ಈಗ ನಡೆಯುವುದು ಮರೆತು ಹೋಗಿದೆ .ಮಗುವು ಮಗ್ಗುಲು ತಿರುಗಿ ,ಆ ಮೇಲೆ
ಕುಳಿತು ,ಮತ್ತೆ ನಿಲ್ಲುವುದು .ನಿಂತ ಮಗು ನಡೆಯುವುದಕ್ಕೆ ಮುನ್ನ ಚಲಿಸಲು
ವಾಕರ್ ಎಂಬ ಸಾಧನ ಬಂದಿದೆ .ಆಮೇಲೆ ಕಾರ್ ,ಎಟ್ ಲೀಸ್ಟ್ ರಿಕ್ಷಾ ,ಮನೆಯ
ಹೊಸಿಲಿಂದ ನರ್ಸರಿ , ಶಾಲೆ ,ಕಾಲೇಜ್ ಎಲ್ಲಿಯೂ ನಡೆಯಲು ಅವಕಾಶ ಇಲ್ಲ .
ಪ್ರಾಯ ಪೂರ್ತಿ ಆಗುವಾಗ ಡ್ರೈವಿಂಗ್ ಲೈಸೆನ್ಸ್ ಸಿಗುವುದು .ಆ ಮೇಲೆ
ನಡೆಯುವುದು ಮರ್ಯಾದೆಗೆ ಕಮ್ಮಿ ಎಂಬ ಭಾವನೆ ಬರುತ್ತದೆ .ಕೆಲವು ನಾಯಿ
ಮರಿಗಳಿಗಾದರೂ ನಡೆಯುವ ಭಾಗ್ಯ ಕೆಲಸದವರ ಜೊತೆ ಇರುತ್ತದೆ .
ಈಗ ಮೊದಲಿನಂತೆ ನಡೆಯುವುದು ಕಷ್ಟ .ಹಳ್ಳಿಗಳಲ್ಲಿ ಹಳೆಯ
ರೂಡಿಯ ಕಾಲು ದಾರಿಗಳು ಅದೃಶ್ಯವಾಗಿವೆ .ಪೇಟೆಯಲ್ಲಿ ನಡೆಯುವ ಮುನ್ನ
ಜೀವ ವಿಮೆ ಮಾಡಿಸಿ ಕೊಳ್ಳುವುದು ಉತ್ತಮ . ಪಾದಚಾರಿಗಳಿಗೆ ರಸ್ತೆ ಬದಿಯಲ್ಲಿ
ಇದ್ದ ಜಾಗವನ್ನು ಹಿಂತೆಗೆದು ಕೊಂಡ ಹಾಗಿದೆ .ಅವರು ರಸ್ತೆ ತೆರಿಗೆ
ಕಟ್ಟುವುದಿಲ್ಲವಲ್ಲ .ವಾಹನ ಸವಾರರಿಗೆ ಆಲ್ ಇಂಡಿಯಾ ಲೈಸನ್ಸ್ ಇದ್ದ ಕಾರಣ
ಅವರು ರಸ್ತೆ ತುಂಬಾ ಅಲ್ಲದೆ ಕೆಲವೊಮ್ಮೆ ರಸ್ತೆಯ ಹೊರಗೂ ಚಲಿಸುತ್ತಾರೆ .ಇನ್ನು
ಮುಂದೆ ನಡೆಯುವ ಲೈಸನ್ಸ್ ಉಳ್ಳವರು ಮಾತ್ರ ರಸ್ತೆಯಲ್ಲಿ ನಡೆಯ ಬಹುದು
ಎಂದು ಕಾನೂನು ಮಾಡಬಹುದು .
ನಡೆಯ ಪಾಠ ಗಳು ಈ ರೀತಿ ಇರಬಹುದು
೧. ನಡೆಯುವವರು ತಮ್ಮ ಫೋಟೋ ವಿಳಾಸ ಇರುವ ಲೈಸನ್ಸ್ ಹೊಂದಿರ ಬೇಕು
ಯಾವ ವಾಹನ ಯಾರ ಮೇಲೆ ಹೋಗುವುದೋ ಯಾರಿಗೆ ಗೊತ್ತು ?
೨ ರಸ್ತೆಯಲ್ಲಿ ಆಟೋ ರಿಕ್ಷಾ ದ ಹಿಂದೆ ನಡೆಯವಾಗ ಸಾಕಷ್ಟು ಅಂತರ
ಇಟ್ಟುಕೊಳ್ಳಿ .ಅವರು ಯಾವುದೇ ಮುನ್ಸೂಚನೆ ಇಲ್ಲದೆ ನಿಲ್ಲಿಸುವರು .ಅವರು ಎಡಕ್ಕೆ
ಇಂಡಿಕೇಟರ್ ಹಾಕಿ ಬಲಕ್ಕೆ ಹೋದರೂ ಹೋಗ ಬಹುದು .
೩. ನಿಮ್ಮ ಶ್ರವಣ ಶಕ್ತಿ ಪರೀಕ್ಷಿಸಲು ತರಹ ತರಹದ ಹಾರ್ನ್ (ಕಹಳೆ )ಗಳು
ಕೇಳಿಸಿದರೂ ಅಂಜದಿರಿ ,ಯಾಕೆಂದರೆ ರಸ್ತೆಯೊಳಗೆ ಇಳಿದು ಹಾರ್ನ್ ಗೆ
ಅಂಜಿದೊಡೆಂತಯ್ಯಾ .ನಮ್ಮಲ್ಲಿ ಕಾರಣವಿಲ್ಲದೆ ಹಾರ್ನ್ ಮಾಡುವರೇ ಜಾಸ್ತಿ
ಇದರಿಂದ ಜನರ ಶ್ರವಣ ಶಕ್ತಿ ಕುಂದುವುದು.
೩ ಬಹಳ ವಾಹನ ಸಂದಣಿ ಇರುವ ರಸ್ತೆ ದಾಟುವುದು ಕಷ್ಟ ವಾದರೆ ರಿಕ್ಷಾ
ಹಿಡಿದು ಹೋಗುವುದು ಜೀವಕ್ಕೆ ಕ್ಷೇಮ
೪ ,ನಡೆಯುವಾಗ ದೃಷ್ಟಿ ದಾರಿ ಮೇಲೆ ಮತ್ತು ರಸ್ತೆ ಮೇಲೆ ಇರಲಿ .ಅಂಗಡಿ
ಯಲ್ಲಿ ಪ್ರದರ್ಶನಕ್ಕೆ ಇಟ್ಟ ವಸ್ತುಗಳನ್ನು ನೋಡುತ್ತಾ ನಡೆದರೆ ದಾರಿಯಲ್ಲಿ
ಸ್ಲಾಬ್ ಎದ್ದು ಹೋಗಿದ್ದು ನೀವು ಚರಂಡಿಗೆ ಬೀಳುವ ಅಪಾಯ ಇದೆ .
೫. ನನಗೆ ನಡೆಯುವುದೆಂದರೆ ಇಷ್ಟ ,ರಸ್ತೆಯಲ್ಲಿ ನಾನು ನಡೆಯುವಾಗ ಪರಿಚಯ
ದವರು ಡಾಕ್ಟ್ರೆ ನಿಮ್ಮ ಕಾರ್ ಏನಾಯಿತು ಎಂದು ಸಹಾನುಭೂತಿ ಪೂರ್ವಕ
ಪ್ರಶ್ನೆ ಕೇಳುವರು .ಕೆಲವರು ಇವರ ಪ್ರಾಕ್ಟೀಸ್ ಚೆನ್ನಾಗಿ ನಡೆಯುತ್ತಿಲ್ಲಾ ಎಂದು
ಕಾಣುತ್ತದೆ .ಅದಕ್ಕೆ ಇವರು ನಡೆಯುತ್ತಿದ್ದಾರೆ ಎಂದುಕೊಂಡು ಕರುಣಾಕಟಾಕ್ಷ
ಬೀರುವರು.ಇದಕ್ಕೆಲ್ಲಾ ನಡೆಯುವವರು ಸಿದ್ದರಾಗಿ ಇರಬೇಕು .
೬. ನಮ್ಮ ಮುಂದೆ ನಡೆಯುವರ ಲಿಂಗವನ್ನು ಹಿಂದಿನಿಂದ ನೋಡಿ ನಿರ್ಧರಿಸ ಬೇಡಿ .
ಕೇಶಾಲಂಕಾರ ,ಉಡುಗೆ ತೊಡುಗೆ ಯಿಂದ ಗಂಡೋ ಹೆಣ್ಣೋ ಎಂದು
ಹೇಳುವ ಕಾಲ ಇದಲ್ಲ .
೭. ನಿಮ್ಮದೇ ತಪ್ಪಿನಿಂದ ರಸ್ತೆಯಲ್ಲಿ ಏನಾದರೂ ಅನಾಹುತ ನಡೆದರೂ
ಸಾರೀ ಎಂದು ಹಲ್ಲುಕಿರಿಯ ಬೇಡಿ .ಒಫ್ಫೆನ್ಸ್ ಇಸ್ ದಿ ಬೆಸ್ಟ್ ಡಿಫೆನ್ಸ್
ಆಕ್ರಮಣ ಕಾರೀ ಪ್ರತಿಕ್ರಿಯೆ ಉತ್ತಮ ರಕ್ಷಣಾತ್ಮಕ ಕ್ರಿಯೆ .ಇಲ್ಲಿ
ಸುಸಂಸ್ಕೃತತೆ ಇತ್ಯಾದಿ ಗಳನ್ನ ಮರೆಯಬೇಕು .
ಮಿತ್ರರೇ ನೀವು ನಡೆಯುವವರಾದರೆ ಇದಕ್ಕೆ ನಿಮ್ಮ ಸಲಹೆಗಳನ್ನು
ಸೇರಿಸಿರಿ .

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ