ರಿಪೋರ್ಟನ್ನು ಚಿಕಿತ್ಸೆ ಮಾಡದಿರಿ ರೋಗಿಯನ್ನು ಚಿಕಿತ್ಸೆ ಮಾಡಿ .
ಇಡೀ ರೋಗಿಯನ್ನು ಪರೀಕ್ಷೆ ಮಾಡಿ ಭಾಗಶ ಪರೀಕ್ಷೆ ಸಲ್ಲ
ಇದು ನನ್ನ ಗುರು ಡಾ ಕೆ ವಿ ತಿರುವೆಂಗಡಂ ಹೇಳುತ್ತಿದ್ದ ಮಾತುಗಳು .
ಉದಾಹರಣೆಗೆ ಕೆಲವು ರೋಗಿಗಳು ಕೊಲೆಸ್ಟರಾಲ್ ರಿಪೋರ್ಟ್ ತಂದು ಇದಕ್ಕೆ
ಚಿಕಿತ್ಸೆ ಮಾಡಿ ಎನ್ನುವರು .ಕೆಲವರು ಕೊಲೆಸ್ಟರಾಲ್ ನಮ್ಮ ವೈರಿ ಎಂದು
ತಿಳಿದಿರುವರು ,ಅದು ನಿಜವಲ್ಲ ,ಅದು ಎಲ್ಲಾ ಜೀವಕೋಶಗಳಿಗೆ ಅವಶ್ಯ .ಅದು
ಸ್ವಲ್ಪ ಹೆಚ್ಚು ಆದ ಕೂಡಲೇ ಚಿಕಿತ್ಸೆ ಅವಶ್ಯವಿಲ್ಲ .ರೋಗಿಗೆ ಬೇರೆ ಕಾಯಿಲೆಗಳು
(ಬಿ ಪಿ ,ಶುಗರ್ ,ಹೃದಯ ಕಾಯಿಲೆ )ಇವೆಯೋ ,ಯಾವ ಕೊಲೆಸ್ಟರಾಲ್ ಎಷ್ಟು ಇದೆ
ಇದನ್ನಲ್ಲಾ ನೋಡ ಬೇಕು .ಅದಕ್ಕೆ ವೈಜ್ಞಾನಿಕ ಲೆಕ್ಕಾಚಾರ ಇದೆ .
ಇನ್ನೊಂದು ರಿಪೋರ್ಟ್ ಇಯೋಸಿನೋಪಿಲ್ ಕೌಂಟ್ .ಇವು ರಕ್ತದಲ್ಲಿ ಇರುವ
ಬಿಳಿ ರಕ್ತ ಕಣಗಳ ಒಂದು ವರ್ಗಕ್ಕೆ ಸೇರಿದವುಗಳು .ಅಸ್ತಮಾ ,ಅಲರ್ಜಿ ,ಹೊಟ್ಟೆ
ಹುಳ ಬಾಧೆ ಇತ್ಯಾದಿ ಸಂದರ್ಭಗಳಲ್ಲಿ ಈ ಕಣಗಳು ಜಾಸ್ತಿ ಇರುತ್ತವೆ .ಆಯಾ
ಕಾಯಿಲೆಗಳಿಗೆ ಚಿಕಿತ್ಸೆ ಯಾಗಬೇಕೇ ಹೊರತು ಇಯೋಸಿನೋಫಿಲ್ ಗೆ ಅಲ್ಲ
ಇನ್ನು ಕೆಲವರು ರಕ್ತದಲ್ಲಿ ವಯ್ಡಾಲ್ ಟೆಸ್ಟ್ positive ಇದೆ ,ನನಗೆ
ಟೈಫಾಯಿಡ್ ಇದೆ ಎಂದು ಭಯ ಪಡುವರು . ಈ ಟೆಸ್ಟ್ ಇನ್ನು ಕೆಲವು ಕಾರಣ
ಗಳಿಂದ ಪೊಸಿಟಿವ್ ಇರ ಬಹುದು ,ಅಲ್ಲದೆ ಒಮ್ಮೆ ಟೈಫಾಯಿಡ್ ಬಂದರೆ
ಬಹಳ ಸಮಯದ ವರೆಗೆ ರಕ್ತದಲ್ಲಿ ಪೊಸಿಟಿವ್ ಇರ ಬಹುದು ಹಾಗೆಂದು
ರೋಗಿಗೆ ಪ್ರಸ್ತುತ ಟೈಫಾಯಿಡ್ ಇದೆ ಎಂದು ಅರ್ಥವಲ್ಲ .ಅದೇ ರೀತಿ ಡೆಂಗು
ಇಲಿ ಜ್ವರದಲ್ಲಿಯೂ ರಕ್ತದಲ್ಲಿ ಪ್ರತಿರಕ್ಷಾತ್ಮಕ ಆಂಟಿ ಬಾಡಿ ಗಳು ಅನೇಕ ವರ್ಷ
ಉಳಿಯುವುದರಿಂದ ಅವುಗಳ ಮೇಲೆ ನಿರ್ಧರಿತ ಪರೀಕ್ಷೆಗಳು ಪೊಸಿಟಿವ್
ಇರುತ್ತವೆ .ಆದರಿಂದ ಈ ರಿಪೋರ್ಟ್ ಗಳನ್ನ ನೋಡಿ ರೋಗಿಗೆ ಚಿಕಿತ್ಸೆ
ಮಾಡುವುದು ತರವಲ್ಲ .
ಹೃದಯ ಸಂಬಂದಿ ರೋಗಗಳಿಗೆ ಇ ಸಿ ಜಿ ಮಾಡುತ್ತೇವೆ .ಕೆಲವೊಮ್ಮೆ ರೋಗಿಗೆ
ಹೃದಯಾಘಾತ ಇದ್ದಾಗಲೂ ಇ ಸಿ ಜಿ ನಾರ್ಮಲ್ ಇರ ಬಹುದು .ಇನ್ನು ಕೆಲವು
ಭಾರಿ ಹೊಟ್ಟೆ ಯಲ್ಲಿ ಏನಾದರೂ ತೊಂದರೆ ಇದ್ದಾಗ ಇ ಸಿ ಜಿ ವ್ಯತ್ಯಾಸ ಇರ
ಬಹುದು .ಇವನ್ನು ಸಮಗ್ರವಾಗಿ ನೋಡ ಬೇಕಾಗುವುದು .
ಹಲವು ರೋಗಿಗಳು ತಮಗೆ ಗ್ಯಾಸ್ಟ್ರಿಕ್ ಪ್ರಾಬ್ಲಮ್ ಎಂದು ಬರುವರು .ಹೊಟ್ಟೆಯನ್ನು
ಪರೀಕ್ಷಿಸಿದಾಗ ಎಲ್ಲಾ ಸರಿ ಇರುತ್ತದೆ .ಎದೆಯಲ್ಲಿ ಆಸ್ತಮಾ ದ ಲಕ್ಷಣ ಇರುತ್ತದೆ
ಅಸ್ತಮಾ ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹೋಗ ಬೇಕಾದ ಗಾಳಿ ಹೊಟ್ಟೆಗೆ ಹೋಗಿ
ಹೊಟ್ಟೆ ಉಬ್ಬರಿಸುವುದು .ಆಗ ನಾವು ಅಸ್ತಮಾ ಕ್ಕೆ ಚಿಕಿತ್ಸೆ ಸರಿಯಾಗಿ ಮಾಡಿದರೆ
ಇದೂ ಶಮನ ಆಗುವುದು .
ಇನ್ನು ಬಿ ಪಿ .ನಾನು ನನ್ನ ಮೊದಲ ಬ್ಲಾಗ್ ಗಳಲ್ಲಿ ಬರೆದಂತೆ ಮೈಗ್ರೈನ್.
ಉದ್ವೇಗದ ತಲೆನೋವು ,ಅಸ್ತಮಾ ,ಮೂತ್ರದ ಕಲ್ಲಿನ ನೋವು ಇತ್ಯಾದಿ ಗಳಿಂದ
ಬಳಲುವವರಲ್ಲಿ ಬಿ ಪಿ ತಾತ್ಕಾಲಿಕವಾಗಿ ಏರುವುದು .ಆಗ ನಾವು ಮೂಲ ರೋಗ
ಗಳಿಗೆ ಚಿಕಿತ್ಸೆ ಮಾಡಿದರೆ ಬಿ ಪಿ ಬಹುತೇಕ ಸಾಮಾನ್ಯ ವಾಗುವುದು .ಅಲ್ಲದೆ
ಆಸ್ಪತ್ರೆಗೆ ಹೊಸತಾಗಿ ಬಂದವರಿಗೆ ಸ್ವಲ್ಪ ಬಿ ಪಿ ಜಾಸ್ತಿ ಇರ ಬಹುದು .ಆಗ ನಾವು
ಸ್ವಲ್ಪ ಬಿಟ್ಟು ಪುನಃ ಬಿ ಪಿ ನೋಡುವೆವು .
ಇತ್ತೀಚಿಗೆ ಹೊಟ್ಟೆಯ ಸ್ಕ್ಯಾನ್ ನಲ್ಲಿ ಫ್ಯಾಟಿ ಲಿವರ್ ಎಂದು ವರದಿ ಸಾಮಾನ್ಯ .
ಇದು ಶರೀರದಲ್ಲಿ ಬೊಜ್ಜು ಜಾಸ್ತಿ ಇದ್ದವರಲ್ಲಿ ಸಾಮಾನ್ಯ .ಸಕ್ಕರೆ ಕಾಯಿಲೆ ,ಮದ್ಯ
ಪಾನಿಗಳಲ್ಲೂ ಈ ರಿಪೋರ್ಟ್ ಬರ ಬಹುದು . ಇದಕ್ಕೆ ಆಯಾ ಕಾಯಿಲೆಗಳ
ಚಿಕಿತ್ಸೆ ಮಾಡಬೇಕು .ಲಿವರ್ ತೊಂದರೆ ಎಂದು ಬೇಡದ ಪಥ್ಯ ,ಲಿವರ್ ಟಾನಿಕ್
ಇತ್ಯಾದಿಗಳ ಮೊರೆ ಹೋಗ ಬಾರದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ