ಬೆಂಬಲಿಗರು

ಭಾನುವಾರ, ಮಾರ್ಚ್ 15, 2015

ಮುಖ್ಯ ನ್ಯಾಯಾಧೀಶರ ಕಥೆ

ನನಗೆ  ನ್ಯಾಯಾಂಗದ ಮೇಲೆ ವಿಶೇಷ ಅಕ್ಕರೆ ಮತ್ತು ಕುತೂಹಲ .ನಮ್ಮ ದೇಶದಲ್ಲಿ ಪ್ರಜಾತಂತ್ರ ಗಟ್ಟಿಯಾಗಿ ಬೇರೂರಲು

ಕ್ರಿಯಾಶೀಲ ನ್ಯಾಯಾಂಗ ಮುಖ್ಯ ಕಾರಣ ಎಂದು ನಂಬಿದವರಲ್ಲಿ ನಾನೂ ಒಬ್ಬನು .ನನ್ನ ಈ ಬ್ಲಾಗಿನ ಹಿಂದಿನ

ಬರಹ  ನನ್ನ ಅಜ್ಜ ಮತ್ತು ಪುತ್ತೂರು ಪೇಟೆ ಯಲ್ಲಿ ನನಗೆ ಅಜ್ಜ ಹೇಗೆ ಕೋರ್ಟ್ ಕಛೇರಿಗಳ ಬಗ್ಗೆ ಚಿಕ್ಕಂದಿನಲ್ಲೇ  ಆಸಕ್ತಿ

ಮೂಡಿಸಿದರು ಎಂದು ಬರೆದಿದ್ದೇನೆ ದಿನವಿಡೀ ನ್ಯಾಯವಾದಿಗಳ ಭಾಷಣ ಕೇಳಿ ಕುಳಿತಿರುವ ನ್ಯಾಯಾಧೀಶರು ನ್ಯಾಯಾಂಗದ

ಸ್ವಾತಂತ್ರ್ಯ ಮತ್ತು ಗೌರವ ಕಾಪಾಡುವ  ಛಲದಲ್ಲಿ ತಮ್ಮ ವೈಯುಕ್ತಿಕ ಸ್ವಾತಂತ್ರ್ಯ ಬಹಳಷ್ಟು ತ್ಯಾಗ ಮಾಡ ಬೇಕಾಗುತ್ತದೆ .

ಪ್ರಾತಃ ಸ್ಮರಣೀಯ ನ್ಯಾಯ ಮೂರ್ತಿ ಜಸ್ಟಿಸ್ ಎಚ್ ಅರ ಖನ್ನಾ ತಮ್ಮ ಜೀವನ ಚರಿತ್ರೆ ನೀದರ್ ರೋಸಸ್ ನೋರ್

ತೋರ್ನ್ಸ್ ಯಲ್ಲಿ  ಈ ರೀತಿ ಬರೆಯುತ್ತಾರೆ. "ಅಗಣಿತ ಅಧಿಕಾರ ವುಳ್ಳ ನ್ಯಾಯಾಧೀಶರ ಹುದ್ದೆ  ಅದೇ ಸಮಯಕ್ಕೆ

ಭಯ ಉಂಟು ಮಾಡುವ  ತೆರದಲ್ಲಿ ಯಾವುದೇ ರಕ್ಷಣೆ ರಹಿತ ವಾಗಿರುತ್ತದೆ."

                                                     

ಈಗಸ್ಟೆ ಓರ್ವ ನಿವೃತ್ತ ಮುಖ್ಯ  ನ್ಯಾಯಾಧೀಶರ ಜೀವನ ಚರಿತ್ರೆ  ಓದಿ ಮುಗಿದ್ದೇನೆ .ಜಸ್ಟಿಸ್  ಯು ಎಲ್ ಭಟ್ 

ಅವರ  ಸ್ಟೋರಿ ಆಫ್ ಚೀಫ್ ಜಸ್ಟಿಸ್ .ಆಂಧ್ರದ ವಿಶಾಕ ಪಟ್ಟಣದಲ್ಲಿ ಜನಿಸಿ (ಇವರ ತಂದೆ ಅಲ್ಲಿ ಮಹಾರಾಜ 
ಕಾಲೇಜ್ ನಲ್ಲಿ  ಪ್ರಾಂಶುಪಾಲರಾಗಿದ್ದರು )ಮಂಗಳೂರು ,ಮದ್ರಾಸ್ ಗಳಲ್ಲಿ ಓದಿ  ಕಾಸರಗೋಡ್ ನ ಖ್ಯಾತ 

ವಕೀಲ ತಮ್ಮ ಭಾವ  ಬಿ ಎಸ ಕಕ್ಕಿಲ್ಲಾಯ ರ  ಬಳಿ ವಕೀಲ ವೃತ್ತಿ ಆರಂಬಿಸಿ ಸ್ವಲ್ಪ ಕಾಲ ಕಮ್ಯುನಿಸ್ಟ್ ಪಕ್ಷದ ಸಕ್ರಿಯ 

ಕಾರ್ಯಕರ್ತ ನಾಗಿಯೂ ಇದ್ದು ಮುಂದೆ ತಮ್ಮ ಪ್ರತಿಭೆಯ ಬಲದಿಂದ   ಜಿಲ್ಲಾ ನ್ಯಾಯಾಧೀಶ ರಾಗಿ ನಿಯುಕ್ತಿಗೊಂಡು

ಕೇರಳ ರಾಜ್ಯ ಹೈ ಕೋರ್ಟ್ ನ್ಯಾಯಾಧೀಶ ರಾಗುತ್ತಾರೆ .ಅಲ್ಲಿಂದ ಗೌಹಾತಿ  ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ 

ಮತ್ತೆ  ಮಧ್ಯ ಪ್ರದೇಶ ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಹುದ್ದೆ. ಇವರು ಈ ಮಧ್ಯ ಪ್ರದೇಶ ಕ್ಕೆ ಬರುವಾಗ 

ಅಲ್ಲಿನ  ಹೈ ಕೋರ್ಟ್ ಗುಂಪು ರಾಜಕೀಯದಿಂದ ಬಹಳ ನಿಕೃಷ್ಟ ಅವಸ್ಥೆಯಲ್ಲಿ ಇತ್ತು .ಅದನ್ನು ಸರಿಪದಿಸಲೆಂದೇ 

ಅವರನ್ನು ಅಲ್ಲಿ  ಹಾಕಲಾಯಿತು.ತಮ್ಮ  ಪರಿಶ್ರಮ ಮತ್ತು ಕಾರ್ಯ ಕ್ಷಮತೆಯಿಂದ  ಮಧ್ಯ ಪ್ರದೇಶದ ನ್ಯಾಯಾಂಗ 

ವ್ಯವಸ್ತೆಯಲ್ಲಿ  ಕ್ರಾಂತಿಕಾರಿ ಬದಲಾವಣೆ ತರುವುದರಲ್ಲಿ ಅವರು ಯಶಸ್ವಿ ಯಾಗುತ್ತಾರೆ. ಇದಕ್ಕೆ ಮೊದಲು 

ಗೌಹಾತಿಯಿಂದ  ಕರ್ನಾಟಕ ,ಆಂಧ್ರ , ಅಥವಾ ತಮಿಳ್ ನಾಡಿಗೆ ಬರುವ ಅವರ ಆಸೆ ನೆರವೇರುವುದಿಲ್ಲ .

ಯಾಕೆಂದರೆ  ಇಂತಹ ನಿರ್ಭೀತ  ನ್ಯಾಯ ಮೂರ್ತಿ  ತಮ್ಮ  ರಾಜ್ಯದ  ಹೈ ಕೋರ್ಟ್ ಗೆ ಬರುವುದು 

ಇಲ್ಲಿಯ   ಪ್ರಭಾವ ಶಾಲೀ  ರಾಜಕೀಯ ನಾಯಕರಿಗೆ  ಬೇಕಿರಲಿಲ್ಲ . 

ಮುಂದೆ  ಅವರಿಗೆ  ಬರಬೇಕಿದ್ದ  ಸುಪ್ರೀಂ ಕೋರ್ಟ್ ನ ನ್ಯಾಯಾಧೀಶ ಹುದ್ದೆಯೂ ತಪ್ಪಿತು .ಅದರ ಬಗ್ಗೆ  ಈ ಪುಸ್ತಕಕ್ಕೆ 

ಮುನ್ನುಡಿ ಬರೆದ ಜಸ್ಟಿಸ್ ಕೃಷ್ಣ ಅಯ್ಯರ್ ಅವರ  ಶಬ್ದಗಳಲ್ಲಿ ಓದಿ."Bhat is bold ,brilliant and original.He is known 

for integrity.His views on public issues and institutions are not conditioned by pressures from above

or cravings from below.he is independent of expediencies,oppotunisms and authoritarianisms.

this i thought was a superlative qualification of a judge to function without fear or favour .But where 

lesser judges without vision are in authority over judges ,this rare virtue proves to be a 

drawback.Bhat,a good ,senior and great judge acted unafraid of authoritarian whims and wayward 

destinies .Bhat became a martyr."

ಈ  ಹೊತ್ತಗೆ ಓದುವಾಗ  ಇನ್ನೊಬ್ಬ ನಿರ್ಭೀತ ನ್ಯಾಯಮೂರ್ತಿ ಜಸ್ಟಿಸ್ ಎಸ ಎಸ್ ಸೋಧಿ  ಅವರ ಆತ್ಮ ಕತೆ 

ದಿ  ಅದರ್ ಸೈಡ್ ಆಫ್ ಜಸ್ಟಿಸ್  ಜ್ಞಾಪಕಕ್ಕೆ ಬರುತ್ತದೆ .ಅಶಿಸ್ತಿನ ಕೊಂಪೆಯಾಗಿದ್ದ ದೇಶದ ದೊಡ್ಡ  ನ್ಯಾಯ ಪಾಲಿಕೆ 

ಅಲ್ಲಹಾಬಾದ್  ಹೈ ಕೋರ್ಟ್ ನ್ನು ತಮ್ಮ ಸ್ವಂತ ಪರಿಶ್ರಮ ದಿಂದ  ಒಂದು ದಾರಿಗೆ ತಂದ ಶ್ರೇಯ ಇವರದು .ಅದಕ್ಕೆ 

ಪ್ರತಿ ಫಲ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆ ನಿರಾಕರಣೆ !ಅದಕ್ಕೆ ಅವರು ಇನ್ನೊಬ್ಬ ಶ್ರೇಷ್ಟ ನ್ಯಾಯಾಧೀಶರ 

ಈ ವಾಕ್ಯ ಪುನರುಚ್ಚರಿಸುತ್ತಾರೆ ."It is honourable to be a victim of such politics than to be a beneficiary"

( ಅಂತಹ ರಾಜಕಾರಣದ ಫಲಾನುಭವಿ ಆಗುವುದಕ್ಕಿಂತ  ಅದರ ಬಲಿಪಶುವಾಗುವುದು ಲೇಸು ")



ಬಾಲಂಗೋಚಿ:  ಮೂಲತಃ  ಕಮ್ಯೂನಿಸ್ಟ್  ಆಗಿದ್ದ  ಜಸ್ಟಿಸ್  ಭಟ್ ಈಗಿನ  ಕಮ್ಯುನಿಸ್ಟ್ ಅತಿರೇಕ  ಸ್ವತಃ 

ಅನುಭವಿತ್ತಾರೆ .ಕೇರಳದ ತಲೆ ಹೊರೆ ಕಾರ್ಮಿಕರು ಇವರು ರಾಜ್ಯದೊಳಗೆ ವರ್ಗಾವಣೆ ಗೊಳ್ಳುವ ಸಂಧರ್ಭದಲ್ಲಿ 

ಗೃಹ ಸಾಧನ ಸಾಗಾಟದ ಸಮಯದಲ್ಲಿ  ತಮ್ಮ   ಅತಾರ್ಕಿಕ ಬೇಡಿಕೆಗಳನ್ನು ಇಟ್ಟು ಬೆದರಿಸುತ್ತಿದ್ದ  ವಿಷಯ ಬರೆದಿರುವರು .

ಈ ತರಹ ಅರ್ಹರಿಗೆ ಉನ್ನತ ಪದವಿ ವಂಚನೆ ಆದ ಕತೆ ಮಾಸ್ತಿಯವರ ಜೀವನದಲ್ಲಿ ಬರುತ್ತದೆ."ಭಾವ ' ದಲ್ಲಿ 

ತಮಗೆ  ದಿವಾನ್ ಪದವಿ ತಪ್ಪಿದ ವಿಚಾರ  ಮನೋಜ್ಞವಾಗಿ  ವಿವರಿಸಿದ್ದಾರೆ .ತಾವು ದುಖ ತಪ್ತ ರಾಗಿ ಆತ್ತುದು ,ಆ ಮೇಲೆ 

ರಾಮಾಯಣ ದಲ್ಲಿ  ರಾಜ್ಯ ನಿಷೇಧಕ್ಕೆ  ಶ್ರೀರಾಮ ಪ್ರಭು ವಿನ ಕೆತೆ ನೆನೆದು ಸಮಾಧಾನ  ಪಟ್ಟುಕೊಂಡುದನ್ನು  ಬರೆದ ಹಾಗೆ ನೆನಪು.





ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ