ಅಲ್ಲರ್ಜಿ ಅಸ್ತಮಾ - ಶರೀರ ರಕ್ಷಣಾ ವ್ಯವಸ್ಥೆಯ ಅತಿ ಸಂವೇದನೆ
ಮಾನವನ ಶರೀರದಲ್ಲಿ ವ್ಯವಸ್ತಿತ ವಾದ ರಕ್ಷಣಾ ವ್ಯವಸ್ಥೆ ಇದೆ. ಶರೀರಕ್ಕೆ ಅನ್ಯ ವಸ್ತುಗಳು ಬಂದೊಡನೆ ( ವಿಜ್ಞಾನದ
ಭಾಷೆಯಲ್ಲಿ ಆಂಟಿ ಜನ್ ) ಅದನ್ನು ಕಾವಲು ಪೋಲಿಸ್ ಆದ ಆಂಟಿ ಜನ್ ಹಾಜರು ಪಡೆಸುವ ಕೋಶವು ಪರಿಶೀಲಿಸುತ್ತದೆ
.ಇಂತಹ ಜೀವ ಕೋಶಗಳು ಶರೀರದ ಎಲ್ಲಾ ಅಂಗಗಳಲ್ಲಿ ಅಡಗಿವೆ. ಬಂದ ವಸ್ತು ಅನ್ಯ ಮತ್ತು ಅಪಾಯಕಾರಿ ಎಂಬ ಭಾವನೆ
ಅದಕ್ಕೆ ಬಂದರೆ ಅದು ಕೂಡಲೇ ಬಿಳಿ ರಕ್ತ ಕಣ ಗಳಿಗೆ ರಾಸಾಯನಿಕ ಸಂದೇಶಗಳನ್ನು ರವಾನಿಸುತ್ತದೆ
.ಬಿಳಿ ರಕ್ತ ಕಣಗಳು ನಮ್ಮ ದೇಹದ ಸೈನಿಕರು .ಸೈನಿಕರು ಎಂದೊಡನೆ ಟೆನಿಸನ್ ಕವಿಯ ಈ ಪದ್ಯ ನೆನಪಿಗೆ ಬರುವುದು
.Theirs not to make reply,
ಭಾಷೆಯಲ್ಲಿ ಆಂಟಿ ಜನ್ ) ಅದನ್ನು ಕಾವಲು ಪೋಲಿಸ್ ಆದ ಆಂಟಿ ಜನ್ ಹಾಜರು ಪಡೆಸುವ ಕೋಶವು ಪರಿಶೀಲಿಸುತ್ತದೆ
.ಇಂತಹ ಜೀವ ಕೋಶಗಳು ಶರೀರದ ಎಲ್ಲಾ ಅಂಗಗಳಲ್ಲಿ ಅಡಗಿವೆ. ಬಂದ ವಸ್ತು ಅನ್ಯ ಮತ್ತು ಅಪಾಯಕಾರಿ ಎಂಬ ಭಾವನೆ
ಅದಕ್ಕೆ ಬಂದರೆ ಅದು ಕೂಡಲೇ ಬಿಳಿ ರಕ್ತ ಕಣ ಗಳಿಗೆ ರಾಸಾಯನಿಕ ಸಂದೇಶಗಳನ್ನು ರವಾನಿಸುತ್ತದೆ
.ಬಿಳಿ ರಕ್ತ ಕಣಗಳು ನಮ್ಮ ದೇಹದ ಸೈನಿಕರು .ಸೈನಿಕರು ಎಂದೊಡನೆ ಟೆನಿಸನ್ ಕವಿಯ ಈ ಪದ್ಯ ನೆನಪಿಗೆ ಬರುವುದು
.Theirs not to make reply,
Theirs not to reason why,
Theirs but to do and die:
ನೀವು ರಕ್ತ ಪರೀಕ್ಷೆ ವರದಿಯಲ್ಲಿ ಟಿ. ಸಿ . ಮತ್ತು ಡಿ. ಸಿ .ಎಂಬ ಅಂಕಣ ನೋಡಿದ್ದೀರಿ. ಇದು ಒಂದು ಘನ ಮಿಲ್ಲಿ ಲೀ ರಕ್ತದಲ್ಲಿ
ಇರುವ ಬಿಳಿ ರಕ್ತ ಕಣಗಳ ಒಟ್ಟು ಸಂಖ್ಯೆ ಮತ್ತು ಜಾತಿವಾರು ವಿಂಗಡಣೆ .ಬಿಳಿ ರಕ್ತ ಕಣಗಳಲ್ಲಿ ಬಹು ದಳ
ಕೋಶಿ(Neutrophil) ಬಿಳಿ ರಕ್ತ ಕಣ , ಲಿಂಫೋ ಸೈಟ್ ,ಇಯೋಸಿನೋಫಿಲ್ ,ಬೆಸೋಫಿಲ್ ,ಮತ್ತು ಮೊನೊ ಸೈಟ್
ಎಂಬ ಪ್ರಭೇಧ ಗಳಿವೆ .ಅವುಗಳ ಚಿತ್ರಣ ನೋಡಿರಿ.
ಈ ಬಹು ದಳ ಕೋಶಿ ಕಣವು ಅಧಿಕ ಸಂಖ್ಯೆಯಲ್ಲಿ ಇದ್ದು ನಮ್ಮ ಕಾಲಾಳು ಸೈನಿಕರಂತೆ ವೈರಿ ರೋಗಾಣುವಿನೊಡನೆ
ಹೋರಾಡಿ ಅದನ್ನು ಕೊಂದು ಜೀರ್ಣಿಸುತ್ತದೆ ಅಥವಾ ತಾನೇ ಹುತಾತ್ಮನಾಗುತ್ತದೆ .ಅದಕ್ಕೆ ಬಿಳಿರಕ್ತ ಕಣಗಳ ಸರಾಸರಿ
ಆಯುಸ್ಸು ೨೪ ಗಂಟೆಗಳು ಮಾತ್ರ .( ಕೆಂಪು ರಕ್ತ ಕಣ ೧೨೦ ದಿನಗಳು )
ಶರೀರದ ಬೇಹು ವ್ಯವಸ್ತೆ ಯ ಅಂಟಿಜನ್ ಹಾಜರು ಪಡಿಸುವ ಕೋಶ ಅನ್ಯ ಹಾನಿಕಾರಕ ವಸ್ತ್ವನ್ನು ಗುರುತಿಸಿ ಲಿಂಫೋ
ಸೈಟ್ ಕಣಕ್ಕೆ ಆದೇಶ ರವಾನಿಸುತ್ತದೆ .ಈ ಕಣಗಳಲ್ಲಿ ಕೆಲವು ಪ್ಲಾಸ್ಮಾ ಸೆಲ್ ಎಂಬ ಕೋಶಗಳಾಗಿ ಪರಿವರ್ತನೆ ಗೊಂಡು
ವೈರಿ ಆಂಟಿಜನ್ (ರೋಗಾಣು ,ಅಲರ್ಜಿ ಕಾರಕ ವಸ್ತು ಇತ್ಯಾದಿ ) ವಿರುದ್ದ ಆಂಟಿಬಾಡಿ ಎಂಬ ಪ್ರತ್ಯಸ್ತ್ರ ಉಂಟು ಮಾಡುವುದು
.ಇನ್ನು ಕೆಲವು ತಾವೇ ವೈರಿ ಕೊಲ್ಲುವ ಸೈನಿ ಕರಾಗಿ ಮಾರ್ಪಾಡು ಹೊಂದುತ್ತವೆ. ಈ ಎಲ್ಲಾ ಕ್ರಿಯೆಯಿಂದ ಉಂಟಾಗುವ
ರಾಸಾಯನಿಕಗಳು ವೈರಿ ಪ್ರವೇಶಿಸಿದ ಜಾಗದಲ್ಲಿ ಹೆಚ್ಚು ರಕ್ತ ಸಂಚಾರ ಆಗುವಂತೆ ಮಾಡುತ್ತವೆ .ಇದರಿಂದ ಹೆಚ್ಚು
ಸೈನಿಕರೂ ಹೆಚ್ಚು ಆಯುಧಗಳೂ ಸ್ತಳಕ್ಕೆ ರವಾನೆ ಆಗುವುದು ತಾನೆ .
ಅಲರ್ಜಿ ವಿಚಾರಕ್ಕೆ ಬರೋಣ .ಅಲರ್ಜಿ ಕಾರಕಗಳು ನಮ್ಮ ಶರೀರದ ಚರ್ಮ ,ಶ್ವಾಸ ಕೋಶ ಅಥವಾ ಬಾಯಿ ಅನ್ನನಾಳದ
ಮೂಲಕ ಶರೀರ ಪ್ರವೇಶಿಸ ಬಹುದು .ಚರ್ಮಕ್ಕೆ ಅವು ತಾಗಿದಾದ ರಕ್ಷಣಾ ವ್ಯವಸ್ತೆಯ ಅತಿ ಸಂವೇದನೆಯಿಂದ
ರಾಸಾಯನಿಕಗಳು ಉತ್ಪತ್ತಿಯಾಗಿ ಸ್ಥಳೀಯ ರಕ್ತ ಸಂಚಾರ ನೂರ್ಮಡಿ ಯಾಗುವುದರಿಂದ ಕೆಂಪಾಗಿ ಚರ್ಮ ಉಬ್ಬ್ಬಿ
ಕೊಂಡು ತುರಿಸುವುದು.ಇದನ್ನು ಕೆಂಪು ,ಧಡಿಕೆ ಇತ್ಯಾದಿ ಹೆಸರಿನಿಂದ ಕರೆಯುವರು.ಅಲರ್ಜಿ ಎಂದರೆ ರಕ್ಷಣಾ ವ್ಯವಸ್ತೆಯ
ಅತಿ ಸಂವೇದನೆ ಅಥವಾ ಸೈನಿಕರ ದಾಂದಲೆ ,ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಕರೆಯ ಬಹುದು .
ಅತಿ ಸಂವೇದನೆ ಅಥವಾ ಸೈನಿಕರ ದಾಂದಲೆ ,ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಎಂದು ಕರೆಯ ಬಹುದು .
ಇದೇ ಪ್ರತಿಕ್ರಿಯೆ ಶ್ವಾಸ ನಾಳ ಗಳಲ್ಲಿ ಉಂಟಾದಾಗ ಅಂದರೆ ಅಲರ್ಜಿಕಾರಕಗಳ ವಿರುದ್ದ ಹೋರಾಟಕ್ಕೆ ಅಧಿಕ ರಕ್ತ ,ರಕ್ತ
ಕಣಗಳು ಶ್ವಾಸ ನಾಳದ ಒಳ ಮೈಯ್ಯಲ್ಲಿ ಸೇರಿ ನಾಳಗಳ ಒಳ ಮೈ ಅಳತೆ ಕಗ್ಗುವುದು .ಇದರಿಂದ ಉಸಿರು ಹೊರ
ಬಿಡುವಾಗ ತಟಸ್ಥ ಉಂಟಾಗಿ ದಮ್ಮು ಕಟ್ಟುತ್ತದೆ ಮತ್ತು ಸುಯಿ ಸುಯಿ ಎಂಬ ಶಬ್ದ ಉಂಟಾಗುವುದು .
ಗಳನ್ನೂ ಕಾಣ ಬಹುದು ( ಅವುಗಳ ಮೂಲಕ್ಕೆ ಆಭಾರಿ )
ಅಸ್ತಮಾ ಕಾಯಿಲೆಗೆ ಸಾಮಾನ್ಯ ಅಲರ್ಜಿಕಾರಕಗಳು ಹೂವಿನ ಪರಾಗ ,ಧೂಳು ಕ್ರಿಮಿ, ಜಿರಳೆ ,ರಾಸಾಯನಿಕಗಳು
ಇತ್ಯಾದಿ ಇರ ಬಹುದು .ಇವು ಮೂಗಿನಲ್ಲಿ ಅಲರ್ಜಿ ಉಂಟು ಮಾಡಿದರೆ ನೆಗಡಿ ಸೀನು ಬರುವುದು.
ಅಲರ್ಜಿ ಯಾದಾಗ ಒಂದು ಜಾತಿಯ ಬಿಳಿ ರಕ್ತ ಕಣ ಗಳಾದ ಇಯೋಸಿನೋಫಿ ಲ್ ಗಳು ಜಾಸ್ತಿಯಗುವವು .(ನಾರ್ಮಲ್ ಆಗಿ ಬಿಳಿರಕ್ತ ಕಣಗಳ ಶೇಕಡಾ 1 ರಿಂದ 4 ಅಥವಾ ನಿಖರವಾಗಿ ಕ್ಯೂಬಿಕ್ ಮಿಲಿ ಲೀಟರ್ ಗೆ 50 ರಿಂದ 500) .ಅವುಗಳಲ್ಲಿಯ
ರಾಸಾಯನಿಕಗಳು ವೈರಿ ಕೊಲ್ಲಲು ಉಪಯೋಗವಾಗುತ್ತವೆ. ಅಲರ್ಜಿಯಿಂದ ಇಯೋಸಿನೋಫಿ ಲಿಯಾ (ಎಂದರೆ ಏರಿದ
ಇಯೋಸಿನೋಪಿಲ್ ಸಂಖ್ಯೆ )ವೇ ಹೊರತು ಇಯೋಸಿನೋಫಿ ಲಿಯಾ ದಿಂದಾಗಿ ಅಲರ್ಜಿ ಅಥವಾ ಅಸ್ತಮಾ ಅಲ್ಲ .ಬಹಳ ಮಂದಿ ನನಗೆ ಇಯೋಸಿನೋಫಿಲಿಯಾ ಕಾಯಿಲೆ ಇದೆ ಎಂದು ಹೇಳುವರು ,ಹಾಗೆ ಒಂದು ಕಾಯಿಲೆಯೇ ಇಲ್ಲ .(ಟ್ರೋಪಿಕಲ್ ಇಯಿಸಿನೋಫಿಲಿಯಾ ಎಂಬುದು ಒಂದು ಇದೆ ,ಅದಕ್ಕೆ ಅದರದೇ ಆದ ವ್ಯಾಖ್ಯೆ ಇದೆ )
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ