ಪತ್ರಿಕೆಯೊಂದು ಶಾಲೆಗಳಲ್ಲಿ ಭಾಷಾ ಮಾಧ್ಯಮದ ಬಗ್ಗೆ ಒಂದು ಗೋಷ್ಠಿ
ಏರ್ಪಡಿಸಿತ್ತು .ಈ ಸಮಸ್ಯೆ ನನ್ನಂತಹ ಪಾಮರರಿಗೆ ಕೆಲವೊಮ್ಮೆ ಅತೀ
ಸರಳವಾಗಿಯೂ ಮತ್ತೆ ಕೆಲವೊಮ್ಮೆ ಬಹಳ ಸಂಕೀರ್ಣ ವಾಗಿಯೂ ಕಾಣುತ್ತದೆ.
ಭಾಷೆ ಆಯ್ಕೆ ಮಕ್ಕಳ ಜನ್ಮ ಸಿದ್ಧ ಹಕ್ಕು ಎನ್ನುತ್ತದೆ ಸಂವಿಧಾನ , ಎಂದು
ನ್ಯಾಯಾಲಯಗಳ ವ್ಯಾಖ್ಯಾನ .ತೋರಿಕೆಗೆ ಸರಿ ಕಾಣುವುದು .
ಇನ್ನೂ ಒಂದು ಮುಖ ಇದೆ .ಸಕಲ ಜೀವಿಗಳಿಗೂ ಎರಡು ಮುಖ್ಯ
ಮೂಲ ಸಹಜ ಪ್ರವೃತ್ತಿ (ಬೇಸಿಕ್ ಇನ್ಸ್ಟಿಂಕ್ಟ್ ) ಇರುತ್ತವೆ .ಒಂದು ತಮ್ಮ ಸಂತತಿ
ಯನ್ನು ಮುದುವರಿಸುವುದು .ಪ್ರೇಮ ,ಕಾಮ ,ಲೈಂಗಿಕ ದೌರ್ಜನ್ಯ , ಅತ್ಯಾಚಾರ
ಇತ್ಯಾದಿ ಎಲ್ಲಾ ಈ ಮೂಲ ಗುಣದ ಬೇರೆ ಬೇರೆ ರೂಪಗಳು .ಇದಕ್ಕೆಂದೇ ನಮ್ಮಲ್ಲಿ
ಟೆಸ್ಟೋಸ್ಟೆರಾನ್ ,ಇಸ್ತ್ರೋಜನ್ , ಪಿಟ್ಯುಟರಿ ಹಾರ್ಮೋನ್ ಗಳು . ಇನ್ನೊಂದು
ತನ್ನನ್ನು ರಕ್ಷಣೆ ಮಾಡಿ ಕೊಳ್ಳುವುದು .ಈ ತನ್ನ ರಕ್ಷಣೆಗೆಂದೇ ಬೇರೆ
ಭಾವನಾತ್ಮಕ ಬಂಧಗಳು .ಇದಕ್ಕೆ ಶರೀರದ ರಕ್ಷಣಾ ವ್ಯೂಹ . ಅಡ್ರಿನಲಿನ್
ಹಾರ್ಮೋನ್ ಇತ್ಯಾದಿಗಳ ಕೈಂಕರ್ಯ .ತಾವು ಉಳಿಯುವುದಕ್ಕೂ ತಮಗೆ
ಪರಿಚಿತ ಮತ್ತು ಬಳಕೆಯಲ್ಲಿ ಇರುವ ಪರಿಸರಕ್ಕೂ ಏನೋ ಸಂಬಂದ ಇದೆ .
ನಮ್ಮ ಶರೀರದಲ್ಲಿ ಸ್ವಕೀಯ ಮತ್ತು ಪರಕೀಯ ವಾದುದನ್ನು ಬೇರ್ಪಡಿಸುವ
ಪರಿಣಾಮಕಾರಿ ವ್ಯವಸ್ಥೆ ಇದೆ .ಇದರ ಬಗ್ಗೆ ನನ್ನ ಅಲರ್ಜಿ ಬಗೆಗಿನ ಹಿಂದಿನ ಬ್ಲಾ
ಗ್ ನಲ್ಲಿ ಬರೆದಿರುವೆನು . ಹಾಗೆಯೇ ನಮ್ಮ ಮೆದುಳು ಮತ್ತು ಹಾರ್ಮೋನ್ ಗಳು
ಪರಿಚಿತ ಮತ್ತು ಅನುಕೂಲ ಪರಿಸರ ದ ಗುರುತು ಹಿಡಿಯುತ್ತವೆ .ಇಂತಹ
ಜಿವಾನುಕೂಲ ಪರಿಸರ ನಿರ್ಮಾಣ ಮತ್ತು ಗುರುತಿಸುವಿಕೆಯಲ್ಲಿ
ಭಾಷೆ ಮುಖ್ಯ .ತಾಯಿಯಿಂದ ಮಗುವಿಗೆ ಬಂದ ಮತ್ತು ಸಮೀಪದ ಪರಿಸರದ
ಸಂವಹನ ಭಾಷೆ ಜೀವಕ್ಕೆ ಹತ್ತಿರ ಮತ್ತು ಭಾವನೆಗಳಿಗೆ ಭಾರ ವಲ್ಲದ್ದು .
ಅದರ ಬಳಕೆ ಜೀವಕ್ಕೆ ಸುರಕ್ಷಿತ ಭಾವ ಕೊಡುತ್ತದೆ .ಯಾಕೆಂದರೆ ಅದರ ಮೂಲಕ
ಆಲೋಚನಾ ಪ್ರಕ್ರಿಯೆ ತೊಡಗುತ್ತದೆ .ಕಲಿಕೆ ನೈಸರ್ಗಿಕ ವಾಗುತ್ತದೆ . ಈ ತರಹದ
ರಕ್ಷಣೆಯ ಮತ್ತೊಂದು ರೂಪ ಜಾತಿ ,ಪಂಗಡ ಇತ್ಯಾದಿ . ಭಾರತವನ್ನು
ಪ್ರೀತಿಸುವ ಖ್ಯಾತ ಪತ್ರ ಕರ್ತ ಮತ್ತು ಲೇಖಕ ಮಾರ್ಕ್ ಟಲಿ ತಮ್ಮ ಒಂದು
ಲೇಖನದಲ್ಲಿ ಜಾತಿ ಪದ್ಧತಿ ಜನರಾಡಿಕೊಳ್ಳುವಂತೆ ಕೆಟ್ಟದನ್ನು ಮಾತ್ರ ಅಲ್ಲದೆ
ಸಮಾಜಕ್ಕೆ ತನ್ಮೂಲಕ ಜನರಿಗೆ ಒಂದು ಸುರಕ್ಷಿತ ಭಾವ ತಂದು ಕೊಡುತ್ತದೆ
ಎಂದು ಬರೆದಿರುವರು .ಈ ಎಲ್ಲಾ ವಿಚಾರಗಳನ್ನು ನೋಡಿದರೆ ಮಾತೃ ಭಾಷೆ
ಹೆಚ್ಚು ನೈಸರ್ಗಿಕ ,ಇದರಿಂದ ಹೆಚ್ಚು ಆರೋಗ್ಯಕರ .
ಆದರೆ ನಮ್ಮಲ್ಲಿ ಮಗು ಜನಿಸಿದ ಕೂಡಲೇ ಈಗಿನ ತಾಯಂದಿರು ಮನೆಯ
ಅಫೀಷಿಯಲ್ ಭಾಷೆ ಯಾಗಿ ಇಂಗ್ಲಿಷನ್ನು ಹೇರುತ್ತಾರೆ .ಮಗುವಿನೊಡನೆ
ಕಂ ,ಗೋ ,ಸಿಟ್ ,ಕನ್ನಡ ನುಡಿ ಬಂದರೆ ಸಿಟ್ಟು . ಇದರಿಂದ ಆಂಗ್ಲ ಭಾಷೆಯು
ಮಾತೃಭಾಷೆಯಾಗಿ ಹೇರಲ್ಪಡುವುದು .ಆದರೆ ಸುತ್ತು ಮುತ್ತಲಿನ ಭಾಷೆ
ಬೇರೆ ಇರುತ್ತದೆ .ಇದು ಅನೈಸರ್ಗಿಕ ವಾಗಿ ತೋರುವುದು .
ಇನ್ನು ನಮ್ಮ ಸಂಸ್ಕೃತಿ ಬಗ್ಗೆ ಬಹಳ ಮಾತನಾಡುವ ಧಾರ್ಮಿಕ ಗುರುಗಳು
ನಾಯಕರು ಆಂಗ್ಲ ಮಾಧ್ಯಮ ಶಾಲೆಗಳನ್ನು ಸ್ಥಾಪಿಸುವುದಲ್ಲದೆ ಅದಕ್ಕೆ
ಧರ್ಮ ,ದೇವತೆಗಳ ಹೆಸರು ಇಡುತ್ತಾರೆ , ಈ ಶಾಲೆಗಳಲ್ಲಿ ಡ್ಯಾಡ್ ಮಾಮ್
ಮೇಮ್ ಇತ್ಯಾದಿ ಕಲಿಸುವುದಲ್ಲದೆ ಮಕ್ಕಳ ಸಮ ವಸ್ತ್ರ ವೂ ನಮ್ಮ ದೇಶದ
ಹವೆ ಸಂಸ್ಕೃತಿ ಗೆ ಪರಕೀಯ ಆಗಿರುತ್ತವೆ ಇದು ಅಭಾಸ ವಲ್ಲದೆ ಒಂದು ರೀತಿಯ
ಅಪಹಾಸ್ಯ .ಎಚ್ ನರಸಿಂಹಯ್ಯ ,ಕುವೆಂಪು ಇದನ್ನು ಬದಲಿಸ ಯತ್ನಿಸಿದರು .
ಇನ್ನು ನಮ್ಮ ದಕ್ಷಿಣ ಕನ್ನಡ ಜಿಲ್ಲೆಗೆ ಅದರದೇ ಆದ ಭಾಷಾ ಸಮಸ್ಯೆ ಇದೆ .
ಇಲ್ಲಿ ಮನೆ ಮಾತು ಬಹಳ .ಆದರೆ ಕಲಿಕಾ ಭಾಷೆ ಕನ್ನಡ .ಇಲ್ಲಿಯ ಸಂಸ್ಕೃತಿ
ತೌಳವ .ಮತ್ತು ಬಹು ಪಾಲು ಮಲಯಾಳ ಕ್ಕೆ ಹತ್ತಿರ (ಹಬ್ಬ ,ದೇವಾಲಯ
,ಉಡುಗೆ ತೊಡುಗೆ ಇತ್ಯಾದಿ ).ಆದರೂ ನಮ್ಮ ಜೀವಕ್ಕೆ ಅಂಗ್ಲ ಕ್ಕಿಂತ ಕನ್ನಡ
ಹತ್ತಿರ .
ಉದ್ಯೋಗ ಮತ್ತು ಇತರ ಕಾರಣಕ್ಕೆ ವಲಸೆ ಹೋದವರಲ್ಲಿ ಅಸುರಕ್ಷಾ ಭಾವನೆಗೆ
ಮತ್ತು ಅದರಿಂದ ಉಂಟಾಗುವ ಕಾಯಿಲೆಗಳಿಗೆ (ಉದಾ ರಕ್ತದ ಒತ್ತಡ ,ಹೃದ್ರೋಗ
ಸಕ್ಕರೆ ಕಾಯಿಲೆ ,ಮಾನಸಿಕ ಉದ್ವೇಗ ) ಜೀವಕ್ಕೆ ಅಪರಿಚಿತ ಮತ್ತು ಪರದೇಶಿ
ಸಂಸ್ಕೃತಿ ಕಾರಣ ಇರ ಬಹುದು .ಸಂಸ್ಕೃತಿಯ ಮುಖ್ಯ ವಾಹಕ ಭಾಷೆ ತಾನೆ .
ಕೇಂದ್ರ ಸರಕಾದ ಹುದ್ದೆಯಲ್ಲಿ ಇದ್ದ ನನಗೆ ಚೆನ್ನೈ ಗೆ ವರ್ಗವಾಗಿತ್ತು .ನಾನು
ಕೆಲಸ ಮಾಡುತ್ತಿದ್ದ ಪೆರಮ್ಬೂರ್ ರೈಲ್ವೆ ಆಸ್ಪತ್ರೆ ಬಲಿ ಅಯನಾವರಂ ನಲ್ಲಿ
ಕನ್ನಡ ಸಂಘ ನಡೆಸುವ ಶಾಲೆ ಇದೆ .ನನ್ನ ಮಗ ನನ್ನು ಒಂದನೇ ತರಗತಿಗೆ ಅಲ್ಲಿ
ದಾಖಲಾತಿ ಮಾಡಿಸಲು ಹೋದಾಗ ಮುಖ್ಯ ಅಧ್ಯಾಪಿಕೆ (ಕನ್ನಡ ದವರೆ )
ಆಕಾಶವೇ ಭೂಮಿಗೆ ಬಿದ್ದವರಂತೆ ಡಾಕ್ಟರರ ಮಕ್ಕಳು ಎಲ್ಲಾ ಇಲ್ಲಿಗೆ ಸೇರ
ಬಾರದು .ನಿಮಗೆ ಒಳ್ಳೆಯ ಕಾನ್ವೆಂಟ್ ನಾನು ತೋರಿಸುವೆನು ಎಂದು ಹೇಳಿದರು .
ಆಕೆಯ ಬಗ್ಗೆ ನನಗೇನೂ ಕೋಪ ಇಲ್ಲ ,ಲೋಕದ ರೂಡಿ ಯಂತೆ ನನ್ನ
ಒಳ್ಳೆಯದು ಬಯಸಿ ಹೇಳಿರ ಬೇಕು .ನಾನು ಕೊನೆಗೆ ಕೇಂದ್ರೀಯ ವಿದ್ಯಾಲಯಕ್ಕೆ
ಸೇರಿಸಿದರೂ ನಮ್ಮ ಸಂಸ್ಕೃತಿ ಗೆ ಮಗ ದೂರ ಆಗ ಬಾರದೆಂಬ ಸ್ವಾರ್ಥದಿಂದ
ಕೆಲಸಕ್ಕೆ ರಾಜೀನಾಮೆ ಕೊಟ್ಟು ಮಂಗಳೂರಿಗೆ ಬಂದು ಅವನ ಕಲಿಕೆ
ಮುಂದುವರಿಸುವುದರೊಡನೆ ಕನ್ನಡ ಅಧ್ಯಯನ ವೂ ಆಗುವಂತೆ ನೋಡಿ
ಕೊಂಡೆನು .
ಹೊಟ್ಟೆಪಾಡಿಗಾಗಿ ಹೊರದೇಶಗಳಿಗೆ ವಲಸೆ ಹೋಗಿ ನೆಲಸಿದವರಿಗೆ ಬರುವ
ಪ್ರಶ್ನೆ ಎಷ್ಟು ತಲೆಮಾರುಗಳ ನಂತರ ಒಂದು ನಾಡು ತಾಯಿ ನಾಡು ಎನಿಸುತ್ತದೆ ?
ಅದೇ ಪ್ರಶ್ನೆ ಮಾತೃ ಭಾಷೆಗೂ ಅನ್ವಯವಾಗುವುದೋ ?
ಬಾಲಂಗೋಚಿ : ಒಂದು ಸರಕಾರೀ ಕಚೇರಿಯಲ್ಲಿ ಎಡಿಶನಲ್ ವರ್ಕ್ಸ್ ಇನ್ಸ್ಪೆಕ್ಟರ್
ಗೆ ಕನ್ನಡದಲ್ಲಿ "ಅಪರ ಕರ್ಮ ನಿರೀಕ್ಷಕರು " ಎಂದು ಸೂಚನಾ ಪಲಕ ಹಾಕಿದ್ದರು !

ಪ್ರತ್ಯುತ್ತರಅಳಿಸಿಆದರೂ ನಮ್ಮ ಜೀವಕ್ಕೆ ಅಂಗ್ಲ ಕ್ಕಿಂತ ಕನ್ನಡ
ಹತ್ತಿರ . ಇದು ನಿಜವಾದ ಮಾತು. ಅಂತಹ ಸಹಜ ಸ್ವಾಭಾವಿಕ ಪರಿಸರ ಸೃಷ್ಟಿಯಾದಾಗ ಬಾಷಾ ಗೊಂದಲ ತಾನಾಗಿ ಪರಿಹಾರವಾಗುವುದು.