ಒಂದು ಪುಸ್ತಕ ದ ಅಂಗಡಿ .ಶಾಲೆಯ ಅಧ್ಯಾಪಕಿ ಒಬ್ಬರು ಬಂದು ನಿಮ್ಮಲ್ಲಿ
ಕುವೆಂಪು ಅವರ ನನ್ನ ಮನೆ ಕವನ ಇರುವ ಪುಸ್ತಕ ಇದೆಯೇನ್ರಿ ಎಂದು
ಹುಡುಗನನ್ನು ವಿಚಾರಿಸಿದರು .ಶಾಲೆಯ ಕಾರ್ಯಕ್ರಮಕ್ಕೆ ಆ ಹಾಡು ಅವರಿಗೆ
ಬೇಕಿತ್ತು .ಅದು ಯಾವ ಸಂಕಲನದಲ್ಲಿದೆ ಎಂಬುದು ಅವರಿಗೆ ಗೊತ್ತಿಲ್ಲ .ಅಂಗಡಿ
ಹುಡುಗ ಸ್ವಲ್ಪವೂ ಬೇಸರ ತೋರಿಸದೆ ಒಳಗಡೆ ಪುಸ್ತಕ ರಾಶಿಗಳನ್ನು ಹುಡುಕಿ
ಒಂದು ಕವನ ಸಂಕಲನ ತಂದು ಅವರ ಕೈಯ್ಯಲ್ಲಿ ಇಟ್ಟ.ಟೀಚರ್ ಗೆ
ಸಂತೋಷ .
ಇನ್ನೊಂದು ಸನ್ನಿವೇಶ .ಮಂಗಳೂರಿನ ಒಂದು ದೊಡ್ಡ ವಾಚನಾಲಯ .ತ್ಯಾಗವೀರ
ಕಾರ್ನಾಡ್ ಸದಾಶಿವ ರಾಯರ ಬಗ್ಗೆ ಪುಸ್ತಕ ಬೇಕಿತ್ತು . ವಾಚನಾಲಯದ
ಡೆಸ್ಕ್ ನಲ್ಲಿ ಕುಳಿತ ವ್ಯಕ್ತಿ ಅವರ ಹೆಸರೇ ಕೇಳಿರಲಿಲ್ಲ .ಆಮೇಲೆ ಅನ್ಯಮನಸ್ಕನಾಗಿ
ಅಲ್ಲಿ ರೇಕ್ ನಲ್ಲಿ ನೋಡಿ ಇದ್ದರೂ ಇರಬಹುದು ಎಂದು ಕೈ ತೊಳೆದು
ಕೊಂಡರು .ಪುಸ್ತಕ ಕಪಾಟು ಗಳು ಧೂಳು ಮಾಯ ಮತ್ತು ಯಾವುದೂ
ಸೂಚಿತ ಕ್ರಮದಲ್ಲಿ ಇಲ್ಲ .
ಇನ್ನೊಂದು ಪ್ರಸಿದ್ದ ಪುಸ್ತಕ ಅಂಗಡಿ .ನೀವು ಯಾವುದೋ ಪುಸ್ತಕ ಕೇಳುತ್ತೀರಿ.
ಅಲ್ಲಿ ಎಲ್ಲಿಯಾದರೂ ಇರ ಬಹುದು ನೋಡಿ ಎನ್ನುತ್ತಾರೆ ಮಾಲಕ .
ಇದು ಮೂರೂ ನಾನು ಸ್ವಯಂ ಅನುಭವಿಸಿದವನು .ಮೇಲಿನ ಮೊದಲಿನ
ಅನುಭವದ ವ್ಯಕ್ತಿ ಮಂಗಳೂರಿನ ಕೆ ಎಸ ರಾವ್ ರಸ್ತೆಯ ನವಕರ್ನಾಟಕ ಪುಸ್ತಕ
ಅಂಗಡಿಯ ಉದ್ಯೋಗಿ ಶ್ರೀ ವಿಶ್ವನಾಥ ಅವರು .ತನ್ನ ಕೆಲಸವನ್ನು
ಅತಿಯಾಗಿ ಪ್ರೀತಿಸುವ ಇವರು ಸ್ವತಃ ಒಳ್ಳೆ ಓದುಗ .ಪತ್ರಿಕೆಗಳಲ್ಲಿ
ಬರುವ ಪುಸ್ತಕ ವಿಮರ್ಶೆ ,ಚುಕ್ಕು ಬುಕ್ಕು .ಕಾಂ ನಂತಹ ಬ್ಲಾಗ್ ಗಲ್ಲಿ ಬರುವ
ಮಾಹಿತಿ ಇತ್ಯಾದಿಗಳನ್ನು ಓದಿ ,ಪುಸ್ತಕಗಳನ್ನು ಸಾಧ್ಯವಿದ್ದಷ್ಟು ಓದಿ
ಒಳ್ಳೆಯ ಪುಸ್ತಕ ಯಾವುದು ,ಅಲ್ಲದೆ ಓದುಗರ ಅಭಿರುಚಿ ಗೆ ಅನುಗುಣ
ವಾದ ಕೃತಿ ಯಾವುದು ಎಂದು ಸ್ವಲ್ಪ ಮಟ್ಟಿಗೆ ಅಧಿಕಾರ ಪೂರ್ವಕ ಹೇಳಬಲ್ಲರು .
ಗ್ರಾಹಕ ಎಷ್ಟು ಪುಸ್ತಕ ಮಗುಚಿ ಹಾಕಿದರೂ ಅವರಿಗೆ ಬೇಸರ ಇಲ್ಲ ,ಬದಲಾಗಿ
ನಿಮ್ಮ ಅಭಿರುಚಿಯ ವಾಸನೆ ಅವರಿಗೆ ಸಿಕ್ಕರೆ ಅವರೇ ಮೂಲೆ ಮೂಲೆಗಳಿಂದ
ಐದಾರು ಪುಸ್ತಕ ತಂದು ತೋರಿಸುವರು .ಮಂಗಳೂರು ಪರಿಸರದ
ಬರಹಗಾರರು ಇವರಿಗೆ ಪರಿಚಿತ .ಸಂಗೀತ ಪ್ರಿಯರೂ ಆಗಿರುವ ವಿಶ್ವನಾಥರು
ಅದರ ಅಧ್ಯಯನ ಮಾಡುತ್ತಿರುತ್ತಾರೆ .
ತಾನು ಮಾಡುವ ಕೆಲಸ ಎಷ್ಟೇ ಸಂಬಳ ತಂದರೂ ಸದಾ ಅಸಂತ್ರುಪ್ತ ರಾಗಿ
ಗೊಣಗುವವರೇ ತುಂಬಿರುವ ಈ ಕಾಲದಲ್ಲಿ ಇಂತಹವ ರ ಸಂಖ್ಯೆ
ಹೆಚ್ಚಾಗಲಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ