ಬಾಲ್ಯದಲ್ಲಿ ವೈದ್ಯರು ಚುಚ್ಚುಮದ್ದು ಕೊಡುವುದನ್ನು ಭಯಮಿಶ್ರಿತ ಕುತೂಹಲ
ದಿಂದ ನೋಡುತ್ತಿದ್ದೆವು .ಬಿಸಿನೀರ ಪಾತ್ರೆಯಿಂದ ಇಕ್ಕುಳದ ಸಹಾಯದಿಂದ
ಗಾಜಿನ ಸಿರಿಂಜ್ ತೆಗೆದು ಪಿಸ್ಟನ್ ಸಿಕ್ಕಿಸಿ ಸೂಜಿ ಮೂಲಕ ಔಷಧಿ ಲೋಡ್
ಮಾಡಿ ಕೊಡುವುದು ದೊಡ್ಡ ಅದ್ಭುತ ಕೆಲಸ ಎನಿಸುತ್ತಿತ್ತು .
ಮುಂದೆ ವೈದ್ಯಕೀಯ ವ್ಯಾಸಂಗ ಕಾಲದಲ್ಲಿ ಇಂಜೆಕ್ಷನ್ ರೂಂ ಪೋಸ್ಟಿಂಗ್ ನಲ್ಲಿ
ನುರಿತ ಸಿಸ್ಟರ್ ಗಳ ಸುಪರ್ದಿಯಲ್ಲಿ ಮೊದಲ ಚುಚ್ಚುಮದ್ದು ಅಮಾಯಕ
ರೋಗಿಗೆ ಚುಚ್ಚಿದಾಗ ಜಗತ್ತನ್ನೇ ಜಯಿಸಿದ ಅನುಭವ . ಮಾಂಸ ಖಂಡ ಗಳಿಗೆ
ಕೊಡುವ ಇಂಜೆಕ್ಷನ್ ಅಷ್ಟು ಕಷ್ಟ ಎನಿಸಲಿಲ್ಲ .ಆದರೆ ರಕ್ತನಾಳ ಗಳಿಗೆ
ಚುಚ್ಹುವುದು ಆರಂಭದಲ್ಲಿ ಸ್ವಲ್ಪ ತ್ರಾಸ ದಾಯಕ .ಹಲವು ಭಾರಿ ಎರಡು ಮೂರು
ಕಡೆ ಚುಚ್ಚ ಬೇಕಾಗುತ್ತಿತ್ತು .ರೋಗಿಗಳು ನಮಗೆ ಸಿಸ್ಟರೆ ಚುಚ್ಚಲಿ
ನೀವು ಬೇಡ ಎಂದು ಮುಲಾಜಿಲ್ಲದೆ ಹೇಳುತ್ತಿದ್ದರು .
ಸರಕಾರೀ ವೈದ್ಯಕೀಯ ಕಾಲೇಜ ಅಸ್ಪತ್ರೆಯ ಇಂಜೆಕ್ಷನ್ ರೂಮನ್ನು
ಊಹಿಸಿಕೊಳ್ಳಿ.ನೂರಾರು ರೋಗಿಗಳ ಕ್ಯೂ.ಹೆಚ್ಚಿನವರು ಪೆನ್ಸಿಲ್ಲಿನ್ ಇಂಜೆಕ್ಷನ್
ಗಾಗಿ.ದಿನಕ್ಕೆ ಇಷ್ಟೆಂದು ಸ್ಟೋರ್ ನಿಂದ ಔಷದಿ ಕೊಡುತ್ತಿದ್ದರು .ಅದು ರಾವಣನ
ಹೊಟ್ಟೆಗೆ ಕಾಸಿನ ಮಜ್ಜಿಗೆ . ಅನಿರೀಕ್ಷಿತವಾಗಿ ಹೆಚ್ಚು ಅತಿಥಿಗಳು ಬಂದರೆ
ಸಾರು ಸಾಂಬಾರು ನೀರು ಸೇರಿಸಿ ಸುಧಾರಿಸುವಂತೆ ಇಂಜೆಕ್ಷನ್ ವಯಲ್ ಗಳಿಗೆ
ನೀರು ಜಾಸ್ತಿ ಸೇರಿಸಿ ಮ್ಯಾನೇಜ್ ಮಾಡುತ್ತಿದ್ದೆವು .ಒಂದು ಎಲೆಕ್ಟ್ರಿಕ್ ಸ್ಟೆರಿಲೈಸರ್
ಕರೆಂಟ್ ಇದ್ದರೆ ಕಾಯಿಲ್ ಸರಿ ಇಲ್ಲ ,ಕಾಯಿಲ್ ಇದ್ದಾಗ ಕರೆಂಟ್ ಇಲ್ಲ .
ದೇವರನ್ನು ಪ್ರಾರ್ಥಿಸಿ ಸ್ಟೆರಿಲೈಸರ್ ನಲ್ಲಿ ಇದ್ದ ನೀರಿನಲ್ಲಿ ಪುಸ್ ಪುಸ್ ಎಂದು
ಸಿರಿಂಜ್ ಮತ್ತು ಸೂಜಿ ಶುಧ್ಧ ಮಾಡುವುದು .ಸ್ತೆರಿಲೈಸರ್ ನೀರು ಹಲವು
ಆಂಟಿಬಯೋಟಿಕ್ ಗಳ ಮಿಶ್ರಣ ವಾಗಿರುತ್ತಿತ್ತು .ಅದರಿಂದ ಇಂಜೆಕ್ಷನ್
ಕೀವು ಉಂಟಾಗುತ್ತಿರಲಿಲ್ಲ .ಇನ್ನು ಸೂಜಿ ಗಳು ಮೊಂಡು.ಮಾಂಸ ಖಂಡಗಳಿಗೆ
ಚುಚ್ಚುವಾಗ ಕರ ಕರ ಶಬ್ದ ವಾಗುತ್ತಿತ್ತು .ಅದಕ್ಕೇ ಒಮ್ಮೆ ಚುಚ್ಚಿಸಿಕೊಂಡ
ಮಗು ಇನ್ನೊಮ್ಮೆ ವೈದ್ಯರನ್ನು ಕಂಡರೆ ದೆವ್ವ ಕಂಡ ರೀತಿ ಕಿರುಚುತಿತ್ತು.
ಈಗ ಉಪಯೋಗಿಸಿ ಎಸೆಯುವ ಸಿರಿಂಜ್ ಗಳ ಕಾಲ ,ಬಿಸಿನೀರು ಬೇಡ
ಇಕ್ಕುಳ ಬೇಡ .ಸುಜಿಯೂ ಹರಿತ .ಮಕ್ಕಳು ನಮಗೆ ಹೆದರುವುದಿಲ್ಲ ,ಏಕೆಂದರೆ
ನೋವೇ ಇಲ್ಲ.ಇಲ್ಲದಿದ್ದರೆ ಈಗಿನ ಅಗಣಿತ ರೋಗ ಪ್ರತಿಭಂಧಕ ಚುಚ್ಚುಮದ್ದು
ಗಳನ್ನು ಮಕ್ಕಳು ಹೇಗೆ ಸಹಿಸುತ್ತಿದ್ದರು .ಖ್ಯಾತ ವೈದ್ಯರೊಬ್ಬರ ಪ್ರಕಾರ
ಮಕ್ಕಳ ಸೊಂಟ ಈಗ ಒಂದು ಪಿನ್ ಕುಶನ್ ಆಗಿದೆ .
ಬಾಯಿಯ ಮೂಲಕ ಔಷಧಿ ಸೇವನೆ ಕಷ್ಟ ವಾದಾಗ ,ಔಷಧಿ ಹೊಟ್ಟೆಗೆ ಹೋದಾಗ
ರಾಸಯನಿಕ ಕ್ರಿಯೆಯಿಂದ ನಿಷ್ಕ್ರಿಯ ವಾಗುವುದಿದ್ದರೆ ,ಮತ್ತು ಕೆಲವೊಮ್ಮೆ
ವೇಗವಾಗಿ ರೋಗ ಸ್ಥಾನ ವನ್ನು ಸೇರಬೇಕಾದಲ್ಲಿ ಇಂಜೆಕ್ಷನ್ ಮುಖಾಂತ ರ
ಕೊಡುತ್ತಾರೆ .ಇಂಜೆಕ್ಷನ್ ಗೆ ಜಾಸ್ತಿ ಪವರ್ ಇಲ್ಲ.ಸ್ವಲ್ಪ ಮಟ್ಟಿಗೆ
ಇಂಜೆಕ್ಷನ್ ಮೇನಿಯ ವೈದ್ಯರಿಂದ ಉಂಟಾದುದು.ಇತ್ತೀಚಿಗೆ ಏಡ್ಸ್
ಹೆಪಟೈಟಿಸ್ ಜಾಗೃತಿ ಬಂದ ಮೇಲೆ ಇಂಜೆಕ್ಷನ್ ರೋಗ ಕಮ್ಮಿ ಯಾಗಿದೆ .
ತಮಿಳ್ ನಾಡಿನಲ್ಲಿ ಇಂಜೆಕ್ಷನ್ ಕೊಡದೆ ಇದ್ದರೆ ರೋಗಿಗಳು
ಎನ್ನಾ ಸಾರ್ ಇವುಳ ನೋಯಿ ಇರುಕ್ಕುದು ಊಸಿಯೇ ಪೋಡ್ಲೆಯೇ ಎಂದು
ಗಲಾಟೆ ಮಾಡುವರು .
ನಾನು ವಿದ್ಯಾರ್ಥಿಯಾಗಿದ್ದಾಗ ಕೆಲವು ಅತಿರಥ ರೋಗಿಗಳು " ಸಾರ್ ನಾವು
ಸಂಜೆ ಕುಷಿ ಮಾಡಲು (ವೇಶ್ಯಾ ಸಂಗ )ಹೋಗುವೆವು ,ಒಂದು ಪೆನಿಸಿಲಿನ್
ಇಂಜೆಕ್ಷನ್ ತೆಗೆದು ಕೊಂಡೆ ಹೋಗುವಾ ಎಂದು ಬಂದೆವು' ಎಂದು ಕೇಳುತ್ತಿದ್ದುದೂ
ಉಂಟು .
(ಮೇಲಿನ ಚಿತ್ರ ಮೂಲಕ್ಕೆ ಆಭಾರಿ )
Bhat, Apt description of injection room experience of our generation! I would like you to write about Dr.Giri Gowda Sir.
ಪ್ರತ್ಯುತ್ತರಅಳಿಸಿDear Prasanth i want to write about him ,any of our friends have his photo?
ಪ್ರತ್ಯುತ್ತರಅಳಿಸಿ