ಮಾಸ್ತಿ ನನ್ನ ಮೆಚ್ಚಿನ ಲೇಖಕ .ಅವರ ಜೀವನ ಚರಿತ್ರೆ 'ಭಾವ ' ಪಕ್ವ ಜೀವನ
ವೊಂದರ ಕಥಾನಕ .ನಾನು ಹಲವು ಭಾರಿ ಓದಿದ ಪುಸ್ತಕ .ಮನಸಿನ ಬೇಗುದಿ ಗೆ
ತಂಪೆರೆಯುವ ವಾಕ್ಯಗಳು ,ರಾಗ ದ್ವೇಷ ಗಳಿಲ್ಲದೆ ರಚಿಸಿದ ಜೀವನ ಚಿತ್ರ.
ಅದರಿಂದ ಆಯ್ದ ಒಂದು ಸಂಗತಿ
ಮಾಸ್ತಿಯವರ ಬಾಲ್ಯದಲ್ಲಿ ಅವರ ತಾತನೊಡನೆ ಹೋಗುತ್ತಿದ್ದದಾಗ ದಾರಿಯಲ್ಲಿ
ಆಲೆ ಮನೆ ಸಿಕ್ಕಿತು .ಮಕ್ಕಳು ಕೇಳಿದರೆ ಅಲೆಮನೆಯನು
ಒಂದಿಸ್ಟು ಬಿಸಿ ಬೆಲ್ಲ
ತಿನ್ನಲು ಕೊಡುವುದು ವಾಡಿಕೆ .ತಾತ ಮಗುವಿಗೆ ಒಂದು ಚೂರು ಬೆಲ್ಲ ಕೊಡಪ್ಪ
ಎಂದು ಅವನೊಡನೆ ಕೇಳಿ ತೆಗೆದು ಕೊಳ್ಳುತ್ತಾರೆ .ದಾರಿಯಲ್ಲಿ ಬಹಿರ್ದೆಷೆಗೆ
ಹೋಗಿ ಕಾಲು
ತೊಳೆಯಲೆಂದು ಹೋಗುತ್ತಾ ಬೆಲ್ಲದ ತುಂಡನ್ನು ಮೊಮ್ಮಗನ
ಕೈಯ್ಯಲ್ಲಿ ಇಟ್ಟುಕೋ ಎಂದು ಕೊಟ್ಟಿರುತ್ತಾರೆ
.ಹುಡುಗ ಮಾಸ್ತಿ ಚಪಲ
ತಡೆಯಲಾರದೆ ರುಚಿಯಾದ ಬೆಲ್ಲ ತಿಂದು ಮುಗಿಸುತ್ತಾರೆ .ಮರಳಿ ಬಂದ ತಾತ
ಎಲ್ಲಿಯೋ
ಆ ಬೆಲ್ಲ ತಾ. ನಾನು ಎಲ್ಲ ತಿಂದು ಬಿಟ್ಟೆ . ಎಲ ಎಲ ಅಸ್ಟು ಬೆಲ್ಲವನ್ನೂ
ತಿಂದು ಬಿಟ್ಟೆಯೋ ,ಎಂದು
ಕೆಲವು ಬೈಗಳು ವಾಕ್ಯ ಉಪಯೋಗಿಸುತ್ತಾರೆ
.ತಾತನಿಗೆ ಮೊಮ್ಮಗನಿಗೆಂದು ಸಂಪಾದಿಸಿದ ಬೆಲ್ಲದ
ತುಂಡಿನಿಂದ ತಾನೂ
ಕೊಂಚ ತಿಂದು ರುಚಿ ನೋಡುವ ಆಸೆ ಇದ್ದಿರಬಹುದು.ಮುಂದಿನದನ್ನು
ಮಾಸ್ತಿಯವರ
ಶಬ್ದಗಳಲ್ಲಿ ಓದಿ .
‘ಬಾಲ್ಯದಲ್ಲಿ ನಡೆದ ಹತ್ತಾರು ಸಂಗತಿಗಗಳಲ್ಲಿ ಇದರ ನೆನಪು ನನಗೆ ಉಂಟು
ಮಾಡುವಸ್ತು
ಖೇದವನ್ನು ಬೇರೆ ಯಾವ ಸಂಗತಿಯೂ ಮಾಡುತ್ತಿಲ್ಲ .ಈ
ಮೊಮ್ಮಗನಿಂದ ಆ ತಾತನಿಗೆ ಎಂತ ನಿರಾಶೆ ಆಯಿತು
ಎನ್ನುವುದು ಆ ದಿನ
ನನಗೆ ಮನ ಮುಟ್ಟಲಿಲ್ಲ .ಸ್ವಲ್ಪ ವಯಸ್ಸಾದ ಮೇಲೆ ತಾತ ಸ್ವಲ್ಪ ಹೊಸ ಬೆಲ್ಲ
ತಿನ್ನ ಬೇಕೆಂದು ಬಯಸಿದ್ದರು ,ನಾನು ಅದನ್ನು ತಪ್ಪಿಸಿದೆ ಎನ್ನುವುದು ಮನಸ್ಸಿಗೆ
ತೋರಿತು .ಇದು
ಮನಸ್ಸಿಗೆ ತೋರಿದಾಗ ನಾನು ತಾತನ ಹತ್ತಿರ ,ಹತ್ತಿರದ ಒಂದು
ಅಲೆ ಮನೆಯ ಬಳಿ
,ಇರಲಿಲ್ಲ.ಇದ್ದಿದ್ದರೆ ನಾನು ಹೋಗಿ ಹೊಸ ಬೆಲ್ಲ್ಲ ತಂದು
ತಾತನಿಗೆ ಕೊಟ್ಟೇನು .ಇದು ಎಂದು
ಆಗಲಿಲ್ಲ .ತಾತ ತೀರಿಕೊಂಡರು.ಹೀಗಾಗಿ ಆ
ಖೇದ ಹಾಗೆಯೇ ಉಳಿಯಿತು .ತಾತ ಇದ್ದಿದ್ದರೆ ಎಷ್ಟು ಬೆಲ್ಲ
ತಂದು
ಕೊಡಬಹುದಾಗಿತ್ತು ಎಂದು ಕೊಳ್ಳುತ್ತೇನೆ .ಹೊಸ ಬೆಲ್ಲದ ರುಚಿ ರುಚಿಯೇ.ಆದರೆ
ನಾನು ಈಗ ಹೊಸ
ಬೆಲ್ಲವನ್ನು ಹುಡುಕಿ ಕೊಂಡು ಹೋಗಿ
ಅದನ್ನು ಪಡೆದು ತಿಂದು ಸುಖಿಸಬೇಕು ಎನ್ನುವ ಮನೋಧರ್ಮದಲ್ಲಿಲ್ಲ .ತಾತ ಈ
ಸ್ತಿತಿಯನ್ನು
ಅದೆಂದೋ ಮುಟ್ಟಿರ ಬೇಕು .ಹೀಗಿದ್ದೂ ನನ್ನ ಮನಸ್ಸಿನಲ್ಲಿ ಇದರ
ಕೊರತೆ ನಿತ್ಯವಾಗಿ ನಿಂತಿದೆ .’
ಈ ಕತೆ ಓದುವಾಗ ನನಗೆ ನನ್ನ ಫಿಸಿಯೋಲೋಜಿ ಪ್ರಾಧ್ಯಾಪಕ ಡಾ
ನಾರಾಯಣ ಶೆಟ್ಟರ ನೆನಪಾಗುತ್ತದೆ .ಉದ್ದಾಮ ಶಿಕ್ಷಕರು .ಅವರ ತರಗತಿಗಳಲ್ಲಿ
ನಾನು ಮುಂದಿನ ಬೆಂಚಿನಲ್ಲಿ ಕುಳಿತು ಕೊಳ್ಳುತ್ತಿದ್ದೆನಲ್ಲದೆ ಕ್ರಿಯಾಶೀಲ ನಾಗಿ
ಪ್ರಶ್ನೋತ್ತರಗಳಲ್ಲಿ ಭಾಗವಹಿಸುತ್ತಿದ್ದೆ. ಕೊನೆಯ ಮೌಖಿಕ ಪರೀಕ್ಷೆಯಲ್ಲಿ
ನನ್ನ ಸರದಿ ಬಂದಾಗ ಬಾಹ್ಯ ಪರೀಕ್ಷಕ ರೊಡನೆ ಹೆಮ್ಮೆಯಿಂದ ನೀವೇ
ಬೇಕಾದ್ದು ಕೇಳಿ ಎಂದರು .ಬಹು ಕ್ಲಿಷ್ಟ ಪ್ರಶ್ನೆ ನಿರೀಕ್ಷಿಸಿದ್ದ ನನಗೆ ಸರಳವಾದ
ಒಂದು ವಿಚಾರ ಕೇಳಿದರು .ನನಗೆ ಉತ್ತರಿಸಲು ಆಗಲಿಲ್ಲ .ಉಳಿದ ಪ್ರಶ್ನೆಗಳಿಗೆ
ಸರಿಯಾದ ಬದಲು ಹೇಳಿದೆನಾದರೂ ನನ್ನ ಗುರುಗಳ ವಿಶ್ವಾಸಕ್ಕೆ
ಚ್ಯುತಿಯಾಯಿತಲ್ಲ ಎಂಬ ಕೊರಗು ನನಗೆ ಇಂದಿಗೂ ನನ್ನನು ಕಾಡುತ್ತದೆ .
ಮಾಸ್ತಿಯವರ ಕೊರಗಿನ ಸನ್ನಿವೇಶ ಮತ್ತು ನನ್ನ ಕೊರಗಿನ ಹಿನ್ನಲೆ ಬೇರೆಬೇರೆ
ಇದ್ದರೂ ಏಕೋ ಅದರ ಜೊತೆ ಬರುವುದು .
ಅಜ್ಜನ ಪ್ರೀತಿಯ ಋಣ ಕೊಂಚವಾದರೂ ಬೆಲ್ಲದ ರೂಪದಲ್ಲಿ ಹಿಂತಿರುಗಿಸುವ
ಅವಕಾಶ ತಪ್ಪಿತು .ನನಗೆ ಅಧ್ಯಾಪಕರ ನಿರೀಕ್ಷೆಗೆ ಸರಿಯಾಗಿ ಉತ್ತರಿಸಿ
ನಮ್ಮ ಹುಡುಗ ಜಾಣ ಎಂದು ತೋರಿಸುವ ಅವರ ಇಚ್ಛೆ ಪೂರೈಸಿದ ತೃಪ್ತಿ
ಇಲ್ಲ.
ಇದಕ್ಕೇ ಜಿ ಎಸ್ ಶಿವರುದ್ರಪ್ಪ ನವರು ಹೇಳಿದ್ದು "ಎನಿತು ಜೀವಗಳಲಿ ಎನಿತು
ಜೀವಗಳಿಗೆ ಎನಿತು ನಾವು ಋಣಿಯೋ ಬಾಳೊಂದು ಋಣದ ಖನಿಯೋ?"
ಇದೇ ಭಾವದಲ್ಲಿ ಮಾಸ್ತಿಯವರು ತಾವು ವಾರಾನ್ನ ಮಾಡಿ ವಿದ್ಯಾಭ್ಯಾಸ
ಮಾಡುತ್ತಿದ್ದ ದಿನಗಳನ್ನು ನೆನೆದು ಅದರಲ್ಲಿ ಕಷ್ಟ ಇದ್ದರೂ ಕೆಲವು ಒಳಿತುಗಳಿವೆ
ಎಂದು ಹೀಗೆ ಬರೆಯುತ್ತಾರೆ
ಆಗ ಕಾಣದೆ ಈಗ ಕಾಣುತ್ತಿರುವ ಒಂದು ಸತ್ಯಾಂಶ ನನಗೆ ಬಹು
ಸಮಾಧಾನವನ್ನು ತಂದಿದೆ .ಎರಡು
ವರ್ಷದ ಹಿಂದೆ ತಂದೆ ನನಗೆ ಉಪನಯನ
ಮಾಡಿದ ದಿನ ಗಾಯತ್ರಿಯೊಡನೆನೆ ಭಿಕ್ಷೆ ಎತ್ತುವ ವೃತ್ತಿಯನ್ನೂ
ನೀಡಿದ್ದರು .ವಿದ್ಯೆ
ಗಳಿಸುವವನು ಹತ್ತು ಮನೆಯಲ್ಲಿ ಅನ್ನ ಬೇಡಿ ಗುರುವಿನ ಮನೆಯಲ್ಲಿ ಎಲ್ಲವನ್ನೂ
ಒಪ್ಪಿಸಿ ಅದರಿಂದ ತನಗೆ ಬೇಕಾದಸ್ತನ್ನು ತೆಗೆದು ಕೊಳ್ಳಬೇಕು.ಉಪನಯನದ
ಅರ್ಥವೇ ಇದು .ನಮ್ಮ
ದುರ್ದೈವದಿಂದ ನಮಗೆ ಇದು ಮರೆತು ಹೋಗಿದೆ .
ವಿದ್ಯಾರ್ಥಿ ಅರಮನೆಯ೦ತಿರುವ ತನ್ನ ಮನೆಯಲ್ಲಿ ಅಥವಾ
ಅರಮನೆ ಅಲ್ಲದ
ತನ್ನ ಬಡ ಮನೆಯಲ್ಲಿ ಉಂಡು ಹಾಗಲ್ಲದಿದ್ದರೆ ತುಂಬಾ ಹಣ ಕೊಟ್ಟು ಒಂದು
ಹಾಸ್ಟೆಲ್
ನಲ್ಲಿ ಅದಕ್ಕಿಂತ ಕಡಿಮೆ ಹಣ ಕೊಟ್ಟು ಹೋಟೆಲ್ ನಲ್ಲಿ ಊಟ
ಮಾಡುವುದು ಯುಕ್ತ ಎನ್ನುವ ತಪ್ಪು
ತಿಳುವಳಿಕೆ ನಮ್ಮಲ್ಲಿ ಹರಡಿದೆ.ಮೊಂಡು
ಬಾಲದ ನರಿಯ ಕತೆಯನ್ನು ಪ್ರತಿ ಮಾಡುವುದಕ್ಕೆಂದು ನಾನು ಇದನ್ನು
ಹೇಳುತ್ತಿಲ್ಲ.ವಿದ್ಯೆ
ಕಲಿಯುವ ಹುಡುಗರಿಗೆ ನಾಲ್ಕು ಮನೆಗೆ ಹೋಗಿ ತಿನ್ನಿ ಎಂದು
ಹೇಳುವುದು ಇಂದಿಗಾದರೂ ಅತ್ಯುತ್ತಮವಾದ
ಆದರ್ಶ ವ್ಯವಸ್ಥೆ ಆದೀತೆಂದು
ನನಗೆ ತೋರುತ್ತದೆ.ವಿದ್ಯಾರ್ಥಿ ಮಿಕ್ಕೆಲ್ಲ ಯೋಚನೆಯನ್ನು ಬಿಟ್ಟು
ತನ್ನ ಮನೆಯಲ್ಲಿ
ಅನ್ನ ಇದೆಯೆಂಬುದನ್ನು ಮರೆತು ,ತಾನು ಬರಿ ಮನೆಯ ಮಗು ಅಲ್ಲ ,ಸಮಾಜದ
ಮಗು
ಎಂಬುದನ್ನು ಗ್ರಹಿಸಿ ,ಸಮಾಜದಿಂದ ಅನ್ನವನ್ನು ತೆಗೆದುಕೊಂಡು
ಸಮಾಜದ ಮಗುವಾಗಿ ವಿದ್ಯೆಯಲ್ಲಿ
ತೊಡಗಿದರೆ ರಾಷ್ಟ್ರದಲ್ಲಿ ವಿದ್ಯಾರ್ಥಿ
ಮನೋಧರ್ಮ ಒಂದು ಒಳ್ಳೆಯ ಮಟ್ಟವನ್ನು ಮುಟ್ಟೀತು.
ಸಾಂದೀಪಿ ಯಾ
ಮನೆಯಲ್ಲಿ ಗುರುಕುಲವಾಸ ನಡೆಸಿದಾಗ ಶ್ರೀಕೃಷ್ಣ ಬಡ ಬ್ರಾಹ್ಮಣ ಕುಚೇಲ
ನೊಡನೆ ತಾನೂ ಭಿಕ್ಷೆಯೇತ್ತಿದನೋ
?
ಇದಕ್ಕೆ ಆಲೋಮವಾಗಿ ಡಾ ನಾರಾಯಣ ಸೆಟ್ಟರ ಒಂದು ವಿಷಯ ನೆನಪಿಗೆ
ಬರುವುದು .ಆಗ ಸರಕಾರೀ ವೈದ್ಯಕೀಯ ಕಾಲೇಜ್ ಗಳಲ್ಲಿ ಹಿಂದುಳಿದ ವರ್ಗ
ಗಳ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದು ಕೊಳ್ಳುವಂತೆ
ಸರಕಾರದ ಆದೇಶ ಇತ್ತು .ನಮ್ಮ ಪ್ರೊಫೆಸರ್ ಈ ರೀತಿ ವಿದ್ಯಾರ್ಥಿಗಳಿಗೆ ಬೇರೆ
ತರಗತಿ ನಡೆಸಿದರೆ ಅವರನ್ನು ಬಹಿರಂಗವಾಗಿ ಗುರುತಿಸಿದಂತೆ ಆಗುವುದು .
ಅದಕ್ಕೆ ನಾನು ವಿಶೇಷ ತರಗತಿ ತೆಗೆದು ಕೊಳ್ಳುವಾಗ ಉಳಿದವರೂ ಬರಬಹುದು .
ಯಾರಿಗೂ ಹಾಜರಿ ಇಲ್ಲ ,ಹಾಗೂ ಒತ್ತಾಯ ಇಲ್ಲ ಎಂದು ಹೇಳಿದರು .
ಆದರೆ ಅವರ ಉತ್ಕೃಷ್ಟ ಪಾಠ ಗಳನ್ನ ಎಷ್ಟು ಬಾರಿ ಕೇಳಿಸಿ ಕೊಂಡರೂ ಬೇಸರ
ವೆನಿಸುತ್ತಿದ್ದಿಲ್ಲವಾದರಿಂದ ಎಲ್ಲಾ ಮಿತ್ರರೂ ಒಂದಾಗಿ ಆ ತರಗತಿಗಳಿಗೂ
ಹಾಜರಾಗುತ್ತಿದ್ದರು
Nice analogy for that everlasting feeling in you Bhat,I was unaware of such an author in you!Feel privileged to have been with you in UG.I am keen to know what was that which you could't answer!? Thanks for reminding the great Physiology Professor.
ಪ್ರತ್ಯುತ್ತರಅಳಿಸಿ