ಬೆಂಬಲಿಗರು

ಸೋಮವಾರ, ಮಾರ್ಚ್ 9, 2015

ಕ್ರಿಕೆಟ್ ಕಮೆಂಟರಿ ಮತ್ತು ಕೇರಳದ ರಾಜಕೀಯ ಭಾಷಣ

 

 ಖಾಲಿ ನಿವೇಶನ .ಹೊಲ ಗದ್ದೆ ಗಳಲ್ಲಿ ಕ್ರಿಕೆಟ್ ಹಬ್ಬ .ಈಗ ಎಲ್ಲರಿಗೂ ಕ್ರಿಕೆಟ್

ಜ್ವರ ತಾನೆ . .ಫುಟ್ ಬಾಲ್ ವರ್ಲ್ಡ್ ಕಪ್ಸಮಯದಲ್ಲಿ ಈ ಅಂಗಣಗಳು ಫುಟ್ ಬಾಲ್ ಮೈದಾನ ಗಳಾಗಿ ಮಾರ್ಪಡುತ್ತವೆ .ಇಲ್ಲಿ ರಬ್ಬರ್ ಬಾಲ್ ಮತ್ತು ಅಂಡರ್ ಆರ್ಮ್ ಬೌಲಿಂಗ್ ಸಾಮಾನ್ಯ .ಹೆಚ್ಚಿನ

ಕಡೆ ಆಟ ಗಾರರೂ ಅವರ ಅಣ್ಣ ತಮ್ಮಂದಿರೂ ಇರುವರು .ಸಾಕಷ್ಟು ಆಟಗಾರರು ಇಲ್ಲದಿದ್ದರೂ ಇಬ್ಬರು ಅಂಪೈರ್ ಗಳು ಮತ್ತು ಇಬ್ಬರು ಕಾಮೆ೦ಟ್ರೇಟರ್ಗಳು ಇದ್ದೆ ಇರುತ್ತಾರೆ .ಅವರು ಯಾರಿಗೆ ಕಾಮೆಂಟರಿ ಹೇಳುವರುಎಂದುಕೊಳ್ಳುತ್ತಿದ್ದೆ .ಕನ್ನಡ ಇಂಗ್ಲಿಷ್ ಮತ್ತು ತುಳು ಭಾಷೆಯಲ್ಲಿ ನಿರರ್ಗಳವಾಗಿ ವೀಕ್ಷಕ ವಿವರಣೆ ಕೊಡುತ್ತಾರೆ .

 

ಇದನ್ನು ನೋಡುವಾಗ ಕೇರಳದ ರಾಜಕೀಯ ಸಭೆಗಳು ಜ್ಞಾಪಕಕ್ಕೆಬರುತ್ತವೆ .ಬುದ್ದಿವಂತರ ನಾಡಾದ ಕೇರಳದಲ್ಲಿ ಹತ್ತಾರು ಪಕ್ಷಗಳು .ನನಗೆ ತಿಳಿದಂತೆ ಮೂರು ಕಮ್ಯುನಿಸ್ಟ್ ಪಕ್ಷ .ಕಾಂಗ್ರೆಸ್ ನಲಿ ಕಾಂಗ್ರೆಸ್ ,ಕೇರಳ

ಕಾಂಗ್ರೆಸ್( ಬಿ ).ಕೇರಳ ಕಾಂಗ್ರೆಸ್ (ಎಮ್),ಕೇರಳ ಕಾಂಗ್ರೆಸ್ (ಜೆ )ಇತ್ಯಾದಿ .ಅವುಗಳ ಯುಥ್ ವಿಂಗ್ ಗಳು ,ಕಾರ್ಮಿಕ ವಿಭಾಗಗಳು .ಅಂದರೆ ಅವರ ಮರಿ ಲೀಡರ್ ಗಳ ಸಭೆಯಲ್ಲಿ ವೇದಿಕೆ ಮೇಲೆ ಮಾತ್ರ ಜನರಿರುತ್ತಾರೆ .

ಆದರೂ ಮೈಕ್ ಇರುತ್ತದೆ ,ಭಾಷಣ ಮಾಡುವವರು  ಕೆಂಪು ಕೋಟೆಯಿಂದ ದೇಶವನ್ನು ಉದ್ದೇಶಿಸಿ ಮಾತನಾಡುವ ರಂತೆ  ಆವೇಶ ಭರಿತರಾಗಿ ಯಾವುದೇ ಮುಜುಗರ ಇಲ್ಲದೆ ಮಾತಿನ ಮಳೆ ಸುರಿಸುವರು .ಅವರ ಭಾಷಣದಲ್ಲಿ

ಅಮೆರಿಕಾದ ಅರ್ಥಿಕ ನೀತಿಯಿಂದ ಹಿಡಿದು ಮಧ್ಯ ಪ್ರಾಚ್ಯದ ನೌಕರಿ ಕಾನೂನುಗಳು ವಿಶ್ವ ಸಂಸ್ಥೆ ಇತ್ಯಾದಿಯಾಗಿ ಎನಿಥಿಂಗ್ ಅಂಡರ್ ದಿ ಸನ್ ಬಗ್ಗೆ ವಿಮರ್ಶೆಇರುತ್ತದೆ .

  ಈಗ ನನಗೆ ಮನವರಿಕೆ ಆಗಿದೆ .ಇವರು ಜಗದ ಪಾಠ ಶಾಲೆಯಲ್ಲಿ ರೂಪಿತರಾಗುತ್ತಿರುವ ಕಾಮೆಂಟ್ಟ್ರೇಟರ್ಗಳು .ಇವರು ಹರ್ಷ ಭೋಗ್ಲೆ ಇಲ್ಲಾ ರವಿ ಶಾಸ್ತ್ರೀ ಆಗದಿದ್ದರೂ ಆತ್ಮ ವಿಶ್ವಾಸ ದಿಂದ  ಮಾತನಾಡುವ ಕಲೆ ಕರಗತ ವಾದ್ದರಿಂದ  ಎಲ್ಲೂ ಮಿಂಚ ಬಹುದು .ಅಂತೆಯೇ ಕೇರಳದ ಸಣ್ಣ ನಾಯಕರು ಮುಂದೆ ವಿಧಾನ ಸಭೆ ,ಲೋಕ ಸಭೆಗಳಲ್ಲಿ ಸದಸ್ಯ ರಾದಾಗ ವಿಷಯ ಮಂಡನೆಯಲ್ಲಿ ನಿಪುಣರಾಗಿ ಇರುವರು .ಕೇರಳದ ವಿಧಾನ ಸಭೆಯ ಚರ್ಚೆಯ ಮಟ್ಟ ಉಳಿದ ರಾಜ್ಯಗಳಿಂದ ಮೇಲ್ಮಟ್ಟ ದಲ್ಲಿ ಇರುವುದಕ್ಕೆ ಇದೂ ಒಂದು ಕಾರಣ ಇರ

ಬೇಕು .

 

ನಾನು ಸಣ್ಣವನಿದ್ದಾಗ ರೇಡಿಯೋ ವಿಕ್ಷಕ ವಿವರಣೆ ಕೇಳಿ ಆನಂದಿಸುತ್ತಿದ್ದ ಕಾಲ .ರೇಡಿಯೋ ವಿಕ್ಷಕ ವಿವರಣೆ ಗಾರರು ನಮ್ಮಲ್ಲಿ ಆಟದ ಮೈದಾನದ ಚಿತ್ರಣವನ್ನು ನೀಡುತ್ತಿದ್ದ ಪರಿ ಅನೂಹ್ಯ .ಅವರ ವಿವರಣೆ ನಮ್ಮ ಉಹಾಶಕ್ತಿ ಎರಡೂ ರೋಮಾಂಚನ ಉಂಟು ಮಾಡುತ್ತಿದ್ದವು ,ಸುರೇಶ ಸರಯ್ಯಾ,ಅನಂತ್ ಸೆತಲ್ವಾದ್,ರವಿ ಚತುರ್ವೇದಿ ,ಡಿಕಿ ರತ್ನಾಗರ್ ,ಸುಶಿಲ್ದೋಷಿ ಮುಂತಾದವರ ವಿಕ್ಷಕ ವಿವರಣೆ ಮರೆಯುವುದುಂಟೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ