ನನ್ನ ಮನಸನ್ನು ಕಲಕಿ ಹೃದಯವನ್ನು ತಟ್ಟಿ ದ ಮೂರು ಮಲಯಾಳಂ ಚಲನ
ಚಿತ್ರಗಳ ಬಗ್ಗೆ
ಬರೆಯುತ್ತೇನೆ .
1
ತನಿಯಾವರ್ತನಂ (೧೯೮೭) ನಿರ್ದೇಶನ –ಸಿಬಿ ಮಲಯಿಲ್
ಬಾಲನ್ ಮಾಸ್ತರು (ಮಮ್ಮುಟಿ ) ಹಳ್ಳಿಯೊಂದರಲ್ಲಿ ಕಲಾ
ಅಧ್ಯಾಪಕ
.ಹೆಂಡತಿ ಎರಡು ಮಕ್ಕಳು ,ತಮ್ಮ ಇರುವ ಕೂಡು ಕುಟುಂಬ .ಬಾಲನ್
ಮಾಸ್ತರ ರ ಸೋದರ ಮಾವ ಮನೋ ರೋಗಿ .ಪ್ರೇಮ ವೈಫಲ್ಯ ಅದಕ್ಕೆ
ಕಾರಣ
.ದೇವಿಯ ಶಾಪವೇ ಕಾರಣ ಎಂದು ಹಳ್ಳಿಯ ಜನರ ನಂಬಿಕೆ .ಹಿಂದೆ
ಯಾರೋ ಕೋಪದಲ್ಲಿ ದೇವಿ ಪ್ರತಿಮೆಯನ್ನು
ಬಾವಿಗೆ ಎಸೆದುದೆ ಶಾಪಕ್ಕೆ
ಮೂಲ ಮತ್ತು ಇದು ಒಂದು ತಲೆಮಾರಿನಲ್ಲಿ ಒಬ್ಬರನ್ನು ತಟ್ಟದೆ ಬಿಡದು
ಎಂಬ ನಂಬಿಕೆ .
ಬಾಲನ್ ನ
ಮಾವ ಒಂದು ದಿನ ಸಾಯುತ್ತಾರೆ .ಮಂದಿಯ ಕುತೂಹಲ
ಮುಂದಿನ ಬಾಲಿ ಯಾರು ?ಬಾಲನ್ ಮೇಸ್ತ್ರೋ ಅವರ ತಮ್ಮ
ಗೋಪಿಯೋ
?ಇಂತಿರಲು ಒಂದು ರಾತ್ರಿ ಕೆಟ್ಟ ಕನಸು ಕಂಡು ಬಾಲನ್ ಕಿರುಚುತ್ತಾರೆ .
ಅದೇ ಅರಂಭ ಅವರ
ಪ್ರತಿಯೊಂದು ನಡವಳಿಕೆಯನ್ನು ಸಂಶಯದಿಂದ
ನೋಡಲು.ಆತ ತಾನು ಆರೋಗ್ಯವಾಗಿ ಇದ್ದೇನೆಂದು ಸಾರಿ
ಹೇಳಿದರೂ
ಜನ ನಂಬುವ ಸ್ಥಿತಿಯಲ್ಲಿ ಇಲ್ಲ .ಕೊನೆಗೆ ಕುಟುಂಬದವರೂ ಅವನನ್ನು
ಮನೋರೋಗಿ ಮಾಡಿ
ಮೆಂಟಲ್ ಅಸ್ಪತ್ರೆಗೆ ಒಯ್ಯುತ್ತಾರೆ .ಅಲ್ಲಿಯ
ವೈದ್ಯರೂ ಬಾಲನ್ ಗೆ ಯಾವುದೇ ಮನೋರೋಗ ಇಲ್ಲ ವೆಂದು
ಹೇಳುತ್ತಾರೆ .ಆದರೆ ಊರಿನ ಜನ ಮತ್ತು ಕುಟುಂಬದವರು ನಂಬುವುದಿಲ್ಲ
.ಇದರಿಂದೆಲ್ಲ ಬೇಸತ್ತು ಬಾಲನ್
ಮಾಸ್ತರ ರ ತಾಯಿ ಸ್ವತಃ ಕೈಯ್ಯಾರೆ
ವಿಷ ನೀಡಿ ಅವನನ್ನು ಕೊಲ್ಲುತ್ತಾಳೆ .ಮನೋಜ್ಞ ಅಬಿನಯದ ಹೃದಯ
ಕರಗಿಸುವ ಕತೆ
೨.
ಸುಕೃತಂ(೧೯೯೪) ನಿರ್ದೇಶಕ –ಹರಿ ಕುಮಾರ್
ಕತೆ ಆಧರಿಸಿ ತಯಾರಿತ ಚಿತ್ರ , ರವಿಶಂಕರ್ (ಮಮ್ಮುಟಿ) ಕ್ಯಾನ್ಸರ್ ನಿಂದ
ಬಳಲುತ್ತಿರುವ ಓರ್ವ
ಪತ್ರಕರ್ತ .ತನ್ನ ಕಾಯಿಲೆಯ ಗಂಭೀರ ಸ್ವರೂಪ
ಅರಿತ ಆತ ನಿಗೆ ಜೀವನದ ಮೇಲಿನ ಆಸೆಯೇ ಹೋಗುತ್ತದೆ.ತನ್ನ ಪತ್ನಿ
ಮಾಲಿನಿ (ಗೌತಮಿ)ತನ್ನ ಮರಣಾನಂತರ ಒಂಟಿಯಾಗ ಬಾರದೆಂದು
ತಮ್ಮ ಮಿತ್ರ ರಾಜೇಂದ್ರನ್ ನ ಸಖ್ಯ ಬೆಳೆಸಲು ಪ್ರೋತ್ಸಾ ಹಿಸುತ್ತಾನೆ
.
ಹೀಗಿರುವಾಗ ತನ್ನ ವೈದ್ಯ ಮಿತ್ರರೊಬ್ಬರ ಸಲಹೆಯಂತೆ
ಹೊಲಿಸ್ಟಿಕ್
ಮೆಡಿಸಿನ್ ಚಿಕಿತ್ಸೆ ಮಾಡಿಸುತ್ತಾನೆ .ಅದರ ಪರಿಣಾಮ ಆಶ್ಚರ್ಯ ಕರ
ರೀತಿಯಲ್ಲಿ
ಚೇತರಿಸಿ ರವಿ ಪುನಃ ಮರಳಿದಾಗ ಆಘಾತ ಕಾದಿತ್ತು
ಮರಣಾನಂತರ ಮಾನವೀಯ ನೆಲೆಯಲ್ಲಿ ಇವನ
ಉದ್ಯೋಗವನ್ನು
ಪಡೆಯಲು ಕಾಯುತ್ತಿದ್ದ ಬಂಧುಗಳು ಇವನೇಕೆ ಬದುಕಿ ಬಂದ ಪ್ರಾಣಿ
ಎಂದು ಹಿಂದಿನಿಂದ
ಮಾತನಾಡುವುದು ಕಿವಿಗೆ ಬೀಳುತ್ತದೆ .ಸ್ವ೦ತ
ಹೆಂಡತಿಯೇ ಇವನೊಡನೆ ಹಾಸಿಗೆಯೇರಲು
ನಿರಾಕರಿಸುತ್ತಾಳೆ.ಅನರೋಗ್ಯದಲ್ಲಿರುವಾಗ
ಸಹಾನುಭೂತಿ
ತೋರಿದವರೆಲ್ಲ ಈಗ ಮುಖ ಸಿಂಡರಿಸುತ್ತಾರೆ .ಕೊನೆಗೆ ಬೇಸತ್ತು ತನ್ನ
ಮರಣ ವಾರ್ತೆಯನ್ನು ಮತ್ತು ಶ್ರದ್ದಾಂಜಲಿ ಯನ್ನು
ತನ್ನ ಪತ್ರಿಕೆಯಲ್ಲಿ
ತಾನೇ ಬರೆದಿತ್ತು ರೈಲಿನ ಆಡಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ
ಚಿತ್ರವು ಈ ವಾಕ್ಯದೊಂದಿಗೆ ಕೊನೆ ಗೊಳ್ಳುತ್ತದೆ .”ಸಾವು
ಅಂತಿಮ ಸತ್ಯ .
ಜೀವನದ ಅವಿಭಾಜ್ಯ ಅಂಗ .ಅದರದೇ ರೀತಿಯಲ್ಲಿ ಸಂಭ್ರಮಿಸ ಬೇಕಾದ
ಕ್ಷಣ “
೩.ತನ್ಮಾತ್ರ (೨೦೦೫) ನಿರ್ದೇಶನ -ಬ್ಲೆಸ್ಸಿ
ಮೋಹನ್ ಲಾಲ್ ಅಭಿನಯದ ಚಿತ್ರ .ಅಲ್ಜಿಮರ್ ರೋಗಿಯ ಕತೆ
.ಇದರಲ್ಲಿ
ಸಂದೇಶ ಇದೆ .ಈ ರೋಗಿಗಳಿಗೆ ಪರಿಣಾಮ ಕಾರಿ ಔಷಧಿಯ
ಕೊರತೆಯನ್ನು ಕುಟುಂಬದ ಸದಸ್ಯರು ತುಂಬಬೇಕಾವುದು
.ಮೋಹನ್
ಲಾಲ್ ಚೆನ್ನಾಗಿ ಅಭಿನಯಿಸಿದ್ದಾರೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ