ಬೆಂಬಲಿಗರು

ಮಂಗಳವಾರ, ಮಾರ್ಚ್ 19, 2013

ನಿಧಿ ಜಾಲ ಸುಖಮಾ

ಇದು ತ್ಯಾಗರಾಜ ಜನಪ್ರಿಯ ರಚನೆ.ತ್ಯಾಗರಾಜರ ಸಂಗೀತಕ್ಕೆ ಮನಸೋತ ರಾಜನು ಅವರನ್ನು

ತಮ್ಮ ಆಸ್ಥಾನ ಗಾಯಕರಾಗಿ ಬರಲು ಬೇಡಿಕೊಳ್ಳುವುದಲ್ಲದೆ ಎಷ್ಟು ಬೇಕಾದರೂ ವರಹಗಳನ್ನು

ಕೊಡುತ್ತೇನೆಂದು ಹೇಳಿದಾಗ ಹಾಡಿದ ರಚನೆಯೆಂದು ಪ್ರತೀತಿ.

ಇದನ್ನು ಕಲ್ಯಾಣಿ ರಾಗದಲ್ಲಿ ಹಾಡುತ್ತಾರೆ.

ಭಾವಾರ್ಥ ಹೀಗಿದೆ,

ನಿಧಿ ಬಲು ಸುಖವೋ ರಾಮನ ಸ

ನ್ನಿಧಿ  ಬಲು ಸುಖವೋ

ನಿಜ ಹೇಳೇ ಮನವೇ .

ಮೊಸರು  ನವನೀತ ಹಾಲು ರುಚಿಯೋ

ರಾಮನ ಭಜನ ಸುಧಾರಸ ರುಚಿಯೋ

ಸಂಮನಸ್ಸು ಶಾಂತತೆಯ ಗಂಗಾ ಸ್ನಾನ ಸುಖವೋ

ದುರ್ವಿಚಾರಗಳ ಬಾವಿ ಸ್ನಾನ ಸುಖವೋ

ಸಾರ್ಥದಲಿ ತುಂಬಿರುವ ಮನುಜ ಪೊಗಳುವಿಕೆ ಸುಖವೋ

ನಿರ್ಮಲ ಮನದ ದೇವನ ಸ್ತುತಿಪ ತ್ಯಾಗರಾಜ ಕೀರ್ತನ  ಸುಖವೋ

ಗಾನ ಕೋಗಿಲೆ  ಎಂ ಎಸ. ಸುಬ್ಬುಲಕ್ಷ್ಮಿ ಹಾಡಿದ ಈ ಕೀರ್ತನೆ ಕೇಳಲು ಕ್ಲಿಕ್ಕಿಸಿ

http://www.youtube.com/watch?v=28TFewwamK8


1 ಕಾಮೆಂಟ್‌: