ಬೆಂಬಲಿಗರು

ಶನಿವಾರ, ಮಾರ್ಚ್ 28, 2015

ಹೆತ್ತ ಕರುಳು ಮತ್ತು ಹೊಟ್ಟೆ ಹುಳಗಳು

 

ಸಾಮಾನ್ಯವಾಗಿ  ಹೆತ್ತ ಕರುಳು ಎಂದು ತಾಯ ಉದರವನ್ನು

 

ಸೂಚಿಸುವುದು  .ಆದರೆ ಕರುಳಿನಲ್ಲಿ ಮಗು ಬೆಳೆಯುದಿಲ್ಲ .ಅದು 

 

ಬೆಳೆಯುವುದು ಗರ್ಭ ಕೋಶದಲ್ಲಿ .ಆದರೆ ಕರುಳು ಬೆಳೆಸಿ ಹೆರುವುದು

 

ಹೊಟ್ಟೆ ಹುಳಗಳನ್ನು .ಲಿಂಗ ಬೇದವಿಲ್ಲದೆ ಗಂಡಸರೂ ಹೆಂಗಸರೂ

 

ಹುಳದ ಸಂತತಿ ಬೆಳೆಸುವರು .ಕರುಳ ಕುಡಿ ಅಂದರೆ ನಿಜಾರ್ಥದಲ್ಲಿ

ಇವುಗಳು .

 

ಸಾಮಾನ್ಯವಾಗಿ ಕಂಡು ಬರುವುದು  ಮೂರು ಹುಳಗಳು .

೧. ಜಂತು  ಹುಳ

 

      ಇದು  ಉದ್ದನೆಯದು .ಸರಾಸರಿ  ೧೫ ರಿಂದ ೨೦ ಸೆ ಮೀ ಉದ್ದವಿರುವುದು .

ಕರುಳಿನಲ್ಲಿ  ಮೊಟ್ಟೆ ಉತ್ಪಾದನೆಯಾಗಿ  ವಿಸರ್ಜಿಸಲ್ಪಡುತ್ತವೆ.ಕಲುಷಿತ

 

ನೀರು ಆಹಾರ ಮೂಲಕ  ಮನುಜನ ಹೊಟ್ಟೆ ಸೇರಿ  ಬೆಳೆದು  ಸಂತಾನ

ಅಭಿವೃದ್ದಿ ಮಾಡುವುವು .

                     roundround 2

ಇವು  ಬೆಳೆಯುವ ಹಂತದಲ್ಲಿ ರಕ್ತದ ಮೂಲಕ ಶ್ವಾಸ ಕೋಶದ ಮೂಲಕ

ಸಂಚಾರ ಮಾಡುವುವು.ಇದರಿಂದ ಕೆಮ್ಮು ದಮ್ಮು ಬರ ಬಹುದು .ಕರುಳಿನ

 

ಒಳಗೆ  ಜೀರ್ಣ ಕ್ರಿಯೆಯನ್ನು ಕು೦ಟಿತ ಗೊಳಿಸುದಲ್ಲದೆ  ಕರುಳಿನ ಒಳಗೆ

ಕೆಲವೊಮ್ಮೆ ಪಿತ್ತ ನಾಳಗಳ ಒಳಗೆ ರಾಸ್ತಾ ರೋಕೋ ಮಾಡಿ ಗಂಬೀರ ಅಪಾಯ

ತರುವುದುಂಟು .

೨.  ಕೊಕ್ಕೆ ಹುಳ

 

     ಇದು ಮೂರ್ತಿ ಚಿಕ್ಕದಾದರೂ   ರಕ್ತ ಪಿಪಾಸು ಆಗಿರುವುದರಿಂದ 

 

ಅಪಾಯಕಾರಿ.ಇದರ ಮೊಟ್ಟೆಗಳು ಮಣ್ಣಿನಲ್ಲಿ ಲಾರ್ವಾ ಆಗಿ ಬರಿಗಾಲಿನಲ್ಲಿ

 

ನಡೆಯುವವರ  ಚರ್ಮದ ಮೂಲಕ  ರಕ್ತ ಸೇರುವವು .ಇವು ಕೂಡ  ಶ್ವಾಸ

 

ಕೋಶ ಸಂಚಾರ ಮಾಡಿ ಆ ಮೇಲೆ ಕರುಳಿಗೆ ತೆರಳುವವು .ಕಾಲಿನಲ್ಲಿ ಚರ್ಮ

 

ಸೇರುವ ಜಾಗದಲ್ಲಿ ನವೆ  ಉಂಟಾಗ ಬಹುದು .ಶ್ವಾಸ ಕೋಶ ಸಂಚಾರ ವೇಳೆ

ಕೆಮ್ಮು ದಮ್ಮು ಉಂಟು ಮಾಡ ಬಹುದು .ಕರುಳಿನಲ್ಲಿ ಇವು ರಕ್ತ ನಾಳಗಳನ್ನು

ಛೇದಿ ಸಿ ರಕ್ತ ಕುಡಿಯುವುವು .ಇದರಿಂದ  ರಕ್ತ ಹೀನತೆ ಉಂಟಾಗುವುದು .

 

                                             ankylostoma

 

೩.  ಇನ್ನು ಈಗ ಸಾಮಾನ್ಯವಾಗಿ ಇರುವಂತಹ  ಮಿಜಿಲೆ ಅಥವಾ ಸೂಜಿ ಹುಳ

 

(ಪಿನ್ ವರ್ಮ್).ಇದು ಬೆಳ್ಳಗೆ ತೆಳ್ಳಗೆ ಸಣ್ಣಗೆ ಇದ್ದು ದೊಡ್ಡ ಕರುಳು ಮಲ ದ್ವಾರ

 

ದಲ್ಲಿ ವಾಸ ವಾಗಿರುತ್ತದೆ .ಇದರ ಮೊಟ್ಟೆ ನೀರು ಆಹಾರ ಮೂಲಕ ನಮ್ಮ

 

ಹೊಟ್ಟೆ ಸೇರುವು ದು .ಮರಿಗಳು  ಗುದದ್ವಾರ ದ ಸುತ್ತ ಮುತ್ತ ಕಿರಿ ಕಿರಿ ಉಂಟು

 

ಮಾಡಿ ಕೆರೆತ ಉಂಟಾಗುವುದು .

 

EM1pruritis ani

ಕೈಗಳ ನೈರ್ಮಲ್ಯ  ಜಂತು ಮತ್ತು ಪಿನ್ ಹುಳ ತಡೆಗಟ್ಟ ಬಹುದಾದರೆ

 

ಕಾಲಿನಲ್ಲಿ  ಪಾದರಕ್ಷೆ  ಕೊಕ್ಕೆ ಹುಳ ತಡೆಗಟ್ಟುವುದು .

 

ಮೇಲಿನ ಎಲ್ಲಾ ಹುಳ ಗಳಿಗೂ  ಅಲ್ಬೆ೦ಡಜೊಲ್ ,ಮೆಬೆ೦ಡಜೊಲ್  ಒಳ್ಳೆಯ

 

ಔಷಧಿಗಳು .  ಮಿಜಿಲೆ ಅಥವಾ ಪಿನ್ ಹುಳ ಕ್ಕೆ  ಮಾತ್ರ  ಇದನ್ನು ಎರಡು

 

ವಾರಗಳ ಅಂತರದಲ್ಲಿ ಪುನಃ ತೆಗೆದುಕೊಳ್ಳಬೇಕು .ಅಲ್ಲದೆ ಕುಟುಂಬದವರು

 

ಎಲ್ಲರೂ  ಒಂದೇ ಸಾರಿ ಔಷಧಿ ಸೇವನೆ ಮಾಡಿದರೆ  ಒಬ್ಬರಿಂದ ಇನ್ನೊಬ್ಬರಿಗೆ

 

ಹರಡುವುದು ತಪ್ಪುವುದು .ಶಾಲೆಗಳಲ್ಲಿ ಮಕ್ಕಳಿಗೆ ಸಾಮೂಹಿಕ  ಹುಳ

 

ನಿರೋಧಕ ಔಷಧಿ ನೀಡುವುದು ಒಳ್ಳೆಯದು .

 

ಕೆಲವರು ಹೊಟ್ಟೆಯಲ್ಲಿ  ಹುಳ ಗುಳು ಗುಳು ಶಬ್ದ ಮಾಡುವುದು

ಎನ್ನುವರು .ಅದು ತಪ್ಪು .ಹುಳಗಳಿಗೆ ಮಾತು ಇಲ್ಲ .ಹೊಟ್ಟೆಯಿಂದ

ಬರುವ ಶಬ್ದ  ಗಾಳಿ ಮತ್ತು ನೀರಿನ ಚಲನೆ ಯಿಂದ ಬರುವುದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ