ಬೆಂಬಲಿಗರು

ಸೋಮವಾರ, ಮಾರ್ಚ್ 2, 2015

ಶಸ್ತ್ರಚಿತ್ಸಾ ತಜ್ಞ ಬರಹಗಾರ ಡಾ ಅಶೋಕ್ ಕುಮಾರ್

                                                                                             


                                                             
 
                       

ಮೇಲಿನ  ಚಿತ್ರದಲ್ಲಿ ರುವ ವ್ಯಕ್ತಿ   ಅಸಾಮಾನ್ಯ ವೈದ್ಯರು .ಬೆಂಗಳೂರು ರಾಜಾಜಿ 

ನಗರ ಇ ಎಸ ಐ ಆಸ್ಪತ್ರೆಯಲ್ಲಿ  ಶಸ್ತ್ರ ಚಿಕಿತ್ಸಾ ನಿಪುಣ ತಜ್ಞ ಮತ್ತು ಅಧ್ಯಾಪಕ . 

ಇಷ್ಟು ಆದರೆ ಅಲ್ಲಿಗೆ ಇವರ ಪ್ರತಿಭೆ ಯ ಕತೆ ಮುಗಿಯಲಿಲ್ಲ .ಇವರೇ ಕತೆ 

ಬರೆಯುವರು,ಕವನ ಸೃಸ್ತಿಸುವರು ,ಕಾದಂಬರಿ ಹರಿಸುವರು ,ಬಹು ಭಾಷಾ 

ಪಾರಂಗತರಾಗಿರುವ ಇವರು  ಮಲಯಾಳಂ ,ತಮಿಳ್ ಬಾಷೆಯ ಶ್ರೇಷ್ಟ 

ಕೃತಿಗಳನ್ನು ಕನ್ನಡದ ಓದುಗರಿಗೆ ಭಾಷಾಂತರದ ಮೂಲಕ ಉಣ ಬಡಿಸಿ 

ಕನ್ನಡಿಗರಿಗೆ ದೊಡ್ಡ ಸೇವೆ ಮಾಡುತ್ತಿದ್ದಾರೆ .


ಮೂಲತಃ ಮಲಯಾಳಿ .ತಂದೆಗೆ  ವಾರಾಹಿ ವಿದ್ಯುತ್ ಯೋಜನೆಯಲ್ಲಿ  ಕೆಲಸ 

ಇದರಿಂದ ಕನ್ನಡ ಅಭ್ಯಾಸವೂ ಆಯಿತು .ಸಾಹಿತ್ಯ ವಾಸನೆ ಇವರನ್ನು ಅನುವಾದ 

ಕ್ಷೇತ್ರಕ್ಕೆ ಇಳಿಸಿತು .ತಾನು ಓದಿ ಸಂತೋಷ ಪಟ್ಟದ್ದನ್ನು ಇತರರೂ ಅನುಭವಿಸಲಿ 

ಎಂಬುದೇ ಇವರ ಮೂಲ ದ್ಯೇಯ .ಅನುವಾದ ಕ್ಷೇತ್ರದ ಇನ್ನೊಂದು ದಿಗ್ಗಜ  ದಿ ಕೆ ಕೆ 

ನಾಯರ್ .ಅವರೂ ಇವರೂ ರಾಮ ಲಕ್ಷ್ಮಣ ರಂತೆ ಕೂಡಿ ಬರೆದರು .ತಗಳಿ 

ಶಿವಶಂಕರ ಪಿಳ್ಳೈ ಅವರ ಬೃಹತ್ ಕಾದಂಬರಿ ಕಯರ್ ಅನ್ನು ಹಗ್ಗ  ಎಂಬ ಮೂರು 

ಸಂಪುಟದ ಪುಸ್ತಕ ರೂಪದಲ್ಲಿ ಜಂಟಿಯಾಗಿ ಅನುವಾದಿಸಿ ತಂದಿರುವರು 

.ಮಲಯಾಳದ ಹೆಸರಾಂತ ಬರಹಗಾರ ರಾದ

ಕಮಲಾದಾಸ್ ,ಶ್ರೀರಾಮನ್ ಮತ್ತು ಅನೇಕರ ಕೃತಿಗಳು ಇವರ ಲೇಖನಿಯ 

ಮೂಲಕ ಕನ್ನಡಕ್ಕೆ ಇಳಿದಿವೆ.

 ಅನುವಾದ ಕ್ಷೇತ್ರದಲ್ಲಿನ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸಾಹಿತ್ಯ 

ಅಕಾಡೆಮಿ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ .

ಪ್ರಚಾರವನ್ನು ಬಯಸದೆ ಎಲೆಯ ಮರೆಯ ಕಾಯಿಯಂತೆ  ಸರಸ್ವತಿ ಸೇವೆ 

ಮಾಡುತ್ತಿರುವ ಇವರಿಗೆ  ಓದುಗ ಕನ್ನಡಿಗರು ಅಭಾರಿ .

ಖ್ಯಾತ  ವೈದ್ಯ ಲೇಖಕ ಅ೦ಟೋನ್ ಚೆಕೊವ್ ಅಂದಂತೆ   Medicine is my 


lawful wife, and literature is my mistress. When I get fed up 


with 

one, I spend the night with the other. Though it is irregular, 

it is less boring this way, and besides, neither of them loses 

anything through my infidelity."

ವೈದ್ಯ ಶಾಸ್ತ್ರ ನನ್ನ ಧರ್ಮ ಪತ್ನಿ .ಸಾಹಿತ್ಯ ಇಟ್ಟುಕೊಂಡವಳು .ಒಬ್ಬಳು 



ಸಾಕೆನಿಸಿದಾಗ ಇನ್ನೊಬ್ಬಳ ಸಂಗದಲ್ಲಿ ರಾತ್ರಿ ಕಳೆಯುವೆನು. ಇದು ಕ್ರಮ ಬದ್ದವಾಗಿ 

ನಡೆಯದಿದ್ದರೂ  ಕಡಿಮೆ ಬೋರಿಂಗ್  ಮತ್ತು ಎರಡು ಕ್ಷೇತ್ರಕ್ಕೂ ನನ್ನ 

ಅವಿಧೇಯತೆಯಿಂದ  ನಷ್ಟವಿಲ್ಲ" ಮಾತು ಇವರಿಗೆ ಪೂರ್ಣ ಅನ್ವಯಿಸುತ್ತದೆ

1 ಕಾಮೆಂಟ್‌:



  1. ಡಾ. ಭಟ್ ಅವರ ನಿರ್ವ್ಯಾಜ ಸ್ನೇಹ ( ನನ್ನೊಂದಿಗೂ ಸಾಹಿತ್ಯದೊಂದಿಗೂ) ಈ ಪರಿಚಯ ಲೇಖನದ ಬೆಂಗಡೆ ಇದೆ. ಆದಾಗ್ಯೂ ಅಭಿಮಾನ ಔದಾರ್ಯಗಳಿಗೆ ನಾನು ಋಣಿ. ಸಕಲ ಸಾಹಿತ್ಯಾಭಿಮಾನಿಗಳ ಮೆಚ್ಚುಗೆ ವಿಮರ್ಶೆಗಳೇ ನಮಗೆಲ್ಲ ಶ್ರೀರಕ್ಷೆ. ಧನ್ಯವಾದಗಳು ಸರ್. ashokdrblore@gmail.com

    ಪ್ರತ್ಯುತ್ತರಅಳಿಸಿ