ಬೆಂಬಲಿಗರು

ಶನಿವಾರ, ಮಾರ್ಚ್ 7, 2015

ಸೌದಿ ಅರೇಬಿಯಾ ದ ಕೆಲವು ನೆನಪುಗಳು ೧

 

ನಾನು ಇದ್ದ ಸ್ಥಳ ಅಲ್ ಘರಿಯಾ .ಇಲ್ಲಿನ ನಿವಾಸಿಗಳನ್ನು ಮಾಲ್ಕಿಗಳು ಎಂದು

ಕರೆಯುವರು .ಸ್ನೇಹ ಜೀವಿಗಳು ಮತ್ತು ಸುಸಂಸ್ಕೃತರು .ಘರಿಯಾ ಮರುಳು

ಗಾಡು ಅಲ್ಲ.ಗಿಡ ಮರಗಳು ,ಕೃಷಿ ಭೂಮಿಯೂ ಇದ್ದಊರು. ದಾಳಿಂಬೆ ಹಣ್ಣಿನ

ಮರಗಳು ಎಲ್ಲೆಲ್ಲೂ ,ಹೊಲಗಳಲ್ಲಿ ತರಕಾರಿ ಬೆಳೆಯುತ್ತಿದ್ದರು .ಹೆಚ್ಚಿನ

ವಿದ್ಯಾವಂತ ತರುಣರು ಜೆದ್ದಾ ,ರಿಯಾದ್ ಗಳಂತಹ ನಗರಗಳಿಗೆ ವಲಸೆ ಹೋಗಿ

ಹಿರಿಯರೇ ಉಳಿದಿದ್ದ ಊರು.                                                                      

ಅಪ್ಫ್ಗಾನರ ರೊಟ್ಟಿ ಅಂಗಡಿ .ನಮ್ಮ ಅಮೀರ  ಖಾನ್ ನನನ್ನು

ಹೋಲುವ ಸುಂದರಾಂಗ ಧೃಡಕಾಯರು ,ಸ್ನೇಹ ಜೀವಿಗಳು .ಹಿಂದಿ ಭಾಷೆ

ಸಿನೆಮಾ ಎಂದರೆ ಅವರಿಗೆ ಇಷ್ಟ.ತಮ್ಮ ದೇಶ ಅಫ್ಘಾನಿಸ್ತಾನದ ಅಶಾಂತಿಯಿಂದ

ದೇಶ ಬಿಟ್ಟು ಬಂದವರು .ಈ ಮಣ್ಣನ್ನು ತಮ್ಮ ದೇಶವನ್ನಾಗಿ ಮಾಡಿ

ಕೊಂಡಿದ್ದಾರೆ .ಮೈದಾ ದಿಂದ  ಮಾಡಿ ಕುಲುಮೆಯಲ್ಲಿ ಬೇಯಿಸಿ ರೋಟಿ

ತಯಾರಿಸುವರು .ಅದಕ್ಕೆ ಕುಬ್ಸು ಎಂದು ಕರೆಯುವರು .ರಿಯಾಲಿಗೆ ೫ ಕುಬ್ಸು

ಸಿಗುತ್ತಿತ್ತು ,ಇಲ್ಲಿ ಬೇರೆ ದೇಶದವರು ಎಷ್ಟು ದಶಕ ವಾಸವಾಗಿದ್ದರೂ 

ಪರಕೀಯರೇ.ಇಲ್ಲಿಯ ಪೌರರಾಗಲು ಅವಕಾಶ ಇಲ್ಲ .ಈ ಆಫ್ಘಾನರೆಲ್ಲ ತಮ್ಮ

ದೇಶಕ್ಕೆ ಮರಳಿದರೆ  ಸೌದಿಯ ಅರಬ್ಬರು ಉಪವಾಸ ಬೀಳ ಬೇಕಾದೀತು .

 

  ಇನ್ನು ಪಾಕಿಸ್ತಾನೀಯರು .ವೈದ್ಯರಿಂದ ಹಿಡಿದು ಕ್ಷರಿಕ ವೃತ್ತಿಯ ವರೆಗೆ ಎಲ್ಲಾ

ಉದ್ಯೋಗದಲ್ಲಿ ಇರುವರು .ನನ್ನ ಸಹಯೋಗಿ ಇಬ್ಬರು ಆ ದೇಶದವರು .ಒಳ್ಳೆಯ

ಮಿತ್ರರು .ಅವರಲ್ಲಿ ಒಬ್ಬರು ಡಾ ಸಂಶೆರ್ ಖಾನ್ .ನನ್ನ ವಾಕಿಂಗ್ ಜತೆಗಾರರು .

ಕ್ಷೌರಿಕ ಪಾಕಿಸ್ತಾನಿ .ನನ್ನಿಂದ ಹಣ ತೆಗೆದು ಕೊಳ್ಳಲು ನಿರಾಕರಿಸುತ್ತಿದ್ದ .ನಾನು

ಊರಿಗೆ ಮರಳುವಾಗ ಉಡುಗೊರೆಗಳನ್ನು ಕೊಟ್ಟು ಕಳುಸಿದ .ಮಿಕ್ಕಂತೆ ಭಾರತ

ಪಾಕಿಸ್ತಾನ ವೈರತ್ವ ಕಂಡು ಬರದು .ಇಂಡಿಯಾ ಪಾಕಿಸ್ತಾನ ಕ್ರಿಕೆಟ್ ಮ್ಯಾಚ್

ಇದ್ದಾಗ ಮಾತ್ರ ನಾವು ಎದುರಾಳಿಗಳು .ಇಂಡಿಯಾ ದವರು ಮತ್ತು

ಪಾಕಿಸ್ತಾನಿಯರು ತಮ್ಮ ತಮ್ಮ ದೇಶಬಾಂಧವರೊಂದಿಗೆ ಮ್ಯಾಚ್ ನೋಡುವ 

ಅನುಭವ ರೋಮಾಂಚಕಾರಿ .ನನ್ನ ಸುಡಾನ್ ಮಿತ್ರರೊಬ್ಬರು ಇಂದು

ಇಂಡಿಯಾ ಪಾಕಿಸ್ತಾನ ವಾರ್ ಎಂದು ತಮಾಷೆ ಮಾಡುತ್ತಿದ್ದರು.ತಮ್ಮ ದೇಶ

ಆಡದಿದ್ದರೆ ಬಾಂಗ್ಲಾದೇಶದವರು ಭಾರತ ದ ಪಕ್ಷ .

ಸುಡಾನಿಗಳು ಸ್ನೇಹಪರರು .ನೇರ ನಡೆ ನುಡಿ .ಅವರೂ ಎಲ್ಲಾ ರಂಗಗಳಲ್ಲಿ

ಇದ್ದಾರೆ .ನನ್ನ ಸಹೋದ್ಯೋಗಿ ಇ ಏನ್ ಟಿ ತಜ್ಞ ಸುಡಾನಿ.ನನಗೆ ತುಂಬಾ

ಸಹಾಯ ಮಾಡಿದರು .

ಬಾಂಗ್ಲಾದೇಶ ದವರು  ಎಲ್ಲಾ ಉದ್ಯೋಗ ಗಳಲ್ಲಿ ಇದ್ದರೂ  ಸ್ವಚ್ಛ ಗೊಳಿಸುವ

ಕೆಲಸದಲ್ಲಿ ಹೆಚ್ಚು ಕಾಣಿಸಿ ಗೂಳ್ಳುವರು.ಬಹಳ ಶೋಷಣೆಗೆ ಒಳಗಾಗುವವರು .

 

ಭಾರತೀಯರ ಪೈಕಿ  ಮಲಯಾಳಿಗಳು ಎಲ್ಲಿ ನೋಡಿದರಲ್ಲಿ

ಸಿಗುವರು .ಆಸ್ಪತ್ರೆಯ ನರ್ಸ ಗಳು ಬಹುತೇಕ ಅವರೇ.ನನಗೆ ಅಲ್ಪ ಸ್ವಲ್ಪ

ಮಲಯಾಳ ಬರುತ್ತಿದ್ದರಿಂದ ನನ್ನನ್ನು ತಮ್ಮವನೆಂದು ಅಕ್ಕರೆಯಿಂದ

ಕಂಡರು .ಮೊದಲ ಕೆಲ ದಿನಗಳು ನನಗೆ ತಮಗೆ ತಯಾರಿಸಿದ ಭಾರತೀಯ ಊಟ

ಒದಗಿಸಿದರು .ಇವರು ದೈರ್ಯಶಾಲಿಗಳು .ತಮ್ಮ ಕುಟುಂಬ ,ಮಕ್ಕಳನ್ನು

ಊರಲ್ಲಿ ಬಿಟ್ಟು ಸಾವಿರಾರು ಮೈಲು ದೂರದ ಅರಿಯದ ನಾಡಿನಲ್ಲಿ ಕೆಲಸ

ಮಾಡುವ ಇವರನ್ನು ಕಂಡು ಬೆರಗಾದೆನು .ಉಳಿದಂತೆ ಎಲ್ಲಾ ರಂಗಗಳಲ್ಲಿ

ಮಲಯಾಳಿಗಳು ಇದ್ದಾರೆ .ತಮಿಳರು ,ತೆಲುಗರು ,ಉತ್ತರ ಭಾರತದವರು ,ಬಿಟ್ಟರೆ

ಕನ್ನಡಿಗರು .ಅದರಲ್ಲೂ ದಕ್ಷಿಣ ಕನ್ನಡದವರು ಇದ್ದಾರೆ .

ನಮ್ಮವರು ಬಂದ ಆರಂಭದಲ್ಲಿ ಮನೆ ಮಕ್ಕಳನ್ನು ನೆನೆದು ಕಣ್ಣೀರು

ಇಡುವುದನ್ನು ನಾನು ಕಂಡಿದ್ದೇನೆ .ಇವರಿಗೆ ಧೈರ್ಯ ಹೇಳಲು ನನ್ನ ಬಳಿಗೆ

ಕೆಲವೊಮ್ಮೆ ಕರೆದುಕೊಂಡು ಬರುತ್ತಿದ್ದರು .ಇಲ್ಲಿಗೆ ಅವರನ್ನು ಕರೆ ತಂದ

ಕಫೀಲರು ಕರುಣಾಮಯಿ ಗಳು ಆಗಿದ್ದರೆ ಸ್ವಲ್ಪ ವಾಸಿ .ಅದು ಅಪರೂಪ .

 

    ಇಲ್ಲಿ ಎರಡು ತರಹದ ಪೋಲಿಸ್ ಇದ್ದಾರೆ .ಒಂದು ಸಾಮಾನ್ಯ

ಪೋಲಿಸ್  .ಇವರನ್ನು ಸೂರ್ತಾ ಎನ್ನುವರು .ಇವರಿಗೆ ವಿಶಾಲ ಅಧಿಕಾರ ವ್ಯಾಪ್ತಿ

ಇದೆ .ನಮ್ಮ ದೇಶದ ಹೆಲ್ತ್ ಇನ್ಸ್ಪೆಕ್ಟರ್ .ಎಕ್ಷ್ಸಯಿಸ್ ಇನ್ಸ್ಪೆಕ್ಟರ್ ಗಳ ಕೆಲಸವೂ

ಇವರಿಗೆ ಬರುವುದು.ಹೊರಗಡೆ ಯಾವುದೇ ಸಾವು ಸಂಭವಿಸಿದರೆ ಇವರು

ಆಸ್ಪತ್ರೆಯ ವೈದ್ಯರಿಂದ ಕಾರಣ ಪಡೆಯುವರು .

ಇನ್ನೊಂದು ಧಾರ್ಮಿಕ ಪೋಲಿಸ್ .ಇವರನ್ನು ಮುತ್ತಾವ್ವಾ ಎಂದು

ಕರೆಯುವರು .ಎಲ್ಲರೂ ಸಮಯ ಸಮಯಕ್ಕೆ ಪ್ರಾರ್ಥನೆ

ಮಾಡುತ್ತಿದ್ದಾರೋ ,ಪ್ರಾರ್ಥನೆ ಸಮಯದಲ್ಲಿ ಅಂಗಡಿ ತೆರೆದಿದೆಯೋ ,ಡ್ರೆಸ್

ಕೋಡ್ (ವಸ್ತ್ರ ಸಂಹಿತೆ )ಪಾಲನೆ ಇತ್ಯಾದಿ  ನೋಡಿ ಕೊಳ್ಳುವುದು ಅವರ ಕೆಲಸ .

 

                    ಒಂದು ಸಂಜೆ ನಾನು ಬ್ಯಾಂಕ್ ಕೆಲಸಕ್ಕೆಂದು ಪಕ್ಕದ ಊರಿಗೆ

ಬಂಗಾಳಿ ಸಹೋದ್ಯೋಗಿಯ ಕಾರಿನಲ್ಲಿ ಹೋಗುತ್ತಿದ್ದೆ.ನಡುವೆ ಕಾರ್ ಕೆಟ್ಟು

ನಿಂತಿತು .ದಾರಿ ಗಾಣದೆ ಮಾರ್ಗದ ಬದಿಯಲ್ಲಿ ಕಾಯುತ್ತಿದ್ದೆವು .ಒಬ್ಬ

ಮುತಾವಾ ತನ್ನ ಪತ್ನಿಯೊಡನೆ ಕಾರ್ ನಲ್ಲಿ ಬರುತ್ತಿದ್ದವ ನಮ್ಮ ಸಮೀಪ

ನಿಲ್ಲಿಸಿದ .ನಮಗೆ ಭಯ .ಪ್ರಾರ್ಥನಾ ಸಮಯದಲ್ಲಿ ಹೊರಗೆ ಅಡ್ಡಾಡುವುದನ್ನು

ಅವರು ಇಷ್ಟ ಪಡುವುದಿಲ್ಲ .ಅದರೆ ನಮ್ಮನ್ನು ಗುರುತಿಸಿ ಎಸ್ ಮುಸ್ಕಿಲಾ

ದಕ್ತುರ್ (ಏನು ತೊಂದರೆ ದಾಕ್ತ್ರೆ ) ಎಂದ .ನಾವು ಸಯರಾ ತಾಬಾನ್ (ಕಾರ್

ಕೆಟ್ಟಿದೆ ) ಎಂದೆವು .ಆತ ಮುಂದಿನ ಸೀಟ್ ನಲ್ಲಿದ್ದ  ತನ್ನ ಪತ್ನಿಯನ್ನು ಹಿಂದೆ

ಕೂರಿಸಿ ನಮ್ಮನ್ನು ಬೇಕಾದ ಸ್ಥಳಕ್ಕೆ ಬಿಟ್ಟ. ಸಾಮಾನ್ಯ ಸೌದಿ ನಾಗರಿಕರು ಕೂಡ

ತಮ್ಮ ಕುಟುಂಬದ ಹೆಣ್ಣು ಮಕ್ಕಳು ಇರುವಾಗ ಇತರರನ್ನು

ಮಾತನಾಡಿಸುವುದಿಲ್ಲ .ಅಲ್ಲದೆ ನಾವು ಮತನಾಡಿಸುವುದನ್ನು ಇಷ್ಟ

ಪಡುವುದಿಲ್ಲ .ಅದರಲ್ಲಿ ಹೇಳಿ ಕೇಳಿ ಈತ ಮುತಾವಾ .ಒಳ್ಳೆಯವರು ಎಲ್ಲ

ಊರಿನಲ್ಲೂ ಇದ್ದಾರೆ .

 

ಇನ್ನೊಬ್ಬ ಮುತವಾ ನ ಕತೆ .ಯಾವುದೊ ಕಾಯಿಲೆಗೆ ಆಸ್ಪತ್ರೆಯಲ್ಲಿ ಅಡ್ಮಿಟ್

ಆಗಿದ್ದ .ರಾತ್ರಿ ವೇಳೆ ತನ್ನ ಬಿ ಪಿ ನೋಡಲು ಬಂದ ಫಿಲಿ ಪೈನ್ ನರ್ಸ್ ನ 

ಮುಟ್ಟ ಬಾರದ ಲ್ಲಿ ಮುಟ್ಟ ಹೋದ .ಅವಳು ಕಿರುಚಿ ಮೇಲಿನ ವರಿಗೆ ದೂರು

ಕೊಟ್ಟಳು .ಸೌದಿಯಲ್ಲಿ ಇದು ಗಂಭೀರ ಆರೋಪ ,ಅದೂ ಆರೋಪಿ ಮುತವಾ .

ಕೆಲಸ ಹೋಗುವುದಲ್ಲದೆ ಜೈಲು ವಾಸ ,ದಂಡ ಖಚಿತ .ಆಸ್ಪತ್ರೆಯ ಮುಖ್ಯ

ಅಧಿಕಾರಿ ಸ್ವಲ್ಪ ದಯಾ ಮಯಿ .ತೆರೆ ಮರೆಯಲ್ಲಿ ಸಮಾಧಾನ ಮಾಡಿ  ಆ

ನರ್ಸ್ ಗೆ ಆರು ಸಾವಿರ ರಿಯಾಲ್ ಮುತವಾ ನಿಂದ ಕೊಡಿಸಿ ದೂರು ಹಿಂತೆಗಿಸಿ

ಕೊಂಡ.ಇದೆಲ್ಲ ಅನದಿಕೃತ ನಡೆದುದು . ಇದು ಆಸ್ಪತ್ರೆಯಲ್ಲಿ ದೊಡ್ಡ

ಸುದ್ದಿಯಾಗಿ ಅವಳಿಗೆ ಅಷ್ಟು ಮೊತ್ತದ ದಂಡ ಸಿಕ್ಕ್ಕಿದ್ದಕ್ಕೆ ಅವಳು ಏನು ಚಂದ

ಎಂದು ಅವಳನ್ನು ಮುಟ್ಟ ಹೋದ ಎಂದು ಮಿಕ್ಕ ಮಹಿಳಾ ಉದ್ಯೋಗಿ ಗಳು ಅವಲತ್ತು

ಕೊಂಡರಂತೆ .ಇದೇ ತಪ್ಪು ಹೊರ ದೇಶದವರು ಮಾಡುತ್ತಿದ್ದರೆ ಛಡಿಯೇಟು

ಜೈಲು ,ದಂಡ ಖಂಡಿತ ಸಿಗುತಿತ್ತು .

ಇಲ್ಲಿಯ ಅರಬರ ಸ್ನೇಹ ಮನೆಯ ಹೊರಗೆ ಮಾತ್ರ ,ತಪ್ಪಿಯೂ ಮನೆಗೆ

ಅಹ್ವಾನಿಸರು .ಅಸ್ಟೇ ಅಲ್ಲ ನಾವು ವಾಕಿಂಗ್ ಹೋಗುವಾಗ ಇವರ ಮನೆ ಕಡೆ

ನೋಡುವಂತಿಲ್ಲ.ಅವರಿಗೆ ತಮ್ಮ  ಹೆಣ್ಣು

ಮಕ್ಕಳನ್ನು ಬೇರೆಯವರು  ನೋಡಿಯಾರೆಂಬಭಯ .ಕೆಲವು ವಯಸ್ಸಾದ

ಮಂದಿ ಆಸ್ಪತ್ರೆಗೆ ಬರುವಾಗ ತಮ್ಮ ಎಳೆ ವಯಸ್ಸಿನ

ಹೆಂಡಿರನ್ನು ಹೊರಗಿನಿಂದ ಬೀಗ ಹಾಕಿ ಬರುತ್ತಿದ್ದರು !

 

ಇನ್ನು ವಿದೇಶದಲ್ಲಿ ಇರುವ ಮಲಯಾಳಿಗರ ಬಗ್ಗೆ .ಇವರು ತಮ್ಮ ರಾಜ್ಯದಲ್ಲಿ

ಯಾವುದೇ ಉದ್ದಿಮೆ ಬರಲು ಬಿಡರು.ಆದರೆ ನಮ್ಮ ನಾಡಿನ ಗಡಿ ದಾಟಿದ ಒಡನೆ

ಯಾವ ಕೆಲಸಕ್ಕೂ ರಡಿ.ಮಲಯಾಳಂ ನಲ್ಲಿ  ವರವೇಲ್ಪು ಎಂಬ ಸಿನೆಮಾ ಇದೆ .

ಗಲ್ಫ್ ನಾಡಿನಲ್ಲಿ ಕಷ್ಟ ಪಟ್ಟು ಸಂಪಾದಿಸಿ ತನ್ನ ನಾಡಿಗೆ ಮರಳಿ ಸ್ವಯಂ

ಉದ್ಯೋಗದಲ್ಲಿ ತೊಡಗುವ ವ್ಯಕ್ತಿಯ ದುರಂತ ಕತೆ .ಮೋಹನ್ ಲಾಲ್ ಇದರ 

ನಾಯಕ ನಟ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ