ಆಮರಣ ಉಪವಾಸ ಸತ್ಯಾಗ್ರಹ
ಉಪವಾಸ ಸತ್ಯಾಗ್ರಹ ಗಾಂಧಿಜಿಯವರು ಪ್ರಚುರ ಪಡಿಸಿದ ಅಹಿಂಸಾ ಹೋರಾಟ ಮಾರ್ಗ.ಸ್ವತಂತ್ರ ಭಾರತದಲ್ಲಿ
ಬಹಳ ಮಂದಿ ಇದನ್ನು ಅಸ್ತ್ರವಾಗಿ ಬಳಸುತ್ತಿದ್ದಾರೆ. ಹಲವು ಮಂದಿ ಬಹಳ ಪ್ರಚಾರದೊಡನೆ ಆಮರಣ ಸತ್ಯಾಗ್ರಹ
ಆರಂಬಿಸಿ ಕೊನೆಗೆ ಯಾರ್ಯಾರ ಕಾಲು ಹಿಡಿದು ಉಪವಾಸ ಕೊನೆಗೊಳಿಸುವ ವಿನಂತಿ ಮಾಡಿಸಿಕೊಳ್ಳುತ್ತಾರೆ.
ಮೂರು ಅಪವಾದಗಳಿವೆ
ಒಬ್ಬರು ಪೊಟ್ಟಿ ಶ್ರೀರಾಮುಲು ಅವರು .ಸ್ವಾತಂತ್ರ್ಯ ಹೋರಾಟಗಾರ.ಮದ್ರಾಸ್ ಪ್ರಾಂತ್ಯದಿಂದ ತೆಲುಗು ಭಾಷಿಕ
ಪ್ರದೇಶಗಳನ್ನು ಬೇರ್ಪಡಿಸಿ ಆಂಧ್ರ ರಾಜ್ಯ ಸ್ಥಾಪನೆಗಾಗಿ ಅವರು ಮದ್ರಾಸ್ ನಗರದಲ್ಲಿ ಉಪವಾಸ ಆರಂಬಿಸಿ
೧೬.೧೨.೧೯೫೨ ರಂದು ಹುತಾತ್ಮರಾದರು .ಅದರಿಂದ ಉದ್ಹ್ಭವಿಸಿದ ಜನಾಕ್ರೋಶಕ್ಕೆ ಮಣಿದು ನೆಹರು
೧.೧೦.೧೯೫೩ ರಂದು ಕರ್ನೂಲು ಕೇಂದ್ರವಾಗಿ ಆಂಧ್ರ ಪ್ರದೇಶವನ್ನು ಘೋಷಿಸಿದರು.ಮುಂದೆ ಹೈದರಾಬಾದ್
ನ ಭಾಗವಾಗಿದ್ದ ತೆಲಂಗಾಣ ಸೇರಿ ಈಗಿನ ಆಂಧ್ರ ಪ್ರದೇಶ ೧.೧೧.೧೯೫೬ ಕ್ಕೆ ಉದಯವಾಯಿತು.
ಇನ್ನೊಬ್ಬರು ದರ್ಶನ್ ಸಿಂಗ್ ಪೆರುಮಾನ್.ಇವರೂ ಅಪ್ರತಿಮ ದೇಶ ಭಕ್ತ ಮತ್ತು ಸ್ವಾತಂತ್ರ್ಯ ಹೋರಾಟಗಾರ.
ಸ್ವಾತಂತ್ರ್ಯ ಸಮರದ ವೇಳೆ ಮಲೇಷ್ಯಾದಲ್ಲಿ ಬ್ರಿಟಿಷರು ಅವರನ್ನು ಬಂದಿಸಿ ಜೈಲಿನಲ್ಲಿ ಇಟ್ಟಿದ್ದ ವೇಳೆ ನಿಯಮ
ಪ್ರಕಾರ ಒಳ ಉಡುಪು ಧರಿಸಲು ಬಿಟ್ಟಿಲ್ಲ ಎಂದು ಉಪವಾಸ ಆರಂಭಿಸಿ ಅಧಿಕಾರಿಗಳು ಬೇಡಿಕೆಗೊಲಿದ ಮೇಲೆ
ಅನ್ನಾಹಾರ ಸೇವಿಸಿದ್ದರು.ಚಂದಿಘಡ ವನ್ನು ಪಂಜಾಬ್ ರಾಜ್ಯಕ್ಕೆ ಸೇರಿಸಬೇಕು ಎಂಬ ಅಕಾಲಿ ಬೇಡಿಕೆಗೆ
ಗಮನ ಸೆಳೆಯಲು ೧೫.೮.೧೯೬೯ ರಂದು ಉಪವಾಸ ಆರಂಬಿಸಿ ೭೪ ದಿನಗಳ ನಂತರ ೨೭.೧೦ ೬೯ ರಂದು
ನಿಧನ ರಾದರು.ಆ ಕಾಲಕ್ಕೆ ಕನ್ನಡಿಗ ಡಿ ಸಿ ಪಾವಟೆ ಪಂಜಾಬಿನ ರಾಜ್ಯಪಾಲ ರಾಗಿದ್ದರು.ಅವರ ಪುಸ್ತಕದಲ್ಲಿ
ಪೆರುಮಾನ ರ ಬಗ್ಗೆ ಬಹಳ ಗೌರವ ದಿಂದ ಬರೆದಿದ್ದಾರೆ.ಉಪವಾಸ ನಿಲ್ಲಿಸಲು ವಿನಂತಿಸಿದ ಪ್ರಧಾನಿ ಇಂದಿರಾ
ಗಾಂಧಿಯವರಿಗೆ ಅವರು ಬರೆದ ಉತ್ತರ ಅವರು ಎಂತಹ ಸಂತ ರಾಗಿದ್ದರೆಂದು ತಿಳಿಸುತ್ತದೆ. ಆ ಪತ್ರದುದ್ದಕ್ಕು
ಇಂದಿರಾ ಅವರನ್ನು ಮಗಳೇ ಎಂದು ಸಂಬೋದಿಸಿದ್ದಲ್ಲದೆ ,ಅವರಿಗೂ ದೇಶಕ್ಕೂ ಒಳ್ಳೆಯದನ್ನು ಹಾರೈಸುತ್ತಾರೆ.
ಸಿಕ್ಖನಾಗಿ ಪ್ರತಿಜ್ಞೆ ಮಾಡಿದ ಮೇಲೆ ಕಾರ್ಯ ಸಾಧನೆ ಯಾಗದೆ ಹಿಂದೆ ಸರಿಯುವಂತಿಲ್ಲ ಎಂದು ಉಪವಾಸ
ನಿಲ್ಲಿಸಲು ನಿರಾಕರಿಸಿ ಪ್ರಧಾನಿ ಗೆ ತಮ್ಮ ಅಂತಿಮ ನಮಸ್ಕಾರ ಹೇಳುತ್ತಾರೆ .ಅವರ ತ್ಯಾಗ ವನ್ನು ಅವಕಾಶ
ವಾದಿ ರಾಜಕಾರಣಿಗಳು ಬಳಸಿಕೊಂಡದ್ದನ್ನು ಪಾವಟೆಯವರು ವಿವರಿಸಿದ್ದಾರೆ.

ಇತ್ತೀಚೆಗೆ ಪರಿಸರವಾದಿ ಶ್ರೀ ಗುರು ದಾಸ್ ಅಗ್ರವಾಲ್ (ಸಂತ ಸ್ವಾಮಿ ಸಾನಂದ ) ಗಂಗಾ ನದಿಯ ನೈರ್ಮಲ್ಯ ಕಾಪಾಡುವತ್ತ ಗಮನ ಸೆಳೆಯಲು 111 ದಿನಗಳ ಉಪವಾಸಾನಂತರ 2018 ನೇ ಇಸವಿ ಅಕ್ಟೋಬರ್ 11 ರಂದು ದೇಹ ತ್ಯಾಗ ಮಾಡಿದರು .ಸ್ವಯಂ ಇಂಜಿನೀಯರ ,ಪ್ರಾಧ್ಯಾಪಕ ,ಸರಕಾರಿ ಅಧಿಕಾರಿ , ಸನ್ಯಾಸಿ ಮತ್ತು ಪರಿಸರ ವಾದಿ ಆಗಿದ್ದ ಅವರ ತ್ಯಾಗ ಬಹಳ ಮಂದಿ ಮತ್ತು ಸರಕಾರಗಳು ಗುರುತಿಸದಿರುವುದು ಖೇದಕರ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ