ಬೆಂಬಲಿಗರು

ಶನಿವಾರ, ಮಾರ್ಚ್ 9, 2013

ಎಂದರೋ ಮಹಾನುಬಾವುಲು

ಎಂದರೋ ಮಹಾನುಬಾವುಲು
ತ್ಯಾಗರಾಜರ ಪ೦ಚರತ್ನ ಕೀರ್ತನೆಗಳಲ್ಲಿ ಒ೦ದು. ಕೇರಳದ ಪ್ರಸಿದ್ಧ ಸ೦ಗೀತ ಗಾರ ಷಡ್ಕಲ ಗೊವಿ೦ದನ್ ಮಾರಾರ್ ಅವರ ಹಾಡುಗಾರಿಕೆ ಆಲಿಸಿ ಈ ಕೃ ತಿ ಅವರನ್ನು ಉದ್ದೇಶಿಸಿ ರಚಿಸಿದರೆ೦ಬ ಪ್ರತೀತಿ. ಇದನ್ನು ಶ್ರೀ ರಾಗದಲ್ಲಿ ಹಾಡುತ್ತಾರೆ. ಕನ್ನಡ ಭಾವಾರ್ಥ ಹೀಗಿದೆ

ಮಹಾನುಭಾವರೆನಿತೋ ಮ೦ದಿ ಅವರೆಲ್ಲರಿಗೆ ವ೦ದನೆಗಳು
ಚ೦ದಿರನ೦ತಹ ಸು೦ದರ ರೂಪಿ ದೇವನ  ಹೃದಯ ಮ೦ದಿರದಿರಿಸಿ ಆನ೦ದಿಪರವರು
ಸಾಮಗಾನ ಪ್ರಿಯನ ಪೂಜಿಪರು
ಮನವನನುಗೊಳಿಸಿ ಮನಸಿಜನ೦ದದ ದೇವನ ಪೂಜಿಪರು
ನಿನ್ನ ಅಡಿದಾವರೆಗಳಲ್ಲಿ ಹೃದಯವ ಅರ್ಪಿಸಿದವರು
ಮನುಜಕುಲ ರಕ್ಷಕನೇ,ಸ್ವರ,ರಾಗ ,ಲಯವರಿತು ನಿನ್ನ ಪೊಗಳಿ ಪಾಡುವ ವವರು
ಹರಿ ಮಹಿಮೆಯ ರತ್ನಗಳ ಧರಿಪರು ಪ್ರೀತಿ ಪ್ರೇಮ ಗಳನೆ ಜಗಕೆ ತೋರು ವರು
ನಿನ್ನ ಸುಂದರ ನಡೆಯ ಕಂಡು ಹರುಶಗೊಲ್ಲುವರು
ಸೂರ್ಯ ಚಂದ್ರ ಸನಕ ಸನಾತನ,ದಿಕ್ಪಾಲಕರು,ದೇವರು,ಕಿಂಪುರುಷರು ,ಪ್ರಹ್ಲಾದ,ನಾರದ,ತುಂಬುರು,ಆಂಜನೇಯ,ಶಿವ,ಬ್ರಹ್ಮ,ಬ್ರಾಹ್ಮಣರು
ದೇವನ ಬ್ರಹ್ಮಪಾದ ಸ್ವರೂಪ ವ  ಆನಂದಿಸುವರು
ಇವರಲ್ಲದೆ ಇನ್ನೂ ಹಲವರಿಹರು ಅವರಿಗೆಲ್ಲ ವಂದನೆಗಳು
ನಿನ್ನ ರೂಪ ,ನಾಮ,ಶೂರತ್ವ ,ಪ್ರಶಾಂತ ಹೃದಯ ,ನಿಜ ನುಡಿಯ ಪೊಗಳುವರು
ಭಾಗವತ ರಾಮಾಯಣ ಗೀತೆ ಶ್ರುತಿ, ಶಾಸ್ತ್ರ , ೩೩ ಕೋಟಿ ದೇವರ
ಭಾವರಾಗ ತಾಳವರಿತವರು ಅವರು ಧೀರ್ಘ ಸುಖೀ ಜೀವನ ನಡೆಸುವರು
ತ್ಯಾಗರಜಪ್ರಿಯರುಭಕ್ತಿಯೋಳುನಿನ್ನ ನೆನೆವರು
ರಾಮ ಭಕ್ತರು,ತ್ಯಗರಾಜಾರಾಧಕರು,ನಿನ್ನ ಪೂಜಿಸುವರು

ಎಲೇ ಮರೆಯ ಕಾಯಿಯಂತೆ  ನಮ್ಮೊಳಗೆ ಇರುವ ಮಹಾನ್ ಮಹಾನ್ ಪ್ರತಿಭೆಗಳನ್ನೆಲ್ಲ ಉದ್ದೇಶಿಸಿ ರಚಿಸಿ ಹಾಡಿದ ಕೀರ್ತನೆ ಎನಿಸುತ್ತದೆ .
ಸಂಗೀತ  ಕ್ಷೇತ್ರ ದ  ಭೀಷ್ಮ  ಚೆಂಬೈ ಹಾಡಿದ  ಈ  ಕೃತಿಯ  ಲಿಂಕ್  ಕೆಳಗಿದೆ . ಮೂ ಲ  ಅಪ್ ಲೋಡರ್ ಗಳಿಗೆ  ವಂದಿಸಿwww.youtube.com/watch?v=35KbLo625jI

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ