ಇರುವದೆಲ್ಲವ ಬಿಟ್ಟು ಇರದಿರುವುದಕ್ಕೆ ತುಡಿಯುವುದೇ ಜೀವನ- ಕವಿ ಅಡಿಗ
ಹಾಗಿದ್ದರೆ ಇಲ್ಲದೆಯೇ ಇರುವ ಮಂದಿ ಹೊಸ ಜೀವನ ವ ಹಾರೈಸಿ ಬರಿಗೈಲಿ
ದೇಶಾಂತರ ಹೋಗಿ ಅಲ್ಲಿಯೇ ನೆಲೆಸಿದರೂ ಮೂಲ ಸಂಸ್ಕೃತಿಗೆ ಆತು
ಕೊಂಡಿರುವ .ವಿಚಾರ ನನಗೆ ತುಂಬಾ ಕುತೂಹಲ ಉಂಟು ಮಾಡುತ್ತದೆ .
ವರ್ಷಗಳ ಹಿಂದೆ ಭಾರತ ದೇಶದಿಂದ ಮುಖ್ಯವಾಗಿ ಈಗಿನ ಯು ಪಿ ,ಬಿಹಾರ
ಗಳಿಂದ ದೂರದ ಸುರಿನಾಮ್ ,ಕ್ಯಾರಿಬ್ಬಿಯನ್ ದ್ವೀಪಗಳು,ಮಾರಿಷಿಯಸ್
ಮತ್ತು ಫಿಜಿ ದೇಶಗಳ ಕಬ್ಬು ಕೃಷಿ ಕಾರ್ಮಿಕರಾಗಿ ಹೋಗಿ ಅಲ್ಲಿ ನೆಲೆಸಿರುವವರ
ಕತೆ ರೋಚಕ .
ಕೆಲವು ದಿನಗಳ ಹಿಂದೆ ಪತ್ರಿಕೆ
ಒಂದರಲ್ಲಿ ಮೊದಲು ಡಚ್ಚರ ಕಾಲೋನಿ ಆಗಿದ್ದ
ಸುರಿನಾಮ ಗೆ ಸ್ವಾತಂತ್ರ್ಯ ಕೊಡುವಾಗ ಅಲ್ಲಿದ್ದ ಭಾರತೀಯ
ಮೂಲದವರಿಗೆ ಹಾಲೆಂಡ್ ದೇಶದ ಪೌರರಾಗುವ ಆಯ್ಕೆ ಕೊಟ್ಟ
ರೆಂದೂ ,ಆ ರೀತಿ ಅಲ್ಲಿಗೆ ತೆರಳಿದವರು ಹುಟ್ಟು ಹಾಕಿದ್ದ್ದ ಬೇಂಕು
ಮುಂದೆ ಪ್ರತಿಷ್ಠಿತ ಎ ಬಿ ಏನ್ (ಅಮ್ರೋ)ಆಗಿ ಭಾರತದಲ್ಲಿಯೂ
ಶಾಖೆಗಳನ್ನು ತೆರೆದ ವಿಚಾರ ಪ್ರಕಟವಾಗಿತ್ತು .
ಇದೇ ಬ್ಲಾಗ್ ನಲ್ಲಿ ಹಿಂದೆ ಭಾರತ ಮೂಲದ ಕೆನ್ನೆತ್ ಲಲ್ಲಾ ಅವರ ಬಗ್ಗೆ
ಬರೆದಿದ್ದೆ .
ಈ ದೇಶಗಳಿಗೆ ತೆರಳಿದ ಜನರು ಬರಿ ಗೈಲಿ
ಹೋಗಿದ್ದರೂ ಅವರ ಜತೆಯೇ ನಮ್ಮ ಸಂಸ್ಕೃತಿಯೂ ತೆರಳಿದುದು ರೋಚಕ
ರಾಮಾಯಣ ,ಮಹಾಭಾರತ ,ಪೂಜೆ ಪುರಸ್ಕಾರ ಗಳೂ ಶತಮಾನ ಗಳಿಂದ
ಅಲ್ಲಿ ನೆಲೆ ನಿಂತು ಭಾರತೀಯತೆ ಕಾಪಾಡುವ ಕಾರ್ಯ ಮಾಡಿವೆ .ಆಗಿನ್ನೂ
ರೇಡಿಯೋ ,ಕ್ಯಾಸೆಟ್ಟು ಬಿಡಿ ಪುಸ್ತಕ ಕೂಡಾ ಇರಲಿಲ್ಲ.ಬಾಯ್ದೆರೆ ಯಾಗಿ
ದೇಶವಾಸಿಗಳ ಎದೆಯಿಂದ ಎದೆಗೆ ಹರಿಯಿಯುತು ಸಂಸ್ಕೃತಿ .
ಇತ್ತೀಚೆಗೆ ಬ್ರಿಜ್ ವಿ ಲಾಲ್ ಅವರು ಬರೆದ ಪುಸ್ತಕ ‘ಆನ್ ದ ಅದರ್ ಸೈಡ್ ಆಫ್
ಮಿಡ್ ನೈಟ್ ಎ ಫಿಜಿಯನ್ ಜರ್ನಿ “ಓದಿದೆ .ಅವರು ಫಿಜಿಯ
ಭಾರತೀಯರ ಮೂರನೇ ತಲೆಮಾರಿನವರು .ತಮ್ಮ ಮೂಲವನ್ನು ಹುಡುಕಿ
ಭಾರತಕ್ಕೆ ಬಂದ ಕಥೆ ,ತಮ್ಮ ಅಜ್ಜ ತಂದೆ ಭಾರತೀಯರಾಗಿ ಬಾಳಿದ ಪರಿ
ರೋಚಕವಾಗಿ ಬರೆದಿದ್ದಾರೆ .
ಆಗೆಲ್ಲಾ ಈ ರೀತಿ ವಲಸೆ ಹೋಗುತ್ತಿದ್ದ ಕೂಲಿ ಕಾರ್ಮಿಕರನ್ನು ಗಿರ್ಮಿಟಿಯಾ
ಎಂದು ಕರೆಯುತ್ತಿದ್ದರು .ಇದು ಅಗ್ರಿಮೆಂಟ್ ಎಂಬ ಶಬ್ದದ ಅಪಭ್ರಂಶ ಎಂದು
ಹೇಳುತ್ತಾರೆ .ಬ್ರಿಜ್ ವಿ ಲಾಲ್ ಅವರು ಒಂದು ಪ್ರಶ್ನೆ ಎತ್ತುತ್ತಾರೆ .ಒಂದು
ದೇಶದಲ್ಲಿ ಎಷ್ಟು ತಲೆಮಾರು ಕಳೆದ ಮೇಲೆ ಅದನ್ನು ತನ್ನ ತಾಯಿ ನಾಡು
ಎಂದು ಕರೆಯ ಬಹುದು ?
ಮೇಲೆ ಹೇಳಿದ ದೇಶಗಳಲ್ಲಿ ಕ್ಯಾರಿಬ್ಯಾನ್ ದ್ವೀಪ ,ಸುರಿನಾಮ್ ಗಳಲ್ಲಿ ಕ್ರಮೇಣ ಅಲ್ಲಿಯ ಪೌರತ್ವ
ನಮ್ಮವರಿಗೆ ಲಭಿಸಿದ್ದರೂ ಫಿಜಿಯಲ್ಲಿ ಸ್ವಲ್ಪ ಅತಂತ್ರ ಸ್ಥಿತಿ ಇದೆ .ಕೊಲ್ಲಿ ದೇಶಗಳಲ್ಲಿ ಅಂತೂ ಎಷ್ಟು
ಪರಿಣಿತ ರಾದರೂ ಎಷ್ಟು ವರ್ಷ ಅಲ್ಲಿ ಗೆಯ್ದು ತಮ್ಮ ಜೀವನ ತೆಯ್ದರೂ ನಿಮಗೆ ಪೌರತ್ವ ನೀಡರು.
ಮೇಲಿನ ಚಿತ್ರಗಳ ಮೂಲಗಳಿಗೆ ನಾನು ಆಭಾರಿಯಾಗಿದ್ದೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ