ನಮ್ಮ ಹೊಟ್ಟೆಯಲ್ಲಿ ಮೇದೊಜಿರಕ ಗ್ರಂಥಿ ಇದೆ.ಆಹಾರ ಪಚನಕ್ಕೆ ಬೇಕಾದ ರಸವಿಶೇಶಗಳನ್ನು ಕರುಳಿಗೂ ರಕ್ತದ ಸಕ್ಕರೆ ನಿಯಂತ್ರಣಕ್ಕೆ ಇನ್ಸುಲಿನ್ ಹಾರ್ಮೋನ್ ರಕ್ತಕ್ಕೂ ಬಿಡುಗಡೆ ಮಾಡುವ ಪ್ರಾಮುಖ್ಯ ಅಂಗ .
ಇನ್ಸುಲಿನ್ ಹಾರ್ಮೋನ್ ನ ಕಾರ್ಯವೇನು ?
ಸಂಚರಿಸುವ ರಕ್ತದಿಂದ ಎಲ್ಲಾ ಜೀವಕೋಶಗಳಿಗೆ ಗ್ಲುಕೋಸ್ ಸಾಗಣೆ ಮತ್ತು
ಆಪತ್ಕಾಲದಲ್ಲಿ ಉಪಯೋಗಕ್ಕಾಗಿ ದೇಹದ ಉಗ್ರಾಣಗಳಾದ ಲಿವರ್ ಮತ್ತು ಮಾಂಸ ಖಂಡ ಗಳಲ್ಲ್ಲಿ ಸಕ್ಕರೆ ದಾಸ್ತಾನು ಮಾಡುವುದು.
ಆದುದರಿಂದ ಇನ್ಸುಲಿನ್ ಹಾರ್ಮೋನ್ ಕೊರತೆಯಾದರೆ ಜೀವಕೋಶ ಮತ್ತು ಉಗ್ರಾಣ ಗಳಿಗೆ ಹೋಗುವ ಸಕ್ಕರೆ ರಕ್ತದಲ್ಲಿ ಉಳಿದು ಸಕ್ಕರೆ ಪ್ರಮಾಣ ಏರುತ್ತದೆ .ಕವಿ ಹೇಳಿದಂತೆ 'ನೀರು ನೀರು ಎಲ್ಲೆಡೆ ನೀರು ಕುಡಿಯಲೊಂದು ಬಿಂದು ಕಾಣೆ " .ರಕ್ತದಲ್ಲಿ ಸಕ್ಕರೆ ಇದ್ದರೂ ಜೀವಕೋಶಗಳಿಗೆ ದಕ್ಕುವುದಿಲ್ಲ .ಇದರಿಂದ ಅತೀ ಆಯಾಸ ಮತ್ತು ಹಸಿವು.
ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿದ ಪರಿಣಾಮ ಅದರ ಸಾಂದ್ರತೆ ಅಧಿಕ ಆಗುವುದು .ಮೆದುಳಿನಲ್ಲಿ ರಕ್ತದ ಸಾಂದ್ರತಾ ಮಾಪಕ ಕೇಂದ್ರ ಇದೆ .ಕೂಡಲೇ ಪರಿಸ್ತಿತಿಯನ್ನ್ನು ಗಮನಿಸಿ ಅದು ಮೆದುಳಿನಲ್ಲಿ ಇರುವ ದಾಹ ಕೇಂದ್ರಕ್ಕೆ ಸೂಚನೆ ರವಾನಿಸುತ್ತದೆ .ಅದರಿಂದ ಬಾಯಾರಿಕೆ ಉಂಟಾಗುವುದು ,ದಾಹ ಆರಿಸಲು ನೀರು ಸೇವಿಸಿದರೆ ಸಾಂದ್ರತೆ ಸಾಮಾನ್ಯ ಮಟ್ಟಕ್ಕೆ ಬರಲಿ ಎಂಬ ಉದ್ದೇಶ . ಇದರಿಂದ ತೀರದ ದಾಹ .
ಏರಿದ ಸಕ್ಕರೆ ಯೊಂದಿಗೆ ತನ್ನಲ್ಲ್ಲಿಗೆ ಹರಿದ ರಕ್ತದಿಂದ ಮೂತ್ರಪಿಂಡಗಳು ಸಕ್ಕರೆಯನ್ನು ಪುನಃ ಹೀರಿ ಮೂತ್ರದ ಮೂಲಕ ಸಕ್ಕರೆ ನಷ್ಟವಾಗದಂತೆ ನೋಡಿಕೊಳ್ಳುವವು.ಆದರೆ ಸಕ್ಕರೆ ಪ್ರಮಾಣ ಮಿತಿ ಮೀರಿದರೆ ಅವುಗಳ ಹಿಡಿತ ಶಿಥಿಲ ಗೊಂಡು ಮೂತ್ರದಲ್ಲಿ ಸಕ್ಕರೆ ವಿಸರ್ಜನೆ ಆಗುವುದು.ಸಕ್ಕರೆಯು ತನ್ನೊಡನೆ
ನೀರನ್ನೂ ಸೆಳೆಯುವುದರಿಂದ ಅತೀ ಮೂತ್ರ ವಿಸರ್ಜನೆ ಆಗುವುದು . ಇದರಿಂದ ದಾಹ ಇನ್ನ ಷ್ಟು ಏರುವುದಲ್ಲದೆ
ಕ್ಷಣ ಕ್ಷಣ ಕ್ಕೂ ಮೂತ್ರ ಮಾಡ ಬೇಕೆನಿಸುವುದು .
ಇನ್ಸುಲಿನ್ ಕೊರತೆಯಿಂದ ಜೀವ ಕೋಶಗಳಿಗೆ ಸಕ್ಕರೆ ಸಿಕ್ಕದಾಗ ಶರೀರದ ಕೊಬ್ಬು ಕರಗಿ ತಾನಾದರೂ ಸ್ವಲ್ಪ ಶಕ್ತಿ ಕೊಡಲು ಯತ್ನಿಸುವುದು . ಇದರಿಂದ ತೂಕ ಇಳಿದು ಶರೀರ ಬಡವಾಗುವುದು
ಮೂತ್ರದಲ್ಲಿ ಸಕ್ಕರೆ ಯು ಫಂಗಸ್ ಗಳಿಗೆ ಒಳ್ಳೆಯ ಆಹಾರ .ಇದರಿಂದ ಮುತ್ರಾಂಗ ದ ತುದಿಯಲ್ಲಿ ಫಂಗಸ್ ಸೋಂಕು
ಪದೇ ಪದೇ ಆಗುವುದು ಸಕ್ಕರೆ ಕಾಯಿಲೆ ಲಕ್ಷಣ
ಇನ್ಸುಲಿನ್ ಕೊರತೆಯಿಂದ ಸಕ್ಕರೆ ಕಾಯಿಲೆ .ಸಕ್ಕರೆ ಕಾಯಿಲೆಯ ರೋಗ ಚಿನ್ಹೆಗಳ ವೈಜ್ಞಾನಿಕ ಕಾರಣ ತಿಳಿಯಿತಲ್ಲವೇ ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ