ಶಂಕರಾಚಾರ್ಯರು ಭಜ ಗೋವಿಂದಮ್ ಭಜ ಗೋವಿಂದಮ್ ಭಜ ಗೋವಿಂದಮ್ ಮೂಢ ಮತೇ ಎಂದರೆ ಸಾಕ್ಷಾತ್ಕಾರಕ್ಕೆ ಕ್ಲಿಷ್ಟ ಸಂಸ್ಕೃತ ಶಬ್ದ ಗಳ ವ್ಯಾಕರಣ ಶುದ್ಧ ಮಂತ್ರ ಇಲ್ಲದೆ ಗೋವಿಂದನನ್ನು ಭಜಿಸಿರಿ ಸಾಕು ಮೂಢಗಳಿರಾ ಎಂದರು .ದಾಸರು ನರ ಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ ಎಂದು ಹಾಡಿದರು. .ಅದರಿಂದ ಸ್ಪೂರ್ತಿ ಪಡೆದು ಗೋವಿಂದಾ ಕೃಷ್ಣಾ ಕಾಪಾಡೋ ಶ್ರೀಹರಿ ಎಂದು ಅಚ್ಚ ಕನ್ನಡದಲ್ಲಿ ಭಜನೆ ಮಾಡುತ್ತೀರಿ .
ಆಗ ದಾಸರ ಪದ್ಯ ಕಿವಿಗೆ ಬೀಳುತ್ತದೆ .ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವು ಎನ್ನ ನಾಲಿಗೆಗೆ ಬರಲಿ .ಕೃಷ್ಣ ಕೃಷ್ಣಾ ಎಂದು ಶಿಷ್ಟರು ಪೇಳುವ ಕಷ್ಟದ ಒತ್ತಕ್ಷರದ ಬದಲು ನಾರಾಯಣ ನಾರಾಯಣ ಎಂಬ ಸರಳ ಅಷ್ಟಾಕ್ಷರಿ ಸಾಕು ಎನ್ನುವರು .
ಅದೇ ನೀವು ನಾರಾಯಣ ನಾಮ ಸ್ಮರಣೆಯಲ್ಲಿ ತೊಡಗಿದಿರಾ ಅವರೇ ಆ ಮಂತ್ರ ಈ ಮಂತ್ರ ಎಂದು ನೀ ಕೆಡ ಬೇಡ ಸೋಮಶೇಖರನಿಗೆ ಒಲಿದ ಸರಳ ರಾಮ ಮಂತ್ರ ಸಾಕು ರಾಮ ಮಂತ್ರವ ಜಪಿಸೋ ಎನ್ನುವರು.
ಇದೆಲ್ಲ ಕೇಳಿ ನೀವು ಗಲಿ ಬಿಲಿ ಗೊಂಡು ದಾಸರನ್ನು ಶಪಿಸಿದರೆ ದಾಸರ ನಿಂದಿಸ
ಬೇಡ ಎಂಬ ದೇವರ ನಾಮ ರಡಿ. ಇನ್ನೇನು ಮಾಡುವಿರಿ ಭಕ್ತ ಮಹಾಶಯರೇ ?

ಆದರೆ ದೇವರ ನಾಮ ಸ್ಮರಣೆ ನಿಲ್ಲಿಸಲು ಆಗುವುದೇ ?ನೀನ್ಯಾಕೋ ನಿನ್ನ ಹಂಗು ಯಾಕೋ ನಿನ್ನ ನಾಮದ ಬಲ ಒಂದಿದ್ದರೆ ಸಾಕೋ ಎಂದೂ ಇದೆಯಲ್ಲ .ನನ್ನ ಮಡದಿ ದಿನವೂ ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ ,ಪದುಮನಾಭನ (ನನ್ನ ಹೆಸರು ಪದ್ಮನಾಭ )ಪಾದ ಭಜನೆ ಸುಖವಯ್ಯಾ ಎಂದು ಭಜನೆ ಮಾಡುವಾಗ ಒಂದು ಸುಖ ಶಾಂತಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ