ಅಂಚೆಯ ಅಣ್ಣನು ಕೊರಿಯರ್ ಮತ್ತು ಇಂಟರ್ನೆಟ್ ಗಳ ಅಬ್ಬರದಲ್ಲಿ
ಮರೆಯಾಗುತ್ತಿದ್ದಾನೆ .ದೂರದ ಊರಿನಲ್ಲಿರುವ ಮಗನ ಪತ್ರವನ್ನು
ಪ್ರತೀಕ್ಷಿಸುತ್ತಿರುವ ತಂದೆ ತಾಯಂದಿರು ,ಹೊಸತಾಗಿ ಮದುವೆಯಾಗಿ ಇನ್ನೂ
ತಾಯಿ ಮನೆಯಲ್ಲಿ ಇರುವ ಪತ್ನಿಯಿಂದ ಕಾಗದ ಕಾಯುತ್ತಿರುವ ಹುಡುಗ ,
ತಂದೆ ಕಳುಹಿಸುವ ಮನಿ ಆರ್ಡರ್ ಗೆ ಕಾಯುತ್ತಿರುವ ವಿದ್ಯಾರ್ಥಿ ಎಲ್ಲರಿಗೂ
ಅಂಚೆಯ ಅಣ್ಣನ ಪ್ರತೀಕ್ಷೆ .ಬಂದ ಪತ್ರಕ್ಕನುಸಾರ ಅವನಿಗೆ ಪ್ರೀತಿಯ ಉಡುಗೊರೆ.
ಇವುಗಳೆಲ್ಲದುರ ನಡುವೆ ಯಾವ ಗುರುತಿಸುವಿಕೆಯೂ ಇಲ್ಲದೆ ಮರೆಯಾದವನು
ಪೋಸ್ಟಲ್ ರನ್ನರ್ .

ಅಂಚೆ ಕಚೇರಿಗೆ ಪತ್ರ ಸಾಗಿಸುತ್ತಿದ್ದ ಇವರು ಇಂದು ಇಲ್ಲ
ಕೈಯ್ಯಲ್ಲಿ ಒಂದು ಭರ್ಜಿ (ಮೊನಚು ಆಯುಧ ),ಅದಕ್ಕೆ ತಾಗಿಕೊಂಡು
ಕಾಲ ಗೆಜ್ಜೆಯಂತಹ ಸಣ್ಣ ಘಂಟಾ ಮಣಿಗಳು .ಇವರ ಹುದ್ದೆಯೇ ಹೇಳುವಂತೆ
ಇವರು ರನ್ನರ್ .ತಲೆಯಲ್ಲಿ ಅಂಚೆ ಚೀಲ .ಕೈಯ್ಯಲ್ಲಿ ಘಂಟಾ ಆಯುಧ .
ಇವರು ಓಡುತ್ತಾ ನಡೆಯುವರೋ ನಡೆಯುತ್ತಾ ಓಡುವರೋ ಹೇಳುವುದು
ಕಷ್ಟ .ಬಹುಶಃ ದಾರಿಯಲ್ಲಿರುವ ಪ್ರಾಣಿಗಳ ಗಳನ್ನು ಬೆದರಿಸಲು
ಕೈಯ್ಯಲ್ಲಿ ಆಯುಧ ಇದ್ದಿರ ಬೇಕು .
ನಮ್ಮ ಮನೆಯ ಮೇಲಿನಿಂದ ಇವರು ಹೋಗುತ್ತಿದ್ದರು .ನೀರಡಿಕೆ ತಣಿಸಲು
ಒಮ್ಮೊಮ್ಮೆ ಮನೆಗೆ ಬಂದು ಬೆಲ್ಲ ನೀರು ಕುಡಿದು ದಣಿವಾರಿಸಿ ಕೊಳ್ಳುವರು .
ರಜಾ ದಿನಗಳಲ್ಲಿ ಪೇಟೆಯಿಂದ ದಿನ ಪತ್ರಿಕೆ ಮನೆಗೆ ತಂದು ಕೊಡುತ್ತಿದ್ದರು .
ನಾನು ಅಥವಾ ತಮ್ಮ ಕೈಯ್ಯಲ್ಲಿ ಮಜ್ಜಿಗೆ ನೀರು ಹಿಡಿದುಕೊಂಡು ಮನೆಯ
ಹಿಂದಿನ ಗುಡ್ಡದ ಮೇಲಿನ ದಾರಿಯಲ್ಲಿ ಇವರಿಗಾಗಿ ಕಾದು ನಿಲ್ಲುತ್ತಿದ್ದೆವು .
ಪೇಪರ್ ಮಾತ್ರ ನಮಗೆ ಹೊರಜಗತ್ತಿಗೆ ಕಿಂಡಿಯಾಗಿದ್ದ ಕಾಲ .
ಈ ರನ್ನರ್ ಹುದ್ದೆ ಈಗ ಇಲ್ಲದಿದ್ದರೂ ಅವರ ನೆನೆಪು ,ಕೈ ಗೆಜ್ಜೆ ನಾದ
ಇನ್ನೂ ಮನದಲ್ಲಿ ಹಸಿರಾಗಿದೆ .
Nice of you to remember the postal runner who was part of the village life,you relived our Vintage days!
ಪ್ರತ್ಯುತ್ತರಅಳಿಸಿ