಆರ್ಡರ್

ಕಳಿಸಿದವರಿಗೆ ವಿವರಗಳುಳ್ಳ ಹೊತ್ತಿಗೆ ಕಳುಹಿಸಿ ಕೊಡಲಾಗುವುದು.

ನನ್ನ ಕಿಂಚಿತ್ ಅನುಭವ ಪ್ರಕಾರ ಕೆ ಆರ್ ನಾರಾಯಣ ಅವರೂ ಈ ಹುದ್ದ್ದೆಯ ಘನತೆ ಹೆಚ್ಚಿಸಿದವರು.ಉತ್ತರ ಪ್ರದೇಶದಲ್ಲಿ

ಬಹುಮತ ವಿದ್ದ ಕಲ್ಯಾಣ್ ಸಿಂಗ್ ಸರಕಾರವನ್ನು ವಜಾ ಗೊಳಿಸಲು ರಾಜ್ಯಪಾಲ ರೋಮೇಶ್ ಭಂಡಾರಿ ಶಿಫಾರಸು ಮಾಡಿದಾಗ

ಮತ್ತು ಇನ್ನೊಮ್ಮೆ ಬಿಹಾರದಲ್ಲಿ ರಾಬ್ರಿ ದೇವಿಯವರನ್ನು ವಜಾ ಮಾಡಲು ನಿರಾಕರಿಸಿ ಕೇಂದ್ರ ಸಂಪುಟಕ್ಕೆ ಹಿಂತಿರುಗಿಸಿದ

ವರು. ದುರದೃಷ್ಟವಶಾತ್ ಅಂತಹ ಧೀಮಂತ ರಾಷ್ಟ್ರಪತಿಗಳು ಯಾವ ಪಕ್ಷಕ್ಕೂ ಬೇಡ.

ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರವನ್ನು ವಜಾ ಗೊಳಿಸುವ ಯು ಪಿ ಎ ಶಿಫಾರಸ್ಸಿಗೆ ಕಲಾಮ್ ಸಹಿ ಹಾಕಿ ದ  ಕ್ರಮ

ಟೀಕೆಗೆ ಒಳಗಾಗಿತ್ತು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ