ಬೆಂಬಲಿಗರು

ಗುರುವಾರ, ಮಾರ್ಚ್ 19, 2015

ಹಾಸಿಗೆಯಲ್ಲಿಯ ಭೂತ

ಖ್ಯಾತ ಲೇಖಕ ಸುಂದರ ರಾಮ ಸ್ವಾಮಿಯವರ  ಕೃತಿ  ಕೊಳಂದೆಗಳ್ ಪೆಣ್ಗಳ್ 

ಮತ್ತು  ಆಂಗಳ್ ಇಂಗ್ಲಿಷ್ ಅನುವಾದ ಓದುತ್ತಿದ್ದೆ . ಅದರಲ್ಲಿ  ಬಾಲು ಎಂಬ 

ಹುಡುಗನ ಸ್ವಗತ ಹೀಗಿದೆ ."ಅಪ್ಪ ಬರುವುದರೊಳಗೆ ಚಾಪೆ ಮಡಿಚಿ ಇಡಬೇಕು .

ಇಲ್ಲದಿದ್ದರೆ  ಬಿಡಿಸಿಟ್ಟ ಚಾಪೆ ಕಂಡು ಆತನ ಮುಖ ಕೆಂಪೇರಿ ಕೈಗಳು 

ಕಂಪಿಸಲಾರಂಬಿಸುತ್ತವೆ. ತೆರೆದ ಖಾಲಿ  ಹಾಸಿಗೆಯಲ್ಲಿ ದುಷ್ಟ ಶಕ್ತಿಗಳು 

ಮಲಗುವುವು .ಆ ಮೇಲೆ ಜೀವನ ಪರ್ಯಂತ ಅವುಗಳ ನಿರ್ಮೂಲನ ಅಸಾಧ್ಯ ."

 ಈ ನಂಬಿಕೆ ನಮ್ಮಲ್ಲಿಯೂ ಇತ್ತು .ಬೆಳಿಗ್ಗೆ ಎದ್ದೊಡನೆ  ಚಾಪೆ ಅಥವಾ ಹಾಸಿಗೆ 

ಮಡಿಚಿ ಇಡುವುದು  ಮೊದಲೆಲ್ಲ ರೂಡಿ. ಈಗ ಆ ಅಭ್ಯಾಸ ಹೋಗಿದೆ .

ತೆರೆದಿಟ್ಟ ಹಾಸಿಗೆಯಲ್ಲಿ  ಧೂಳು ಕ್ರಿಮಿ (Dust mite )ಎಂಬ  ಫಂಗಸ್  ಮನೆ ಮಾಡುವುದು .ಅದು  ದೊಡ್ಡ  ಅಲರ್ಜಿ ಕಾರಕ . 

                        



ರಾತ್ರಿ  ಮಲಗಿದೊಡನೆ ಮತ್ತು ಫ್ಯಾನ್ ನ ಗಾಳಿಗೆ  ಇವು ಮೇಲೆದ್ದು  ನಾವು 

ಉಸಿರಾಡುವ ಗಾಳಿಯೊಡನೆ  ಶ್ವಾಸಕೋಶಕ್ಕೆ ಹೋಗಿ  ಅಲರ್ಜಿ ಉಂಟು 

ಮಾಡುತ್ತವೆ .



ಇದರಿಂದ ಸೀನು ,ಅಸ್ತಮಾ ಇತ್ಯಾದಿ  ಉಂಟಾಗ ಬಹುದು .ಇದನ್ನೇ  ನಮ್ಮ 


ಹಿಂದಿನವರು   ದುಷ್ಟ ಶಕ್ತಿ ಅಥವಾ  ಭೂತ ಎಂದು ಕರೆದಿದ್ದಿರಬಹುದು .

( ಚಿತ್ರದ ಮೂಲಕ್ಕೆ ಅಭಾರಿ )

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ